ಬೆಂಗಳೂರು ; ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿನ (Share Market ) ಸದೃಢ ಪ್ರವೃತ್ತಿಯ ನಡುವೆ ಬ್ಲೂ-ಚಿಪ್ ಬ್ಯಾಂಕ್ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಮಂಗಳವಾರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ ಐತಿಹಾಸಿಕ 78,000 ಮಟ್ಟವನ್ನು ದಾಟಿದರೆ, ನಿಫ್ಟಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.
Sensex hits all time high. Crosses 78k.
— Ravi Handa (@ravihanda) June 25, 2024
Are there signs of irrational exuberance? Nowhere close to the scary 2007 levels.
What should you do?
If you are the SIP kind, please continue them. If you are the lumpsum kind, guess should wait a bit. pic.twitter.com/ERpVTiiUwO
30 ಕಂಪನಿಗಳ ಷೇರುಗಳ ಬಿಎಸ್ಇ ಸೆನ್ಸೆಕ್ಸ್ 712.44 ಪಾಯಿಂಟ್ಸ್ ಅಥವಾ ಶೇಕಡಾ 0.92 ರಷ್ಟು ಏರಿಕೆ ಕಂಡು, 78,053.52ರಲ್ಲಿತ್ತು . ದಿನದ ವಹಿವಾಟಿನ ಬೆಂಚ್ ಮಾರ್ಕ್ 823.63 ಪಾಯಿಂಟ್ ಅಥವಾ ಶೇಕಡಾ 1 ರಷ್ಟು ಏರಿಕೆಯಾಗಿ 78,164.71 ಅಂಕಗಳಿಗೆ ತಲುಪಿದೆ. ನಿಫ್ಟಿ 183.45 ಪಾಯಿಂಟ್ ಅಥವಾ ಶೇಕಡಾ 0.78 ರಷ್ಟು ಏರಿಕೆ ಕಂಡು 23,721.30 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 216.3 ಪಾಯಿಂಟ್ ಅಥವಾ ಶೇಕಡಾ 0.91 ರಷ್ಟು ಏರಿಕೆಯಾಗಿ ಹೊಸ ಸಾರ್ವಕಾಲಿಕ ಗರಿಷ್ಠ 23,754.15 ಅಂಕಗಳಿಗೆ ತಲುಪಿದೆ.
ಇದನ್ನೂ ಓದಿ: Karnataka Weather: ನಾಳೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧೆಡೆ ಭಾರಿ ಮಳೆ; ಕರಾವಳಿಯಲ್ಲಿ ಮೀನುಗಾರರಿಗೆ ಎಚ್ಚರಿಕೆ!
ಸೆನ್ಸೆಕ್ಸ್ ನ 30 ಕಂಪನಿಗಳಲ್ಲಿ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಲಾರ್ಸನ್ ಆ್ಯಂಡ್ ಟರ್ಬೋ, ಬಜಾಜ್ ಫಿನ್ ಸರ್ವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ನೆಸ್ಲೆ, ಮಾರುತಿ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ನಷ್ಟ ಅನುಭವಿಸಿದವು.
ಏಷ್ಯಾದ ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ನಲ್ಲಿಯೂ ಏರಿಕೆ ಕಂಡು ಬಂದಿದ್ದರೆ ಶಾಂಘೈ ಮಾರಕಟ್ಟೆಯಲ್ಲಿ ಕಡಿಮೆ ವಹಿವಾಟು ನಡೆಯಿತು. ಇವೆಲ್ಲದರ ನಡುವೆ ಯುರೋಪಿಯನ್ ಮಾರುಕಟ್ಟೆಗಳು ನಕಾರಾತ್ಮಕ ವಹಿವಾಟು ನಡೆಸಿವೆ. ಇನ್ನು ಯುಎಸ್ ಮಾರುಕಟ್ಟೆಗಳು ಮಿಶ್ರ ಫಲ ಉಂಡವು.
ಮಾರ್ಚ್ ತ್ರೈಮಾಸಿಕದಲ್ಲಿ ಭಾರತವು 5.7 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇಕಡಾ 0.6 ರಷ್ಟು ಆಮದು ಮತ್ತು ರಪ್ತು ವಹಿವಾಟಿನಲ್ಲಿ (ಚಾಲ್ತಿ ಖಾತೆ) ಮಿಗತೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ತಿಳಿಸಿದೆ. ಹತ್ತು ತ್ರೈಮಾಸಿಕಗಳಲ್ಲಿ ಇದೇ ಮೊದಲ ಬಾರಿಗೆ ಈ ಸರ್ಪ್ಲಸ್ ಮೋಡ್ಗೆ ಬದಲಾಗಿದೆ ಎಂದು ಆರ್ಬಿಐ ಹೇಳಿದೆ.
“ಮಾರುಕಟ್ಟೆ ದೃಷ್ಟಿಕೋನದಿಂದ ಸಕಾರಾತ್ಮಕ ಸುದ್ದಿಯೆಂದರೆ ಚಾಲ್ತಿ ಖಾತೆಯು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಸರ್ಪ್ಲಸ್ ಆಗಿದೆ. ಇದು ರೂಪಾಯಿ ಮೇಲಿನ ಒತ್ತಡ ಕಡಿಮೆ ಮಾಡಲಿದೆ. ಮತ್ತು ಫೆಡ್ ದರ ಕಡಿತದ ಬಗ್ಗೆ ಸ್ಪಷ್ಟತೆ ಇದ್ದಾಗ ಎಫ್ಐಐ (ವಿದೇಶಿ ಸಾಂಸ್ಥಿಕ ಹೂಡಿಕೆದಾರರು ) ಆಸಕ್ತಿಗೆ ದಾರಿ ಮಾಡಿಕೊಡುತ್ತದೆ “ಎಂದು ಮುಖ್ಯ ಹೂಡಿಕೆ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಂಚ್ಮಾರ್ಕ್ ದರವು 0.44 ರಷ್ಟು ಇಳಿದು ಬ್ಯಾರೆಲ್ಗೆ 85.63 ಡಾಲರ್ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ 653.97 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ದಾಖಲೆಗಳು ತಿಳಿಸಿವೆ.
ಬಿಎಸ್ಇ ಬೆಂಚ್ ಮಾರ್ಕ್ ಸೋಮವಾರ 131.18 ಪಾಯಿಂಟ್ ಅಥವಾ ಶೇಕಡಾ 0.17 ರಷ್ಟು ಏರಿಕೆ ಕಂಡು 77,341.08 ಕ್ಕೆ ತಲುಪಿತ್ತು. ನಿಫ್ಟಿ 36.75 ಪಾಯಿಂಟ್ ಅಥವಾ ಶೇಕಡಾ 0.16 ರಷ್ಟು ಏರಿಕೆ ಕಂಡು 23,537.85 ಕ್ಕೆ ತಲುಪಿತ್ತು.