Site icon Vistara News

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Public Sector Banks

ಮುಂಬೈ: ವಿದೇಶದಲ್ಲಿರುವ ಸುಸ್ತಿ ಸಾಲಗಾರರ ವಿರುದ್ಧ ಲುಕ್ ಔಟ್ ನೋಟಿಸ್​ (LOC) ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ (Public Sector Banks) ಕಾನೂನಿನಲ್ಲಿ ಅಧಿಕಾರವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಹೈಕೋರ್ಟ್​ ತೀರ್ಪಿನಿಂದಾಗಿ ಸಾಲ ಕಟ್ಟದೇ ವಿದೇಶಗಳಲ್ಲಿ ವಾಸವಿರುವವರಿಗೆ ನೀಡಲಾಗಿರುವ ಎಲ್ಲ ನೋಟಿಸ್​ಗಳು ರದ್ದಾಗಲಿವೆ.

ಸುಸ್ತಿ ಸಾಲಗಾರರ ವಿರುದ್ಧ ಲುಕ್​ಔಟ್​ ನೋಟಿಸ್​ ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳ ಅಧ್ಯಕ್ಷರಿಗೆ ಅಧಿಕಾರ ನೀಡುವಂಥ ಕೇಂದ್ರ ಸರ್ಕಾರ ಹೊರಡಿಸಿದ ಕಚೇರಿ ಜ್ಞಾಪಕ ಪತ್ರದ ಷರತ್ತು ಅಸಂವಿಧಾನಿಕ ಎಂದು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್ದಾರ್ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲ ಆದಿತ್ಯ ಠಕ್ಕರ್ ಅವರು ಹೈಕೋರ್ಟ್ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿದರು. ಆದರೆ ನ್ಯಾಯಪೀಠ ನಿರಾಕರಿಸಿತು.

ಈ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಎಲ್ಒಸಿಗಳ (ಸುಸ್ತಿದಾರರ ವಿರುದ್ಧ ಬ್ಯಾಂಕುಗಳು ಹೊರಡಿಸಿದ) ಮೇಲೆ ಬ್ಯೂರೋ ಆಫ್ ಇಮಿಗ್ರೇಷನ್ ಕಾರ್ಯನಿರ್ವಹಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಯಾವುದೇ ಸುಸ್ತಿದಾರರ ವಿರುದ್ಧ ನ್ಯಾಯಮಂಡಳಿ ಅಥವಾ ಕ್ರಿಮಿನಲ್ ನ್ಯಾಯಾಲಯವು ವಿದೇಶಕ್ಕೆ ಪ್ರಯಾಣಿಸದಂತೆ ನಿರ್ಬಂಧಿಸುವ ಆದೇಶಗಳ ಮೇಲೆ ತನ್ನ ತೀರ್ಪು ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : Diamond Smuggling : ನೂಡಲ್ಸ್​ ಪ್ಯಾaಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

ಕೇಂದ್ರವು ಹೊರಡಿಸಿದ ಕಚೇರಿ ಜ್ಞಾಪಕ ಪತ್ರವು ಸಂವಿಧಾನಕ್ಕೆ ವಿರುದ್ಧವಾಗಿಲ್ಲವಾದರೂ, ಎಲ್ಒಸಿ ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕಿನ ಅಧ್ಯಕ್ಷರಿಗೆ ಅಧಿಕಾರ ನೀಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ಕೇಂದ್ರದ ಕಚೇರಿ ಜ್ಞಾಪಕ ಪತ್ರವು 2018 ರಲ್ಲಿ ಮಾಡಿದ ತಿದ್ದುಪಡಿಯಲ್ಲಿ, “ಭಾರತದ ಆರ್ಥಿಕ ಹಿತದೃಷ್ಟಿಯಿಂದ” ಎಲ್ಒಸಿಗಳನ್ನು ನೀಡಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಅಧಿಕಾರ ನೀಡಿತ್ತು.

ಒಬ್ಬ ವ್ಯಕ್ತಿಯ ನಿರ್ಗಮನವು ದೇಶದ ಆರ್ಥಿಕ ಹಿತಾಸಕ್ತಿಗೆ ಹಾನಿಕಾರಕವಾಗಿದ್ದರೆ ಅವನು/ ಅವಳು ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸುತ್ತದೆ ಎಂದು ಹೇಳಿತ್ತು “ಭಾರತದ ಆರ್ಥಿಕ ಹಿತಾಸಕ್ತಿ” ಎಂಬ ಪದಗಳನ್ನು ಯಾವುದೇ ಬ್ಯಾಂಕಿನ “ಆರ್ಥಿಕ ಹಿತಾಸಕ್ತಿಗಳೊಂದಿಗೆ” ತುಲನೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

Exit mobile version