ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು (Prajwal Revanna Case) ಮತ್ತೆ ಎಸ್ಐಟಿ ಕಸ್ಟಡಿಗೆ ನೀಡಲಾಗಿದೆ. ಕೆ.ಅರ್.ನಗರ ಸಂತ್ರಸ್ತೆ ಅತ್ಯಾಚಾರ ಪ್ರಕರಣದಲ್ಲಿ ಜೂನ್ 24ರವರೆಗೆ ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ.
ಕೆ.ಅರ್.ನಗರ ಸಂತ್ರಸ್ತೆ ಅತ್ಯಾಚಾರ ಪ್ರಕರಣದಲ್ಲಿ ಸ್ಥಳ ಮಹಜರು, ಹೇಳಿಕೆ ದಾಖಲು, ವಾಯ್ಸ್ ಸ್ಯಾಂಪಲ್, ವೈದ್ಯಕೀಯ ಪರೀಕ್ಷೆ ಸಲುವಾಗಿ ಕಸ್ಟಡಿಗೆ ನೀಡಲಾಗಿದೆ. ನೆನ್ನೆಯಷ್ಟೇ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು. ಆದರೆ, 3ನೇ ಕೇಸ್‌ನಲ್ಲಿ ವಿಚಾರಣೆ ನಡೆಸಲು ತನಿಖಾಧಿಕಾರಿಗಳು ಬಾಡಿ ವಾರಂಟ್ ಮೇಲೆ ಮತ್ತೆ ಎಸ್ಐಟಿ ಕಸ್ಟಡಿಗೆ ಪಡೆದಿದ್ದಾರೆ.
ನೆನ್ನೆ (ಜೂನ್ 18) ಕೋರ್ಟ್ ವಿಚಾರಣೆ ವೇಳೆ ಎಸ್‌ಐಟಿ (SIT) ಅಧಿಕಾರಿಗಳು ತನ್ನ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಿದ್ದಾರೆ ಎಂದು ಪ್ರಜ್ವಲ್ ದೂರಿದ್ದು ವರದಿಯಾಗಿತ್ತು. ಪ್ರಜ್ವಲ್ ರೇವಣ್ಣ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಎಸ್‌ಐಟಿ ಕೋರ್ಟ್‌ಗೆ ಹಾಜರು ಪಡಿಸಿದಾಗ, “ಏನಾದ್ರೂ ಆರೋಗ್ಯ ಸಮಸ್ಯೆ ಇದೆಯಾ?ʼʼ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದರು. ಇದಕ್ಕೆ “ಹೌದು ಸರ್” ಎಂದು ಪ್ರಜ್ವಲ್ ನುಡಿದಿದ್ದರು.
ಇದನ್ನೂ ಓದಿ | Murder Case: ಚಿಕ್ಕಮ್ಮನನ್ನು ಕೊಂದು ಕಥೆ ಕಟ್ಟಿದ ಕಾಮುಕ ಬಾಲಕ; ಪರಚಿದ ಗಾಯವೇ ಸಾಕ್ಷಿ ಹೇಳಿತು
“ಎಸ್ಐಟಿ ಅಧಿಕಾರಿಗಳು ಸರಿಯಾಗಿ ನೋಡ್ಕೋತಿಲ್ಲ” ಎಂದು ಪ್ರಜ್ವಲ್ ಹೇಳಿದ್ದಲ್ಲದೆ, “ಎಂಆರ್‌ಐ ಸ್ಕ್ಯಾನ್ ಮಾಡಿಸಿದ್ದೇನೆ. ಟ್ಯಾಬ್ಲೆಟ್ ತೆಗೆದುಕೊಳ್ತಿದ್ದೇನೆ” ಎಂದು ಹೇಳಿದಾಗ, ʼಆರೋಗ್ಯ ತಪಾಸಣೆ ಯಾಕೆ ಮಾಡಿಸಿಲ್ಲ?ʼ ಎಂದು ಅಧಿಕಾರಿಗಳನ್ನು ಜಡ್ಜ್ ಪ್ರಶ್ನಿಸಿದ್ದರು. “ಅವರು ಈಗ ಹೇಳ್ತಾ ಇದ್ದಾರೆ, ನಮಗೆ ಹೇಳಿಲ್ಲ” ಎಂದು ಎಸ್ಐಟಿ ಅಧಿಕಾರಿಗಳು ಉತ್ತರಿಸಿದ್ದರು. ಇದೀಗ ಬಾಡಿ ವಾರಂಟ್ ಮೇಲೆ ಅವರನ್ನು ಮತ್ತೆ ಕಸ್ಟಡಿಗೆ ಪಡೆಯಲಾಗಿದೆ.
ದರ್ಶನ್ ಬಾಲ ಬಿಚ್ಚದಂತೆ ಪೊಲೀಸರಿಂದ ಮಾಸ್ಟರ್ ಸ್ಟ್ರೋಕ್!
ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Actor Darshan) ಕಳೆದ ಮಂಗಳವಾರ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. ಅದೇ ದಿನ ಪವಿತ್ರಾ ಗೌಡ ಸೇರಿದಂತೆ 11 ಆರೋಪಿಗಳ ಬಂಧನವಾಗಿತ್ತು. ಈಗ ಬಂಧಿತರ ಸಂಖ್ಯೆ 20 ದಾಟಿದೆ. ಜೂನ್ 20 ಕ್ಕೆ ದರ್ಶನ್ ಹಾಗೂ ಇತರೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ನಾಳೆ ನ್ಯಾಯಾಲಯದ ಆದೇಶದಂತೆ ದರ್ಶನ್ ಹಾಗೂ ಇತರ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಬಹುದು ಎನ್ನಲಾಗಿದೆ. ದರ್ಶನ್ ಮೇಲೆ ರೌಡಿ ಶೀಟರ್ ಓಪನ್ ಮಾಡೋದು ಬಹುತೇಕ ಫಿಕ್ಸ್ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಹಾಗು ಹಳೆ ಕೇಸ್‌ಗಳನ್ನು ಸೇರಿಸಿ ರೌಡಿ ಶೀಟ್ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಕೊಲೆ ಕೇಸಲ್ಲಿ ದರ್ಶನ್ ಜೈಲು ಸೇರುತ್ತಿದ್ದಂತೆ ನೋಟಿಸ್ ಕೊಟ್ಟು ರೌಡಿ ಹಾಳೆ ತೆರೆಯಲು ಪೊಲೀಸರ ಸಿದ್ಧತೆ ಆಗುತ್ತಿದೆ ಎನ್ನಲಾಗಿದೆ.
ದರ್ಶನ್ ಮೇಲೆ ರೌಡಿ ಶೀಟರ್ ಓಪನ್ ಮಾಡೋದು ಫಿಕ್ಸ್?
ರೇಣುಕಾಸ್ವಾಮಿ ಕೊಲೆ ಕೇಸ್ ಹಾಗೂ ಹಳೆ ಕೇಸ್‌ಗಳನ್ನು ಸೇರಿಸಿ ದರ್ಶನ್ ಮೇಲೆ ರೌಡಿ ಶೀಟರ್ ಓಪನ್ ತೆರೆಯಲು ಸಿದ್ಧತೆ ಆಗುತ್ತಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ದರ್ಶನ್ ಪುಡಿ ರೌಡಿಗಳ ಗ್ಯಾಂಗ್ ಕಂಡು ಪೊಲೀಸರು ಕೂಡ ಶಾಕ್ ಆಗಿದ್ದಾರೆ. ಬೆಂಗಳೂರು ಸೇರಿದಂತೆ ಪ್ರತೀ ಜಿಲ್ಲೆಯಲ್ಲೂ ರೌಡಿಗಳ ಗ್ಯಾಂಗ್ ಕಟ್ಟಿದ್ದಾರಂತೆ ದರ್ಶನ್. ಆರೋಪಿಗಳ ವಿಚಾರಣೆಯಲ್ಲಿ ದರ್ಶನ್ ಬಗ್ಗೆ ಈ ನಿಜಬಣ್ಣವನ್ನು ಹೊರಹಾಕಿದ್ದಾರೆ ಪೊಲೀಸರು. ಅಸಲಿಗೆ ಕಾನೂನು ಅನ್ನೋದು ಲೆಕ್ಕಕ್ಕೇ ಇಲ್ಲದಂತೆ ದರ್ಶನ್ ವರ್ತಿಸುತ್ತಿದ್ದರು ಎನ್ನಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಒಂಭತ್ತು ದಿನ ಕಳೆದಿದ್ದಾರೆ ದರ್ಶನ್.