ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಇತ್ತೀಚೆಗೆ ಕಾಶ್ಮೀರಕ್ಕೆ (Jammu Kashmir) ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಜನಜೀವನ ಹಾಗೂ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದರು. ಈ ಸ್ಥಳದಲ್ಲಿನ ಸೌಂದರ್ಯ ಮತ್ತು ಜನರ ಅಸಾಧಾರಣ ಆತಿಥ್ಯವು ಮಾಸ್ಟರ್ ಬ್ಲಾಸ್ಟರ್ ಅವರನ್ನು ವಿಸ್ಮಯಗೊಳಿಸಿತ್ತು. ‘ಕ್ರಿಕೆಟ್ ದೇವರು’ (God of Cricket) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಚಿನ್ ತಮ್ಮ ಕಾಶ್ಮೀರ ಪ್ರವಾಸದ ಅದ್ಭುತ ವೀಡಿಯೊಗಳನ್ನು ಒಂದೊಂದಾಗಿ ಬಿಡುತ್ತಿದ್ದಾರೆ. ಅವರು ಸೋಷಿಯಲ್ ಮೀಡಿಯಾ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಅವರು ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಗುಲ್ಮಾರ್ಗ್ನಲ್ಲಿ ಹಿಮಪಾತವನ್ನು ಅನುಭವಿಸಿದ್ದರು.
Always good to see young girls playing cricket. Watching videos like these brings a smile to my face. https://t.co/LaQv9ymWRx
— Sachin Tendulkar (@sachin_rt) March 30, 2024
ವೀಡಿಯೊವನ್ನು ಒಳಗೊಂಡ ಪೋಸ್ಟ್ನಲ್ಲಿ ತೆಂಡೂಲ್ಕರ್ ಹಿಮದಿಂದ ಆವೃತವಾದ ರಾಜ್ಯದ ಸೌಂದರ್ಯದ ಬಗ್ಗೆ ಹೊಗಳಿದ್ದರು. “ಜಮ್ಮು ಮತ್ತು ಕಾಶ್ಮೀರ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಸುತ್ತಲೂ ಹಿಮವಿತ್ತು ಆದರೆ ಜನರ ಅಸಾಧಾರಣ ಆತಿಥ್ಯದಿಂದಾಗಿ ನಾವು ಬೆಚ್ಚಗಿದ್ದೆವು” ಎಂದು ಸಚಿನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೀಗ ಸಚಿನ್ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ್ದು, ಕಾಶ್ಮೀರದ ಸೊಪೋರ್ನಲ್ಲಿ ಬಾಲಕಿಯೊಬ್ಬಳು ಕ್ರಿಕೆಟ್ ಆಡುತ್ತಿರುವ ದೃಶ್ಯವನ್ನು ಕಾಣಬಹುದು “ಹೆಣ್ಣು ಮಕ್ಕಳು ಕ್ರಿಕೆಟ್ ಆಡುವುದನ್ನು ನೋಡುವುದು ಹೆಮ್ಮೆಯ ವಿಷಯ . ಈ ರೀತಿಯ ವೀಡಿಯೊಗಳನ್ನು ನೋಡುವುದು ನನ್ನ ಮುಖದಲ್ಲಿ ನಗು ಮೂಡಿಸುತ್ತದೆ ” ಎಂದು ಅವರು ಶೀರ್ಷಿಕೆ ಬರೆದಿದ್ದಾರೆ.
ಇದನ್ನೂ ಓದಿ: IPL 2024 : ಕೊಹ್ಲಿ, ಗ್ರೀನ್ ಆರ್ಸಿಬಿ ಸೋಲಿಗೆ ಕಾರಣವೇ? ಮಾಜಿ ಆಟಗಾರನ ಅಭಿಪ್ರಾಯ ಸರಿಯೇ?
ಇತ್ತೀಚೆಗೆ, ತೆಂಡೂಲ್ಕರ್ ಕಾಶ್ಮೀರದ ವಿಕಲಚೇತನರ ಕ್ರಿಕೆಟ್ ಪ್ರತಿಭೆ ಅಮೀರ್ ಹುಸೇನ್ ಲೋನ್ ಅವರ ಜೀವನೋತ್ಸಾಹವನ್ನು ಕೊಂಡಾಡಿದ್ದರು. ಕ್ರಿಕೆಟ್ ಐಕಾನ್ ಕ್ರಿಕೆಟ್ ಬ್ಯಾಟ್ ತಯಾರಿಕಾ ಘಟಕಕ್ಕೂ ಭೇಟಿ ನೀಡಿದ್ದಾರೆ.
ಕಾಶ್ಮೀರದ ಮರದ ಬ್ಯಾಟ್ಗಳು ಜಾಗತಿಕ ಖ್ಯಾತಿಯನ್ನು ಹೊಂದಿವೆ. ಕಾಶ್ಮೀರ ವಿಲ್ಲೋ ಬ್ಯಾಟ್ಗಳ ತಯಾರಿಕೆ ಕರಕುಶಲತೆಯನ್ನು ಶ್ಲಾಘಿಸಿದ ತೆಂಡೂಲ್ಕರ್, ಅವುಗಳನ್ನು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಉತ್ತಮ ಉದಾಹರಣೆಗಳು ಎಂದು ಬಣ್ಣಿಸಿದರು. ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಸ್ಥಳಗಳಿಗೆ ಭೇಟಿ ನೀಡುವಂತೆ ಲೆಜೆಂಡರಿ ಕ್ರಿಕೆಟಿಗ ಜನರನ್ನು ಪ್ರೋತ್ಸಾಹಿಸಿದರು.
“ಕಾಶ್ಮೀರ ವಿಲ್ಲೋ ಬ್ಯಾಟ್ಗಳು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ಗೆ ಉತ್ತಮ ಉದಾಹರಣೆಗಳಾಗಿವೆ. ಈ ಬ್ಯಾಟ್ಗಳು ಪ್ರಪಂಚದಾದ್ಯಂತ ಪ್ರಯಾಣಿಸಿವೆ. ಈಗ ನಾನು ಪ್ರಪಂಚದಾದ್ಯಂತ ಮತ್ತು ಭಾರತದಾದ್ಯಂತದ ಜನರಿಗೆ ಜಮ್ಮು ಮತ್ತು ಕಾಶ್ಮೀರವನ್ನು ಬಂದು ಅನುಭವಿಸಲು ಶಿಫಾರಸು ಮಾಡುತ್ತೇನೆ” ಎಂದು ಸಚಿನ್ ಹೇಳಿದ್ದರು.