ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಮತ್ತು ಅವರ ಯಶಸ್ಸಿನ ಕಥೆ ಈಗ ಜನಪ್ರಿಯವಾಗುತ್ತಿದೆ. ಸ್ಫೋಟಕ ಬ್ಯಾಟರ್ ಹಾಗೂ ಬೆಸ್ಟ್ ಫಿನಿಶರ್ ಆಗಿ ಪರಿವರ್ತನೆಗೊಂಡಿರುವ ಅವರು ಸ್ಟಾರ್ಗಿರಿಯನ್ನು ನಿಧಾನವಾಗಿ ಪಡೆದುಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಅಲಿಗಢದ ಗುಡಿಸಲಿನಿಂದ ಆರಂಭಗೊಂಡ ಅವರ ಬದುಕು ಕ್ರಿಕೆಟ್ ತಾರೆಯಾಗಿ ಹೊರಹೊಮ್ಮುವಂತೆ ಮಾಡಿದೆ. ತಮ್ಮ ತಂದೆ ಕೆಲಸ ಮಾಡುತ್ತಿದ್ದ ಧಣಿಗಳು ನೀಡಿದ್ದ ಸಾಧಾರಣ ಮನೆಯಲ್ಲಿ ವಾಸಿಸುತ್ತಿದ್ದ ರಿಂಕು ಈಗ ಪ್ರಖ್ಯಾತಿಯ ಉತ್ತುಂಗದಲ್ಲಿದ್ದಾರೆ.
ಭಾರತ ತಂಡದ ಸೀಮಿತ ಓವರ್ಗಳ ಸೆಟಅಪ್ನಲ್ಲಿ ಸದ್ಯಕ್ಕೆ ಶಾಶ್ವತ ಸ್ಥಾನವಾ ಪಡೆದಿರುವ ಅವರು ಕೆಕೆಆರ್ ತಂಡಕ್ಕೂ ಮಿಂಚುವ ಸಾಧ್ಯತೆಗಳಿವೆ. ಆದಾಗ್ಯೂ ಈ ಕ್ರಿಕೆಟಿಗ ವಿನಮ್ರ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದಾರೆ. ಅದನ್ನು ಅವರು ಮೈದಾನದ ಒಳಗೆ ಮತ್ತು ಹೊರಗೆಯೂ ತೋರಿಸುತ್ತಿದ್ದಾರೆ. ಇಷ್ಟೆಲ್ಲ ಖ್ಯಾತಿ ಪಡೆದಿರುವ ರಿಂಕು ಸಿಂಗ್ ಅಪ್ಪ ಖಾನ್ಚಂದ್ರ ಸಿಂಗ್ ಇನ್ನೂ ಗ್ಯಾಸ್ ಸಿಲಿಂಡರ್ ಹೊರುವ ಕೆಲಸ ನಿಲ್ಲಿಸಿಲ್ಲ ಎಂಬುದು ಅವರ ಬದ್ಧತೆಗೆ ಸಾಕ್ಷಿ. ತಮಗೆ ಕೆಲಸ ಕೊಟ್ಟಿದ್ದ ಮಾಲೀಕರ ಋಣ ಅವರು ತೀರಿಸುತ್ತಿದ್ದು ಸಿಲಿಂಡರ್ ಹೊರುವ ವಿಡಿಯೊ ಬಹಿರಂಗಗೊಂಡಿದೆ.
ರಿಂಕು ತಂದೆ ಖಾನ್ಚಂದ್ರ ಅವರು ತಮ್ಮ ಬದುಕು ರೂಪಿಸಿರುವ ವೃತ್ತಿಯನ್ನು ಇನ್ನೂ ಬಿಟ್ಟಿಲ್ಲ. ಅದೇ ಜೀವನ ಮಾರ್ಗವನ್ನು ಇನ್ನೂ ಅನುಸರಿಸುತ್ತಿದ್ದಾರೆ. ಎಲ್ಪಿಜಿ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುತ್ತಾ ತಮ್ಮ ಮಗನನ್ನು ಬೆಳೆಸಿದ್ದ ಅವರು ಇನ್ನೂ ಅದೇ ಕೆಲಸಕ್ಕೆ ಬದ್ಧರಾಗಿದ್ದಾರೆ.
ರಿಂಕು ತಂದೆ ಸಿಲಿಂಡರ್ ಹೊರುವ ವಿಡಿಯೊ ಇಲ್ಲಿದೆ
Despite his son's stardom, Rinku Singh's father still delivers LPG cylinders, a reminder to stay grounded 👏#RinkuSingh #CricketTwitter pic.twitter.com/ikK4bkiwX2
— OneCricket (@OneCricketApp) January 26, 2024
ರಿಂಕು ಸಿಂಗ್ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಮತ್ತು ಕೆಕೆಆರ್ ತಂಡಕ್ಕೆ ಅಭೂತಪೂರ್ವ ಸಾಧನೆ ಮಾಡಿದ್ದರೂ ಅವರ ತಂದೆ ಖಾನ್ಚಂದ್ರ ಸಿಂಗ್ ಇತ್ತೀಚೆಗೆ ಎಲ್ಪಿಸಜಿ ಸಿಲಿಂಡರ್ಗಳನನು ವಿತರಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿಗೆ ಅಪಮಾನ ಮಾಡಿದರೆ ರೋಹಿತ್ ಶರ್ಮಾ? ವಿಡಿಯೊ ವೈರಲ್
ರಿಂಕು ಸಿಂಗ್ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧ ಸ್ವದೇಶದಲ್ಲಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ವೈಟ್-ಬಾಲ್ ಸರಣಿಯ ಗೆಲುವುಗಳಲ್ಲಿ ಮಿಂಚಿದರು. ಕ್ರಿಕೆಟಿಗ ಪ್ರಸ್ತುತ 2024 ರ ರಣಜಿ ಟ್ರೋಫಿ ಋತುವಿನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ನವೆಂಬರ್ 2023ರಲ್ಲಿ 26 ವರ್ಷದ ಸಿಂಗ್ ಅವರನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಋತುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಉಳಿಸಿಕೊಂಡಿದೆ. ಅನುಭವಿಗಳಾದ ಶ್ರೇಯಸ್ ಅಯ್ಯರ್, ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಅವರೊಂದಿಗೆ ರಿಂಕು ಪ್ರಧಾನ ಪಾತ್ರ ವಹಿಸಲಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಐಪಿಎಲ್ 2024 ಪ್ರಾರಂಭವಾಗುವ ನಿರೀಕ್ಷೆಯಿದೆ.