Site icon Vistara News

Fact Check : ಕರ್ನಾಟಕದವರು ಪಾಪಿಗಳು ಅಂಥ ಹೇಳಿದ್ರಾ ಮೋದಿ; ಕಾಂಗ್ರೆಸ್ ಮಾಡಿದ ಪೋಸ್ಟ್​ ಸುಳ್ಳಾ? ಇಲ್ಲಿದೆ ನಿಜಾಂಶ

Fact check

Lok Sabha Election 2024

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಳುಗಳ ಭರಾಟೆ ಜೋರಾಗಿದೆ. ಡೀಪ್​ಫೇಕ್​ ಸೇರಿದಂತೆ ಎಡಿಟಿಂಗ್​ ತಾಂತ್ರಿಕತೆ ಮಿತಿಮೀರಿ ಅಭಿವೃದ್ಧಿಯಾಗಿರುವ ಕಾರಣ ಸತ್ಯ ಯಾವುದು ಸುಳ್ಳು ಯಾವುದು ಎಂದು ಒಂದೇ ನೋಟಕ್ಕೆ ತಿಳಿದುಕೊಳ್ಳುವುದು ಕೂಡ ಕಷ್ಟವಾಗಿದೆ. ಇದೇ ಮಾದರಿಯಲ್ಲಿ ರೀತಿ ಪ್ರಧಾನಿ ಮೋದಿ (Narendra Modi) ಕರ್ನಾಟಕದ ಜನತೆಯನ್ನು ಪಾಪಿಗಳು ಎಂದು ಕರೆದಿದ್ದಾರೆ ಎಂಬ ವಿಡಿಯೊವೊಂದು ವೈರಲ್​ ಆಗಿದೆ. ಪ್ರಧಾನಿ ಆ ರೀತಿ ಹೇಳಿದ್ದಾರೆ ಎಂಬುದಾಗಿ ಕೇರಳ ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳ ಹಲವರ ಎಕ್ಸ್​ ಹ್ಯಾಂಡಲ್​ನಲ್ಲಿ ವಿಡಿಯೊ ಶೇರ್​ ಆಗಿದೆ. ಹಾಗಾದರೆ ಮೋದಿ ಕನ್ನಡದ ಮಂದಿಯನ್ನು ಪಾಪಿಗಳು ಅಂಥ ಹೇಳಿದ್ದು ಹೌದಾ? ಕಾಂಗ್ರೆಸ್​ ಪೋಸ್ಟ್​ ಮಾಡಿದ ವಿಡಿಯೊದ ಸಾಚಾತನವೇನು (Fact Check) ಎಂಬುದನ್ನು ಗಮನಿಸೋಣ.

2024 ರ ಲೋಕಸಭಾ ಚುನಾವಣೆಯ (Lok Sabha Election) ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29, 2024 ರಂದು ದಾವಣಗೆರೆ ಮತ್ತು ಬೆಳಗಾವಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. ಈ ಸಭೆಗಳಲ್ಲಿ ಅವರು ಮಾಡಿದ ಭಾಷಣದ ಕ್ಲಿಪ್​ಗಳೇ ಚರ್ಚೆಯ ವಿಷಯವಾಗಿರುವುದು. ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದ ಕರ್ನಾಟಕದ ಜನ ಪಾಪಿಗಳು. ಅವರನ್ನು ಶಿಕ್ಷಿಸಬೇಕು ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್​ ಆಗಿದೆ.

ಪ್ರತ್ಯೇಕ ಮಾಡಿ ಹಂಚಲಾದ ವಿಡಿಯೊದಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲಿ ಹೇಳುತ್ತಿರುವುದು ಈ ರೀತಿ ಕೇಳಿಸುತ್ತದೆ; “ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ನೀವು ಈ ಕರ್ನಾಟಕದ ಜನರನ್ನು ಶಿಕ್ಷಿಸಬೇಕು. ಮುಂಬರುವ ವರ್ಷಗಳಲ್ಲಿ ಮೋದಿ ನಿಮಗೆ ಗ್ಯಾರಂಟಿ ಕೊಡುತ್ತಾರೆ. ಇದನ್ನೇ ಎತ್ತಿಕೊಂಡು “ಕನ್ನಡಿಗರು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಮೋದಿ ಮಾತ್ರ ಕನ್ನಡಿಗರನ್ನು ಪಾಪಿಗಳು ಎಂದು ಕರೆಯುತ್ತಾರೆ, ಎಂದು ಉಲ್ಲೇಖಿಸಿ ಪ್ರತಿಪಕ್ಷಗಳು ಪೋಸ್ಟ್​ಹಾಕಿಕೊಂಡಿವೆ.

ಕೇರಳ ಕಾಂಗ್ರೆಸ್​ನ ಅಧಿಕೃತ ಎಕ್ಸ್ ಖಾತೆಯಲ್ಲೂ ಇದನ್ನು ಪೋಸ್ಟ್ ಮಾಡಲಾಗಿದೆ “ಮೋದಿ ಸರ್ವಸ್ಸ ಕಳೆದುಕೊಂಡಿದ್ದಾರೆ. ಅವರು ತಮ್ಮ ಸ್ವಯಂ ಗೋಲ್ ಹೊಡೆಯುತ್ತಿದ್ದಾರೆ. ಅವರು ಈಗ ಕರ್ನಾಟಕದ ಜನರನ್ನು ಪಾಪಿಗಳು ಎಂದು ಕರೆದಿದ್ದಾರೆ. ಇಂತಹ ಅವಮಾನಗಳಿಗೆ ಕರ್ನಾಟಕದ ಜನರು ಕಪಾಳಮೋಕ್ಷ ಮಾಡದೇ ಬಿಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಲಿದೆ’ ಎಂದು ಬರೆದುಕೊಂಡಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಸಂಯೋಜಕ ಗೌರವ್ ಪಾಂಧಿ ಅವರು ಈ ವೀಡಿಯೊಗೆ “ಕರ್ನಾಟಕದ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ ಮಾತ್ರಕ್ಕೆ, ಅವರು ಪಾಪಿಗಳು ಎಂದು ಪ್ರಧಾನಿ ಮೋದಿ ಭಾವಿಸುತ್ತಾರೆ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Manish Sisodia : ಕೇಜ್ರಿವಾಲ್ ಜತೆಗಾರ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ; ಜಾಮೀನು ಅರ್ಜಿ ವಜಾ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಪ್ರಧಾನಿ ಮೋದಿ ಅವರ ಈ ಹೇಳಿಕೆ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹತಾಶೆಯೇ? ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ ಎಂಬ ಭಯವೇ? ಎಂದು ಟ್ವೀಟ್​ ಮಾಡಿದ್ದಾರೆ.

ವಾಸ್ತವಾಂಶಗಳು ಯಾವುವು?

ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್​ ಪೇಜ್​ನಲ್ಲಿ ಭಾಷಣ ನೇರ ಪ್ರಸಾರ ವಿಡಿಯೊ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಸುಮಾರು 29:00 ರಿಂದ 31:04 ನಿಮಿಷ ತನಕ ಪಿಎಂ ಮೋದಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾರೆ. ಬಿಜೆಪಿ ಆಡಳಿತದಲ್ಲಿ ಭಾರತೀಯ ರೈತರು ಅನುಭವಿಸಿದ ವಿವಿಧ ಪ್ರಯೋಜನಗಳ ಬಗ್ಗೆ ಮಾತನಾಡಿದ ಮೋದಿ “ಕಾಂಗ್ರೆಸ್ ಇಲ್ಲಿನ ರೈತರಿಗೆ ಮಾಡಿದ ದ್ರೋಹವು ದೊಡ್ಡ ಪಾಪ” ಎಂದು ಹೇಳುತ್ತಾರೆ. ‘ಇಲ್ಲಿ’ ಎಂಬುದು ಕರ್ನಾಟಕ ಎಂಬರ್ಥವಾಗಿದೆ.

“ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಲಾಗುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ₹ 4,000 ನೀಡುವುದನ್ನು ನಿಲ್ಲಿಸಿತು. ಅವರು ತಮ್ಮ ಮತವನ್ನು ಪಡೆಯುವಲ್ಲಿ ಯಶಸ್ವಿಯಾದ ನಂತರ, ಅವರು ರೈತರು ಮತ್ತು ಅವರ ಕೆಲಸದ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದರು. ಉಳಿದ 6,000 ರೂ.ಗಳನ್ನು ಮೋದಿ ಸರ್ಕಾರ ಕಳುಹಿಸುತ್ತದೆ. ಅದನ್ನು ರೈತರು ಪಡೆಯುತ್ತಾರೆ. ಅವರು ಇಲ್ಲಿ ನೀಡಿದ ಹಣದ ಒಂದು ಭಾಗವನ್ನು ಕಡಿತಗೊಳಿಸಿದರು.” ಎಂದು ಟೀಕಿಸಿದ್ದಾರೆ.

ಮುಂದುವರಿದ ಅವರು “ಈ ಚುನಾವಣೆಯಲ್ಲಿ ಅವರು ಮಾಡಿದ ಪಾಪಗಳಿಗಾಗಿ ನೀವು ಈ ಕರ್ನಾಟಕದ ಜನರು ಶಿಕ್ಷಿಸಬೇಕು. ದೆಹಲಿಯಿಂದ ಕಳುಹಿಸಿದ ಎಲ್ಲವೂ ಮುಂದಿನ ವರ್ಷಗಳಲ್ಲಿ ಮುಂದುವರಿಯುತ್ತದೆ ಎಂಬುದು ಮೋದಿಯ ಭರವಸೆ ” ಎಂದು ಅವರು ಹೇಳಿದ್ದಾರೆ. 31:00ರ ನಿಮಿಷದ ನಂತರ ನೋಡಿದಾಗ ಇದು ಕರ್ನಾಟಕ ಸರ್ಕಾರದ ವಿರುದ್ಧದ ಟೀಕೆ ಎಂಬುದು ಖಾತರಿಯಾಗುತ್ತದೆ.

ಪ್ರಧಾನಿ ಮೋದಿಯವರ ವೆಬೆ್​ಸೈಟ್​ನಲ್ಲಿ ಲಭ್ಯವಿರುವ ಭಾಷಣದ ಟ್ರಾನ್​ಸ್ಕ್ರಿಪ್ಟ್​​ ಈ ಮಾಹಿತಿಯನ್ನು ದೃಢಪಡಿಸುತ್ತದೆ. “ಈ ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ಈ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕು” ಎಂದು ಅಲ್ಲಿ ಬರೆಯಲಾಗಿದೆ.

ಬೆಳಗಾವಿಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ಈ ಕ್ಲಿಪ್ ಅನ್ನು ಆಯ್ದು ಎಡಿಟ್ ಮಾಡಲಾಗಿದೆ ಮತ್ತು ಹಿಂದೆ ಮುಂದೆ ಏನೂ ಇಲ್ಲದೆ ಪ್ರಸಾರ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತಿದೆ. ಪಿಎಂ ಮೋದಿ ನಿಖರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂಬುದಾಗಿ ಹೇಳಿದ್ದರೂ ಕರ್ನಾಟಕದ ಜನರು ಎಂದು ತಪ್ಪುದಾರಿಗೆಳೆಯುವ ವ್ಯಾಖ್ಯಾನ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

Exit mobile version