ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UN Security Council) ಭಾರತಕ್ಕೆ ಕಾಯಂ ಸದಸ್ಯತ್ವ ನೀಡಲು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ್ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಶನಿವಾರ ಈ ಕುರಿತು ಹೇಳಿಕೆ ನೀಡಿರುವ ಅವರು ವಿಶ್ವಸಂಸ್ಥೆ ಮತ್ತು ಅದರ ಅಧೀನದಲ್ಲಿರುವ ಏಜೆನ್ಸಿಗಳ ತುರ್ತು ಸುಧಾರಣೆಗಳಿಗೆ ಕರೆ ನೀಡಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಷ್ಯಾದ ರಾಯಭಾರಿ, ನಾವು ನವದೆಹಲಿಯ ಉಮೇದುವಾರಿಕೆಗೆ ನಮ್ಮ ಬೆಂಬಲವನ್ನು ಪದೇ ಪದೇ ಸೂಚಿಸಿದ್ದೇವೆ. ನಮ್ಮ ಭಾರತೀಯ ಪಾಲುದಾರರು 2021-2022 ರಲ್ಲಿ ಯುಎನ್ಎಸ್ಸಿಯಲ್ಲಿ ಶಾಶ್ವತ ಸದಸ್ಯತ್ವಕ್ಕೆ ಅರ್ಹರೆಂದು ಸಾಬೀತುಪಡಿಸಿದ್ದಾರೆ. ಅವರ ಜಿ 20 ಅಧ್ಯಕ್ಷತೆಯು ರಾಜತಾಂತ್ರಿಕತೆಯಲ್ಲಿ ಅವರ ಉನ್ನತ ವೃತ್ತಿಪರತೆ ಮತ್ತು ಒಮ್ಮತವನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪ್ರಾತಿನಿಧಿಕ ಧ್ರುವೀಕರಣದ ಬಗ್ಗೆ ಮಾತನಾಡಿದ ರಾಯಭಾರಿ ಡೆನಿಸ್, ಇದು ಭದ್ರತಾ ಮಂಡಳಿಯ ವಿಸ್ತರಣೆಯನ್ನು ಗಮನಾರ್ಹವಾಗಿ ಸಂಕೀರ್ಣಗೊಳಿಸುತ್ತದೆ. ಪಾಶ್ಚಿಮಾತ್ಯ ದೇಶಗಳು ಈಗಾಗಲೇ ವಿಶ್ವ ಸಂಸ್ಥೆಯಲ್ಲಿ ಅತಿಯಾದ ಪ್ರಾತಿನಿಧ್ಯ ಹೊಂದಿವೆ ಎಂದು ಹೇಳಿದರು.
ವಿಶ್ವಸಂಸ್ಥೆಯಲ್ಲಿ ಧ್ರುವೀಕರಣವು ಭದ್ರತಾ ಮಂಡಳಿಯನ್ನು ವಿಸ್ತರಿಸುವ ಮಾತಿಗೆ ಪೂರಕವಾಗಿದೆ. ಪಶ್ಚಿಮ ದೇಶಗಳು ಈಗಾಗಲೇ ‘ಅತಿಯಾದ ಪ್ರಾತಿನಿಧ್ಯ’ ಹೊಂದಿದೆ. ಈ ಹಿನ್ನೆಲೆಯಲ್ಲಿ, ಹೊಸ ಪಾಶ್ಚಿಮಾತ್ಯ ಅಭ್ಯರ್ಥಿಗಳ ಪ್ರಾತಿನಿಧ್ಯ ಸರಿಯಲ್ಲ ಎಂದು ಹೇಳಿದ್ದಾರೆ.
ಭಾರತ- ರಷ್ಯಾ ಸಂಬಂಧ
ಭಾರತದೊಂದಿಗೆ ಬೆಳೆಯುತ್ತಿರುವ ವ್ಯಾಪಾರ ಸಂಬಂಧಗಳು ಮತ್ತು ಆರ್ಥಿಕ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ‘ಅಭೂತಪೂರ್ವ’ ಎಂದು ಕರೆದ ರಷ್ಯಾದ ರಾಯಭಾರಿ, “ನಮ್ಮ ವ್ಯಾಪಾರ ಮತ್ತು ಆರ್ಥಿಕ ಸಹಕಾರವು ಅಭೂತಪೂರ್ವ ಮಟ್ಟವನ್ನು ತಲುಪಿದೆ. ರಷ್ಯಾ ಭಾರತದ ನಾಲ್ಕು ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಹೈಡ್ರೋಕಾರ್ಬನ್ ಗಳ ಪೂರೈಕೆಯಲ್ಲಿ ನಾವು ಪ್ರಮುಖ ಸ್ಥಾನವನ್ನು ಕಾಯ್ದುಕೊಂಡಿದ್ದೇವೆ. ಇದು ಭಾರತದ ಆಮದಿನ ಮೂರನೇ ಒಂದು ಭಾಗಕ್ಕಿಂತ
ಭಾರತ ಮತ್ತು ರಷ್ಯಾ ದಶಕಗಳಿಂದ ದೃಢವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಉಳಿಸಿಕೊಂಡಿವೆ. ಈ ಸಂಬಂಧದ ಕೇಂದ್ರಬಿಂದು ವ್ಯಾಪಕವಾದ ರಕ್ಷಣಾ ಸಹಕಾರವಾಗಿದೆ. ರಷ್ಯಾ ಭಾರತ ಮತ್ತು ಎರಡೂ ರಾಷ್ಟ್ರಗಳಿಗೆ ಮಿಲಿಟರಿ ಉಪಕರಣಗಳ ಪ್ರಮುಖ ಪೂರೈಕೆದಾರನಾಗಿ ಕಾರ್ಯನಿರ್ವಹಿಸುತ್ತಿದೆ. ಜಂಟಿ ಮಿಲಿಟರಿ ಕಸರತ್ತುಗಳು. ತಂತ್ರಜ್ಞಾನ ವರ್ಗಾವಣೆಯಲ್ಲಿ ತೊಡಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ತಿಳಿಸಿದೆ.