Site icon Vistara News

Cheating case : ಭಕ್ತರ 40 ಲಕ್ಷ ರೂ. ಗುಳುಂ ಮಾಡಲು ದರೋಡೆ ಕತೆ ಕಟ್ಟಿದ ಸ್ವಾಮೀಜಿ!

Cheating Case

ರಾಯಚೂರು: ಭಕ್ತರಿಗೆ ಸೇರಿದ್ದ 40 ಲಕ್ಷ ರೂಪಾಯಿ ಹಣವನ್ನು ಸ್ವಂತಕ್ಕೆ ಮಾಡಿಕೊಳ್ಳುವುದಕ್ಕೆ ಸಂಚು ರೂಪಿಸಿ ದರೋಡೆ ಕತೆಯನ್ನು ಸೃ ಷ್ಟಿಸಿದ ಸ್ವಾಮೀಜಿಯ ಕಳ್ಳಾಟ (Cheating case) ಬಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಪ್ರಾಥಮಿಕ ಹಂತದಲ್ಲಿಯೇ ಸ್ವಾಮೀಜಿಯ ಕತೆ ಬಹಿರಂಗಗೊಂಡಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿರೋ ವಿಜಯಮಹಾಂತೇಶ್ವರ ಶಾಖಾ ಮಠ ನುಗ್ಗಿದ ದರೋಡೆಕೋರರು ತಮ್ಮನ್ನು ಬೆದರಿಸಿ 40 ಲಕ್ಷ ರೂಪಾಯಿ ಹಣ ದರೋಡೆ ಮಾಡಿದ್ದಾರೆ ಎಂದು ಇಲ್ಲಿನ ವಿಜಯಮಹಾಂತೇಶ್ವರ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ ದೂರು ನೀಡಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಂಚಲನ ಮೂಡಿತ್ತು. ಮಠಕ್ಕೆ ನುಗ್ಗಿ ಹಣವನ್ನು ದರೋಡೆ ಮಾಡಿದವರನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ದೂರು ನೀಡಿದ ಸ್ವಾಮೀಜಿಯ ಕೆಲವೊಂದು ನಡೆ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು ಎಫ್​ಐಆರ್​ ದಾಖಲಿಸಿ ಒಂದೇ ದಿನದಲ್ಲಿ ದರೋಡೆ ಕೇಸನ್ನು ಭೇದಿಸಿದ್ದಾರೆ.

ಇದನ್ನೂ ಓದಿ: ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

ಮಠಕ್ಕೆ ಭಕ್ತರು ಸಾಕಷ್ಟು ಧನ ಸಹಾಯ ಮಾಡಿದ್ದರು. ಅಂತೆಯ 40 ಲಕ್ಷ ರೂಪಾಯಿ ಮಠದಲ್ಲಿತ್ತು. ಅದನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವುದು ಸ್ವಾಮೀಜಿಯ ದುರಾಲೋಚನೆಯಾಗಿತ್ತು ಎಂಬುದು ಪೊಲೀಸರು ಪತ್ತೆ ಹಚ್ಚಿದ ಹಲವಾರು ಸಾಕ್ಷಿಗಳಿಂದ ಗೊತ್ತಾಗಿದೆ. ಹಣದ ಥೈಲಿಯನ್ನು ಬಾಚಿಕೊಳ್ಳುವುದಕ್ಕೆ ಸಜ್ಜಾಗಿದ್ದ ಸ್ವಾಮೀಜಿ ಪೊಲೀಸರ ಕೈಕೋಳಕ್ಕೆ ಕೈ ನೀಡುವ ಪರಿಸ್ಥಿತಿ ಎದುರಾಗಿದೆ.

ಪೊಲೀಸರು ಮಠ ಸೇರಿದಂತೆ ಸುತ್ತಮುತ್ತಲಿನ ಹಲವಾರು ಸಿಸಿ ಟಿವಿ ಕ್ಯಾಮೆರಾಗಳನ್ನು ವೀಕ್ಷಿಸಿದ್ದರು. ಆದರೆ ಗನ್​ ಇಟ್ಟು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ ಸಮಯ ಸೇರಿದಂತೆ ಹತ್ತಿರದ ವೇಳೆಯಲ್ಲಿ ಯಾರೂ ಆ ಕಡೆಗೆ ಬಂದಿರಲಿಲ್ಲ ಹಾಗೂ ಹೋಗಿರಲಿಲ್ಲ ಎಂಬುದು ಖಾತರಿಯಾಗಿತ್ತು. ಅಂತೆಯೇ ತನಿಖೆ ಮುಂದುವರಿಸಿದಾಗ ಮಠದ ಸುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳು ಆಫ್​ ಆಗಿರುವುದು ಗೊತ್ತಾಗಿದೆ. ಬಳಿಕ ಬೆರಳಚ್ಚು ಪರಿಣತರು ಬಂದು ಪರಿಶೀಲನೆ ನಡೆಸಿದಾಗ ಅಲ್ಲಿ ಸ್ವಾಮೀಜಿಯ ಬೆರಳಚ್ಚು ಮೂಡಿತ್ತು.

ಕ್ಯಾಮೆರಾಗಳನ್ನು ಆನ್​ – ಆಫ್​ ಮಾಡುವ ಸ್ವಿಚ್ ಮೇಲೆ ಸ್ವಾಮೀಜಿಯ ಬೆರಳಚ್ಚು ಕೊನೇ ಬಾರಿ ಮೂಡಿತ್ತು. ಹೀಗಾಗಿ ಕ್ಯಾಮೆರಾವನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆ ವೇಳೆ ಮಠದಲ್ಲಿ ಯಾವುದೇ ದರೋಡೆ ಪ್ರಕರಣ ನಡೆದಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸಿತ್ತು. ಹೀಗಾಗಿ ಅದು ಸ್ವಾಮೀಜಿಯ ಕಟ್ಟು ಕಥೆ ಎಂಬುದು ಗೊತ್ತಾಗಿದೆ.

ಜಮೀನು ವಿವಾದ; ನೀರಿನಲ್ಲಿ ಮುಳುಗಿಸಿ, ಕುಡುಗೋಲು, ಕಲ್ಲಿನಿಂದ ವ್ಯಕ್ತಿ ಮೇಲೆ ಹಲ್ಲೆ!

ತುಮಕೂರು: ಜಮೀನು‌ ವಿವಾದ ಹಿನ್ನೆಲೆಯಲ್ಲಿ (Assault Case) ಎರಡು ಕುಟುಂಬಗಳ ನಡುವೆ ಮಾರಾಮಾರಿಯೇ ನಡೆದಿದೆ. ತುಮಕೂರು‌ ಜಿಲ್ಲೆಯ ತುರುವೇಕೆರೆ ತಾಲೂಕಿನ ಸೊಂಡೆಮಾರ್ಗೋನಹಳ್ಳಿಯಲ್ಲಿ ಘಟನೆ ನಡೆದಿದೆ. ಶಶಿಕುಮಾರ್, ಲಕ್ಷ್ಮಣಯ್ಯ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಾಗೇಗೌಡನಪಾಳ್ಯದ ಮಂಜುನಾಥ್ ಎಂಬಾತನ ತಾಯಿ, ಪತ್ನಿ ಹಾಗೂ ಗಂಗಮ್ಮ, ನಾಗಯ್ಯ ಎಂಬುವವರು ಹಲ್ಲೆ ನಡೆಸಿದ್ದಾರೆ.
ಲಕ್ಷ್ಮಣಯ್ಯಗೆ ಸೇರಿದ ಸರ್ವೇ ನಂ.26ರ ಜಮೀನಿನ‌ ವಿಚಾರಕ್ಕೆ ಗಲಾಟೆ ನಡೆದಿದೆ. 1 ಎಕರೆ 10 ಗುಂಟೆಗೆ ಪಹಣಿ ಇದ್ದು, ಸರ್ವೆ ನಂ.26 ರಲ್ಲಿ ಇರುವ 15 ಗುಂಟೆ ಕರಾಬಿನ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಈಗಾಗಲೇ 15 ಗುಂಟೆ ಕರಾಬು ಜಾಗದಲ್ಲಿ ಲಕ್ಷ್ಮಣಯ್ಯ ಉಳುಮೆ ಮಾಡಿಕೊಂಡಿದ್ದಾರೆ.

15 ಗುಂಟೆ ಕರಾಬು ನಮಗೆ ಸೇರಬೇಕೆಂದು ಪಕ್ಕದ ಜಮೀನಿನ ಮಂಜುನಾಥ ಕುಟುಂಬಸ್ಥರಿಂದ ಲಕ್ಷ್ಮಣಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಗಳಕ್ಕೆ ಬಂದ ಮಂಜುನಾಥ್‌ ಕುಟುಂಬಸ್ಥರು, ಲಕ್ಷ್ಮಣಯ್ಯನನ್ನು ಹಿಡಿದು ನೀರಿನಲ್ಲಿ ಮುಳುಗಿಸಿ, ಕುಡುಗೋಲು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

Exit mobile version