ನವದೆಹಲಿ: ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಮತ್ತು ಈಗ ಬಿಜೆಪಿ ಮುಖಂಡ ದಲೀಪ್ ಸಿಂಗ್ ರಾಣಾ ಅಲಿಯಾಸ್ ‘ದಿ ಗ್ರೇಟ್ ಖಲಿ’ (The Great Khal) ಭಾನುವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ‘ಸುಳ್ಳು ಭರವಸೆ ನೀಡುವವ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ ಸ್ವತಃ ಸುಳ್ಳ. ಅವರು ಅನೇಕ ಬಾರಿ ವಿಫಲರಾಗಿರುವುದರಿಂದ ಏನು ಮಾಡಬೇಕೆಂದು ಅವರಿಗೆ ತಿಳಿಯುತ್ತಿಲ್ಲ ಎಂದು 2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ ಖಲಿ ರಾಜಸ್ಥಾನದ ಬಾರ್ಮರ್ನಲ್ಲಿ ಹೇಳಿಕೆ ನೀಡಿದ್ದಾರೆ.
#WATCH | Barmer, Rajasthan | Wrestler & BJP leader Dalip Singh Rana, popularly known as The Great Khali says, "What PM Modi has done, the rich won't get it. What the rich and Congress leaders understand is that only if the money is transferred to their account, then only they… pic.twitter.com/fwA0E4jTND
— ANI (@ANI) April 21, 2024
ಅವರು (ರಾಹುಲ್) ಸಂಪೂರ್ಣವಾಗಿ ವಿಫಲರಾದಾಗ, ಕಾಂಗ್ರೆಸ್ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿತು. ಗಾಂಧಿ ವಿಫಲವಾದ ಕಾರಣ, ಖರ್ಗೆ ಅವರನ್ನು ಅವಮಾನವನ್ನು ಎದುರಿಸಲು ಮುಂದೆ ತರಲಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ
ಬಾರ್ಮರ್ ನ ಹಾಲಿ ಸಂಸದ ಕೈಲಾಶ್ ಚೌಧರಿ ಅವರು ಕಾಂಗ್ರೆಸ್ ಅಭ್ಯರ್ಥಿ ಉಮ್ಮೇಡಾ ರಾಮ್ ಬೆನಿವಾಲ್ ಮತ್ತು ಸ್ವತಂತ್ರ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ ಅವರನ್ನು ಎದುರಿಸಲಿದ್ದಾರೆ.
ಮೋದಿಯ ಶ್ಲಾಘನೆ
2000ನೇ ಇಸವಿಯಲ್ಲಿ ಕುಸ್ತಿಗೆ ಪಾದಾರ್ಪಣೆ ಮಾಡಿದ ಖಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. “ಪ್ರಧಾನಿ ಮೋದಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಬಡವರಿಗೆ ಅದರ ಲಾಭ ಸಿಕ್ಕಿದೆ. ಶ್ರೀಮಂತರ ಖಾತೆಗೆ ಏನೂ ಹೋಗಿಲ್ಲ. ಆದಾಗ್ಯೂ ಅವರು ಮೋದಿ ಮಾಡಿದ ಕೆಲವನ್ನು ಒಪ್ಪಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.
“ಜನರು ಯೋಚಿಸದ ಕೆಲಸಗಳನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಬಡತನವನ್ನು ನೋಡಿದವರು ಮಾತ್ರ ಅಷ್ಟೊಂದು ಕೆಲಸ ಮಾಡಬಹುದು ” ಎಂದು ಬಿಜೆಪಿ ನಾಯಕ ಹೇಳಿದರು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಏಪ್ರಿಲ್ 19 ರಂದು ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಅವರ ರ್ಯಾಲಿಯಲ್ಲಿ ‘ದಿ ಗ್ರೇಟ್ ಖಲಿ’ ಇತ್ತೀಚೆಗೆ ಉಧಂಪುರದಲ್ಲಿ ಕಾಣಿಸಿಕೊಂಡಿದ್ದರು.