Site icon Vistara News

khalistan Movement : ಲಂಡನ್​ ಭಾರತ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್​ಐಎ ವಶಕ್ಕೆ

khalistan movement

ನವದೆಹಲಿ: ಕಳೆದ ವರ್ಷ ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿ ಮತ್ತು ಅದರ ನಂತರದ ಪ್ರತಿಭಟನೆಗಳ ರೂವಾರಿಯಾಗರುವ ಖಲಿಸ್ತಾನ್​ ಉಗ್ರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಬಂಧಿಸಿದೆ. ಯುನೈಟೆಡ್ ಕಿಂಗ್​ಡಮ್​​ನ ಹೆನ್ಸ್ಲೋ ನಿವಾಸಿ ಇಂದರ್ಪಾಲ್ ಸಿಂಗ್ ಗಾಬಾ ಬಂಧಿತ ಖಲಿಸ್ತಾನಿ. ಆತ ಮಾರ್ಚ್ 22, 2023 ರ ಪ್ರತಿಭಟನೆಯ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಆ ವರ್ಷದ ಮಾರ್ಚ್ 18 ರಂದು ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಅಮೃರ್​ಪಾಲ್​ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕೈಗೊಂಡ ಕ್ರಮಕ್ಕೆ ಪ್ರತೀಕಾರವಾಗಿ ಹೈಕಮಿಷನ್ ಮೇಲಿನ ದಾಳಿ ನಡೆಸಿತ್ತು ಎಂದು ಎನ್​ಐಎ ಹೇಳಿದೆ.

ಕಳೆದ ವರ್ಷ ಮಾರ್ಚ್ 19 ಮತ್ತು ಮಾರ್ಚ್ 22 ರಂದು ಲಂಡನ್​ನಲ್ಲಿ ನಡೆದ ಘಟನೆಗಳು ಭಾರತೀಯ ಹೈ ಕಮಿಷನ್​​ ಮತ್ತು ಅದರ ಅಧಿಕಾರಿಗಳ ಮೇಲೆ ದಾಳಿಗಳನ್ನು ನಡೆಸುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಈ ಪ್ರಕರಣದಲ್ಲಿ ಇಲ್ಲಿಯವರೆಗಿನ ತನಿಖೆಯಿಂದ ತಿಳಿದುಬಂದಿದೆ” ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.

ಅಮೃತ್​ಪಾಲ್​ ಸಿಂಗ್ ಮೇಲಿನ ದಬ್ಬಾಳಿಕೆಯನ್ನು ವಿರೋಧಿಸಿ ಖಲಿಸ್ತಾನ್ ಬೆಂಬಲಿಗರು ಲಂಡನ್​​ನಲ್ಲಿರುವ ಭಾರತೀಯ ಹೈಕಮಿಷನ್ ಮುಂದೆ ಪ್ರತಿಭಟನೆ ನಡೆಸಿದ್ದರು. ಅವರು ಕಟ್ಟಡದ ಮೊದಲ ಮಹಡಿಯ ಬಾಲ್ಕನಿಯಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿದ್ದರು. ಹೀಗಾಗಿ ಭಾರತೀಯ ಅಧಿಕಾರಿಗಳು ಇನ್ನೂ ದೊಡ್ಡ ಧ್ವಜವನ್ನು ಹಾಕಿದ್ದರು.

ಇದನ್ನೂ ಓದಿ: Salman Khan : ಸಲ್ಮಾನ್​ ಮನೆ ಬಳಿ ಗುಂಡಿನ ದಾಳಿ; ಪಂಜಾಬ್​​ನಲ್ಲಿ ಗನ್​ ಕೊಟ್ಟವರಿಬ್ಬರ ಬಂಧನ

ಭಾರತೀಯ ಧ್ವಜವನ್ನು ಅಪವಿತ್ರಗೊಳಿಸುವುದರ ವಿರುದ್ಧ ಯುಕೆಯಲ್ಲಿರುವ ಭಾರತೀಯ ಸಮುದಾಯವು ಭಾರತೀಯ ಹೈಕಮಿಷನ್ ಮುಂದೆ ದೊಡ್ಡ ಸಭೆ ಆಯೋಜಿಸಿತ್ತು. ಈ ಘಟನೆಗೆ ಕಾರಣರಾದವರ ವಿರುದ್ಧ ಲಂಡನ್ ಮೇಯರ್ ಮತ್ತು ಬ್ರಿಟಿಷ್ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿಯಲ್ಲಿರುವ ಯುಕೆಯ ಹಿರಿಯ ರಾಜತಾಂತ್ರಿಕರನ್ನು ಕರೆಸಿತ್ತು. ಹೈಕಮಿಷನ್​ನಲ್ಲಿರುವ “ಭದ್ರತೆಯ ಕಾಳಜಿ ಬಗ್ಗೆ ವಿವರಣೆ ಕೋರಿತ್ತು. ಭಾರತೀಯ ರಾಜತಾಂತ್ರಿಕರು ಮತ್ತು ಸಿಬ್ಬಂದಿಯ ಬಗ್ಗೆ ಯುಕೆ ಸರ್ಕಾರದ “ಉದಾಸೀನತೆ” ಸ್ವೀಕಾರಾರ್ಹವಲ್ಲ ಎಂದು ಅದು ಹೇಳಿತ್ತು.

Exit mobile version