Site icon Vistara News

Rohit Sharma : ಒಂದು ಸಿಕ್ಸರ್ ಬಾರಿಸಿದರೆ ಕೊಹ್ಲಿಯ ದಾಖಲೆ ಮುರಿಯುತ್ತಾರೆ ರೋಹಿತ್​ ಶರ್ಮಾ

Rohit Sharma

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ವಿಶ್ವ ಕಪ್ ಪಂದ್ಯಕ್ಕಾಗಿ (T20 World Cup 2024) ಇತ್ತಂಡಗಳು ಸಜ್ಜಾಗುತ್ತಿವೆ. ಏತನ್ಮಧ್ಯೆ ಅಭಿಮಾನಿಗಳು ಭಾರತ ತಂಡದ ಯಾರು ಉತ್ತಮ ಪ್ರದರ್ಶನ ನೀಡಬಹುದು ಎಂದು ಅಂದಾಜಿಸುತ್ತಿದ್ದಾರೆ. ಉತ್ತಮ ಫಾರ್ಮ್​ನಲ್ಲಿರುವ ರೋಹಿತ್​ ಶರ್ಮಾ(Rohit Sharma), ಸೂರ್ಯಕುಮಾರ್, ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಈ ಬಾರಿ ಭರ್ಜರಿ ಪ್ರದರ್ಶನ ನೀಡಬಹುದು ಎಂದು ಅಂದಾಜಿಸಿದ್ದಾರೆ. ಹಿಂದಿನ ಪ್ರದರ್ಶನಗಳನ್ನು ನೋಡಿದರೆ ಹೌದು. ಇದೇ ವೇಳೆ ಇದುವರೆಗೆ ಮಿಂಚಲು ವಿಫಲಗೊಂಡಿರುವ ವಿರಾಟ್​ ಕೊಹ್ಲಿಯ ಬ್ಯಾಟ್​ನಿಂದಲೂ ರನ್​ ಮೂಡಿ ಬರಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇವೆಲ್ಲದರ ನಡುವೆ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ದಾಖಲೆಯೊಂದಕ್ಕಾಗಿ ಜಿದ್ದಿಗೆ ಬೀಳುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಟಿ20 ವಿಶ್ವ ಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿ ದಾಖಲೆಯನ್ನು ಮುರಿಯಲು ರೋಹಿತ್ ಶ್ರಮಿಸಿದರೆ ಕೊಹ್ಲಿ ಮುಂದಕ್ಕೆ ಹೋಗಲು ಯತ್ನಿಸಲಿದ್ದಾರೆ.

ವಿರಾಟ್ ಕೊಹ್ಲಿ ಪ್ರಸ್ತುತ ಟಿ 20 ವಿಶ್ವಕಪ್​​ನಲ್ಲಿ 1,216 ರನ್​ಗಳೊಂದಿಗೆ ಪ್ರತಿಷ್ಠಿತ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 1,211 ರನ್ ಗಳಿಸಿದ್ದು, ತಮ್ಮ ಸಹ ಆಟಗಾರನನ್ನು ಹಿಂದಿಕ್ಕಲು ಕೇವಲ ಒಂದು ಸಿಕ್ಸರ್​​ ದೂರದಲ್ಲಿದ್ದಾರೆ. ರೋಹಿತ್ ಪ್ರಭಾವಶಾಲಿ ಪಟ್ಟಿಯಲ್ಲಿ 12 ಅರ್ಧಶತಕಗಳು ಸೇರಿವೆ. ಇದು ಆಟದ ಕಿರು ಸ್ವರೂಪದಲ್ಲಿ ಅವರ ಸ್ಥಿರತೆ ಮತ್ತು ಪ್ರಾಬಲ್ಯವನ್ನು ಒತ್ತಿಹೇಳುತ್ತದೆ.

ಪ್ರಸ್ತುತ ಪಂದ್ಯಾವಳಿಯಲ್ಲಿ, ರೋಹಿತ್ ಅದ್ಭುತ ಫಾರ್ಮ್​ ಕಂಡುಕೊಂಡಿದ್ದಾರೆ. ಏಳು ಇನ್ನಿಂಗ್ಸ್​ಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 248 ರನ್​ಗಳನ್ನು ಗಳಿಸಿದ್ದಾರೆ. ಈ ಮೂಲಕ ಪಂದ್ಯಾವಳಿಯ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಮೂರು ಬಾರಿ ಐಸಿಸಿ ಫೈನಲ್ ತಲುಪಿದೆ. ಆದಾಗ್ಯೂ, 2023 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್​ನ್ಲಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದರಿಂದ ತಂಡವು ಬೇಸರಕ್ಕೆ ಒಳಗಾಗಿದೆ.

2022 ರ ಟಿ 20 ವಿಶ್ವಕಪ್​​ನಲ್ಲಿ ನಾಯಕನಾಗಿ ಅವರ ಉದ್ಘಾಟನಾ ಪಂದ್ಯಾವಳಿಯಲ್ಲಿ, ಭಾರತವು ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತು. ಬಾರ್ಬಡೋಸ್​ನಲ್ಲಿ ನಡೆಯಲಿರುವ ಫೈನಲ್ ಈ ಸ್ವರೂಪದಲ್ಲಿ ಭಾರತವನ್ನು ಐಸಿಸಿ ಪ್ರಶಸ್ತಿಗೆ ಮುನ್ನಡೆಸಲು ರೋಹಿತ್ ಶರ್ಮಾ ಅವರಿಗೆ ಕೊನೇ ಅವಕಾಶವಾಗಿದೆ.

ಭಾರತವೇ ವಿಶ್ವ ಕಪ್ ಗೆಲ್ಲುತ್ತದೆ ಎಂದ ಕುಲ್ದೀಪ್​ ಕೋಚ್​

ಕುಲದೀಪ್ ಯಾದವ್ ಅವರ ಬಾಲ್ಯದ ತರಬೇತುದಾರ ಕಪಿಲ್ ದೇವ್ ಪಾಂಡೆ ಭಾರತವೇ ವಿಶ್ವ ಕಪ್​ ಗೆಲ್ಲುತ್ತದೆ (T20 World cup) ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಹಾಲಿ ಆವೃತ್ತಿಯಲ್ಲಿ ಕುಲ್ದೀಪ್ ಯಾದವ್ ಅವರ ಪ್ರದರ್ಶನವನ್ನೂ ಮೆಚ್ಚಿದ್ದಾರೆ. ನ್ಯೂಯಾರ್ಕ್​ನಲ್ಲಿ ವೇಗದ ಬೌಲಿಂಗ್​ಗೆ ಪೂರಕ ಪಿಚ್ ಇದ್ದ ಕಾರಣ ಯುಎಸ್ಎಯಲ್ಲಿ ಆಡಿದ ಪಂದ್ಯಾವಳಿಯ ಗುಂಪು ಹಂತಗಳ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ವಿಂಡೀಸ್​ನಲ್ಲಿ ನಡೆದ ಸೂಪರ್​ 8 ಹಂತದಲ್ಲಿ ಅವರಿಗೆ ಅವಕಾಶಗಳು ಲಭಿಸಿವೆ.

ಇದನ್ನೂ ಓದಿ: T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

ನಿಸ್ಸಂಶಯವಾಗಿ ಅವರು (ಕುಲ್ದೀಪ್) ಭಾರತೀಯ ತಂಡದ ಬೆನ್ನೆಲುಬು. ಕಳೆದ ನಾಲ್ಕು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಯಾವ ರೀತಿಯ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ದೇಶಕ್ಕಾಗಿ ಪ್ರದರ್ಶನ ನೀಡುವುದನ್ನು ನೋಡಲು ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ ಎಂದು ಕಪಿಲ್ ದೇವ್ ಪಾಂಡೆ ಹೇಳಿದರು.

ಕುಲದೀಪ್ ಯಾದವ್ ಆಡಿರುವ ನಾಲ್ಕು ಪಂದ್ಯಗಳಲ್ಲಿ 9.40ರ ಸರಾಸರಿಯಲ್ಲಿ 5.87ರ ಎಕಾನಮಿ ರೇಟ್​ನಲ್ಲಿ 10 ವಿಕೆಟ್​​ಗಳನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​ನಲ್ಲಿ 19 ರನ್​ಗೆ 3 ವಿಕೆಟ್ ಪಡೆದು ಭಾರತ ಫೈನಲ್​ ಪ್ರವೇಶಿಸಲು ಸಹಾಯ ಮಾಡಿದ್ದರು. ಎಡಗೈ ಮಣಿಕಟ್ಟು ಸ್ಪಿನ್ನರ್ ಕಳೆದ ಒಂದು ವರ್ಷದಿಂದ ಆಟದ ಎಲ್ಲಾ ಸ್ವರೂಪಗಳಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲೂ ಕುಲ್ದೀಪ್ ನಿರ್ಣಾಯಕ ಪಾತ್ರ ವಹಿಸಿದ್ದರು.

Exit mobile version