Site icon Vistara News

Rajarajeshwarinagar Election Results : ಆರ್​ಆರ್​ ನಗರದಲ್ಲಿ ಮುನಿರತ್ನ ಗೆಲುವಿನ ನಾಗಾಲೋಟ

Rajarajeshwarinagar Assembly Election Results Muniratna Winner

#image_title

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ವಿಜಯ ಸಾಧಿಸಿದ್ದಾರೆ. ಅವರ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್​ನ ಕುಸುಮಾ ವಿರುದ್ಧ 11842 ಮತಗಳ ಅಂತರದಿಂದ ಗೆಲುವು ಕಂಡರು. ಈ ಕ್ಷೇತ್ರದ ಉಪಚುನಾವಣೆ 2020ರ ನವೆಂಬರ್‌ನಲ್ಲಿ ನಡೆಯಿತು. ಅದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ವಿರುದ್ಧ 58 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿ ನಗರ, 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೊಸ ಕ್ಷೇತ್ರವಾಯಿತು. 2008ರಲ್ಲಿ ರಚನೆಗೊಂಡ ಈ ಕ್ಷೇತ್ರ  ಒಂದು ಉಪ ಚುನಾವಣೆ, ಸೇರಿದಂತೆ ಮೂರು ಸಾರ್ವತ್ರಿಕ ಚುನಾವಣೆಗಳನ್ನು ಕಂಡಿದೆ.  ಬಿಬಿಎಂಪಿಯ 9 ವಾರ್ಡ್‌ಗಳು ಸೇರಿಕೊಂಡಿವೆ.

ಇದನ್ನೂ ಓದಿ : Jayanagar Election Results : ಜಯನಗರ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ ಸೌಮ್ಯ ರೆಡ್ಡಿ

ಒಟ್ಟು 4,78,300 ಮತದಾರರನ್ನು ಹೊಂದಿರುವ ರಾಜರಾಜೇಶ್ವರಿ ನಗರ ಒಕ್ಕಲಿಗ ಒಕ್ಕಲಿಗರು 1,25,000, 49,000 ಲಿಂಗಾಯತರು, 32,000 ಬ್ರಾಹ್ಮಣರು , 82,000 ಎಸ್‌ಸಿ-ಎಸ್‌ಟಿ, 15,000 ಮುಸ್ಲಿಂ, 6,000 ಕುರುಬ, 5,000 ದೇವಾಂಗ, 45,000 ತಮಿಳು, 43,000 ತೆಲುಗು ಭಾಷಿಕ ಮತದಾರರಿದ್ದಾರೆ.

Exit mobile version