Site icon Vistara News

S Jaishankar’s Maldives visit : ಚೀನಾ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ಗೆಲುವು, 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್​​

S Jaishankar's Maldives visit

ಬೆಂಗಳೂರು : ಭಾರತ ವಿರುದ್ಧ ಮಾಲ್ಡೀವ್ಸ್​ ಹೊಂದಿರುವ ಅಸಮಾಧಾನವನ್ನು ತಮ್ಮ ಪರ ಬಳಸಿಕೊಳ್ಳಲು ಯತ್ನಿಸುತ್ತಿದ್ದ ಚೀನಾಕ್ಕೆ ಹಿನ್ನಡೆಯಾಗಿದೆ. ದ್ವೀಪಗಳ ರಾಷ್ಟ್ರ ಮಾಲ್ಡೀವ್ಸ್​​ ತನ್ನ 28 ದ್ವೀಪಗಳ ಅಭಿವೃದ್ಧಿ ಕಾರ್ಯವನ್ನು ಭಾರತಕ್ಕೆ ವಹಿಸಿ ಕೊಡಲು ತೀರ್ಮಾನಿಸಿರುವುದಾಗಿ ಇತ್ತೀಚಿನ ವರದಿ ತಿಳಿಸಿದೆ. ಇದು ವಿದೇಶಾಂಗ ಸಚಿವ ಎಸ್​. ಜೈಶಂಕರ್ ಅವರ ಭೇಟಿಯ (S Jaishankar’s Maldives visit) ಫಲವೂ ಹೌದು. ಅಂತೆಯೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಮಾಲ್ಡೀವ್ಸ್​ ಗೊಂದಲಕ್ಕೆ ಬಿದ್ದು ತಪ್ಪು ಮಾಡಿತ್ತು. ಅಲ್ಲಿನ ರಾಜಕಾರಣಿಗಳು ಭಾರತ ವಿರೋಧಿ ಹೇಳಿಕೆ ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾದರು. ಹೀಗಾಗಿ ಅಲ್ಲಿಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಯಿತು. ಹೀಗಾಗಿ ಆ ದೇಶಕ್ಕೆ ಚೀನಾದ ನೆರವು ಅಗತ್ಯವಾಯಿತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ದ್ವೀಪ ರಾಷ್ಟ್ರವು ತನ್ನ ಭಾರತದೊಂದಿಗೆ ಶಾಂತಿ ಸ್ಥಾಪಿಸಲು ಸಿದ್ಧವಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಭಾನುವಾರ ಮಾಲ್ಡೀವ್ಸ್ ಭೇಟಿ ಮುಕ್ತಾಯಗೊಳಿಸಿದ್ದರು. ರಾಜಧಾನಿ ಮಾಲೆಯಲ್ಲಿದ್ದಾಗ ಜೈಶಂಕರ್ ಹಲವಾರು ಒಡಂಬಡಿಕೆಗಳಿಗೆ ಸಹಿ ಹಾಕಿದ್ದರು. ಅಧಿಕ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಭಾರತದಲ್ಲಿ ಹೆಚ್ಚುವರಿ 1,000 ಮಾಲ್ಡೀವ್ಸ್ ನಾಗರಿಕ ಸೇವಕರ ಸಾಮರ್ಥ್ಯ ವರ್ಧನೆ ಮತ್ತು ಮಾಲ್ಡೀವ್ಸ್ ನಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪರಿಚಯಿಸುವ ಒಪ್ಪಂದಗಳು ನಡೆಯಿತು.

ಭಾರತಕ್ಕೆ 28 ದ್ವೀಪಗಳ ಅಭಿವೃದ್ಧಿ ಭಾರತಕ್ಕೆ

ಮಾಲ್ಡೀವ್ಸ್​​ 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ವ್ಯವಸ್ಥೇ ಭಾರತದ ಲೈನ್ ಆಫ್ ಕ್ರೆಡಿಟ್ (ಎಲ್ಒಸಿ) ನೆರವಿನ ಯೋಜನೆಯನ್ನು ಅಧ್ಯಕ್ಷ ಮುಯಿಝು ಅವರ ಸಮ್ಮುಖದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮತ್ತು ವಿದೇಶಾಂಗ ಸಚಿವರು ಜಂಟಿಯಾಗಿ ಉದ್ಘಾಟಿಸಿದರು. ಮುಯಿಝು ಈಗ 28 ದ್ವೀಪಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಭಾರತಕ್ಕೆ ಅನುಮತಿ ನೀಡಿದ್ದಾರೆ.

ಇದನ್ನೂ ಓದಿ: Faiz Hameed : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​​ಐನ ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಬಂಧನ

ಮಾಲ್ಡೀವ್ಸ್ ಗೆ ಬಜೆಟ್ ನೆರವು

ಜುಲೈ 23 ರಂದು ಮಂಡಿಸಲಾದ ಕೇಂದ್ರ ಬಜೆಟ್ 2024 ಹಿಂದಿನ ವರ್ಷಕ್ಕೆ ಹೋಲಿಸಿದರೆ 2024-25ರ ಆರ್ಥಿಕ ವರ್ಷದಲ್ಲಿ ದ್ವೀಪ ರಾಷ್ಟ್ರಕ್ಕೆ ಸಹಾಯದಲ್ಲಿ ಶೇಕಡಾ 48ರಷ್ಟು ಗಮನಾರ್ಹ ಕಡಿತ ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಲ್ಡೀವ್ಸ್​ಗೆ 400 ಕೋಟಿ ರೂ.ಗಳನ್ನು “ಅನುದಾನ” ಎಂದು ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷ ಒದಗಿಸಲಾದ 770 ಕೋಟಿ ರೂ.ಗಿಂತ ಗಣನೀಯ ಇಳಿಕೆ.

ಭಾರತವನ್ನು ಹೊಗಳಿದ ಮುಯಿಝು

ಮಾಲ್ಡೀವ್ಸ್​ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರು ಭಾರತದ ನಿರಂತರ ಅಭಿವೃದ್ಧಿ ನೆರವನ್ನು ಶ್ಲಾಘಿಸಿದ್ದಾರೆ. ಭಾರತ-ಮಾಲ್ಡೀವ್ಸ್ ಸಂಬಂಧವನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆ ಪುನರುಚ್ಚರಿಸಿದ್ದಾರೆ. ಜೈಶಂಕರ್ ಅವರ ಭೇಟಿಯ ಸಮಯದಲ್ಲಿ, ಮಾಲ್ಡೀವ್ಸ್ ಕಡೆಯವರು ಸಾಮಾಜಿಕ, ಮೂಲಸೌಕರ್ಯ ಮತ್ತು ಹಣಕಾಸು ಕ್ಷೇತ್ರಗಳು ಸೇರಿದಂತೆ ಮಾಲ್ಡೀವ್ಸ್​ ನೀಡಲಾಗಿರುವ ಒಟ್ಟಾರೆ ಅಭಿವೃದ್ಧಿಗೆ ಭಾರತದ ಬೆಂಬಲವನ್ನು ಕೊಂಡಾಡಿದ್ದಾರೆ.

Exit mobile version