ಚಿಕ್ಕೋಡಿ: ಸಚಿವ ಸತೀಶ್ ಜಾರಕಿಹೋಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿಗೆ (Priyanka Jarkiholi) ಚಿಕ್ಕೋಡಿ ಲೋಕಸಭೆ ಟಿಕೆಟ್ ಪಡೆದಿರುವ ಹೊರತಾಗಿಯೂ ಅವರ ವಿರುದ್ಧದ ಬಂಡಾಯ ಚಟುವಟಿಕೆಗಳು (Rebel Politics) ಜೋರಾಗಿವೆ. ಅವರ ಕುಟುಂಬದ ವಿರುದ್ಧ ರಾಯಭಾಗ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶಂಭು ಕಲ್ಲೋಳಿಕರ ಅವರು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಮಾಜಿ IAS ಅಧಿಕಾರಿಯಾಗಿರುವ ಶಂಭು ಅವರು ಸಭೆ ನಡೆಸಿ ಪ್ರಿಯಾಂಕ ವಿರುದ್ಧ ಬಂಡಾಯವೆದ್ದಿದ್ದಾರೆ.
ಪ್ರಿಯಾಂಕ ಜಾರಕಿಹೋಳಿ (Priyanka Jarkiholi) ಸೋಲಿಸಲು ರಣತಂತ್ರ ರೂಪಿಸಲು ಮುಂದಾದ ಸತೀಶ್ ವಿರೋಧಿ ಬಣ ಜೋರು ಚಟುವಟಿಕೆ ನಡೆಸುತ್ತಿದ್ದಾರೆ. ಶುಂಭು ಅವರು ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಹೊರತಾಗಿಯೂ ಸತೀಶ್ ಜಾರಕಿಹೊಳಿ ಕುಟುಂಬದ ವಿರುದ್ಧ ಬಂಡಾಯವೆದ್ದಿದ್ದಾರೆ.
ಶಂಭೂ ಅವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಸಹೋದರ ಮಾವ ಕೂಡ ಆಗಿದ್ದಾರೆ. ಅವರು ಜಾರಕಿಹೋಳಿ ಕುಟುಂಬದ ವಿರುದ್ಧ ಸಭೆ ನಡೆಸಿ ಪ್ರಿಯಾಂಕ ಅವರ ಉಮೇದುವಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರ ಕಡೆಗಣನೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಕಾರ್ಯಕರ್ತರನ್ನು ಕಡೆಗಣಿಸಿ ಜಾರಕಿಹೋಳಿ ಕುಟುಂಬ ಬೆಳೆಯಲು ಟಿಕೇಟ್ ನೀಡಲಾಗಿದೆ. ಅರ್ಹತೆ ಇಲ್ಲದ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಚುನಾವಣೆಗೆ ನಿಲ್ಲಿಸಿದೆ ಎಂಬ ಆರೋಪವನ್ನು ವಿರೋಧಿ ಬಣ ಮಾಡುತ್ತಿದೆ. ಇದೇ ವೇಳೆ ಕುಟುಂಬ ರಾಜಕೀಯದ ವಿರುದ್ದ ಹೊರಾಡಲು ವಿರೋಧಿ ಬಣ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ : BS Yediyurappa : ಹೊರನಾಡಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದಿಂದ ನವಚಂಡಿಕಾ ಯಾಗ
ಸತೀಶ್ ಜಾರಕಿಹೊಳಿ ಹಣ ಬಲ, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಪುತ್ರಿಗೆ ಟಿಕೇಟ್ ನೀಡಿದ್ದಾರೆ ಎಂದು ಕಿಡಿ ಕಾರಿದ ಶಂಬು ಕಲ್ಲೋಳಿಕರ ಅವರ ಬೆಂಬಲಿಗರು. ಮತ್ತೊಂದು ಬಾರಿ ಕಾರ್ಯಕರ್ತರ ಸಭೆ ನಡೆಸಿ ಯಾರ ಪರ ನಿಲ್ಲಬೇಕು ಎಂದು ತೀರ್ಮಾನ ಮಾಡುವುದಾಗಿ ಕಲ್ಲೋಳಿಕರ ಹೇಳಿಕೆ ನೀಡಿದ್ದಾರೆ.