ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಏಪ್ರಿಲ್‌ನಲ್ಲಿ ರೆಪೊ ದರ ಏರಿಕೆಯ ಟ್ರೆಂಡ್‌ಗೆ ಬ್ರೇಕ್ ಹಾಕುವ ನಿರೀಕ್ಷೆ ಇದೆ. ರೆಪೊ ದರವನ್ನು ಈಗಿನ 6.5% ರ ಮಟ್ಟದಲ್ಲಿಯೇ ಮುಂದುವರಿಸುವ ನಿರೀಕ್ಷೆ ಇದೆ ಎಂದು ಎಸ್‌ಬಿಐ ( Interest rate hike) ಸಂಶೋಧನಾ ವಿಭಾಗದ ಎಕೋರಾಪ್ ವರದಿ ತಿಳಿಸಿದೆ. ಆರ್‌ಬಿಐ 2023ರ ಏಪ್ರಿಲ್ ಮೊದಲ ವಾರದಲ್ಲಿ ಹಣಕಾಸು ನೀತಿ ಸಮಿತಿಯ ಸಭೆ ನಡೆಸಲಿದೆ. ಕಳೆದ ವರ್ಷ ಮೇನಲ್ಲಿ
ಬಡ್ಡಿ ದರ ಏರಿಕೆ ಮಾಡುವುದರಿಂದ ವ್ಯವಸ್ಥೆಯಲ್ಲಿ ಬೇಡಿಕೆಯನ್ನು ತಗ್ಗಿಸಲು ಹಾದಿ ಸುಗಮವಾಗುತ್ತದೆ. ಬೇಡಿಕೆ ತಗ್ಗಿದಾಗ ದರಗಳು ಇಳಿಕೆಯಾಗುತ್ತದೆ. ಹಣದುಬ್ಬರವನ್ನು ನಿಯಂತ್ರಿಸಬಹುದು. 2020ರಲ್ಲಿ ಕೋವಿಡ್ ಬಿಕ್ಕಟ್ಟು ಜಗತ್ತನ್ನು ತೀವ್ರ ಕಾಡಿದಾಗ ರೆಪೊ ದರ 4% ಇತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 3, 5 ಮತ್ತು 6ರಂದು ತನ್ನ ಹಣಕಾಸು ನೀತಿ ಸಮಿತಿಯ (monetary policy committee) ಸಭೆ ನಡೆಸಲಿದೆ.
ಹಣಕಾಸು ನೀತಿ ಸಮಿತಿಯು ದೇಶೀಯ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಮತ್ತು ಯುರೋಪಿನಲ್ಲಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ತೆಗೆದುಕೊಳ್ಳುವ ನೀತಿಗಳು ಪ್ರಭಾವ ಬೀರುವ ನಿರೀಕ್ಷೆ ಇದೆ. ಈ ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿ ದರ ಏರಿಸಿದಾಗ ಭಾರತದಲ್ಲಿ ಆರ್‌ಬಿಐ ಕೂಡ ಏರಿಸುವಂತೆ ಒತ್ತಡ ಸೃಷ್ಟಿಯಾಗುತ್ತದೆ. ಏಕೆಂದರೆ ವಿದೇಶಿ ಹೂಡಿಕೆಯ ಹರಿವಿನ ಮೇಲೆ ಜಾಗತಿಕ ಬಡ್ಡಿ ದರ ನಿರ್ಣಾಯವಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನು ಭಾರತ ನೀಡಬೇಕಾಗುತ್ತದೆ. ತಪ್ಪಿದರೆ ವಿದೇಶಿ ಹೂಡಿಕೆ ಹೊರ ಹೋಗುವ ಅಪಾಯ ಕೂಡ ಹೆಚ್ಚುತ್ತದೆ. ಅದೇ ವೇಳೆ ಭಾರತದಲ್ಲಿ ಹಣದುಬ್ಬರ ನಿಯಂತ್ರಿಸುವುದು ಕೂಡ ಮುಖ್ಯವಾಗಿರುವುದರಿಂದ ಬಡ್ಡಿ ದರದಲ್ಲಿ 0.25% ಏರಿಕೆ ನಿರೀಕ್ಷಿಸಲಾಗಿದೆ.