Site icon Vistara News

Rajnath Singh : ಭಾರತ ವಿರೋಧಿಗಳು ಪಾಕ್​ನಲ್ಲಿ ಅಡಗಿದರೂ ನುಗ್ಗಿ ಹೊಡೆಯುವೆವು; ರಾಜನಾಥ್ ಸಿಂಗ್​ ಎಚ್ಚರಿಕೆ

Rajnath Singh

ಬೆಂಗಳೂರು: ವಿದೇಶಿ ನೆಲದಲ್ಲಿ ವಾಸಿಸುವ ಭಯೋತ್ಪಾದಕರನ್ನು ಮಟ್ಟಹಾಕಲು ಮಾಡಲು ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW) ಯೋಜನೆ ರೂಪಿಸಿದೆ ಎಂಬ ವರದಿಗೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಭಾರತ ವಿರೋಧಿಗಳು ಅಥವಾ ಭಯೋತ್ಪಾದಕರು ನಮ್ಮ ನೆರೆಯ ದೇಶದಲ್ಲಿ ಕುಳಿತು ತೊಂದರೆ ನೀಡಲು ಪ್ರಯತ್ನಿಸಿದರೆ ಅಥವಾ ಭಾರತದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದರೆ ನುಗ್ಗಿ ಹೊಡೆಯೋದು ಗ್ಯಾರಂಟಿ ಎಂದು ಹೇಳಿದ್ದಾರೆ.

ಇಲ್ಲಿ ದುಷ್ಕೃತ್ಯ ನಡೆಸಿ ಪಾಕಿಸ್ತಾನದ ಕಡೆಗೆ ಓಡಿಹೋದರೆ, ನಾವು ಪಾಕಿಸ್ತಾನಕ್ಕೇ ನುಗ್ಗಿ ಅವರನ್ನು ಕೊಲ್ಲುತ್ತದೆ” ಎಂದು ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಭಾರತವು ತನ್ನ ನೆರೆಹೊರೆಯ ದೇಶದೊಂದಿಗೆ ಸ್ನೇಹ ಸಂಬಂಧ ಕಾಪಾಡಿಕೊಳ್ಳಲು ಬಯಸುತ್ತದೆ ಎಂದು ರಕ್ಷಣಾ ಸಚಿವರು ಹೇಳಿದರು. ಈ ಹಿಂದೆ, ನಾವು ಯಾವುದೇ ದೇಶವನ್ನು ಗುರಿಯಾಗಿಸಿಲ್ಲ ಅಥವಾ ಯಾವುದೇ ದೇಶದ ಮೇಲೆ ದಾಳಿ ಮಾಡುವ ಮೊದಲ ಹೆಜ್ಜೆ ಇಟ್ಟಿಲ್ಲ. ನಾವು ಬೇರೆ ಯಾವುದೇ ದೇಶದ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಲಿಲ್ಲ” ಎಂದು ಅವರು ಹೇಳಿದ್ದಾರೆ.

ಯಾರಾದರೂ ಭಾರತವನ್ನು ಮತ್ತೆ ಮತ್ತೆ ಗುರಿಯಾಗಿಸಿಕೊಂಡರೆ, ಭಾರತವು ಅವರನ್ನು ಬಿಡುವುದಿಲ್ಲ” ಎಂದು ಸಿಂಗ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Maldives : ಮುನಿಸಿನ ನಡುವೆಯೂ ಮಾಲ್ಡೀವ್ಸ್​​ಗೆ ಸರಕುಗಳ ರಫ್ತು ಪ್ರಮಾಣ ಹೆಚ್ಚಿಸಿದ ಭಾರತ!

ವಿದೇಶಿ ನೆಲದಲ್ಲಿ ವಾಸಿಸುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ವ್ಯಾಪಕ ಕಾರ್ಯತಂತ್ರದ ಭಾಗವಾಗಿ ಭಾರತ ಸರ್ಕಾರ ಪಾಕಿಸ್ತಾನದಲ್ಲಿ ವ್ಯಕ್ತಿಗಳನ್ನು ಹತ್ಯೆ ಮಾಡಿದೆ ಎಂದು ಗಾರ್ಡಿಯನ್ ನಲ್ಲಿ ಪ್ರಕಟವಾದ ವರದಿಗೆ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ವರದಿಯು ಭಾರತೀಯ ಮತ್ತು ಪಾಕಿಸ್ತಾನದ ಗುಪ್ತಚರ ಇಲಾಖೆ ಮತ್ತು ಪಾಕಿಸ್ತಾನದ ತನಿಖಾಧಿಕಾರಿಗಳು ಹಂಚಿಕೊಂಡ ದಾಖಲೆಗಳನ್ನು ತನ್ನ ಮಾಹಿತಿಯ ಮೂಲವೆಂದು ಗಾರ್ಡಿಯನ್ ಉಲ್ಲೇಖಿಸಿದೆ. ಈ ಸಾವುಗಳು ಹೆಚ್ಚಾಗಿ ಯುನೈಟೆಡ್ ಅರಬ್ ಎಮಿರೇಟ್ಸ್​ನಿಂದ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗುಪ್ತಚರ ಸ್ಲೀಪರ್-ಸೆಲ್​​ಗಳಿಂದ ನಿರ್ವಹಿಸುತ್ತಿವೆ ಎಂದು ಪಾಕಿಸ್ತಾನದ ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ಅದು ಹೇಳಿದೆ.

ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು 2020 ರಿಂದ ನಡೆಸಿದ ಸುಮಾರು 20 ಹತ್ಯೆಗಳಿಗೆ ಸಂಬಂಧಿಸಿದ ಹಾಗೆ ಹೊಸ ಹೇಳಿಕೆ ನೀಡಲಾಗಿದೆ. ವಿದೇಶಿ ನೆಲದಲ್ಲಿ ಜನರನ್ನು ಹತ್ಯೆ ಮಾಡಲು ಅಥವಾ ಹತ್ಯೆ ಮಾಡಲು ಪ್ರಯತ್ನಿಸಿದ ಆರೋಪವನ್ನು ಭಾರತ ಎದುರಿಸುತ್ತಿರುವುದು ಇದು ಮೂರನೇ ಬಾರಿ.

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ವಿರುದ್ಧ ‘ವಿಶ್ವಾಸಾರ್ಹ ಆರೋಪಗಳಿವೆ’ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಈ ಹಿಂದೆ ಹೇಳಿದ್ದರು. ನಂತರ, ಮತ್ತೊಬ್ಬ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರ್​ಪತ್ವಂತ್​​ ಸಿಂಗ್ ಪನ್ನುನ್ ಅವರ ಹತ್ಯೆ ಪ್ರಯತ್ನ ವಿಫಲಗೊಳಿಸಿದ್ದೇವೆ ಎಂದು ಅಮೆರಿಕ ಹೇಳಿಕೊಂಡಿತ್ತು.

ಈ ಹಿಂದೆ ಭಾರತವು ಈ ಸಾವುಗಳೊಂದಿಗೆ ಸಂಬಂಧ ಹೊಂದಿದ್ದರೂ, ಭಾರತೀಯ ಗುಪ್ತಚರ ಸಿಬ್ಬಂದಿ ಪಾಕಿಸ್ತಾನದಲ್ಲಿ ನಡೆದಿದೆ ಎನ್ನಲಾದ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸುತ್ತಿರುವುದು ಇದೇ ಮೊದಲು. ಹತ್ಯೆಗಳಲ್ಲಿ ರಾ ನೇರವಾಗಿ ಭಾಗಿಯಾಗಿದಎ ಎಂದು ಆರೋಪಿಸಿ ವಿವರ ದಾಖಲೆಗಳು ಸಿಕ್ಕಿವೆ ಎಂದು ಗಾರ್ಡಿಯನ್ ವರದಿ ಆರೋಪಿಸಿದೆ.

Exit mobile version