ದೆಹಲಿ: ನೀವು ಯಾವುದಾದರೂ ಕೆಲಸದಲ್ಲಿ ಇದ್ದರೆ ನಿಮಗೆಷ್ಟು ಸಂಬಳ ಕೊಡುತ್ತಾರೆ ಎಂದು ಯಾರಾದರೂ ಕೇಳಿಯೇ ಕೇಳುತ್ತಾರೆ. ಕೆಲಸಕ್ಕಿಂತ ಹೆಚ್ಚಾಗಿ ಸಂಬಳವೇ ಎಲ್ಲರ ಕಣ್ಣನ್ನು ಸೆಳೆಯುತ್ತದೆ. ಇನ್ನು ಕೆಲವರಿಗೆ ಹೀಗೆ ಕೇಳುವುದು ಒಂದು ಕುತೂಹಲವಾಗಿರುತ್ತದೆ. ಸಣ್ಣಪುಟ್ಟ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಬಿಡದವರು ಇನ್ನು ದೇಶದ ಆಡಳಿತದ ಚುಕ್ಕಾಣಿ ಹಿಡಿದವರನ್ನು ಬಿಡುತ್ತಾರಾ….? ದೇಶದಲ್ಲಿ ಹಲವಾರು ಉನ್ನತ ಹುದ್ದೆಗಳಿವೆ. ಅದರಲ್ಲಿ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಬಹಳ ಮುಖ್ಯವಾದ ಹುದ್ದೆಗಳಾಗಿವೆ. ಸಾಮಾನ್ಯ ಹುದ್ದೆಗಳನ್ನು ಪಡೆದಿರುವವರಿಗೆ ತಿಂಗಳಿಗೆ ಕೈತುಂಬಾ ಸಂಬಳ ಬರುತ್ತದೆ. ಹಾಗಾದ್ರೆ ದೇಶದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಹುದ್ದೆಗೆ ಎಷ್ಟು ಸಂಬಳವಿರಬಹುದು (salaries of prime minister) ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ವಿವರ ಇಲ್ಲಿದೆ ನೋಡಿ.
ರಾಷ್ಟ್ರಪತಿ
ದೇಶದ ಮೂರು ಉನ್ನತ ಹುದ್ದೆಗಳಲ್ಲಿ ರಾಷ್ಟ್ರಪತಿ ಹುದ್ದೆ ಒಂದು. 2018ರಲ್ಲಿ ಭಾರತದ ರಾಷ್ಟ್ರಪತಿಗಳ ವೇತನವನ್ನು ತಿಂಗಳಿಗೆ 1.50 ಲಕ್ಷದಿಂದ 5 ಲಕ್ಷಕ್ಕೆ ಪರಿಷ್ಕರಿಸಲಾಯಿತು. ಹಾಗೇ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್ ನಲ್ಲಿ ಭಾರತೀಯ ರಾಷ್ಟ್ರಪತಿಗಳ ಗೌರವಧನವನ್ನು ಜನವರಿ 2006ರಿಂದ ಜಾರಿಗೆ ಬರುವಂತೆ ಕೊನೆಯ ಬಾರಿಗೆ ಪರಿಷ್ಕರಿಸಲಾಗಿರುವುದಾಗಿ ತಿಳಿಸಿದ್ದರು. ಹಾಗಾಗಿ ಗೃಹ ವ್ಯವಹಾರ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ ರಾಷ್ಟ್ರಪತಿಗಳ ಸವಲತ್ತಿನ ವಿವರ ಹೀಗಿದೆ:
-ರಾಷ್ಟ್ರಪತಿ ವಿಮಾನ, ರೈಲು ಅಥವಾ ಸ್ಟೀಮರ್ ಗಳ ಮೂಲಕ ದೇಶದ ಯಾವ ಪ್ರದೇಶಕ್ಕೂ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. ಹಾಗೇ ಅವರ ಜೊತೆ ಸಹಾಯಕ್ಕಾಗಿ ಒಬ್ಬ ವ್ಯಕ್ತಿಯನ್ನು ಕರೆತರಬಹುದಾಗಿದೆ. ಅವರ ಖರ್ಚನ್ನು ಸರ್ಕಾರವೇ ಭರಿಸುತ್ತದೆ.
-ರಾಷ್ಟ್ರಪತಿ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.
-ಸುಸಜ್ಜಿತ ಬಾಡಿಗೆ ಮುಕ್ತ ಮನೆ, ಎರಡು ಉಚಿತ ಲ್ಯಾಂಡ್ ಲೈನ್ ಗಳು ( ಇದರಲ್ಲಿ ಒಂದು ಇಂಟರ್ ನೆಟ್ ಸಂಪರ್ಕಕ್ಕಾಗಿ ), ಮೊಬೈಲ್ ಫೋನ್, ಮನೆಯ ನಿರ್ವಹಣೆಯ ಜೊತೆಗೆ ಐದು ವೈಯಕ್ತಿಕ ಸಿಬ್ಬಂದಿಗಳನ್ನು ನೀಡಲಾಗುತ್ತದೆ.
-ಒಂದು ವೇಳೆ ರಾಷ್ಟ್ರಪತಿ, ಹುದ್ದೆಯಲ್ಲಿರುವಾಗಲೇ ಮರಣ ಹೊಂದಿದರೆ ಅವರ ಸಂಗಾತಿಗೆ ನಿವೃತ್ತಿಯ ವೇಳೆ ರಾಷ್ಟ್ರಪತಿಗೆ ನೀಡಲಾಗುವಂತಹ ಕುಟುಂಬ ಪಿಂಚಣಿಯನ್ನು ಐವತ್ತು ಪ್ರತಿಶತ ಪಿಂಚಣಿ ದರದಲ್ಲಿ ಜೀವಮಾನವಿಡೀ ನೀಡಲಾಗುವುದು.
-ಹಾಗೇ ರಾಷ್ಟ್ರಪತಿಯ ಸಂಗಾತಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಸಹ ನೀಡಲಾಗುವುದು.
ಉಪರಾಷ್ಟ್ರಪತಿ
ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಉಪರಾಷ್ಟ್ರಪತಿಯ ಗೌರವಧನವನ್ನು ತಿಂಗಳಿಗೆ 1.25 ಲಕ್ಷದಿಂದ 4 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದರು. ಅದಕ್ಕೆ ಸಂಬಂಧಿಸಿದ ಸವಲತ್ತುಗಳ ವಿವರ ಇಲ್ಲಿದೆ:
– ಉಪರಾಷ್ಟ್ರಪತಿಯು ಉಚಿತ ವಸತಿ, ವೈಯಕ್ತಿಕ ಭದ್ರತೆ, ವೈದ್ಯಕೀಯ ಆರೈಕೆ, ರೈಲು ಮತ್ತು ವಿಮಾನ ಪ್ರಯಾಣ, ಸ್ಥಿರ ದೂರವಾಣಿ ಸಂಪರ್ಕ, ಮೊಬೈಲ್ ಫೋನ್ ಸೇವೆ ಮತ್ತು ಸಿಬ್ಬಂದಿಯನ್ನು ಪಡೆಯಬಹುದಾಗಿದೆ.
-ನಿವೃತ್ತಿಯ ನಂತರ ಅವರು ಖಾಸಗಿ ಕಾರ್ಯದರ್ಶಿ, ಹೆಚ್ಚುವರಿ ಖಾಸಗಿ ಕಾರ್ಯದರ್ಶಿ, ವೈಯಕ್ತಿಕ ಸಹಾಯಕ ಮತ್ತು ಇಬ್ಬರು ಪ್ಯೂನ್ ಗಳನ್ನು ಒಳಗೊಂಡಿರುವ ಕಾರ್ಯದರ್ಶಿ ಸಿಬ್ಬಂದಿಯನ್ನು ಹೊಂದಬಹುದಾಗಿದೆ. ಮತ್ತು ಅಂತಹ ಕಾರ್ಯದರ್ಶಿ ಸಿಬ್ಬಂದಿಗಳ ನಿರ್ವಹಣೆಗಾಗಿ ಅವರು ಸಂಬಳವನ್ನು ನೀಡಬೇಕಾಗುತ್ತದೆಯಂತೆ.
ಇದನ್ನೂ ಓದಿ:Assault Case: ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ತಡೆಗಟ್ಟಿ ಹಲ್ಲೆ ಮಾಡಿದ ಕ್ರೂರಿಗಳು!
ಪ್ರಧಾನ ಮಂತ್ರಿ
ಭಾರತದ ಪ್ರಧಾನ ಮಂತ್ರಿಗಳು ತಿಂಗಳಿಗೆ 1.66 ಲಕ್ಷ ರೂ. ಸಂಬಳವನ್ನು ಪಡೆಯುತ್ತಾರೆ. ಇತರ ಭತ್ಯೆಗಳು ಬೇರೆ ಇರುತ್ತವೆ. ಅವರಿಗೆ ನೀಡಲಾದ ಸವಲತ್ತುಗಳ ವಿವರ ಇಲ್ಲಿದೆ:
-ಅವರ ಭದ್ರತೆಗೆ ವೈಯಕ್ತಿಕ ಸಿಬ್ಬಂದಿಗಳ ವಿಶೇಷ ರಕ್ಷಣಾ ತಡವನ್ನು ನಿಯೋಜಿಸಲಾಗುತ್ತದೆ.
-ಪ್ರಧಾನಿಯವರು ಪ್ರಯಾಣಿಸಲು ಒಂದು ವಿಶೇಷವಾದ ವಿಮಾನ –ಏರ್ ಇಂಡಿಯಾ ಒನ್ ಅನ್ನು ನೀಡಲಾಗುತ್ತದೆ.
– ರೇಸ್ ಕೋರ್ಸ್ ರಸ್ತೆಯ 7 ರಲ್ಲಿ ಅವರಿಗೆ ಅಧಿಕೃತ ನಿವಾಸವನ್ನು ನೀಡಲಾಗುತ್ತದೆ.
- – ಉಚಿತ ವೈದ್ಯಕೀಯ ಸೌಲಭ್ಯ, ಉಚಿತ ಸಾರಿಗೆ ಸೌಲಭ್ಯ ಇತ್ಯಾದಿ ಸೌಕರ್ಯಗಳು ಪ್ರಧಾನಿಗಿರುತ್ತವೆ.
- – ನಿವೃತ್ತಿಯ ಬಳಿಕವೂ ಪ್ರಧಾನಿಯಾಗಿದ್ದವರು ಮತ್ತು ಅವರ ಕುಟುಂಬಕ್ಕೆ ಉಚಿತ ಸೌಕರ್ಯ ಮುಂದುವರಿಯುತ್ತವೆ.