Site icon Vistara News

Vistara Top 10 News : 400ಕ್ಕೂಅಧಿಕ ಸೀಟು ಖಾತರಿ ಎಂದ ಮೋದಿ, ಕೇಂದ್ರದ ವಿರುದ್ಧ ಸಿಎಂ ಗರಂ ಇತ್ಯಾದಿ ದಿನದ ಸುದ್ದಿಗಳು

Top 10 news in kannada

1. 400ಕ್ಕೂ ಹೆಚ್ಚು ಸ್ಥಾನಗಳೊಂದಿಗೆ 3ನೇ ಬಾರಿ ಅಧಿಕಾರಕ್ಕೆ: ಲೋಕಸಭೆಯಲ್ಲಿ ಮೋದಿ ಘೋಷಣೆ
ನವ ದೆಹಲಿ: ಮುಂದಿನ ಲೋಕಸಭಾ ಚುನಾವಣೆ ಬಳಿಕ ನಮ್ಮ (Narendra Modi) ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಜೆಟ್​ ಅಧಿವೇಶನದ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಅವರು ಮುಂದಿನ ಸಲವೂ ತಮ್ಮ ಪಕ್ಷ ಪ್ರಚಂಡ ಬಹುಮತದೊಂದಿಗೆ ಗೆಲ್ಲಲಿದೆ ಎಂದು ಹೇಳಿದರು. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Narendra Modi : ಭಾರತೀಯರು ಸೋಮಾರಿಗಳೆಂದು ಅವಮಾನಿಸಿದ್ದ ನೆಹರೂ, ಇಂದಿರಾ: ಮೋದಿ ಆಕ್ರೋಶ

2. 3ನೇ ಅವಧಿಯಲ್ಲಿ ಭಾರತ ವಿಶ್ವದ ನಂ.3 ಆರ್ಥಿಕ ಶಕ್ತಿ: ಇದು ನಮ್ಮ ಗ್ಯಾರಂಟಿ ಎಂದ ಮೋದಿ
ನವ ದೆಹಲಿ: ಕೇಂದ್ರದಲ್ಲಿ ತಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ಖಚಿತ ಎಂದು ನರೇಂದ್ರ ಮೋದಿ (Narendra Modi) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದುವೇ ಮೋದಿ ಗ್ಯಾರಂಟಿ ಎಂಬುದಾಗಿ ದೇಶದ ಪ್ರಜೆಗಳಿಗೆ ಅವರು ಭರವಸೆ ನೀಡಿದ್ದಾರೆ. ಬಜೆಟ್​ ಅಧಿವೇಶನದ (budget session) ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಅವರು ಮುಂದಿನ ಅವಧಿಯಲ್ಲಿ ತಮ್ಮ ಸರ್ಕಾರ ಬಂದರೆ ಆಗಲಿರುವ ಆರ್ಥಿಕ ಅಭಿವೃದ್ಧಿಯ ಕಲ್ಪನೆಯನ್ನು ಜನರ ಮುಂದಿಟ್ಟರು. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Narendra Modi: ಭಾರತದ ವೈಭವ ಈಗ ಎದ್ದು ಕಾಣುತ್ತಿದೆ; ಲೋಕಸಭೆಯಲ್ಲಿ ಮೋದಿ ಹೇಳಿಕೆ

3. 5 ವರ್ಷದಲ್ಲಿ 73 ಸಾವಿರ ಕೋಟಿ ರೂ. ಕಡಿತ; ಕೇಂದ್ರದ ವಿರುದ್ಧ ಸಿಎಂ ಗರಂ
ಬೆಂಗಳೂರು: ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ರಾಜ್ಯದ ಪಾಲಿನ ಹಣವನ್ನು ಕೇಂದ್ರ ಸರ್ಕಾರ (Central Government) ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನೇರ ಆರೋಪ ಮಾಡಿದ್ದಾರೆ. ರಾಜ್ಯಕ್ಕೆ ಕಳೆದ 5 ವರ್ಷದಲ್ಲಿ 73 ಸಾವಿರ ಕೋಟಿ ನಮಗೆ ಕಡಿತವಾಗಿದೆ ಎಂದು ಹೇಳಿರುವ ಅವರು ಈ ಅನ್ಯಾಯದ ವಿರುದ್ಧ, ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ಫೆಬ್ರವರಿ 7ರಂದು ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ (Protest against Central Government on February 7) ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : BJP Karnataka : ಯುಪಿಎ V/S ಮೋದಿ ಕಾಲದ ಅನುದಾನ ಲೆಕ್ಕ ನೀಡಿ ಬಿಜೆಪಿ ಕೌಂಟರ್

4. ಬಿಜೆಪಿ ಸಂಸದರು ಗಂಡಸರಲ್ಲ ಎಂಬ ಹೇಳಿಕೆಗೆ ಇಂದಿರಾ ಫೋಟೊ ಮೂಲಕ ವಿಜಯೇಂದ್ರ ಉತ್ತರ
ಬೆಂಗಳೂರು: ಬಿಜೆಪಿ ಸಂಸದರು ಬರೀ ಶೋ ಪೀಸ್‌ಗಳು, ಅವರಲ್ಲಿ ಯಾರೂ ಗಂಡಸರಿಲ್ಲ ಎಂಬ ಮಾಗಡಿ ಕಾಂಗ್ರೆಸ್‌ ಶಾಸಕ (Magadi Congress MLA) ಎಚ್‌.ಸಿ. ಬಾಲಕೃಷ್ಣ (HC Balakrishna) ಅವರ ವಿವಾದಾತ್ಮಕ ಹೇಳಿಕೆಗೆ (controversial Statement) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಇಂದಿರಾ ಗಾಂಧಿ ಅವರ ಫೋಟೊದ ಮೂಲಕ ತಿರುಗೇಟು ನೀಡಿದ್ದಾರೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : HC Balakrishna : ರಾಜ್ಯದ ಬಿಜೆಪಿ ಸಂಸದರು ಬರೀ ಶೋಪೀಸ್‌ಗಳು, ಯಾರೂ ಗಂಡಸರಲ್ಲ!

5. ಫೆ. 12ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ; ಫೆ.16ಕ್ಕೆ ರಾಜ್ಯ ಬಜೆಟ್‌
ಬೆಂಗಳೂರು: 16ನೇ ವಿಧಾನಸಭೆಯ 3ನೇ ಅಧಿವೇಶನವು (Budget Session) ಫೆ. 12ರಿಂದ 23 ರವರೆಗೆ ನಡೆಯಲಿದೆ. ಫೆ. 12 ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ.16ರಂದು ಮುಖ್ಯಮಂತ್ರಿಯವರು 2024-25ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್ ತಿಳಿಸಿದ್ದಾರೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.

6. 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಮುಯ್ಯಿಗೆ ಮುಯ್ಯಿ, ಸರಣಿ ಸಮ
ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ (IND Vs ENG) ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ಬಳಗವು 106 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಟೆಸ್ಟ್‌ ಪಂದ್ಯದ ಸೋಲಿಗೆ ಭಾರತ ತಂಡವು ಸೇಡು ತೀರಿಸಿಕೊಂಡಂತಾಗಿದೆ. ಅಷ್ಟೇ ಅಲ್ಲ, ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1ರ (Test Series) ಸಮಬಲ ಸಾಧಿಸಿದಂತಾಗಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಮರ್ಥ ಪ್ರದರ್ಶನ ತೋರಿದ ಭಾರತ ತಂಡವು ಎರಡನೇ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.

7. ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು; ಏನಿದು ಕಾಯಿದೆ?
ನವದೆಹಲಿ: ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸುವವರ ವಿರುದ್ಧ ಇನ್ನು ಮುಂದೆ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ. ಈ ಬಗ್ಗೆ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ (Public Examination Bill). ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ವಿವಿಧ ಅಕ್ರಮಗಳಲ್ಲಿ ತೊಡಗಿಸುವವರಿಗೆ ಗರಿಷ್ಠ 10 ವರ್ಷ ಸಜೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸಲು ಅವಕಾಶವಿರುವಂತ ಕಾಯಿದೆ ರೂಪಿಸಲು ಕೇಂದ್ರ ಚಿಂತನೆ ನಡೆಸಿದೆ. ಈ ಸಂಬಂಧ ಇಂದು (ಜನವರಿ 5) ಸಾರ್ವಜನಿಕ ಪರೀಕ್ಷೆ ಅಕ್ರಮ ತಡೆ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.

8. ಸಂಕಷ್ಟದಲ್ಲಿರುವ ಪೇಟಿಎಂ ಮುಕೇಶ್‌ ಅಂಬಾನಿ ತೆಕ್ಕೆಗೆ? ಯಾವಾಗ ಖರೀದಿ?
ಮುಂಬೈ: ಮಾರ್ಚ್‌ 1ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (Paytm Payments Bank Ltd) ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank Of India) ನಿರ್ಬಂಧ (Paytm Crisis) ವಿಧಿಸಿದೆ. ಇದರಿಂದಾಗಿ ಪೇಟಿಎಂ ಸಂಕಷ್ಟಕ್ಕೆ ಸಿಲುಕಿದ್ದು, ಷೇರುಗಳ ಮೌಲ್ಯವೂ ಪಾತಾಳಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಅವರು ಪೇಟಿಎಂ ಖರೀದಿಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬೆನ್ನಲ್ಲೇ ಜಿಯೋ ಫೈನಾನ್ಶಿಯಲ್‌ ಸರ್ವಿಸಸ್‌ (Jio Financial Services) ಷೇರುಗಳ ಮೌಲ್ಯವು ಶೇ.14ರಷ್ಟು ಏರಿಕೆಯಾಗಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.

9. ವಿಶ್ವಾಸಮತ ಗೆದ್ದ ಸಿಎಂ ಚಂಪಯಿ ಸೊರೆನ್;‌ ಜೆಎಂಎಂ ಸರ್ಕಾರ ಸೇಫ್!
ರಾಂಚಿ: ಜಾರ್ಖಂಡ್‌ನಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ (Jharkhand Politics_ ಒಂದು ಅಧ್ಯಾಯ ಸುಖಾಂತ್ಯ ಕಂಡಿದೆ. ಹೇಮಂತ್‌ ಸೊರೆನ್‌ (Hemant Soren) ರಾಜೀನಾಮೆ ಬಳಿಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮುಖ್ಯಮಂತ್ರಿ ಚಂಪಯಿ ಸೊರೆನ್‌ (Champai Soren) ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಜಾರ್ಖಂಡ್‌ ಮುಕ್ತಿ ಮೋರ್ಚಾ ನೇತೃತ್ವದ ಸರ್ಕಾರವು ಸೇಫ್‌ ಆಗಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.

10. ಭೂಮಿಯಂಥ ಇನ್ನೊಂದು ವಾಸಯೋಗ್ಯ ಗ್ರಹ ಪತ್ತೆ ಮಾಡಿದ ನಾಸಾ; ಎಷ್ಟು ದೂರ ಇದೆ ನೋಡಿ!
ನ್ಯೂಯಾರ್ಕ್‌: ಭೂಮಿಯಂತೆಯೇ (Earth like) ಇರುವ, ವಾಸಯೋಗ್ಯ ಗ್ರಹವೊಂದನ್ನು (Habitable Planet) ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಕಂಡುಹಿಡಿದಿದೆ. ಆದರೆ ಇದು ಭೂಮಿಯಿಂದ 137 ಬೆಳಕಿನ ವರ್ಷ (Light year) ದೂರದಲ್ಲಿದೆಯಂತೆ! ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.

Exit mobile version