ಸ್ಯಾಮ್ಸಂಗ್ ತನ್ನ ಹೊಸ ಎಸ್24 ಸೀರಿಸ್ನ (samsung Galaxy S24 ) ಸ್ಮಾರ್ಟ್ಫೋನ್ಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ (ಕೃತಕ ಬುದ್ಧಿಮತ್ತೆ) ಬಲವಾದ ಒತ್ತು ನೀಡಿದೆ. ಗ್ಯಾಲಕ್ಸಿ ಎಸ್ 24 ಸರಣಿಯ ಫೋನ್ಗಳು ‘ಗ್ಯಾಲಕ್ಸಿ ಎಐ’ ಬ್ರಾಂಡ್ ಅಡಿಯಲ್ಲಿ ಬಿಡುಗಡೆಯಾಗಿದೆ. ಇದು ಎಐ-ಚಾಲಿತ ಹಲವಾರು ಫೀಚರ್ಗಳಿಂದ ತುಂಬಿಕೊಂಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ, ಗ್ಯಾಲಕ್ಸಿ ಎಸ್ 24 + ಮತ್ತು ಗ್ಯಾಲಕ್ಸಿ ಎಸ್ 24 ಹಾರ್ಡ್ವೇರ್ ಅಪ್ಡೇಟ್ ಜತೆಗೆ ಗ್ಯಾಲಕ್ಸಿ ಎಐ ಜತೆಗೆ ಮೊಬೈಲ್ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ಆನ್-ಡಿವೈಸ್ ಎಐ ಮತ್ತು ಅದರ ಗ್ಯಾಲಕ್ಸಿ ಎಐ ಫೀಚರ್ಗಳು ಸ್ಥಳೀಯ ಅನುಕೂಲಗಳನ್ನು ಬಳಸಿಕೊಂಡಿದೆ. ಗ್ಯಾಲಕ್ಸಿ ಎಸ್ 24 ಸರಣಿಯ ಫೋನ್ಗಳು ಹೊಸ ತಲೆಮಾರಿನ ‘ಎಐ ಫೋನ್’ಗಳಿಗೆ ಸ್ಫೂರ್ತಿ ತುಂಬಿದೆ. ಹೊಸ ‘ಗ್ಯಾಲಕ್ಸಿ ಎಐ’ ಸಂಹವನ ನಡೆಸಲು, ಮಾಹಿತಿಗಾಗಿ ಹುಡುಕಲು ಮತ್ತು ಫೋಟೊಗಳನ್ನು ಎಡಿಟ್ ಮಾಡಲು ನೆರವು ನೀಡುತ್ತದೆ. ಈ ಫೀಚರ್ಗಳಲ್ಲಿ ಡೀಫಾಲ್ಟ್ ಆಗಿ ಎಐ ಸೇರಿಸಲಾಗಿದೆ. ಈ ಮೂಲಕ ಥರ್ಡ್ ಪಾರ್ಟಿ ಅಪ್ಲಿಕೇಶನ್ನ ಅಗತ್ಯವನ್ನು ತಪ್ಪಿಸಲಾಗಿದೆ
ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಆನ್-ಡಿವೈಸ್ ಎಐ ಅನ್ನು ಬಳಸುತ್ತದೆ. ಚಾಟ್ ಅಸಿಸ್ಟ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಚಾಟ್ ಜಿಪಿಟಿಯಂಥ ಸಂಹವನ ವ್ಯವಸ್ಥೆ ಇದೆ. ಇದು ಸಂದೇಶವನ್ನು ಹೆಚ್ಚು ಸುಂದರಗೊಳಿಸುತ್ತದೆ. ನಿಮ್ಮ ಅವಶ್ಯಕತೆಗಳ ಆಧಾರದ ಮೇಲೆ ಸಂದೇಶಗಳನ್ನು ರಚಿಸಲು ನಿಮಗೆ ಸಹಾಯ ಮಾಡುತ್ತದೆ. ಸ್ಯಾಮ್ಸಂಗ್ ಕೀಬೋರ್ಡ್ ಹಿಂದಿ ಸೇರಿದಂತೆ ಇತರ 12 ಭಾಷೆಗಳಲ್ಲಿ ರಿಯಲ್ ಟೈಮ್ ಭಾಷಾಂತರ ಮಾಡಲು ನೆರವಾಗುತ್ತದೆ.
ನೋಟ್ ಅಸಿಸ್ಟ್, ಕವರ್ ಗಳನ್ನು ನಿರ್ಮಿಸಲು ಪ್ರೊಡಕ್ಟಿವ್ ಎಐ ಅನ್ನು ಬಳಸುತ್ತದೆ. ಗೂಗಲ್ ಸಹಯೋಗದೊಂದಿಗೆ ನಿರ್ಮಿಸಲಾದ ಸರ್ಕಲ್ ಟು ಸರ್ಚ್, ಉತ್ತರಗಳನ್ನು ಹುಡುಕಲು ನಿಮ್ಮ ಪರದೆಯಲ್ಲಿ ಏನನ್ನಾದರೂ ವೃತ್ತಾಕಾರ ಮಾಡಲು ಅಥವಾ ಹೈಲೈಟ್ ಮಾಡಲು ಅವಕಾಶ ಕೊಡುತ್ತದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ
ಸ್ಯಾಮ್ಸಂಗ್ನ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಪ್ರಮುಖ ಗ್ಯಾಲಕ್ಸಿ ಎಸ್ ಶ್ರೇಣಿಯಲ್ಲಿ ಪ್ರೀಮಿಯಂ, ವೈಶಿಷ್ಟ್ಯಗಳಿಂದ ಕೂಡಿದ ಸ್ಮಾರ್ಟ್ಫೋನ್ ಆಗಿ ಮುಂದುವರಿದಿದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಈಗ ಹೊಸ ಟೈಟಾನಿಯಂ ಫ್ರೇಮ್ ಮತ್ತು ಅದರ ಹಿಂದಿನದಕ್ಕೆ ಹೋಲಿಸಿದರೆ ತೆಳುವಾದ ಬಾಡಿಯೊಂದಿಗೆ ಬಂದಿದೆ. ಇದು 6.8 ಇಂಚಿನ ಕ್ಯೂಹೆಚ್ಡಿ + ಡೈನಾಮಿಕ್ ಅಮೋಲೆಡ್ 2 ಎಕ್ಸ್ ಡಿಸ್ಪ್ಲೇ ಹೊಂದಿದೆ. ಡಿಸ್ಪ್ಲೇ 120 ಹೆರ್ಟ್ಜ್ ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 2,600 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್ನೆಸ್ ನೀಡುತ್ತದೆ. ಮುಂಭಾಗದ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಆರ್ಮರ್ನಿಂದ ಕೂಡಿದೆ . ಇದು ಡಿಸ್ಪ್ಲೇಯನ್ನು ಸಣ್ಣ ಸಣ್ನ ಗೀರುಗಳಿಂದ ಸುರಕ್ಷಿತವಾಗಿರಿಸುತ್ತದೆ. ಪ್ರತಿಫಲನಗಳನ್ನು ಶೇ. 75 ರಷ್ಟು ಕಡಿಮೆ ಮಾಡುತ್ತದೆ.
ರ್ಯಾಮ್ ಯಾವುದು?
ಕಳೆದ ವರ್ಷದಿಂದ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಬ್ಯಾಟರಿಯಲ್ಲಿ 50 ಪ್ರತಿಶತ ಮರುಬಳಕೆ ಮಾಡಿದ ಕೋಬಾಲ್ಟ್ ಬಳಸುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಗ್ಯಾಲಕ್ಸಿಗಾಗಿ ಸ್ನ್ಯಾಪ್ ಡ್ರಾಗನ್ 8 ಜೆನ್ 3 ಬಳಸಿಕೊಂಡಿದೆ. ಚಿಪ್ಸೆಟ್ ಅನ್ನು ಕಸ್ಟಮೈಸ್ ಮಾಡಲಾಗಿದೆ. ಇದು 12 ಜಿಬಿ ರ್ಯಾಮ್ ಮತ್ತು 256 ಜಿಬಿ, 512 ಜಿಬಿ ಮತ್ತು 1 ಟಿಬಿ ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿದೆ.
ಕ್ಯಾಮೆರಾ?
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್ಅಪ್ನೊಂದಿಗೆ ಸಿಗುತ್ತದೆ. ಇದರಲ್ಲಿ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 200 ಮೆಗಾಪಿಕ್ಸೆಲ್ ವೈಡ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ನೀವು ಅದೇ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇಲ್ಲಿ ಎಐ ಹೆಚ್ಚು ಕೆಲಸ ಮಾಡುತ್ತದೆ.
ಬ್ಯಾಟರಿ ಹೇಗಿದೆ?
ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ 5,000 ಎಂಎಎಚ್ ಬ್ಯಾಟರಿಯೊಂದಿಗೆ 45 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಮತ್ತು ಫಾಸ್ಟ್ ವೈರ್ಲೆಸ್ ಚಾರ್ಜಿಂಗ್ 2.0 ಗೆ ಸಪೋರ್ಟ್ ನೀಡುತ್ತದೆ. ಇದು ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.1 ಹೊಂದಿದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಟೈಟಾನಿಯಂ ಗ್ರೇ, ಟೈಟಾನಿಯಂ ಬ್ಲ್ಯಾಕ್, ಟೈಟಾನಿಯಂ ವೈಲೆಟ್ ಮತ್ತು ಟೈಟಾನಿಯಂ ಯೆಲ್ಲೋ ಬಣ್ಣಗಳಲ್ಲಿ ಲಭ್ಯವಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24+ ಮತ್ತು ಗ್ಯಾಲಕ್ಸಿ ಎಸ್ 24
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24+ ಮತ್ತು ಗ್ಯಾಲಕ್ಸಿ ಎಸ್ 24 6.7 ಇಂಚಿನ ಕ್ಯೂಎಚ್ಡಿ + ಮತ್ತು 6.2 ಇಂಚಿನ ಫುಲ್-ಎಚ್ಡಿ + ಡೈನಾಮಿಕ್ ಅಮೋಲೆಡ್ 2 ಎಕ್ಸ್ ಡಿಸ್ಪ್ಲೇ ಹೊಂದಿದೆ. ಹೊಂದಿದ್ದು, ಗರಿಷ್ಠ 120 ಹೆರ್ಟ್ಜ್ ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಪ್ಲೇಗಳನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಆರ್ಮರ್ನಿಂದ ರಕ್ಷಿಸಲಾಗಿದೆ, ಐಪಿ68 ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯುತ್ತದೆ. ಒನಿಕ್ಸ್ ಬ್ಲ್ಯಾಕ್, ಮಾರ್ಬಲ್ ಗ್ರೇ, ಕೋಬಾಲ್ಟ್ ವೈಲೆಟ್ ಮತ್ತು ಅಂಬರ್ ಯೆಲ್ಲೋ ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ : Samsung Galaxy: ಗ್ಯಾಲಕ್ಸಿ ಎಸ್24 ಸರಣಿ ಫೋನ್ ಲಾಂಚ್; ಮೊಬೈಲ್ ಎಐಯ ಹೊಸ ಯುಗಕ್ಕೆ ಪ್ರವೇಶ
ಎರಡೂ ಫೋನ್ಗಳ ಕ್ಯಾಮೆರಾ ಸೆಟಪ್ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ ವೈಡ್ ಕ್ಯಾಮೆರಾ, 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಗ್ಯಾಲಕ್ಸಿ ಎಸ್ 24 + ಮತ್ತು ಗ್ಯಾಲಕ್ಸಿ ಎಸ್ 24 ಚಿತ್ರಗಳನ್ನು ಎಡಿಟ್ ಮಾಡಲು ಎಐ-ಚಾಲಿತ ಸಾಧನಗಳ ಪ್ರೊವಿಶುವಲ್ ಸೂಟ್ ಹೊಂದಿದೆ. ನೈಟ್ಗ್ರಾಫಿ ಮೂಲಕ ಕಡಿಮೆ-ಬೆಳಕಿನ ಫೋಟೋಗಳನ್ನು ತೆಗೆಯಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24+ 12 ಜಿಬಿ ರ್ಯಾಮ್ ಮತ್ತು 512 ಜಿಬಿ ಸ್ಟೋರೇಜ್ ಹೊಂದಿದೆ. ಗ್ಯಾಲಕ್ಸಿ ಎಸ್ 24 8 ಜಿಬಿ ರಾಮ್ ಮತ್ತು 512 ಜಿಬಿ ಸ್ಟೋರೇಜ್ನೊಂದಿಗೆ ಲಭ್ಯವಿರುತ್ತದೆ. ಮೊದಲನೆಯದು 4,900 ಎಂಎಎಚ್ ಬ್ಯಾಟರಿಯನ್ನು ಪ್ಯಾಕ್ನೊಂದಿಗೆ ಬಂದಿರೆ ಎರಡನೆಯದು 4,000 ಎಂಎಎಚ್ ಬ್ಯಾಟರಿಯೊಂದಿಗೆ ಬರುತ್ತದೆ. ಎರಡೂ ಫೋನ್ ಗಳು ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.1 ಅನ್ನು ಸಹ ಪಡೆಯುತ್ತವೆ.