ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಏಪ್ರಿಲ್ 5 ರಂದು ಹೊಸ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗೆ ಮಾಡಿದೆ. ಹಳೆಯ ವೆಬ್ಸೈಟ್ ಸ್ವಲ್ಪ ಸಮಯದವರೆಗೆ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ವೆಬ್ಸೈಟ್ (RBI Website) ಮತ್ತು ಮೊಬೈಲ್ ಅಪ್ಲಿಕೇಶನ್ (Mobile Application) ಅನ್ನು ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಇಂದು ಬಿಡುಗಡೆ ಮಾಡಿದರು” ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
The new website and mobile application of the Reserve Bank of India was released today by Governor Shri Shaktikanta Das. The new website and mobile app can be accessed using the URL https://t.co/0RCqgVMy8g or through the QR codes below.
— ReserveBankOfIndia (@RBI) April 5, 2024
Press Release: https://t.co/xSzRWivC01… pic.twitter.com/M7K387arxe
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಪ್ಲೇ ಸ್ಟೋರ್ ಮತ್ತು ಐಒಎಸ್ ಬಳಕೆದಾರರಿಗೆ ಆ್ಯಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರುಕಟ್ಟೆಯ ನಿರೀಕ್ಷೆಗಳಿಗೆ ಅನುಗುಣವಾಗಿ, ಹಣದುಬ್ಬರವನ್ನು ಕಡಿಮೆ ಮಾಡುವತ್ತ ದೃಢವಾಗಿ ಗಮನ ಹರಿಸಿರುವ ಎಂಪಿಸಿ ಸತತ ಏಳನೇ ಬಾರಿಗೆ ಪ್ರಮುಖ ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಉಳಿಸಿಕೊಂಡಿದೆ 5:1 ಬಹುಮತದೊಂದಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಹಣಕಾಸು ವರ್ಷ 25 ರ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಆರ್ಬಿಐ ಗವರ್ನರ್ ಘೋಷಿಸಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇಕಡಾ 7 ಕ್ಕೆ ಉಳಿಸಿಕೊಳ್ಳಲಾಗಿದೆ. ಹಣದುಬ್ಬರದ ಮುಂಭಾಗದಲ್ಲಿ, ಆರ್ಬಿಐ ಎಂಪಿಸಿ ಇದನ್ನು ಹಣಕಾಸು ವರ್ಷ 25 ರಲ್ಲಿ ಶೇಕಡಾ 4.5 ಕ್ಕೆ ನೋಡುತ್ತದೆ.
ಆರ್ಬಿಐ ಯುಪಿಐ ಮೂಲಕ ಇನ್ನು ನಗದು ಠೇವಣಿ ಸೌಲಭ್ಯ
ಭಾರತೀಯ ರಿಸರ್ವ್ ಬ್ಯಾಂಕ್ (RBI News) ಗವರ್ನರ್ ಶಕ್ತಿಕಾಂತ ದಾಸ್ (Shaktikant Das) ಶುಕ್ರವಾರ ಹೊಸ ಯುಪಿಐ (UPI) ಆಧಾರಿತ ನಗದು ಠೇವಣಿ (cash depossit) ಸೌಲಭ್ಯದ ಪ್ರಸ್ತಾಪವನ್ನು ಪ್ರಕಟಿಸಿದರು. 2024-25ರ ಹಣಕಾಸು ವರ್ಷದ ಮೊದಲ ಹಣಕಾಸು ನೀತಿ ಹೇಳಿಕೆಯ ಅನಾವರಣ ಸಂದರ್ಭದಲ್ಲಿ ಈ ಘೋಷಣೆ ಬಂದಿದೆ.
UPI ಅನ್ನು ಪ್ರಾಥಮಿಕವಾಗಿ ಪೀರ್-ಟು-ಪೀರ್ ವಹಿವಾಟುಗಳು, ಬಿಲ್ ಪಾವತಿಗಳು, ವ್ಯಾಪಾರಿ ವಹಿವಾಟುಗಳು ಮತ್ತು ಇತರ ಡಿಜಿಟಲ್ ಪಾವತಿಗಳಿಗಾಗಿ ಬಳಸಲಾಗುತ್ತದೆ. ಇನ್ನು ಮುಂದೆ, ಎಟಿಎಂ/ಡೆಬಿಟ್ ಕಾರ್ಡ್‌ನ ಬದಲಿಗೆ ನಿಮ್ಮ ಯುಪಿಐ ಬಳಸಿಯೂ ನಗದು ಠೇವಣಿ ಯಂತ್ರಗಳಲ್ಲಿ (ಸಿಡಿಎಂಗಳು) ಹಣವನ್ನು ಠೇವಣಿ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ಆರ್‌ಬಿಐ ಸುಧಾರಣಾ ಕ್ರಮಗಳು ಉಪಯುಕ್ತ, ಶ್ಲಾಘನಾರ್ಹ
UPI ಭಾರತದಲ್ಲಿ ಅದರ ಅನುಕೂಲತೆ, ವೇಗ ಮತ್ತು ಕಾರ್ಯಸಾಧ್ಯತೆಯಿಂದಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇದು ದೇಶದಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಗೆ ಕೊಡುಗೆ ನೀಡಿದೆ. ಭವಿಷ್ಯದಲ್ಲಿ ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು RBI ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ನಗದು ಠೇವಣಿಗಾಗಿ UPI
ಬ್ಯಾಂಕ್ ಶಾಖೆಗಳಲ್ಲಿ ನಗದು-ಹ್ಯಾಂಡ್ಲಿಂಗ್ ಲೋಡ್ ಅನ್ನು ಕಡಿಮೆ ಮಾಡಲು, ಬ್ಯಾಂಕ್‌ಗಳಿಂದ ನಿಯೋಜಿಸಲಾದ ಸಿಡಿಎಂಗಳು ಗ್ರಾಹಕರ ಅನುಕೂಲವನ್ನು ಹೆಚ್ಚಿಸಿವೆ. ನಗದು ಠೇವಣಿ ಸೌಲಭ್ಯ ಪ್ರಸ್ತುತ ಡೆಬಿಟ್ ಕಾರ್ಡ್‌ಗಳ ಬಳಕೆಯ ಮೂಲಕ ಮಾತ್ರ ಲಭ್ಯವಿದೆ. “UPIಯ ಜನಪ್ರಿಯತೆ ಮತ್ತು ಸ್ವೀಕಾರವನ್ನು ಪರಿಗಣಿಸಿ, ATMಗಳಲ್ಲಿ ಕಾರ್ಡ್‌ಲೆಸ್ ಅಥವಾ UPI ಬಳಕೆಯ ಮೂಲಕ ನಗದು ಠೇವಣಿ ಸೌಲಭ್ಯವನ್ನು ಸುಲಭಗೊಳಿಸಲು ಈಗ ಪ್ರಸ್ತಾಪಿಸಲಾಗಿದೆ. ಶೀಘ್ರದಲ್ಲೇ ಕಾರ್ಯಾಚರಣೆಯ ಸೂಚನೆಗಳನ್ನು ನೀಡಲಾಗುವುದು,” ಎಂದು ಗವರ್ನರ್ ಹೇಳಿದ್ದಾರೆ.