ಬೆಂಗಳೂರು: ಕರ್ನಾಟಕದ ಆಭರಣ ಪ್ರಿಯರ ವಿಶ್ವಾಸಾರ್ಹ ಆಭರಣ ಮಳಿಗೆಯಲ್ಲಿ (Gold Jewelry) ಒಂದಾಗಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ (Sri Sai Gold Palace) ಬೆಂಗಳೂರಿನ ಆರು ಶಾಖೆಗಳ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಾಯಿ ಗೋಲ್ಡ್ ಹಬ್ಬ ಆಯೋಜಿಸಿದೆ. ಸಾಯಿ ಗೋಲ್ಡ್ ಶಾಖೆ ತನ್ನ ಅತ್ಯುತ್ತಮ ಗ್ರಾಹಕ ಸೇವೆ ಮತ್ತು ಭಾರತದ ಅತ್ಯುತ್ತಮ ಆಭರಣಕಾರರ ಕೌಶಲ್ಯ ಮತ್ತು ಕಲಾತ್ಮಕತೆಯನ್ನು ಸಾರುವ ಆಭರಣಗಳಿಗೆ ಹೆಸರುವಾಸಿಯಾಗಿದೆ.
ಜೈಪುರದ ರಾಜಮನೆತನದ ಇತಿಹಾಸವನ್ನು ಸಾರುವ ಪಾರಂಪರಿಕ ಒಡವೆಗಳು, ಭಾರತೀಯ ಸಂಸ್ಕೃತಿ ಮತ್ತು ಶತಮಾನಗಳ-ಹಳೆಯ ವಿನ್ಯಾಸಗಳನ್ನು ಪ್ರತಿಧ್ವನಿಸುವ ದೈವಿಕ ಆಭರಣಗಳು, ಭಕ್ತಿ ಬಿಂಬಿಸುವ ಲೈಟ್ ವೇಟ್ ಟೆಂಪಲ್ ಜ್ಯುವೆಲ್ಲರಿ, ಹೊಳೆಯುವ ವಜ್ರದ ಸೆಟ್‌ಗಳು, ಬೆಳ್ಳಿ ಆಭರಣಗಳು ಮತ್ತು ಚಿನ್ನದ ಆಂಟಿಕ್ ಆಭರಣಗಳ ಅದ್ಭುತ ಮತ್ತು ಅಮೋಘ ಸಂಗ್ರಹಗಳನ್ನು ಹೊತ್ತು ಪ್ರತಿ ವರ್ಷದಂತೆ ಈ ವರ್ಷವೂ ಪ್ರಿಯ ಗ್ರಾಹಕರನ್ನು ತನ್ನತ ಸೆಳೆಯಲು ಹಾಗೂ ತೃಪ್ತಿದಾಯಕ ಗ್ರಾಹಕ ಸೇವೆ ನೀಡಲು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಿದ್ಧಗೊಂಡಿದೆ.
ಭರ್ಜರಿ ರಿಯಾಯಿತಿ
ಹಬ್ಬದ ಸಂದರ್ಭದಲ್ಲಿ ಭಾಗಿಯಾಗಿ ಆಭರಣ ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಕೂಡ ನೀಡುತ್ತಿದೆ. ನೀವು ಖರೀದಿಸುವ ಪ್ರತಿ 1 ಕೆಜಿ ಬೆಳ್ಳಿಯ ವಸ್ತುವಿನ ಖರೀದಿಯ ಮೇಲೆ ₹3000 ರಿಯಾಯಿತಿ, ಪ್ರತಿ 1 ಕ್ಯಾರೆಟ್ ವಜ್ರದ ಆಭರಣದ ಖರೀದಿಯ ಮೇಲೆ ₹10,000 ರಿಯಾಯಿತಿ, ಬೆಳ್ಳಿ ಆಭರಣ ಮೌಲ್ಯದ ಮೇಲೆ 10% ಅಮೋಘ ರಿಯಾಯಿತಿ.
Gold Rate Today: ಚಿನ್ನದ ಬೆಲೆಯಲ್ಲಿ ಏರಿಕೆ; ನಿನ್ನೆಗಿಂತ ಇಂದು ಎಷ್ಟು ಏರಿದೆ ನೋಡಿ
ಅಷ್ಟೇ ಯಾಕೆ ಚಿನ್ನ ಕೊಳ್ಳುವ ಗ್ರಾಹಕರಿಗೆ, ಬೆಳ್ಳಿ ಸಂಪೂರ್ಣ ಉಚಿತವಾಗಿ ದೊರೆಯುತ್ತಿದೆ. ಹೌದು 1 ಗ್ರಾಂ ಚಿನ್ನಾಭರಣ ಕೊಂಡು 2 ಗ್ರಾಂ ಬೆಳ್ಳಿ ಉಚಿತವಾಗಿ ಪಡೆಯುವ ಸುವರ್ಣಾವಕಾಶವನ್ನು ಸಾಯಿ ಗೋಲ್ಡ್ ತನ್ನ ಗ್ರಾಹಕರಿಗೆ ಕಲ್ಪಿಸಿದೆ. ತಪ್ಪದೇ ಹತ್ತಿರದ ಶಾಖೆಗೆ ಭೇಟಿ ನೀಡಿ ಹಬ್ಬದಲ್ಲಿ ಭಾಗಿಯಾಗಿ.
ಮಧ್ಯಮ ವರ್ಗದವರಿಗೆ ಬಂದೇ ಬಾರಿಗೆ ಚಿನ್ನಕೊಳ್ಳುವುದು ಕಷ್ಟವಾದ ಕೆಲಸ ಇಂತಹ ಕುಟುಂಬಗಳಿಗಾಗಿ, ಚಿನ್ನವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಅನುಕೂಲಕರವಾಗುವಂತೆ ಶ್ರೀ ಸಾಯಿ ಸಮೃದ್ಧಿ ಉಳಿತಾಯ ಯೋಜನೆ ಮತ್ತು ಶ್ರೀ ಸಾಯಿ ನಿತ್ಯ ನಿಧಿ ಉಳಿತಾಯ ಯೋಜನೆಯನ್ನು ಸಾಯಿ ಗೋಲ್ಡ್ ಪ್ಯಾಲೇಸ್ ಹೊಂದಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಈ ಬೆಲೆ ಏರಿಕೆ ಸಂದರ್ಭದಲ್ಲಿ, ಚಿನ್ನ ಕೊಳ್ಳಬೇಕೆಂದರು , ಕೊಳ್ಳಲಾಗದಂತ ಪರಿಸ್ಥಿತಿ ಇದೆ. ಅದರ ಚಿಂತೆ ಬಿಟ್ಟು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹಬ್ಬದಲ್ಲಿ ಭಾಗಿಯಾಗಿ ಗ್ರಾಹಕರಿಗಾಗಿ ವಿಶೇಷವಾಗಿ ನೀಡುತ್ತಿರುವ ಅಮೋಘ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳಬಹುದು.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ಡಾಕ್ಟರ್ ಟಿ ಎ ಶರವಣ ಮಾತನಾಡಿ “ನಮ್ಮೆಲ್ಲಾ ಗ್ರಾಹಕರು ಕುಟುಂಬದವರಿದಂತೆ, ಅವರ ವಿಶ್ವಾಸವನ್ನು ಉಳಿಸಿಕೊಂಡು ಉತ್ತಮ ಗ್ರಾಹಕ ಸೇವೆಯನ್ನು ನೀಡುತ್ತಾ ಬಂದಿದ್ದೇವೆ. ಯುಗಾದಿ ಹಬ್ಬಕ್ಕೆ ನೆಚ್ಚಿನ ಆಭರಣ ಖರೀದಿಸಲು ಸಿದ್ಧವಾಗಿರುವ ಗ್ರಾಹಕರು ಆಭರಣಗಳನ್ನು ಮುಂಗಡವಾಗಿ ಕಾಯ್ದಿರಿಸಿ, ಹಬ್ಬದ ದಿನದಂದು ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳಬಹುದು. ಈ ಎಲ್ಲಾ ಕೊಡುಗೆಗಳು ನಮ್ಮ ಬಸವನಗುಡಿ, ಎಚ್ಎಸ್ಆರ್ ಲೇಔಟ್, ಯಲಹಂಕ, ಕೆ ಆರ್ ಪುರಂ ಮತ್ತು ನಾಗರಬಾವಿ ಶಾಖೆಗಳಲ್ಲಿ ಲಭ್ಯವಿದೆ. ಎಲ್ಲರೂ ಹತ್ತಿರದ ಶಾಖೆಗೆ ಭೇಟಿ ನೀಡಿ, ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬೇಕೆಂದು ಆತ್ಮೀಯ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.