ಬೆಂಗಳೂರು: ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಅಧ್ಯಕ್ಷೆ ಅಧ್ಯಕ್ಷೆ ಮಾಧಾಬಿ ಬುಚ್ ಅವರ ಪತಿ ಧವಳ್ ಬುಚ್ ಕೆಲಸ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಗೆ ನೆರವಾಗುವ ಉದ್ದೇಶದಿಂದ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ (ಆರ್ಇಐಟಿ) ನಿಯಮಗಳಲ್ಲಿ ಮಾರ್ಪಾಟು ಮಾಡಲಾಗಿದೆ ಎಂದು ಅಮೆರಿಕದ ಮೂಲಕ ಹಿಂಡೆನ್ಬರ್ಗ್ ರಿಸರ್ಚ್ (Hindenburg Report) ಮಾಡಿರುವ ಆರೋಪಗಳನ್ನು ತಿರಸ್ಕರಿಸಿದೆ. ಸೆಬಿ ಭಾನುವಾರ ಈ ಕುರಿತು ವಿಸ್ತೃತ ಹೇಳಿಕೆ ನೀಡಿದೆ.
ಭಾರತದಲ್ಲಿ ಸೆಬಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದಕ್ಕೆ ಸಮಗ್ರ ಸಮಾಲೋಚನೆಯ ಬಳಿಕವೇ ಆರ್ಇಐಟಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಹಿಂಡೆನ್ಬರ್ಗ್ ಆರೋಪಗಳು “ಸೂಕ್ತವಲ್ಲ” ಎಂದು ಹೇಳಿದೆ.
ಮಾಧಾಬಿ ಬುಚ್ ಸೆಬಿಯಲ್ಲಿ ಪೂರ್ಣಾವಧಿ ಸದಸ್ಯರಾಗಿದ್ದ ಅವಧಿಯಲ್ಲಿ, ರಿಯಲ್ ಎಸ್ಟೇಟ್ ಅಥವಾ ಬಂಡವಾಳ ಮಾರುಕಟ್ಟೆಗಳಲ್ಲಿ ಅವರು ಅನುಭವ ಹೊಂದಿರದ ಅವರ ಪತಿ ಧವಳ್ ಬುಚ್ ಅವರನ್ನು ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಯಾದ ಬ್ಲ್ಯಾಕ್ಸ್ಟೋನ್ಗೆ ಹಿರಿಯ ಸಲಹೆಗಾರರಾಗಿ ನೇಮಿಸಲಾಗಿದೆ ಎಂದು ಅಮೆರಿಕದ ಕಿರು ಮಾರಾಟ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ ಶನಿವಾರ ಆರೋಪಿಸಿತ್ತು. ಆದರೆ ಸೆಬಿ ತನ್ನ ಹೇಳಿಕೆಯಲ್ಲಿ ವರದಿಯ ಹೇಳಿಕೆಯನ್ನು ವಿರೋಧಿಸಿದ್ದು, ಧವಳ್ ಬ್ಲ್ಯಾಕ್ಸ್ಟೋನ್ ರಿಯಲ್ ಎಸ್ಟೇಟ್ನೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಹೇಳಿದೆ.
ಆರ್ಇಐಟಿ ನಿಯಮಗಳು, 2014 ಅನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸೆಬಿ, ಹೇಳಿದೆ. “ಅಸ್ತಿತ್ವದಲ್ಲಿರುವ ನಿಯಂತ್ರಣಕ್ಕೆ ಹೊಸ ನಿಯಂತ್ರಣ ಅಥವಾ ತಿದ್ದುಪಡಿ ಪರಿಚಯಿಸುವ ಎಲ್ಲಾ ಪ್ರಕರಣಗಳಂತೆ ಇಲ್ಲೂ ಸಮಾಲೋಚನೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸೆಬಿ ಹೇಳಿಕೆಯಲ್ಲಿ ತಿಳಿಸಿದೆ.
ಸಮಾಲೋಚನೆಯ ನಂತರವೇ, ಹೊಸ ನಿಯಂತ್ರಣ ಪರಿಚಯಿಸುವ ಅಥವಾ ಅಸ್ತಿತ್ವದಲ್ಲಿರುವ ನಿಯಂತ್ರಣದಲ್ಲಿ ಬದಲಾವಣೆ ಪರಿಚಯಿಸುವ ಪ್ರಸ್ತಾಪ ಸೆಬಿ ಮಂಡಳಿಯ ಪರಿಗಣನೆ ಮತ್ತು ಚರ್ಚೆಗಾಗಿ ಇಡಲಾಗುತ್ತದೆ ಎಂದು ಸೆಬಿ ಹೇಳಿದೆ.
ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಂಡಳಿಯ ಸಭೆಗಳ ಕಾರ್ಯಸೂಚಿಗಳು ಮತ್ತು ಚರ್ಚೆಗಳ ಫಲಿತಾಂಶಗಳನ್ನು ಸೆಬಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಆರ್ಇಐಟಿಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ನಿಯಮಗಳ ಬದಲಾವಣೆಗಳು ಅಥವಾ ಸುತ್ತೋಲೆಗಳು ಒಂದು ದೊಡ್ಡ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಅನುಕೂಲಕರವಾಗಿವೆ ಎಂಬ ಹೇಳಿಕೆಗಳು ಸೂಕ್ತವಲ್ಲ” ಎಂದು ಅದು ಹೇಳಿದೆ.
ಇದನ್ನೂ ಓದಿ: Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್ ಟವರ್ ಏರಿ ಕುಳಿತ ಆಗಂತುಕ!
“ಆದ್ದರಿಂದ, ಆರ್ಇಐಟಿಗಳು ಮತ್ತು [ಸಣ್ಣ ಮತ್ತು ಮಧ್ಯಮ] ಎಸ್ಎಂ ಆರ್ಇಐಟಿಗಳನ್ನು ಸೆಬಿಯು ಇತರ ಆಸ್ತಿ ವರ್ಗಗಳಲ್ಲಿ ಉತ್ತೇಜಿಸುವುದು ಒಂದು ದೊಡ್ಡ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಲಾಭ ಪಡೆಯಲು ಮಾತ್ರ ಎಂಬ ಹೇಳಿಕೆಯು ಸೂಕ್ತವಲ್ಲ” ಎಂದು ಹೇಳಿಕೆಯಲ್ಲಿ ಪ್ರತಿಪಾದಿಸಲಾಗಿದೆ.
ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಆಂತರಿಕ ಕಾರ್ಯವಿಧಾನಗಳನ್ನು ಹೊಂದಿದೆ ಎಂದು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಒತ್ತಿಹೇಳಿದೆ.