Site icon Vistara News

Narendra Modi : ನನ್ನ ಬಳಿ ಕಾರು ಬಿಡಿ, ಒಂದು ಬೈಸಿಕಲ್ ಕೂಡ ಇಲ್ಲ; ಪ್ರಧಾನಿ ಮೋದಿ ಹೀಗೆ ಹೇಳಿದ್ದು ಯಾಕೆ?

Narendra modi

ನವದೆಹಲಿ: ನನಗೆ ವಾಹನಗಳ ಬಗ್ಗೆ ಅನುಭವವೇ ಇಲ್ಲ. ನಾನು ಇದುವರೆಗೆ ಒಂದೇ ಒಂದು ವಾಹನ ಖರೀದಿ ಮಾಡಿಲ್ಲ. ನನ್ನ ಬಳಿ ಕಾರು ಇಲ್ಲ, ಕನಿಷ್ಠ ಪಕ್ಷ ಒಂದು ಬೈಸಿಕಲ್ ಕೂಡ ಖರೀದಿ ಮಾಡಿಲ್ಲ ಎಂಬುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. ಭಾರತದ ಅತಿದೊಡ್ಡ ಮತ್ತು ಮೊಟ್ಟಮೊದಲ ವಾಹನಗಳ ಪ್ರದರ್ಶನ ‘ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್​ಪೊ 2024 ‘ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ತಮ್ಮ ಬಳಿ ಸ್ವಂತ ಕಾರು ಕೂಡ ಇಲ್ಲ ಎಂದು ಬಹಿರಂಗಪಡಿಸಿದರು. “ನಾನು ಎಂದಿಗೂ ಕಾರು ಖರೀದಿಸಿಲ್ಲ, ಆದ್ದರಿಂದ ನನಗೆ ಯಾವುದೇ ಅನುಭವವಿಲ್ಲ ಬೈಸಿಕಲ್ ಕೂಡ ಖರೀದಿಸಿಲ್ಲ. ಆದರೆ, ದೆಹಲಿಯ ಜನರು ಬಂದು ಈ ಎಕ್ಸ್ ಪೋವನ್ನು ವೀಕ್ಷಿಸಬೇಕು ” ಎಂದು ಮೋದಿ ಎಕ್ಸ್ ಪೋದಲ್ಲಿ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ 2024 ರಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು “ನನ್ನ ಮೊದಲ ಅವಧಿಯಲ್ಲಿ ನಾನು ಜಾಗತಿಕ ಮಟ್ಟದ ಮೊಬಿಲಿಟಿ ಎಕ್ಸ್​ಪೊದ ಬಗ್ಗೆ ಯೋಜನೆ ರೂಪಿಸಿದ್ದೆ. ಎರಡನೇ ಅವಧಿಯಲ್ಲಿ ನಾನು ಸಾಕಷ್ಟು ಪ್ರಗತಿ ಸಾಧಿಸಿದೆ ಎಂಬುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

ಟ್ರಕ್ ಮತ್ತು ಟ್ಯಾಕ್ಸಿಗಳನ್ನು ಓಡಿಸುವ ಚಾಲಕರು ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ಚಾಲಕರು ಗಂಟೆಗಟ್ಟಲೆ ನಿರಂತರವಾಗಿ ಟ್ರಕ್ ಗಳನ್ನು ಓಡಿಸುತ್ತಾರೆ. ಅವರಿಗೆ ವಿಶ್ರಾಂತಿ ಪಡೆಯಲು ಸಮಯವಿಲ್ಲ. ಪ್ರಯಾಣದ ಸಮಯದಲ್ಲಿ ಚಾಲಕರಿಗೆ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯ ಕೆಲಸವನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರಿಗೆ ಹೊಸ ಸೌಲಭ್ಯಗಳೊಂದಿಗೆ ಆಧುನಿಕ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಆದಾಯ ಹೆಚ್ಚಳ

ತನ್ನದೇ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿರುವ ವರ್ಗದ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಮತ್ತೊಂದೆಡೆ, ಭಾರತದಲ್ಲಿ ಮಧ್ಯಮ ವರ್ಗದ ವ್ಯಾಪ್ತಿಯೂ ವೇಗವಾಗುತ್ತದೆ. ಮಧ್ಯಮ ವರ್ಗದ ಆದಾಯವೂ ಹೆಚ್ಚುತ್ತಿದೆ. ಇಂದು ಭಾರತವು 2047 ರ ವೇಳೆಗೆ ವಿಕಸಿತ್​ ಭಾರತ್ ಗುರಿಯೊಂದಿಗೆ ಮುಂದುವರಿಯುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ಮೊಬಿಲಿಟಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : LK Advani : ಎಲ್.ಕೆ.ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

ಭಾರತವು ವಿಶ್ವದ ಆರ್ಥಿಕ ಶಕ್ತಿ ಕೇಂದ್ರವಾಗುವ ಅಂಚಿನಲ್ಲಿ ನಿಂತಿದೆ. ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದುವ ಉದ್ದೇಶದಿಂದ ಮುಂದುವರಿಯುತ್ತಿದೆ. ಅಟಲ್ ಸೇತು ಮತ್ತು ಅಟಲ್ ಸುರಂಗವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ದಾಖಲೆಯ ಸಮಯದಲ್ಲಿ ಎಂಜಿನಿಯರಿಂಗ್ ಅದ್ಭುತಗಳನ್ನು ಸೃಷ್ಟಿಸುತ್ತಿದೆ ಎಂದರು.

ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೀತಿಗಳನ್ನು ರೂಪಿಸುತ್ತಿದೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2024 ಸಂಪೂರ್ಣ ಮೊಬಿಲಿಟಿ ಮತ್ತು ವಾಹನ ಮೌಲ್ಯ ಸರಪಳಿಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಎಕ್ಸ್ ಪೋದಲ್ಲಿ ಪ್ರದರ್ಶನಗಳು, ಸಮ್ಮೇಳನಗಳು, ಖರೀದಿದಾರ-ಮಾರಾಟಗಾರರ ಸಭೆಗಳು, ರಾಜ್ಯ ಅಧಿವೇಶನಗಳು, ರಸ್ತೆ ಸುರಕ್ಷತಾ ಪೆವಿಲಿಯನ್ ಮತ್ತು ಗೋ-ಕಾರ್ಟಿಂಗ್ ನಂತಹ ಸಾರ್ವಜನಿಕ ಕೇಂದ್ರಿತ ಆಕರ್ಷಣೆಗಳು ಇರಲಿವೆ ಎಂದು ಹೇಳಿದರು.

Exit mobile version