ಮಂಗಳೂರು: ಪ್ರತ್ಯೇಕ ರಾಷ್ಟ್ರ ಹೇಳಿಕೆ (Separate Country) ನೀಡಿದ್ದ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಬಿಜೆಪಿ ಮುಖಂಡ ದೂರು ನೀಡಿದ್ದಾರೆ.
ಸಂಸದರಾದರೂ ಭಾರತ ವಿಭಜನೆಗೆ ಕುಮ್ಮಕ್ಕು ನೀಡುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಡಿ.ಕೆ. ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ. ಅದೇ ರೀತಿ ಮಂಗಳೂರು ಉತ್ತರ ಪೊಲೀಸ್ ಠಾಣೆ, ಮಂಗಳೂರು ಕಮಿಷನರ್‌ಗೆ ದೂರು ಸಲ್ಲಿಸಲಾಗಿದೆ.
ಫೆಬ್ರವರಿ 7ರಂದು ದೂರಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಬಿಜೆಪಿ ಮುಖಂಡ ವಿಕಾಶ್. ಪಿ ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಡಿ.ಕೆ ಸುರೇಶ್‌ರವರು, “ನಾವು ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕಾಗುತ್ತದೆ” ಎಂಬ ರೀತಿಯಲ್ಲಿ ಪ್ರತ್ಯೇಕವಾದಿ ಮಾನಸಿಕತೆಯನ್ನು ಬಿತ್ತುವ ಪ್ರಚೋದನಕಾರಿ ದೇಶ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ರೀತಿಯ ಹೇಳಿಕೆಯು ದೇಶದ್ರೋಹಿ, ಭಯೋತ್ಪಾದಕರಿಗೆ ಮತ್ತು ಭಾರತವನ್ನು ತುಂಡರಿಸಬೇಕುಂದು ಷಡ್ಯಂತ್ರ ರೂಪಿಸುವ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುವ ರೀತಿಯಲ್ಲಿದೆ.
ಇದನ್ನೂ ಓದಿ | HD Kumaraswamy: ಎಚ್‌ಡಿಕೆ ಕೇಸರಿ ಶಾಲು ಧರಿಸಿದ್ದು ತಪ್ಪು ಎಂದ ದೇವೇಗೌಡ; ಗೌಡರ ಸ್ಥಿತಿ ನೋಡಿದರೆ ಭಯವಾಗುತ್ತೆ ಎಂದ ಡಿಕೆಶಿ
ಸಂಸದ ಡಿ.ಕೆ ಸುರೇಶ್ ರವರ ಹೇಳಿಕೆಯು ದೇಶದ್ರೋಹಿ ಕಾಯ್ದೆಯನ್ನು ಅನ್ವಯಿಸುವ ರೀತಿಯಲ್ಲಿ ನೀಡಿರುತ್ತಾರೆ. ಈ ಹೇಳಿಕೆಯಿಂದ ದೇಶದ ಅಸಂಖ್ಯಾತ ದೇಶ ಭಕ್ತರಿಗೆ ಫಾಸಿ ಉಂಟಾಗಿದೆ. ಈ ರೀತಿಯ ಹೇಳಿಕೆಯು ಭಾರತೀಯ ದಂಡ ಸಂಹಿತೆಯ ಕಲಂ 124ಎ ರನ್ವಯ ಅಪರಾಧವಾಗಿದೆ. ಅದೂ ಅಲ್ಲದೆ ದೇಶದ್ರೋಹ ಕಾಯ್ದೆಯ ಕಲಂಗಳ ಅನ್ವಯ ಹೇಳಿಕೆ ನೀಡಿದ್ದಾರೆ. ಆದ್ದರಿಂದ ನ್ಯಾಯಾಲಯವು ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 156(3)ರನ್ವಯ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಠಾಣಾಧಿಕಾರಿಯವರಿಗೆ ಆದೇಶಿಸಬೇಕಾಗಿ ನ್ಯಾಯಾಲಯವನ್ನು ದೂರುದಾರರು ಕೋರಿದ್ದಾರೆ.