ಬಾಗಲಕೋಟ: ತ್ರಿವೇಣಿ ಸಂಗಮ ಕೂಡಲಸಂಗಮದಲ್ಲಿ ಇಂದು ಸಿದ್ದೇಶ್ವರ ಸ್ವಾಮೀಜಿಯವರ (Siddeshwar Swamiji) ಚಿತಾಭಸ್ಮ ವಿಸರ್ಜನೆಗೆ ಸಿದ್ದತೆ ನಡೆದಿದೆ.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಚಿತಾಭಸ್ಮ ವಿಸರ್ಜನೆಗೆ ಬೋಟ್ ವ್ಯವಸ್ಥೆ ಮಾಡಲಾಗಿದೆ. ಕೂಡಲಸಂಗಮವು ಕೃಷ್ಣ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಂಗಮ ಕ್ಷೇತ್ರವಾಗಿದೆ. ಬಸವಣ್ಣನವರ ಐಕ್ಯ ಕ್ಷೇತ್ರವಾಗಿಯೂ ಪ್ರಸಿದ್ಧಿ ಗಳಿಸಿದೆ. ಐಕ್ಯಮಂಟಪದ ಹತ್ತಿರ ಚಿತಾಭಸ್ಮ ವಿಸರ್ಜನೆಗೆ ಸಿದ್ದತೆ ನಡೆದಿದೆ.
ನದಿ ದಡದಲ್ಲಿ ಸಿದ್ದೇಶ್ವರ ಭಾವಚಿತ್ರವನ್ನು ಅಲಂಕರಿಸಲಾಗಿದೆ. ಸ್ವಾಮೀಜಿಯವರ ಆಶಯದಂತೆ ನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗುತ್ತಿದೆ. ನೂರಕ್ಕೂ ಅಧಿಕ ಮಠಾಧೀಶರು, ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ವಿಜಯಪುರ ಜ್ಞಾನಯೋಗಾಶ್ರಮದಿಂದ ಚಿತಾಭಸ್ಮವನ್ನು ತರಲಾಗುವುದು.
ಜ. 2 ರಂದು ಸಂಜೆ ಸಿದ್ದೇಶ್ವರ ಸ್ವಾಮೀಜಿಯವರು ಇಹಲೋಕದ ಪಯಣವನ್ನು ಮುಕ್ತಾಯಗೊಳಿಸಿದ್ದರು. ಭಾನುವಾರ ಬೆಳಗ್ಗೆ ಕೂಡಲಸಂಗಮ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆಯ ಬಳಿಕ, ಗೋಕರ್ಣದಲ್ಲೂ ಚಿತಾಭಸ್ಮ ವಿಸರ್ಜನೆ ನಡೆಯಲಿದೆ.