ಬೆಂಗಳೂರು: ನೀಲಿಚಿತ್ರ ತಾರೆ ಜೆಸ್ಸಿ ಜೇನ್ 2024 ರ ಜನವರಿಯಲ್ಲಿ ಬಾಯ್ಫ್ರೆಂಡ್ ಮನೆಯಲ್ಲಿ ಮೃತಪಟ್ಟಿದ್ದು ಮಾದಕ ದ್ರವ್ಯಗಳ ಮಿತಿ ಮೀರಿ ಸೇವೆನೆಯಿಂದ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗೊತ್ತಾಗಿದೆ. ಆಕೆ ಸೇವಿಸಿದ್ದ ಕೊಕೇನ್ ವಿಷವಾಗಿತ್ತು ಎಂದು ಪರೀಕ್ಷೆಯಲ್ಲಿ ಗೊತ್ತಾಗಿದೆ. ಜೆಸ್ಸಿನಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಿಂಡಿ ಟೇಲರ್ ಅಥವಾ ಸಿಂಥಿಯಾ ಆನ್ ಹೋವೆಲ್ ಎಂಬ ಹೆಸರಿನ 43 ವರ್ಷದ ನಟಿ, ಜನವರಿ 24, 2024 ರಂದು ಒಕ್ಲಹೋಮದಲ್ಲಿರುವ ತನ್ನ ಗೆಳೆಯನ ಮನೆಯಲ್ಲಿ ಪತ್ತೆಯಾಗಿದ್ದರು. ಆಕೆಯ ಗೆಳೆಯ ಬ್ರೆಟ್ ಹಸೆನ್ ಮುಲ್ಲರ್ (33) ಕೂಡ ಘಟನಾ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದ.
ಒಕ್ಲಹಾಮ್ ವೈದ್ಯಕೀಯ ಪರೀಕ್ಷಕರ ಕಚೇರಿ ಶವಪರೀಕ್ಷೆ ನಡೆಸಿದ್ದು, ಸಾವಿಗೆ ತೀವ್ರವಾದ ಫೆಂಟಾನಿಲ್ ಮತ್ತು ಕೊಕೇನ್ ನಶೆ ಕಾರಣ ಎಂದು ಬಹಿರಂಗಪಡಿಸಿದೆ. ಭಾನುವಾರ ಬಿಡುಗಡೆಯಾದ ವರದಿಯಲ್ಲಿ, ಜೇನ್ ಅವರ ದೇಹವು ಕೊಳೆತ ಸ್ಥಿತಿಯಲ್ಲಿತ್ತು ಎಂದು ಹೇಳಿದೆ. ದೇಹ ಪತ್ತೆಯಾಗುವ ಮೊದಲು ಸಾಕಷ್ಟು ಸಮಯದ ಹಿಂದೆಯೇ ಸತ್ತಿದ್ದರು ಎಂಬುದನ್ನು ಸೂಚಿಸುತ್ತದೆ.
ವರಿ ಪ್ರಕಾರ, ಗೆಳೆಯನ ಮನೆಯ ಮಾಲೀಕರು ಅನುಮಾನದ ಮೇರೆಗೆ ಮನೆಯನ್ನು ಪರಿಶೀಲನೆ ನಡೆಸಿದ್ದರು. ಇದರಿಂದಾಗಿ ಪೊಲೀಸರು ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿಗೆ ಕಾರಣ ಆ ಸಮಯದಲ್ಲಿ ಮಿತಿಮೀರಿದ ಸೇವನೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: Mumbai BMW hit-and-run case: ಬಿಎಂಡಬ್ಲ್ಯು ಕಾರು ಗುದ್ದಿಸಿ ಮಹಿಳೆಯ ಸಾವಿಗೆ ಕಾರಣನಾದ ಮಿಹಿರ್ ಶಾ ಬಂಧನ
ಜೆಸ್ಸಿ ಜೇನ್ ವಯಸ್ಕರ ಮನರಂಜನಾ ಉದ್ಯಮದಲ್ಲಿ ಪ್ರಮುಖ ಹೆಸರಾಗಿತ್ತು. 100 ಕ್ಕೂ ಹೆಚ್ಚು ವಯಸ್ಕರ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅನೇಕ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ಗಳಿಸಿದ್ದರು. ಆಕೆ ತನ್ನ ಪೋರ್ನ್ ಚಲನಚಿತ್ರ ವೃತ್ತಿಜೀವನವನ್ನು 2002 ರಲ್ಲಿ ಪ್ರಾರಂಭಿಸಿದ್ದರು| ಡಿಜಿಟಲ್ ಪ್ಲೇಗ್ರೌಂಡ್ ಸ್ಟುಡಿಯೋದೊಂದಿಗೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಲ್ಲಿ ಅವಳು 2014 ರವರೆಗೆ ಇದ್ದರು. ನಂತರ ಅವರು ಜೂಲ್ಸ್ ಜೋರ್ಡಾನ್ ವೀಡಿಯೊದೊಂದಿಗೆ ಸಹಿ ಹಾಕಿದ್ದರು. 2017 ರಲ್ಲಿ ಉದ್ಯಮದಿಂದ ನಿವೃತ್ತಿ ಘೋಷಿಸಿದ್ದರು..
ಬೇವಾಚ್: ಹವಾಯಿಯನ್ ವೆಡ್ಡಿಂಗ್, ಪೈರೇಟ್ಸ್ II: ಸ್ಟಾಗ್ನೆಟ್ಟಿಸ್ ರಿವೆಂಜ್, ಸ್ಟಾರ್ಸ್ಕಿ ಮತ್ತು ಹಚ್, ಫ್ಯಾಮಿಲಿ ಬಿಸಿನೆಸ್, ಹಚ್ , ನೈಟ್ ಕಾಲ್ಸ್ ಮತ್ತು ದಿ ಬ್ಯಾಡ್ ಗರ್ಲ್ಸ್ ಕ್ಲಬ್ ಸೇರಿದಂತೆ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು, ಸಿಎನ್ಬಿಸಿಯ ಸಾಕ್ಷ್ಯಚಿತ್ರ ಪೋರ್ನ್: ಬಿಸಿನೆಸ್ ಆಫ್ ಪ್ಲೆಷರ್ನಲ್ಲಿಯೂ ಕಾಣಿಸಿಕೊಂಡಿದ್ದರು.