Site icon Vistara News

PM Modi Russia Visit : ಮೋದಿಯನ್ನು ಪಕ್ಕದಲ್ಲಿ ಕೂರಿಸಿ ಕಾರು ಡ್ರೈವ್ ಮಾಡಿಕೊಂಡು ಮನೆ ಸುತ್ತಲೂ ತೋರಿಸಿದ ರಷ್ಯಾ ಅಧ್ಯಕ್ಷ ಪುಟಿನ್​; ಇಲ್ಲಿದೆ ವಿಡಿಯೊ

PM Modi Russia Visit

ನವದೆಹಲಿ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ (PM Modi Russia Visit) ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ತಮ್ಮ ನಿವಾಸವನ್ನು ಪೂರ್ತಿ ತೋರಿಸಿದ್ದಾರೆ. ಕೇವಲ ಹಾಗೆಯೇ ತೋರಿಸಿಲ್ಲ. ಗಾಲ್ಫ್​ ಕಾರ್ಟ್​ (ಎಲೆಕ್ಟ್ರಿಕ್ ಸಣ್ಣ ವಾಹನ) ಅನ್ನು ಡ್ರೈವ್​ ಮಾಡಿಕೊಂಡು ಮೋದಿಯನ್ನು ಪಕ್ಕದಲ್ಲಿ ಕೂರಿಸಿ ಅವರು ನಿವಾಸದ ಸುತ್ತಲೂ ಸವಾರಿ ಮಾಡಿದ್ದಾರೆ. ಅದರ ವಿಡಿಯೊ ಇದೀಗ ವೈರಲ್ ಆಗಿದೆ. ಮಾಸ್ಕೋ ಬಳಿಯ ನೊವೊ-ಒಗಾರಯೋವೊದಲ್ಲಿರುವ ಪುಟಿನ್ ಅವರ ನಿವಾಸದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಪುಟಿನ್ ಮತ್ತು ಇಬ್ಬರು ಪ್ರತಿನಿಧಿಗಳೊಂದಿಗೆ ಗಾಲ್ಫ್​ ಕಾರ್ಟ್​​ನಲ್ಲಿ ಸುತ್ತುವುದು ಕಂಡು ಬಂತು.

ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಭೇಟಿಯಾದ ನಂತರ, ಪ್ರಧಾನಿ ಮೋದಿ ಪುಟಿನ್ ಅವರೊಂದಿಗೆ ಅವರ ನಿವಾಸದಲ್ಲಿ ಅನೌಪಚಾರಿಕ ಸಭೆ ನಡೆಸಿದರು. ಅಲ್ಲಿ, ಉಭಯ ನಾಯಕರು ಟೆರೇಸ್​ನಲ್ಲಿ ಚಹಾ ಸೇವಿಸಿದರು. ಬಳಿಕ ಪುಟಿನ್ ಅವರ ಕುದುರೆಗಳಿರುವ ಲಾಯಗಳಿಗೆ ಭೇಟಿ ನೀಡಿದರು.

ಸಂತೋಷದ ಕ್ಷಣ’ ಎಂದ ಮೋದಿ

ಅನೌಪಚಾರಿಕ ಮಾತುಕತೆಯ ನಂತರ, ಪಿಎಂ ಮೋದಿ ಪುಟಿನ್ ಅವರ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು. ಈ ಭೇಟಿಯು ಅತ್ಯಂತ ಸಂತೋಷದ ಕ್ಷಣ” ಎಂದು ಬಣ್ಣಿಸಿದರು. “ನಾಳೆ ನಡೆಯಲಿರುವ ನಮ್ಮ ಮಾತುಕತೆ ಬಗ್ಗೆ ಎದುರು ನೋಡುತ್ತಿದ್ದೇನೆ. ಇದು ಖಂಡಿತವಾಗಿಯೂ ಭಾರತ ಮತ್ತು ರಷ್ಯಾ ನಡುವಿನ ಸ್ನೇಹದ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುಸಲಿದೆ” ಎಂದು ಪಿಎಂ ಮೋದಿ ನಂತರ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಭೇಟಿಯ ಸಮಯದಲ್ಲಿ, ರಷ್ಯಾ ಅಧ್ಯಕ್ಷ ಪುಟಿನ್ ವೈಯಕ್ತಿಕವಾಗಿ ಪ್ರಧಾನಿ ಮೋದಿಯವರನ್ನು ಅವರ ನಿವಾಸದ ಸುತ್ತಲೂ ಎಲೆಕ್ಟ್ರಿಕ್ ಕಾರಿನಲ್ಲಿ ಕರೆದುಕೊಂಡು ಹೋದರು. “ರಷ್ಯಾದ ನಾಯಕ ತನ್ನ ಭಾರತೀಯ ಅತಿಥಿಗೆ ಭರ್ಜರಿ ಆತಿಥ್ಯ ನೀಡಿದರು. ಹೆಚ್ಚಿನ ಸಮಯ ಅವರು ಭಾಷಾಂತರಕಾರರ ಮೂಲಕ ಮಾತನಾಡಿದರು. ಆದಾಗ್ಯೂ, ಅವರು ಕಾರು ಬಿಟ್ಟು ಉದ್ಯಾನದ ಬಳಿ ನಡೆದುಕೊಂಡು ಹೋಗುವಾಗ ಪರಸ್ಪರ ಮಾತನಾಡಿಕೊಂಡರು. ಅದು ಬಹುಶಃ ಇಂಗ್ಲಿಷ್​ನಲ್ಲಿರಬಹುದು ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.

ಇಬ್ಬರು ಆಪ್ತರ ಭೇಟಿ: ವಿದೇಶಾಂಗ ಸಚಿವಾಲಯ

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಖಾಸಗಿ ಕಾರ್ಯಕ್ರಮವನ್ನು “ಇಬ್ಬರು ಆಪ್ತ ಸ್ನೇಹಿತರು” ಎಂದು ಬಣ್ಣಿಸಿದೆ.

ಇದನ್ನೂ ಓದಿ: PM Modi Russia Visit : ಸರ್ ಪೆ ಲಾಲ್ ಟೋಪಿ ರುಸಿ, ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ! ರಷ್ಯನ್ನರಿಗೆ ಹಳೆಯ ಹಾಡು ನೆನಪಿಸಿದ ಮೋದಿ

ಖಾಸಗಿ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ನೊವೊ-ಒಗಾರಯೋವೊದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಸ್ವಾಗತಿಸಿದರು” ಎಂದು ಸಚಿವಾಲಯ ‘ಎಕ್ಸ್’ ಪೋಸ್ಟ್​ ಮಾಡಿದೆ.

ಮಂಗಳವಾರ ನಡೆಯಲಿರುವ 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದಿಂದ ಉದ್ಭವಿಸುವ ವ್ಯಾಪಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇದು ಗಮನಾರ್ಹ ಈ ಭೇಟಿಯು ಉಕ್ರೇನ್​​ ಮೇಲೆ ರಷ್ಯಾದ ಮಿಲಿಟರಿ ಆಕ್ರಮದ ಮತ್ತು ಭಾರತದ ಲೋಕಸಭಾ ಚುನಾವಣೆಯ ಬಳಿಕ ನಡೆಯುವ ಗಮನಾರ್ಹ ಭೇಟಿಯಾಗಿದೆ.

Exit mobile version