Site icon Vistara News

Prajwal Revanna : ಪ್ರಜ್ವಲ್​ ರೇವಣ್ಣ ಮತ್ತೆ ನಾಲ್ಕು ದಿನ ಎಸ್​​ಐಟಿ ಕಸ್ಟಡಿಗೆ

prajwal Revanna

ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಬೃಹತ್​ ಸೆಕ್ಸ್​ ಸ್ಕ್ಯಾಂಡಲ್​ ಕೇಸ್​ನಲ್ಲಿ ಎಸ್​ಐಟಿ ವಶದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ನಾಲ್ಕು ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಲಾಗಿದೆ. ಈ ಹಿಂದಿನ ಆರು ದಿನಗ ಕಸ್ಟಡಿಯ ಅವಧಿ ಮುಕ್ತಾಯಗೊಂಡ ಕಾರಣ ಅವರನ್ನು ಗುರುವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರು ತನಿಖೆಗೆ ಸಹಕಾರ ನೀಡದ ಕಾರಣ ಇನ್ನಷ್ಟು ದಿನಗಳು ತಮ್ಮ ವಶಕ್ಕೆ ನೀಡುವಂತೆ ಎಸ್​ಐಟಿ ಅಧಿಕಾರಿಗಳು ಮಾಡಿದ ಮನವಿಗೆ ಕೋರ್ಟ್ ಸಮ್ಮತಿ ನೀಡಿದೆ.

ಆರು ದಿನಗಳ ಕಸ್ಟಡಿ ಅವಧಿ ಮುಕ್ತಾಯಗೊಂಡ ಕಾರಣ ಎಸ್​ಐಟಿ ಅಧಿಕಾರಿಗಳು ಗುರುವಾರ 42 ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ಅವರು ಸರಿಯಾಗಿ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಿದ ಎಸ್​ಐಟಿ ಪರ ವಕೀಲರಾದ ಅಶೋಕ್​ ನಾಯಕ್​ ಮತ್ತೆ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದರು

ಆರೋಪಿ ಪ್ರಜ್ವಲ್ ರೇವಣ್ಣ ತನಿಖೆ ಸಹಕಾರ ನೀಡುತ್ತಿಲ್ಲ. ಮಹಿಳೆಯ ವಿಡಿಯೊ ಚಿತ್ರೀಕರಣ ಮಾಡಿದ ಮೊಬೈಲ್​ ಬಗ್ಗೆಯೂ ಮಾಹಿತಿ ನೀಡುತ್ತಿದೆ. ಯಾವುದೇ ಪಶ್ನೆಗಳನ್ನು ಕೇಳಿದರೂ ಅವರು ಅದಕ್ಕೆ ಉತ್ತರ ನೀಡುತ್ತಿಲ್ಲ. ನಾನು ವಿಡಿಯೊದಲ್ಲಿ ಇರುವ ವ್ಯಕ್ತಿಯಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಎಂಬುದನ್ನೇ ಪದೇ ಪದೆ ಹೇಳುತ್ತಿದ್ದಾರೆ. ಹೀಗಾಗಿ ವಿಚಾರಣಾ ಪ್ರಕ್ರಿಯೆ ಮುಗಿದಿಲ್ಲ ಎಂದು ಪ್ರಾಸಿಕ್ಯೂಟರ್​ ಅಶೋಕ್ ನಾಯಕ್ ವಾದ ಮಾಡಿದರು.

ಇದನ್ನೂ ಓದಿ: ವಕನ ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದ ಯುವತಿ; ಎರಡು ಕೈ ಮೇಲೆತ್ತಿ ಬೈಕ್‌ ಸವಾರಿ, ಸವಾರನ ಹುಚ್ಚಾಟಕ್ಕೆ ಕಿಡಿ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಜ್ವಲ್ ರೇವಣ್ಣ ಪರ ವಕೀಲರಾದ ಟಾಮಿ ಸೆಬಾಸ್ಟಿಯನ್ ಪ್ರಕರಣ ದಾಖಲಾದ ಒಂದು ತಿಂಗಳ ಬಳಿಕ ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಅವಕಾಶ ಸಾಕಷ್ಟಿತ್ತು. ಆರು ದಿನಗಳ ಕಸ್ಟಡಿಯಲ್ಲೂ ಅವಕಾಶಗಳಿದ್ದವು. ಮತ್ತೆ ಅವರನ್ನು ಕಸ್ಟಡಿಗೆ ಕೊಡುವ ಅಗತ್ಯವೇ ಇಲ್ಲ ಎಂದು ವಾದ ಮಂಡಿಸಿದರು.

ಈ ವೇಳೆ ಪ್ರಾಸಿಕ್ಯೂಟರ್ ಅಶೋಕ್​ ನಾಯಕ್​, ಎಳು ದಿನ ಕಸ್ಟಡಿ ಅವಧಿಯಲ್ಲಿ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡಿಲ್ಲ, ಹೀಗಾಗಿ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಅಲ್ಲದೆ, ಸಂತ್ರಸ್ತೆಯನ್ನು ಆರೋಪಿಯನ್ನು ಮುಖಾಮುಖಿ ವಿಚಾರಣೆ ಮಾಡಬೇಕಿದೆ ಎಂದು ವಾದಿಸಿದರು.

ಆರೋಪಿ ತಮ್ಮದು ಎಂದು ಹೇಳಲಾದ ಒಂದು ಮೊಬೈಲ್ ಕೊಟ್ಟಿದ್ದಾರೆ. ಆದರೆ ಅದರಲ್ಲಿ ಹೆಚ್ಚಿನ ವಿವರಗಳು ಇಲ್ಲ. ಆ ಬಗ್ಗೆಯೂ ಹೆಚ್ಚು ಮಾಹಿತಿ ಸಂಗ್ರಹ ಮಾಡಬೇಕಾಗಿದೆ. ಪ್ರಜ್ವಲ್​ ವಿದೇಶದಲ್ಲಿದ್ದಾಗ ಹಣ ಸಂದಾಯವಾಗಿದೆ. ಅದರ ಮೂಲಗಳ ಬಗ್ಗೆ ವಿಚಾರಣೆ ಮಾಡಬೇಕಿದೆ. ಹೀಗಾಗಿ ಜೂನ್ 10ರವರೆಗೆ ಕಸ್ಟಡಿ ನೀಡಲು ಎಸ್​ಐಟಿ ಮನವಿ ಮಾಡಿದರು.

ವಾದಗಳನ್ನು ಆಲಿಸಿದ ನ್ಯಾಯಾಧೀಶರು, ಎಸ್​ಐಟಿ ಮನವಿಯನ್ನು ಪುರಸ್ಕರಿಸಿ ಜೂನ್ 10 , ಸೋಮವಾರದ ವರೆಗೆ ಕಸ್ಟಡಿಗೆ ನೀಡಲು ಒಪ್ಪಿದರು.

ಪುರುಷತ್ವ ಪರೀಕ್ಷೆಗೆ ಒಪ್ಪಿತ್ತು ಕೋರ್ಟ್​

ಪ್ರಜ್ವಲ್​ ರೇವಣ್ಣ (Prajwal Revanna case ) ಅತ್ಯಾಚಾರ ಮಾಡಲು ಸಮರ್ಥರೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಲ್ಲಿ ಪತ್ತೆ ಹಚ್ಚಲು ಪ್ರಮುಖ ವೈದ್ಯಕೀಯ ವಿಧಾನವಾಗಿರುವ ಪುರುಷತ್ವ ಪರೀಕ್ಷೆಗೆ ಕೋರ್ಟ್​ ಒಪ್ಪಿಗೆ ಬುಧವಾರ ಒಪ್ಪಿಗೆ ನೀಡಿತ್ತು. ಹೀಗಾಗಿ ಎಸ್​ಐಟಿ ಅಧಿಕಾರಿಗಳು ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪುರುಷತ್ವ ಪರೀಕ್ಷೆ ನಡೆಸಿದ್ದಾರೆ.

ಸಾವಿರಾರು ಹೆಣ್ಣು ಮಕ್ಕಳನ್ನು ವಯಸ್ಸಿನ ಭೇದವಿಲ್ಲದೇ ಅತ್ಯಾಚಾರ ಮಾಡಿರುವುದಲ್ಲದೇ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಎಸ್​ಐಟಿ ಪೊಲೀಸರು ಮೇ 31ರಂದು ರಾತ್ರಿ ಬಂಧಿಸಿದ್ದರು. ಆದರೆ ಚುನಾವಣಾ ಫಲಿತಾಂಶ ಬರುವ ತನಕ ಕಾದಿದ್ದ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಪುರುಷತ್ವ ಪರೀಕ್ಷೆ ನಡೆಸಿದ್ದಾರೆ.

ಪೊಲೀಸರ ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ತಾನು ಸಂಸದ ಎಂಬ ಅಹಂನಲ್ಲಿ ತನಿಖೆಗೆ ಅಸಹಕಾರ ನೀಡುತ್ತಿದ್ದ. ಹೀಗಾಗಿ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ನಡೆಯುತ್ತಿರಲಿಲ್ಲ. ಮಂಗಳವಾರ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಪ್ರಜ್ವಲ್​ಗೆ ಹಾಸನದ ಜನರು ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಅದೇ ರೀತಿ ಪ್ರಜ್ವಲ್ ಅವರ ಎಸ್​ಐಟಿ ಕಸ್ಟಡಿ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಅಧಿಕಾರಿಗಳು ಪರಿಕ್ಷೆ ನಡೆಸಿದ್ದಾರೆ. ಇದೇ ವೇಳೆ ಹಾಸನ ಹಾಗು ಬಸವನಗುಡಿಯ ಮನೆಗೆ ಕರೆದೊಯ್ದು ಸ್ಪಾಟ್ ಮಹಜರ್ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

Exit mobile version