1. ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!ಬೆಂಗಳೂರು: ಸೋಮವಾರ (ಡಿ. 4) ಹುಬ್ಬಳ್ಳಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ (Muslim community) ರಕ್ಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿರುವ ಮಾತಿಗೆ ಈಗ ವಿವಾದ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ನಾಯಕರು (BJP leaders) ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷವನ್ನು ಕಟುವಾದ ಮಾತುಗಳಿಂದ ಟೀಕೆ ಮಾಡಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : HD Kumaraswamy: ಕೆಲವು ವರ್ಗಗಳ ಓಲೈಕೆ ಸಿಎಂ ಅಜೆಂಡಾ: ಎಚ್.ಡಿ. ಕುಮಾರಸ್ವಾಮಿ ಕಿಡಿ
2.ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ
ಹಾಸನ: ಎಂಟು ಬಾರಿ ಮೈಸೂರು ದಸರಾ ಅಂಬಾರಿ (Mysore Dasara Ambari) ಹೊತ್ತು ತನ್ನ ಅದ್ಧೂರಿ ಗಜ ನಡಿಗೆಯಿಂದ ಜನರನ್ನು ರಂಜಿಸಿದ್ದ ಅರ್ಜುನ ಎಂಬ ಆನೆಯ (Elephant Arjuna) ಸಾವಿಗೆ ಅಧಿಕಾರಿಗಳು ಮಾಡಿದ ಎಡವಟ್ಟೇ ಕಾರಣವಾಯಿತೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ (Elephant Operation) ವೇಳೆ ಅರ್ಜುನ ಪ್ರಾಣ ಕಳೆದುಕೊಂಡಿದ್ದಾನೆ. ಅಧಿಕಾರಿಗಳ ಪ್ರಕಾರ ಪುಂಡಾನೆ ದಾಳಿಗೆ ಸಿಲುಕಿ ಅರ್ಜುನ ಮೃತಪಟ್ಟಿದ್ದಾನೆ. ಆದರೆ, ಅರ್ಜುನನಂಥ ಬಲಶಾಲಿಯನ್ನು ಪುಂಡಾನೆ ಕೆಡವಲು ಕಾರಣವಾಗಿದ್ದು ಅಧಿಕಾರಿಗಳ ಎಡವಟ್ಟು ಎನ್ನುವುದು ಜನರು ಮತ್ತು ಆನೆಗಳ ಮಾವುತರ ಆರೋಪ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Elephant Arjuna : ಅರ್ಜುನನ ಬದುಕೇ ಒಂದು ಹೋರಾಟ; ದುರಂತ ನಾಯಕನಿಗೆ ಕಣ್ಣೀರ ವಿದಾಯ
ಇದನ್ನೂ ಓದಿ : Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!
3. 13 ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್; ಕೋಟಿ ಕೋಟಿ ಹಣ ಲಾಕ್!
ಬೆಂಗಳೂರು: ಯಾವುದೇ ಭಯ, ನಾಚಿಕೆ ಇಲ್ಲದೆ ಕಂಡವರ ಮುಂದೆ ಹಣಕ್ಕೆ ಕೈ ಚಾಚುವ, ಬೆದರಿಕೆ ಹಣ ಕೀಳುವ ದುಷ್ಟ ದಂಧೆಯನ್ನು ನಡೆಸಿಕೊಂಡು ಬರುತ್ತಿದ್ದ ರಾಜ್ಯದ 13 ಮಂದಿ ಕಡುಭ್ರಷ್ಟ ಅಧಿಕಾರಿಗಳ (Corrupt officers) ಮೇಲೆ ಮಂಗಳವಾರ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ಬೆಳಗ್ಗೆ ಈ ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಚೇರಿ ಮನೆಗಳಿಗೆ ದಾಳಿ ಮಾಡಿ ಕೋಟ್ಯಂತರ ರೂ. ನಗದು, ಅದಕ್ಕಿಂತಲೂ ದೊಡ್ಡ ಮೊತ್ತದ ಚಿನ್ನಾಭರಣ, ಅದನ್ನೂ ಮೀರಿದ ಆಸ್ತಿಪಾಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ಬಿಜೆಪಿ ಭರ್ಜರಿ ಗೆಲುವಿನ ಬಳಿಕ ʼಇಂಡಿಯಾ’ ಕೂಟದಲ್ಲಿ ಕೋಲಾಹಲ! ಮೀಟಿಂಗ್ ಕ್ಯಾನ್ಸಲ್
ಹೊಸದಿಲ್ಲಿ: ರಾಜಧಾನಿಯಲ್ಲಿ ನಾಳೆ ನಡೆಯಬೇಕಿದ್ದ ʼಇಂಡಿಯಾ ಬ್ಲಾಕ್ʼ ಒಕ್ಕೂಟದ (INDIA Alliance) ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂರು ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ (Congress) ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕರೆದಿದ್ದ ಸಭೆಯು ಬಹುತೇಕ ರದ್ದಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Revanth Reddy: ರೇವಂತ್ ರೆಡ್ಡಿ ತೆಲಂಗಾಣ ನೂತನ ಮುಖ್ಯಮಂತ್ರಿ; ಕಾಂಗ್ರೆಸ್ ಘೋಷಣೆ
5. ಮುಂದಿನ 24 ಗಂಟೆಯಲ್ಲಿ 18 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಬೆಂಗಳೂರು: ಮಿಚುಂಗ್ ಸೈಕ್ಲೋನ್ ಎಫೆಕ್ಟ್‌ನಿಂದಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ (karnataka Weather Forecast) ಇರಲಿದೆ. ಮುಂದಿನ 24 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮಲೆನಾಡು ಹಾಗೂ ಕರಾವಳಿಯಲ್ಲಿ ಒಣ ಹವೆ ಮುಂದುವರಿಯಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Cyclone Michaung: ಮಿಚಾಂಗ್ ಚಂಡಮಾರುತದಿಂದ 8 ಸಾವು; ಶಾಲೆ, ಬ್ಯಾಂಕ್ ಕ್ಲೋಸ್
6. ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು; ಗಂಭೀರವಾಗಿ ಪರಿಗಣಿಸಿದ ಸರ್ಕಾರ
ಬೆಳಗಾವಿ: ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ (Leaf spot Disease) ವಿಷಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಪ್ರಸ್ತಾಪವಾಗಿದೆ. ಎಲೆ ಚುಕ್ಕಿ ರೋಗದ ತೀವ್ರತೆ ಬಗ್ಗೆ ಪರಿಷತ್‌ನಲ್ಲಿ ಪರಿಷತ್ ಸದಸ್ಯ ರುದ್ರೇಗೌಡ (Council member Rudregowda) ಅವರು ಪ್ರಸ್ತಾಪಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಉತ್ತರಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: Illegal Arecanut: ರಾಜ್ಯದಲ್ಲಿ ಅಕ್ರಮ ಅಡಿಕೆ ದಂಧೆ? ಬೆಂಗಳೂರಲ್ಲಿ ಅಂತಾರಾಜ್ಯ ಜಾಲ ಪತ್ತೆ
7. Lakhbir Singh: ಸಿಖ್ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು
ನವದೆಹಲಿ: ನಿಷೇಧಿತ ಸಂಘಟನೆಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮತ್ತು ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. 72 ವರ್ಷದ ಲಖ್ಬೀರ್ ಸಿಂಗ್ ರೋಡ್(Lakhbir Singh) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ‘ವೈಯಕ್ತಿಕ ಭಯೋತ್ಪಾದಕ’ ಎಂದು ಪಟ್ಟಿಮಾಡಲಾಗಿತ್ತು. ಭಾರತದಿಂದ ಪಲಾಯನ ಮಾಡಿದ ನಂತರ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Sajid Mir: ಮುಂಬೈ ದಾಳಿಯ ಉಗ್ರನಿಗೆ ಪಾಕ್ ಜೈಲಿನಲ್ಲೇ ವಿಷ ಪ್ರಾಶನ!
8. ಹಿಂದೂ ದೇವಾಲಯವನ್ನು ಪ್ರಾಣಿಗಳ ದೊಡ್ಡಿ ಮಾಡಿದ ಪಾಪಿ ಪಾಕಿಗಳು
ಇಸ್ಲಾಮಾಬಾದ್: ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಪ್ರೀತಿ, ಕರುಣೆ, ಗೌರವದ ದೊಡ್ಡ ದೊಡ್ಡ ಮಾತುಗಳನ್ನಾಡುವ ಪಾಕಿಸ್ತಾನ, ಅಸಲಿಗೆ ಅಸಹಿಷ್ಣು ದೇಶ ಎಂಬುದು ಎಲ್ಲರಿಗೂ ಗೊತ್ತು. ಪಾಕ್‌ನ ಈ ಧಾರ್ಮಿಕ ಅಸಹಿಷ್ಣುತೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಇಲ್ಲಿನ ಸಾದಿಕಾಬಾದ್ನ ಅಹ್ಮದ್ಪುರ ಲುಮ್ಮಾ ಪಟ್ಟಣದ ಹಿಂದೂ ದೇವಾಲಯವೊಂದನ್ನು(hindu temples in Pakistan) ಇಲ್ಲಿನ ಜನರು ಪ್ರಾಣಿಗಳ ಫಾರ್ಮ್ ಆಗಿ ಬಳಸಿಕೊಂಡಿದ್ದಾರೆ. ಜತೆಗೆ ದೇವಾಲಯವನ್ನು ನಾಶಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ದೇವಾಲಯದ ಒಳಭಾಗದಲ್ಲಿ ಪ್ರಾಣಿಗಳನ್ನು ಕಟ್ಟಿಹಾಕಿದ ವಿಡಿಯೊ ವೈರಲ್(Viral Video) ಆಗಿದ್ದು ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಡಂಕಿʼ ಟ್ರೈಲರ್ ಹೇಗಿದೆ ನೋಡಿ! ಈ ವರ್ಷ ಹ್ಯಾಟ್ರಿಕ್ ಗೆಲುವು ಸಾಧಿಸ್ತಾರಾ ಕಿಂಗ್ ಖಾನ್?
ಮುಂಬೈ: ಸತತ ಸೋಲುಗಳ ಸರಪಳಿ ಕಳಚಿಕೊಂಡಿರುವ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ (Shah Rukh Khan) ನಿರಂತರ ಗೆಲುವಿನ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ʼಪಠಾಣ್ʼ ಮತ್ತು ಇತ್ತೀಚೆಗೆ ಬಿಡುಗಡೆಯಾದ ʼಜವಾನ್ʼ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಇದೀಗ ವರ್ಷಾಂತ್ಯದಲ್ಲಿ ಶಾರುಖ್ ಖಾನ್ ಅಭಿನಯದ ʼಡಂಕಿʼ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದಲೇ ಮೋಡಿ ಮಾಡಿದ್ದ ಈ ಸಿನಿಮಾದ ಟ್ರೈಲರ್ (Dunki Trailer) ಬಿಡುಗಡೆಯಾಗಿದ್ದು, ಅಭಿಮಾನಿಗಳು ಎರಡೂ ಕೈಗಳನ್ನೂ ಚಾಚಿ ಸ್ವಾಗತಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. Viral News: ಹಸಿವಿನಿಂದ ಭಿಕ್ಷುಕ ಸಾವು; ಆತನ ಬಳಿ ಇತ್ತು 1 ಲಕ್ಷ ರೂ!
ಅಹಮದಾಬಾದ್: ಓರ್ವ ಭಿಕ್ಷುಕ ಹಸಿವಿನಿಂದ ಸಾವನ್ನಪ್ಪಿದ ಬಳಿಕ ಆತನೊಬ್ಬ ಲಕ್ಷಾದೀಶ ಎಂದು ತಿಳಿದು ಜನರು ಅಚ್ಚರಿಗೊಂಡಿದ್ದಾರೆ. ಹೌದು, ಈ ಘಟನೆ ನಡೆದದ್ದು ಗುಜರಾತ್ನಲ್ಲಿ. 50ರ ಹರೆಯದ ಭಿಕ್ಷುಕನೋರ್ವ ಇಲ್ಲಿನ ವಲ್ಸಾದ್ ಸಿವಿಲ್ ಆಸ್ಪತ್ರೆಯಲ್ಲಿ ಭಾನುವಾರ ಸಾವನ್ನಪ್ಪಿದ್ದ. ಹಸಿವಿನಿಂದಲೇ ಆತ ಸಾವನ್ನಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಆದರೆ ಆತನ ಬಳಿ 1.14 ಲಕ್ಷ ರೂ. ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.