Site icon Vistara News

Inflation : ಆರ್ಥಿಕ ಸುಧಾರಣಾ ಹಾದಿಯಲ್ಲಿ ಭಾರತ; ಚಿಲ್ಲರೆ ಹಣದುಬ್ಬರ ನಿಯಂತ್ರಣ

inflation

ಬೆಂಗಳೂರು: ಜನವರಿಯಲ್ಲಿ ಶೇ.5.1ರಷ್ಟಿದ್ದ ಚಿಲ್ಲರೆ ಹಣದುಬ್ಬರದಲ್ಲಿ (Inflation) ಇನ್ನಷ್ಟು ಏರಿಕೆಯಾಗಿಲ್ಲ ಎಂದು ಸರ್ಕಾರ ಹೇಳಿದೆ. ಫೆಬ್ರವರಿಯಲ್ಲಿ ಶೇ.5.09ರಷ್ಟು ಹಣದುಬ್ಬರ ದಾಖಲಾಗಿದೆ ಎಂದು ಸರಕಾರದ ಅಂಕಿ ಅಂಶಗಳು ಮಂಗಳವಾರ ತಿಳಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧರಿಸಿದ ಹಣದುಬ್ಬರವು 2023ರ ಜನವರಿಯಲ್ಲಿ ಶೇಕಡಾ 5.1 ಮತ್ತು ಫೆಬ್ರವರಿ ಯಲ್ಲಿ ಶೇಕಡಾ 6.44 ರಷ್ಟಿತ್ತು. ಈ ಮೂಲಕ ಭಾರತದ ಆರ್ಥಿಕತೆಯು ಹೆಚ್ಚು ಸ್ಥಿರವಾಗುತ್ತಿದೆ ಎಂದು ಹಣಕಾಸು ಪಂಡಿತರು ಅಂದಾಜು ಮಾಡಿದ್ದಾರೆ.

ರಾಷ್ಟ್ರೀಯ ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರ ವಸ್ತುಗಳ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 8.66 ರಷ್ಟಿತ್ತು. ಇದು ಅದಕ್ಕಿಂತ ಹಿಂದಿನ ತಿಂಗಳಿನ ಶೇಕಡಾ 8.3 ರಿಂದ ಸ್ವಲ್ಪ ಹೆಚ್ಚಾಗಿದೆ. ಚಿಲ್ಲರೆ ಹಣದುಬ್ಬರವನ್ನು 4ರಲ್ಲೇ ಸ್ಥಿರವಾಗಿ ಇರುವಂತೆ ನೋಡಿಕೊಳ್ಳುವುದಕ್ಕೆ ಸರ್ಕಾರವು ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾಗೆ ಸಲಹೆ ಕೊಟ್ಟಿತ್ತು.

ಕಳೆದ ತಿಂಗಳು, ರಿಸರ್ವ್​ ಬ್ಯಾಂಕ್​​ ಸಿಪಿಐ ಹಣದುಬ್ಬರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ (2023-24) ಶೇಕಡಾ 5.4 ಕ್ಕೆ ಅಂದಾಜಿಸಿದೆ. ಅಂತೆಯೇ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 5 ರಲ್ಲಿ ಸ್ಥಿರವಾಗಿದೆ.

ಕೋಟಕ್ ಇನ್ ಸ್ಟಿಟ್ಯೂಷನಲ್ ಈಕ್ವಿಟೀಸ್ ನ ಹಿರಿಯ ಅರ್ಥಶಾಸ್ತ್ರಜ್ಞ ಸುವೋದೀಪ್ ರಕ್ಷಿತ್ ಮಾತನಾಡಿ, “ಫೆಬ್ರವರಿ ಸಿಪಿಐ ಹಣದುಬ್ಬರವು ಆತಂಕ ಹೆಚ್ಚಿಸಿಲ್ಲ. 2025ರ ಹಣಕಾಸು ವರ್ಷದಲ್ಲಿ ಹಣದುಬ್ಬರದ ಪಥವು ಸುಮಾರು 4.5% -5% ರಷ್ಟಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ತೀವ್ರವಾದ ಕ್ರಮಗಳು ಎರಡನೇ ತ್ರೈಮಾಸಿಕದಲ್ಲಿ ಸುಮಾರು 3% ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಇದನ್ನೂ ಓದಿ : Electoral Bond : ಆಯೋಗಕ್ಕೆ ಚುನಾವಣಾ ಬಾಂಡ್​ಗಳ ವಿವರ ಸಲ್ಲಿಸಿದ ಎಸ್​​ಬಿಐ

ಜಿಡಿಪಿಯು ಕೊನೆಯ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ವಿಸ್ತರಿಸಿದೆ. ಇದು ಒಂದೂವರೆ ವರ್ಷಗಳಲ್ಲಿ ಅತ್ಯಂತ ಗರಿಷ್ಠ ಜಿಡಿಪಿಯಾಗಿದೆ. ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯ ಮಾರ್ಚ್ 31 ಕ್ಕೆ 7.3% ರಿಂದ 7.6% ಕ್ಕೆ ಪರಿಷ್ಕರಿಸಲಾಗಿದೆ.

“ಬಲವಾದ ಆರ್ಥಿಕತೆಯ ಬೆಳವಣಿಗೆಯ ಸಮಯದಲ್ಲಿ ಹಣದುಬ್ಬರವು ಒಂದು ತೊಡಕಾಗಿದೆ. ದುರ್ಬಲ ಇನ್ಪುಟ್ ಅದಕ್ಕೆ ಕಾರಣವಾಗಿರಬಹುದು. ಮುಂದಿನ ದಿನಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಇಂಡಿಯಾ ರೇಟಿಂಗ್ಸ್​ನ ಅರ್ಥಶಾಸ್ತ್ರಜ್ಞ ದೇವೇಂದ್ರ ಕುಮಾರ್ ಪಂತ್ ಅಂದಾಜಿಸಿದ್ದಾರೆ.

Exit mobile version