Site icon Vistara News

R Ashwin : ಈ ಸಾಧನೆ ಮಾಡಿದ ಮೊಟ್ಟ ಮೊದಲ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದ ರವಿಚಂದ್ರನ್ ಅಶ್ವಿನ್​

R Ashwin

ರಾಂಚಿ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಹೊಸ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್​​ನಲ್ಲಿ (INDvsENG) 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದಾರೆ. ಈ ಮೂಲಕ ಭಾರತದ ಯಾವ ಬೌಲರ್​ ಕೂಡ ಮಾಡದ ಸಾಧನೆಯನ್ನೂ ಮಾಡಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪ್ರಸ್ತುತ ರಾಂಚಿಯ ಜೆಎಸ್​​ಸಿಎ ಇಂಟರ್​ನ್ಯಾಷನಲ್​ ಸ್ಟೇಡಿಯಂ ಕಾಂಪ್ಲೆಕ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ನಂತರ ಪ್ರವಾಸಿ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದಾಗ್ಯೂ, ಇದು ಪ್ರವಾಸಿ ತಂಡಕ್ಕೆ ಹಿನ್ನಡೆಯನ್ನುಂಟುಮಾಡಿತು. ಏಕೆಂದರೆ ಅವರು ಮೊದಲ ಸೆಷನ್ ನಲ್ಲಿ 112 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತು.

ಇಂಗ್ಲೆಂಡ್ ವಿರುದ್ಧ 100 ಟೆಸ್ಟ್ ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್

ತಮ್ಮ 99ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ಬ್ಯಾಟರ್​​ ಜಾನಿ ಬೈರ್​ಸ್ಟೋವ್​ ಅವರನ್ನು ಔಟ್​ ಮಾಡುವ ಮೂಲಕ ​ ಪಂದ್ಯದ ವಿಕೆಟ್ ಪಡೆದರು. 35 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್​​ನೊಂದಿಗೆ 38 ರನ್ ಗಳಿಸಿದ ಬೈರ್​​​ಸ್ಟೋವ್​ ಪೆವಿಲಿಯನ್​ಗೆ ಕಳುಹಿಸಲು ಅಶ್ವಿನ್​ ಯಶಸ್ವಿಯಾದರು.

ಇದನ್ನೂ ಓದಿ : Akash Deep: ಮೊದಲ ಪಂದ್ಯದಲ್ಲೇ ಕ್ಲೀನ್‌ಬೌಲ್ಡ್‌ ಮಾಡಿದರೂ ಔಟ್‌ ಕೊಡದ ಅಂಪೈರ್;‌ ತಪ್ಪು ಯಾರದ್ದು?

ಪಂದ್ಯದ ಮೊದಲ ದಿನದಂದು ಜಾನಿ ಬೈರ್​​ಸ್ಟೋವ್​ ಅವರನ್ನು ಔಟ್ ಮಾಡಿದ ನಂತರ, ತಮಿಳುನಾಡು ಮೂಲದ ಕ್ರಿಕೆಟಿಗ ಮಹತ್ವದ ಮೈಲಿಗಲ್ಲನ್ನು ದಾಟಿದರು. ಆಫ್-ಸ್ಪಿನ್ನರ್ ಇಂಗ್ಲೆಂಡ್ ವಿರುದ್ಧ ಕೇವಲ 23 ಪಂದ್ಯಗಳಲ್ಲಿ ತಮ್ಮ 100 ನೇ ಟೆಸ್ಟ್ ವಿಕೆಟ್ ಅನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಏಕೈಕ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಂಗ್ಲೆಂಡ್ ವಿರುದ್ಧ 100 ವಿಕೆಟ್​ ಸಾಧಕರು

ಜೇಮ್ಸ್ ಆಂಡರ್ಸನ್ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಗಳಲ್ಲಿ 100 ಟೆಸ್ಟ್ ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾದರು. ಆಂಡರ್ಸನ್ ಎರಡೂ ತಂಡಗಳ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, 25.35 ಸರಾಸರಿಯಲ್ಲಿ 145 ವಿಕೆಟ್​ ಉರುಳಿಸಿದ್ದಾರೆ.

ಆಕಾಶ್ ದೀಪ್ ಮಾರಕ ದಾಳಿ

ಫೆಬ್ರವರಿ 23, ಶುಕ್ರವಾರದಂದು ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಿಕ ಸೆಷನ್​ನಲ್ಲಿ ಚೊಚ್ಚಲ ಆಟಗಾರ ಆಕಾಶ್ ದೀಪ್ ಇಂಗ್ಲೆಂಡ್​ನ ಅಗ್ರ ಕ್ರಮಾಂಕ ಬೌಲರ್​ಗಳನನ್ನು ಔಟ್ ಮಾಡಿದರು. ಆಕಾಶ್ ದೀಪ್ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಬೆನ್ ಡಕೆಟ್ ಅವರನ್ನು ಔಟ್ ಮಾಡಿ ತಮ್ಮ ಮೊದಲ ಅಂತರರಾಷ್ಟ್ರೀಯ ವಿಕೆಟ್ ಪಡೆದರು. ಅವರು ಅದೇ ಓವರ್​ನಲ್ಲಿ ಒಲಿ ಪೋಪ್ (0) ಅವರ ವಿಕೆಟ್ ಪಡೆದರು.

ಆರಂಭಿಕ ಆಟಗಾರ ಜಾಕ್​​ ಕ್ರಾಲೆ ಅವರ ಡಿಫೆನ್ಸ್ ಅನ್ನು ಮುರಿಯುವ ಮೂಲಕ ಚೊಚ್ಚಲ ಆಟಗಾರ ಇನ್ನಿಂಗ್ಸ್ ನ 12 ನೇ ಓವರ್ ನಲ್ಲಿ ಮತ್ತೊಂದು ವಿಕೆಟ್​ ಪಡೆದರು.

Exit mobile version