ಅಲಿಗಢ: ಶಾಲೆಗಳಲ್ಲಿ ಮಕ್ಕಳ ಯೋಗಕ್ಷೇಮವನ್ನು ಶಿಕ್ಷಕರು (School Teacher) ನೋಡಿಕೊಳ್ಳಬೇಕು. ಆದರೆ, ಟೀಚರ್ ಮಕ್ಕಳನ್ನು ಹಾಗೆಯೇ ಬಿಟ್ಟು ಕೊಠಡಿಯಲ್ಲೇ ಗಡದ್ದಾಗಿ ನಿದ್ದೆ ಹೊಡೆದ ಘಟನೆಯೊಂದು ವೈರಲ್ ಆಗಿದೆ. ಅಷ್ಟಕ್ಕೂ ಮುಗಿಯದೇ ಅವರು ಪುಟಾಣಿ ಮಕ್ಕಳಿಗೆ ಗಾಳಿ ಬೀಸುವಂತೆ ಹೇಳಿದ್ದಾರೆ. ಉತ್ತರ ಪ್ರದೇಶದ ಅಲಿಗಢದ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಶಿಕ್ಷಕಿ ನೆಲದ ಮೇಲೆ ಚಾಪೆ ಹಾಸಿ ಮೇಲೆ ಆರಾಮವಾಗಿ ಮಲಗಿರುವುದನ್ನು ನೋಡಬಹುದು. ಮೂವರು ಹೆಣ್ಣು ಮಕ್ಕಳು ಅವರಿಗೆ ಬಟ್ಟೆಯಿಂದ ಗಾಳಿ ಬೀಸುತ್ತಿದ್ದಾರೆ.
#UttarPradesh: Female Teacher Caught Sleeping While Students Fan Her in #Aligarh School, Investigation Launched After Video Goes Viral. #EducationForAll #India #UP #Gold #CRPF #teacherlife #studentlife pic.twitter.com/SX61ztmyrr
— Lokmat Times Nagpur (@LokmatTimes_ngp) July 27, 2024
ಉತ್ತರ ಪ್ರದೇಶದ ಅಲಿಗಢದ ಧನಿಪುರ ಪ್ರದೇಶದ ಗೋಕುಲ್ಪುರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. 2 ನಿಮಿಷಗಳ ವೀಡಿಯೊದಲ್ಲಿ ಶಿಕ್ಷಕಿ ತರಗತಿಯ ನೆಲದ ಮೇಲೆ ಮಲಗಿರುವುದನ್ನು ಮತ್ತು ಹುಡುಗಿಯೊಬ್ಬಳು ಹ್ಯಾಂಡ್ ಹೆಲ್ಡ್ ಫ್ಯಾನ್ ಅನ್ನು ಅವಳತ್ತ ಬೀಸುತ್ತಿರುವುದನ್ನು ನೋಡಬಹುದು. ಇನ್ನೊಬ್ಬಳು ಹುಡುಗಿ ಅವಳಿಂದ ಫ್ಯಾನ್ ಅನ್ನು ತೆಗೆದುಕೊಂಡು ಅದೇ ರೀತಿ ಮಾಡುತ್ತಾಳೆ. ಇತರರು ಮಕ್ಕಳು ಶಿಕ್ಷಕರ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ.
ವರದಿಯ ಪ್ರಕಾರ, ಘಟನೆ ವೈರಲ್ ಆದ ಬಳಿಕ ಶಾಲಾ ಶಿಕ್ಷಕಿ ಡಿಂಪಲ್ ಬನ್ಸಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ವೀಡಿಯೊ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ಪ್ರಾಥಮಿಕ ಶಿಕ್ಷಣ ಅಧಿಕಾರಿ ರಾಕೇಶ್ ಕುಮಾರ್ ಸಿಂಗ್ ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಕುಡಿದ ಅಮಲಿನಲ್ಲಿ ಕೆಲಸಕ್ಕೆ ಬರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಬಿಯೋಹರಿ ಬ್ಲಾಕ್ನ ಶಂಕರ್ಗರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೊಬ್ಬ ಕುಡಿದು ಹೋಗುತ್ತಿರುವುದನ್ನು ಗ್ರಾಮಸ್ಥರು ಶನಿವಾರ ಚಿತ್ರೀಕರಿಸಿದ್ದರು.
ಸೋಮವಾರ ತನಿಖಾ ವರದಿ ಬಂದ ನಂತರ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿಕ್ಷಾ ಸಪ್ತಾಯ
ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿ 2020 ರ 4 ನೇ ವಾರ್ಷಿಕೋತ್ಸವವನ್ನು “ಶಿಕ್ಷಾ ಸಪ್ತಾಹ” ಎಂಬ ಒಂದು ವಾರದ ಅಭಿಯಾನದೊಂದಿಗೆ ಆಚರಿಸುತ್ತಿದೆ ಎಂದು ಭಾನುವಾರ ತಿಳಿಸಿದೆ. ಶಿಕ್ಷಣ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ದೇಶಾದ್ಯಂತ ಏಳು ಶಾಲೆಗಳು ವಿದ್ಯಾಂಜಲಿ ಮತ್ತು ಭೋಜನ ಉಪಕ್ರಮಗಳ ಮೂಲಕ ಶಿಕ್ಷಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತದೆ.
ಇದನ್ನೂ ಓದಿ: Paris Olympics 2024 : ಪುರಷರ 10 ಮೀಟರ್ ಏರ್ರೈಫಲ್ ಸ್ಪರ್ಧೆಯಲ್ಲಿ ಫೈನಲ್ಗೇರಿದ ಅರ್ಜುನ್ ಬಬುಟಾ
ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತಿರುವ ಶಾಲಾ ಸ್ವಯಂಸೇವಕ ನಿರ್ವಹಣಾ ಕಾರ್ಯಕ್ರಮವಾದ ವಿದ್ಯಾಂಜಲಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7, 2021 ರಂದು ಪ್ರಾರಂಭಿಸಿದ್ದರು. ದೇಶಾದ್ಯಂತ ಸಮುದಾಯ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಮತ್ತು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಮೂಲಕ ಶಾಲೆಗಳನ್ನು ಬಲಪಡಿಸುವ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.