Site icon Vistara News

Pakistan Cricket Team : ಪಾಕಿಸ್ತಾನ ಕ್ರಿಕೆಟ್​ ಆಟಗಾರರಿಗೆ ರೈಫಲ್​ ತರಬೇತಿ; ಇದೆಲ್ಲ ಬೇಕಿತ್ತಾ ಎಂದ ಅಭಿಮಾನಿಗಳು

pakistan Cricket team

ಬೆಂಗಳೂರು : ಮುಂಬರುವ ಸೀಮಿತ ಓವರ್​ಗಳ ಕ್ರಿಕೆಟ್​ ಸರಣಿಯ ಪ್ರವಾಸ ಮತ್ತು ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ತಯಾರಿ ನಡೆಸುತ್ತಿರುವ ಪಾಕಿಸ್ತಾನದ ಅಂತಾರಾಷ್ಟ್ರೀಯ ಕ್ರಿಕೆಟಿಗರು (Pakistan Cricket Team) ಸೈನ್ಯದೊಂದಿಗೆ (Pakistan Army) ಎರಡು ವಾರಗಳ ಫಿಟ್ನೆಸ್ ತರಬೇತಿಗೆ (Fitness Training) ಒಳಗಾಗುತ್ತಿದ್ದಾರೆ. ಏತನ್ಮಧ್ಯೆ ಅವರೆಲ್ಲರಿಗೂ ಗನ್ ತರಬೇತಿ (Gun Training) ನೀಡಲಾಗುತ್ತಿದೆ. ಕ್ರಿಕೆಟಿಗರಿಗೆ ಗನ್ ತರಬೇತಿ ಯಾಕೆ ಎಂಬುದಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ. ಅನಗತ್ಯ ತರಬೇತಿ ನೀಡಿ ಸೈನ್ಯದ್ದು ಹಾಗೂ ಆಟಗಾರರ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಇಂಥ ತರಬೇತಿಯಲ್ಲಿ ಆಟಗಾರರು ಗಾಯಗೊಳ್ಳುವುದು ನಿಶ್ಚಿತ ಎನ್ನಲಾಗಿದೆ.

ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ರಾಷ್ಟ್ರೀಯ ಕ್ರಿಕೆಟಿಗರು ಗಾಯಗೊಳ್ಳಬಾರದು ಎಂಬ ಉದ್ದೇಶದಿಂದ ಪಿಸಿಬಿ, ಪಾಕಿಸ್ತಾನ ಸೇನೆಯ ಮೂಲಕ ಅವರಿಗೆ ತರಬೇತಿ ನೀಡುತ್ತಿದೆ. ಆದರೆ, ಈ ಟ್ರೈನಿಂಗ್​ನಿಂದ ಗಾಯಗೊಳ್ಳು ಇದು ಅನಗತ್ಯ ಎಂಬುದೇ ಒಂದು ವರ್ಗದವರ ವಾದವಾಗಿದೆ. ಪಾಕಿಸ್ತಾನ ಸೇನೆಯು ಆಯೋಜಿಸುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸಂಬಂಧವಿಲ್ಲದ ಫಿಟ್ನೆಸ್​ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆಟಗಾರರು ಸೈನಿಕರಿಗಿಂತ ಭಿನ್ನ. ಆದರೆ ಪಾಕಿಸ್ತಾನ ಕ್ರಿಕೆಟ್​​ ಆಡಳಿತ ಮಂಡಳಿ ಈ ಮೂಲಭೂತ ಜ್ಞಾನವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಆಟಗಾರರನ್ನು ಅಸಾಧಾರಣ ಸವಾಲುಗಳನ್ನು ಎದುರಿಸುವಂತೆ ಮಾಡಿದ್ದಕ್ಕಾಗಿ ಟ್ರೋಲ್ ಗೆ ಒಳಗಾಗಿದ್ದಾರೆ.

ಪಾಕಿಸ್ತಾನ ಕ್ರಿಕೆಟಿಗರು ಸ್ನೈಪರ್ ಶೂಟಿಂಗ್, ಭಾರವಾದ ಕಲ್ಲುಗಳನ್ನು ಎತ್ತುವುದು ಮತ್ತು ಸೈನಿಕರನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಲಿಯುತ್ತಿದ್ದಾರೆ. ಪಿಸಿಬಿ ಆಟಗಾರರ ಸಮಯವನ್ನು ವ್ಯರ್ಥ ಮಾಡುತ್ತಿದೆ ಮತ್ತು ಅವರ ಶ್ರವನ್ನು ವ್ಯರ್ಥ ಮಾಡುತ್ತಿದೆ. ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಸೈನಿಕರಿಗೆ ಕೊಡುವ ತರಬೇತಿಯನ್ನು ಆಟಗಾರರಿಗೆ ಕೊಟ್ಟರೆ ಅವರು ಗಾಯಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೀಗಾಗಿ ಅವರಿಗೆ ಬೇರೆ ರೀತಿಯ ತರಬೇತಿ ನೀಡಬೇಕು ಎಂಬುದಾಗಿ ಕ್ರಿಕೆಟ್​ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: IPL 2024: ಪಂದ್ಯ ಗೆದ್ದ ಸಂತಸದಲ್ಲಿ ಕುಣಿದು ಕುಪ್ಪಳಿಸಿದ ಹೈದರಾಬಾದ್​ ತಂಡದ ಮಾಲಕಿ; ವಿಡಿಯೊ ವೈರಲ್​

ಪಾಕಿಸ್ತಾನದ ಆಟಗಾರರು ಪಿಎಸ್ಎಲ್ 2024 ರ ಭಾಗವಾಗಿದ್ದರು. ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಐ ಸರಣಿಯಲ್ಲಿ ಪಾಲ್ಗೊಳ್ಳುವ ಮೊದಲು ಶಿಬಿರದಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಶಾಹೀನ್ ಅಫ್ರಿದಿ ಅವರನ್ನು ಟಿ 20ಐ ನಾಯಕ ಸ್ಥಾನದಿಂದ ತೆಗೆದುಹಾಕಿದ ಪಿಸಿಬಿ, ಬಾಬರ್ ಅಜಮ್ ಅವರನ್ನು ವೈಟ್ ಬಾಲ್ ನಾಯಕನಾಗಿ ಮತ್ತೆ ನೇಮಿಸಿದೆ.

Exit mobile version