ವಿಯೆನ್ನಾ: ರಷ್ಯಾ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಎರಡು ದಿನಗಳ ಪ್ರವಾಸಕ್ಕಾಗಿ ಆಸ್ಟ್ರೀಯಾಗೆ ತೆರಳಿದ್ದಾರೆ. (PM Modi Austria Visit) ಅವರು ರಷ್ಯಾ ರಾಜಧಾನಿ ಮಾಸ್ಕೋದಿಂದ ಆಸ್ಟ್ರೀಯಾದ ನಗರ ವಿಯೆನ್ನಾ ತಲುಪಿದ್ದಾರೆ. ಈ ಭೇಟಿಯಲ್ಲಿ ಉಭಯ ದೇಶಗಳ ನಾಯಕರು ತಮ್ಮ ದ್ವಿಪಕ್ಷೀಯ ಸಂಬಂಧದ ಕುರಿತು ಚರ್ಚಿಸಲಿದ್ದಾರೆ. ಅನೇಕ ಭೌಗೋಳಿಕ ರಾಜಕೀಯ ಸವಾಲುಗಳ ಬಗ್ಗೆ ನಿಕಟ ಸಹಕಾರದ ಕುರಿತು ಮಾತನಾಡಲಿದ್ದಾರೆ. ಅಂದ ಹಾಗೆ ಕಳೆದ 41 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.
A warm welcome to Indian PM @narendramodi on his historic visit to Austria, marking 75 years of diplomatic relations. The partnership between our nations is based on a joint commitment to global security, stability and prosperity.
— Alexander Schallenberg (@a_schallenberg) July 9, 2024
🇦🇹🤝🇮🇳 pic.twitter.com/fIP37f2pKg
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರಿಯಾ ಗಣರಾಜ್ಯದ ಅಧ್ಯಕ್ಷ ಅಲೆಕ್ಸಾಂಡರ್ ವಾನ್ ಡೆರ್ ಬೆಲೆನ್ ಅವರನ್ನು ಭೇಟಿ ಮಾಡಲಿದ್ದಾರೆ. ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಬುಧವಾರ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ಮತ್ತು ಚಾನ್ಸಲರ್ ಜತೆಯಾಗಿ ಭಾರತ ಮತ್ತು ಆಸ್ಟ್ರಿಯಾದ ವಾಣಿಜ್ಯ ಮುಖಂಡರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
Thank you, Chancellor @karlnehammer, for the warm welcome. I look forward to our discussions tomorrow as well. Our nations will continue working together to further global good. 🇮🇳 🇦🇹 pic.twitter.com/QHDvxPt5pv
— Narendra Modi (@narendramodi) July 9, 2024
ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ಬರ್ಗ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಈ ವೇಳೆ ಸ್ಮರಿಸಿದ್ದಾರೆ. “ರಾಜತಾಂತ್ರಿಕ ಸಂಬಂಧಗಳ 75 ನೇ ವರ್ಷಾಚರಣೆಯ ಅಂಗವಾಗಿ ಆಸ್ಟ್ರಿಯಾಕ್ಕೆ ಐತಿಹಾಸಿಕ ಭೇಟಿ ನೀಡಿದ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ. ನಮ್ಮ ದೇಶಗಳ ನಡುವಿನ ಸಹಭಾಗಿತ್ವವು ಜಾಗತಿಕ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಗೆ ಬದ್ಧವಾಗಿದೆ ” ಎಂದು ಅಲೆಕ್ಸಾಂಡರ್ ಶಾಲೆನ್ಬರ್ಗ್ ಬುಧವಾರ ಪ್ರಧಾನಿ ಮೋದಿಯವರ ಆಗಮನದ ನಂತರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಯೆನ್ನಾಗೆ ಸ್ವಾಗತ, ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆಸ್ಟ್ರಿಯಾಕ್ಕೆ ಸ್ವಾಗತಿಸಲು ಸಂತೋಷ ಮತ್ತು ಗೌರವ ಎನಿಸುತ್ತದೆ. . ಆಸ್ಟ್ರಿಯಾ ಮತ್ತು ಭಾರತ ಸ್ನೇಹಪರ ಪಾಲುದಾರರು. ನಿಮ್ಮ ಭೇಟಿಯ ಸಮಯದಲ್ಲಿ ನಮ್ಮ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳನ್ನು ನಡೆಸೋಣ ಎಂದು ಬರೆದಿದ್ದಾರೆ.
ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು, ಭಾರತವನ್ನು ಸ್ನೇಹಿತ ಮತ್ತು ಪಾಲುದಾರ ಎಂದು ಕರೆದಿದ್ದಾರೆ. ಭೇಟಿಯ ಸಮಯದಲ್ಲಿ ರಾಜಕೀಯ ಮತ್ತು ಆರ್ಥಿಕತೆ ಬಗ್ಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Cable TV Subscriber : ಕೇಬಲ್, ಡಿಶ್ ಟಿವಿ ಬಳಕೆದಾರರಿಗೆ ಗುಡ್ ನ್ಯೂಸ್, ಅಗ್ಗವಾಗಲಿದೆ ನಿಮ್ಮ ಮಾಸಿಕ ಬಿಲ್
ಆತ್ಮೀಯ ಸ್ವಾಗತಕ್ಕೆ ಪ್ರತಿಕ್ರಿಯಿಸಿದ ಪಿಎಂ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭಾರತ ಮತ್ತು ಆಸ್ಟ್ರಿಯಾ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು.
ಎಕ್ಸ್ ಕುರಿತ ಪೋಸ್ಟ್ನಲ್ಲಿ ಪಿಎಂ ಮೋದಿ ತಮ್ಮ ಮತ್ತು ನೆಹಮ್ಮರ್ ಅವರ ಕೆಲವು ಉತ್ತಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ನಾಳೆಯೂ ನಮ್ಮ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ಜಾಗತಿಕ ಒಳಿತಿಗಾಗಿ ನಮ್ಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ ಎಂದು ಬರೆದುಕೊಂಡಿದ್ದಾರೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.