Site icon Vistara News

Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Mahua Moitra

Rahul Sit; Mahua Moitra Asked To Rahul Gandhi In Parliament Session

ನವದೆಹಲಿ: ಸಂಸತ್‌ನ ವಿಶೇಷ ಅಧಿವೇಶನದಲ್ಲಿ (Parliament Session 2024) ಪ್ರತಿಪಕ್ಷಗಳು ನೀಟ್‌ ಅಕ್ರಮ, ಮಣಿಪುರ ಹಿಂಸಾಚಾರ ಸೇರಿ ಹಲವು ವಿಷಯಗಳ ಕುರಿತು ಚರ್ಚೆ, ಗಲಾಟೆ, ವಾಗ್ವಾದ, ಆರೋಪ ಮಾಡಿವೆ. ಯಾವುದೇ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷವು ಆರೋಪ, ಗಲಾಟೆ, ಪ್ರತಿಭಟನೆ ಮಾಡುವುದು ಸಹಜ. ಇನ್ನು ಸೋಮವಾರ (ಜುಲೈ 1) ಸಂಸತ್‌ನಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಮಾತನಾಡುವಾಗ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೇ ಕುಳಿತುಕೊಳ್ಳಿ ಎಂಬುದಾಗಿ ಸೂಚಿಸಿದ್ದಾರೆ.

“ಸ್ಪೀಕರ್‌ ಸರ್‌, ನೀವು ಚುನಾವಣೆ ಪ್ರಚಾರ ಮಾಡುವಾಗ ನೀವು ಎರಡು ಬಾರಿ ನನ್ನ ಕ್ಷೇತ್ರಕ್ಕೆ ಬಂದಿದ್ರಿ. ನನ್ನ ಮಾತು ಕೇಳಿಸಿಕೊಳ್ಳಿ” ಎಂದು ಮಹುವಾ ಮೊಯಿತ್ರಾ ಮಾತನಾಡುತ್ತಿದ್ದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡಲು ಎದ್ದು ನಿಂತರು. ಆಗ, ಮೊಹಿತ್ರಾ ಅವರು, “ರಾಹುಲ್‌, ಕುಳಿತುಕೊಳ್ಳಿ” ಎಂದು ಸೂಚಿಸಿದರು. ಆಗ ಆಡಳಿತ ಪಕ್ಷದ ಸದಸ್ಯರು ಗೇಲಿ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮಹುವಾ ಮೊಯಿತ್ರಾ, “ಅವರು ನಮ್ಮ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರು ಅರ್ಥ ಮಾಡಿಕೊಳ್ಳುತ್ತಾರೆ” ಎಂದು ತಿರುಗೇಟು ನೀಡಿದರು.

ಇದೇ ವೇಳೆ ಆಡಳಿತ ಪಕ್ಷದ ವಿರುದ್ಧ ಟಿಎಂಸಿ ಸಂಸದೆ ಹರಿಹಾಯ್ದರು. “ಸಂಸತ್‌ನಲ್ಲಿ ನಾನು ಪ್ರಶ್ನೆ ಕೇಳಲು, ಮಾತನಾಡಲು ಬಿಡಲಿಲ್ಲ. ನಾನು ಸಂಸತ್‌ನಲ್ಲಿ ಮಾತನಾಡಲು ಎದ್ದು ನಿಂತಾಗ, ನನ್ನ ಧ್ವನಿಯನ್ನು ಹುದುಗಿಸಲಾಯಿತು. ಆದರೆ, ಚುನಾವಣೆ ವೇಳೆ ಏನಾಯಿತು? ಆಡಳಿತ ಪಕ್ಷದ ಸದಸ್ಯ ಬಲವು 303ರಿಂದ 240ಕ್ಕೆ ಇಳಿಸಲಾಯಿತು. ಟಿಎಂಸಿ ಸಂಸದೆಯಾದ ನನ್ನನ್ನು ಕುಳಿತುಕೊಳ್ಳುವಂತೆ ಮಾಡಿದರು. ಆದರೆ, ಬಿಜೆಪಿಯ 63 ಸಂಸದರನ್ನು ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ದೇಶದ ಜನ ಮಾಡಿದರು” ಎಂಬುದಾಗಿ ಹೇಳಿದರು.

ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಮೋದಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು “ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: Narendra Modi: ನೀಟ್‌ ಅಕ್ರಮ ಕುರಿತು ಸಂಸತ್‌ನಲ್ಲಿ ಮೋದಿ ಪ್ರಸ್ತಾಪ; ವಿದ್ಯಾರ್ಥಿಗಳಿಗೆ ಅವರು ಹೇಳಿದ್ದಿಷ್ಟು

Exit mobile version