Site icon Vistara News

Narendra Modi : ಸೇಲಂ ರ್ಯಾಲಿಯ ಭಾಷಣದಲ್ಲಿ ಭಾವುಕರಾದ ಪ್ರಧಾನಿ ಮೋದಿ; ಅವರು ಹೇಳಿದ್ದೇನು?

Modi Speech

ಸೇಲಂ: 2013ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಹತ್ಯೆಗೀಡಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್’ ವಿ. ರಮೇಶ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸೇಲಂನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಸ್ಮರಿಸಿಕೊಂಡರು. ವಿ ರಮೇಶ್ ಅವರು ಪಕ್ಷಕ್ಕಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ ಎಂದು ಹೇಳಿ ಭಾವುಕರಾದರು.

“ಇಂದು ನಾನು ಸೇಲಂನಲ್ಲಿದ್ದೇನೆ, ನನಗೆ ಆಡಿಟರ್​ ರಮೇಶ್ ನೆನಪಿದೆ… ಆಜ್ ಸೇಲಂ ಕಾ ಮೇರಾ ವೋ ರಮೇಶ್ ನಹೀ ಹೈ. ರಮೇಶ್ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಅವರು ನಮ್ಮ ಪಕ್ಷದ ಸಮರ್ಪಿತ ನಾಯಕರಾಗಿದ್ದರು. ಅವರು ಉತ್ತಮ ವಾಗ್ಮಿ ಮತ್ತು ಬಹಳ ಶ್ರಮಜೀವಿಯಾಗಿದ್ದರು. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

2013ರಲ್ಲಿ ಸೇಲಂ ಪಟ್ಟಣದ ಮರವನೇರಿ ಪ್ರದೇಶದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ (54) ಅವರನ್ನು ಅವರ ಮನೆಯ ಕಾಂಪೌಂಡ್ ಒಳಗೆ ಅಪರಿಚಿತ ಗುಂಪೊಂದು ಕೊಚ್ಚಿ ಕೊಲೆ ಮಾಡಿತ್ತು. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎನ್.ಲಕ್ಷ್ಮಣನ್ ಅವರನ್ನು ಸ್ಮರಿಸಿದ ಪ್ರಧಾನಿ, ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಅವರ ಪಾತ್ರ ಅವಿಸ್ಮರಣೀಯ ಎಂದು ಹೇಳಿದರು.

ಇದನ್ನೂ ಓದಿ : Sita Soren : ಜಾರ್ಖಂಡ್ ಮಾಜಿ ಸಿಎಂ ಹೇಮಂತ್​ ಸೊರೆನ್​ ಅತ್ತಿಗೆ ಬಿಜೆಪಿಗೆ ಸೇರ್ಪಡೆ

“ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಲಕ್ಷ್ಮಣನ್ ಜಿ ಅವರ ಪಾತ್ರ ಮತ್ತು ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆಗೆ ಅವರ ಕೊಡುಗೆ ಅವಿಸ್ಮರಣೀಯ. ಅವರು ರಾಜ್ಯದಲ್ಲಿ ಅನೇಕ ಶಾಲೆಗಳನ್ನು ಸಹ ಪ್ರಾರಂಭಿಸಿದರು ಎಂದು ಅವರು ಹೇಳಿದರು. ಕೆ.ಎನ್. ಲಕ್ಷ್ಮಣನ್ ಅವರು ವಯೋಸಹಜ ಸಮಸ್ಯೆಗಳಿಂದಾಗಿ 2020 ರ ಜೂನ್​ನಲ್ಲಿ ಸೇಲಂನ ಸೆವ್ವೈಪೇಟೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದರು

ತಮಿಳುನಾಡಿನ ಅಭಿವೃದ್ಧಿಗೆ ಬದ್ಧ

ತಮಿಳುನಾಡಿನ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಯಾವುದೇ ಪ್ರಯತ್ನವನ್ನು ಬಿಡುತ್ತಿಲ್ಲ. ಉಚಿತ ವೈದ್ಯಕೀಯ ಚಿಕಿತ್ಸೆಯಿಂದ ಹಿಡಿದು ಮನೆಗಳಲ್ಲಿ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವವರೆಗೆ, ಉಚಿತ ಪಡಿತರ ಸೌಲಭ್ಯಗಳಿಂದ ಹಿಡಿದು ಮುದ್ರಾ ಯೋಜನೆಯ ಮೂಲಕ ತಮಿಳುನಾಡಿನ ಮಹಿಳೆಯರಿಗೆ ಪ್ರಯೋಜನವಾಗುವವರೆಗೆ, ನಾವು ಅತ್ಯುತ್ತಮವಾದದ್ದನ್ನು ನೀಡುವುದನ್ನು ಖಚಿತಪಡಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್, ಡಿಎಂಕೆಯಿಂದ ಹಿಂದೂ ಧರ್ಮಕ್ಕೆ ನಿರಂತರ ಅವಮಾನ; ಮೋದಿ ವಾಗ್ದಾಳಿ

ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಭಾನುವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಎನ್‌ಡಿಎ ಸರ್ಕಾರವನ್ನು ಟೀಕಿಸಲು ʼಶಕ್ತಿʼ ಪದವನ್ನು ಪ್ರಯೋಗಿಸಿದ್ದರು. ಇದೀಗ ಬಿಜೆಪಿ (BJP) ಇದನ್ನೇ ಪ್ರತ್ಯಸ್ತ್ರವಾಗಿ ಕೈಗೆತ್ತಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಈ ಪದವನ್ನು ಬಳಸಿ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ (INDIA bloc)ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಮಾತನಾಡಿದ ಮೋದಿ, ʼʼಕಾಂಗ್ರೆಸ್ ಮತ್ತು ಡಿಎಂಕೆ ಹಿಂದೂ ಧರ್ಮವನ್ನು ಅವಮಾನಿಸುವ ಪ್ರವೃತ್ತಿಯನ್ನು ಹೊಂದಿವೆ. ಆ ಪಕ್ಷಗಳ ನಾಯಕರು ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲʼʼ ಹೇಳಿದ್ದಾರೆ.

ಹಿಂದೂ ಧರ್ಮದ ವಿರುದ್ಧ ಹೇಳಿಕ
ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ ಪ್ರಧಾನಿ, “ಇಂಡಿಯಾ ಮೈತ್ರಿಕೂಟ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ. ಹಿಂದೂ ಧರ್ಮದ ವಿರುದ್ಧ ಯೋಜನೆ ರೂಪಿಸಲಾಗುತ್ತಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿ ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲ. ಆದರೆ ಅವರು ಹಿಂದೂ ಧರ್ಮವನ್ನು ಅವಮಾನಿಸಲು ಒಂದು ಕ್ಷಣವೂ ಯೋಚಿಸುವುದಿಲ್ಲ” ಎಂದು ಆರೋಪಿಸಿದ್ದಾರೆ.

ಡಿಎಂಕೆ, ಕಾಂಗ್ರೆಸ್‌ ಮತ್ತು ʼಇಂಡಿಯಾʼ ಮೈತ್ರಿ ಕೂಟಗಳು ಶಕ್ತಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿವೆ. “ತಮಿಳುನಾಡಿನಲ್ಲಿ ಮಾರಿಯಮ್ಮನ್, ಕಾಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ ಕೂಡ ‘ಶಕ್ತಿ’ಯೇ. ಕಾಂಗ್ರೆಸ್, ಡಿಎಂಕೆ ಮತ್ತು ʼಇಂಡಿಯಾʼ ಮೈತ್ರಿಕೂಟವು ಈ ಶಕ್ತಿಯನ್ನು ನಾಶಪಡಿಸುವುದಾಗಿ ಹೇಳುತ್ತಿವೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಹಿಳಾ ಶಕ್ತಿ, ತಾಯಿಯ ಶಕ್ತಿʼʼ ಎಂದು ಮೋದಿ ಹೇಳಿದ್ದಾರೆ.

Exit mobile version