Pakistan Cricket Team : ಪಾಕಿಸ್ತಾನ ಕ್ರಿಕೆಟ್​ ಆಟಗಾರರಿಗೆ ರೈಫಲ್​ ತರಬೇತಿ; ಇದೆಲ್ಲ ಬೇಕಿತ್ತಾ ಎಂದ ಅಭಿಮಾನಿಗಳು - Vistara News

ಪ್ರಮುಖ ಸುದ್ದಿ

Pakistan Cricket Team : ಪಾಕಿಸ್ತಾನ ಕ್ರಿಕೆಟ್​ ಆಟಗಾರರಿಗೆ ರೈಫಲ್​ ತರಬೇತಿ; ಇದೆಲ್ಲ ಬೇಕಿತ್ತಾ ಎಂದ ಅಭಿಮಾನಿಗಳು

Pakistan Cricket Team: ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ರಾಷ್ಟ್ರೀಯ ಕ್ರಿಕೆಟಿಗರು ಗಾಯಗೊಳ್ಳಬಾರದು ಎಂಬ ಉದ್ದೇಶದಿಂದ ಪಿಸಿಬಿ, ಪಾಕಿಸ್ತಾನ ಸೇನೆಯ ಮೂಲಕ ಅವರಿಗೆ ತರಬೇತಿ ನೀಡುತ್ತಿದೆ. ಇದು ಅನಗತ್ಯ ಎಂಬುದೇ ಒಂದು ವರ್ಗದವರ ವಾದವಾಗಿದೆ. ಪಾಕಿಸ್ತಾನ ಸೇನೆಯು ಆಯೋಜಿಸುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸಂಬಂಧವಿಲ್ಲದ ಫಿಟ್ನೆಸ್​ ಚಟುವಟಿಕೆಗಳಲ್ಲಿ ತೊಡಗಿದ್ದಾರೆ

VISTARANEWS.COM


on

pakistan Cricket team
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಮುಂಬರುವ ಸೀಮಿತ ಓವರ್​ಗಳ ಕ್ರಿಕೆಟ್​ ಸರಣಿಯ ಪ್ರವಾಸ ಮತ್ತು ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ತಯಾರಿ ನಡೆಸುತ್ತಿರುವ ಪಾಕಿಸ್ತಾನದ ಅಂತಾರಾಷ್ಟ್ರೀಯ ಕ್ರಿಕೆಟಿಗರು (Pakistan Cricket Team) ಸೈನ್ಯದೊಂದಿಗೆ (Pakistan Army) ಎರಡು ವಾರಗಳ ಫಿಟ್ನೆಸ್ ತರಬೇತಿಗೆ (Fitness Training) ಒಳಗಾಗುತ್ತಿದ್ದಾರೆ. ಏತನ್ಮಧ್ಯೆ ಅವರೆಲ್ಲರಿಗೂ ಗನ್ ತರಬೇತಿ (Gun Training) ನೀಡಲಾಗುತ್ತಿದೆ. ಕ್ರಿಕೆಟಿಗರಿಗೆ ಗನ್ ತರಬೇತಿ ಯಾಕೆ ಎಂಬುದಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ. ಅನಗತ್ಯ ತರಬೇತಿ ನೀಡಿ ಸೈನ್ಯದ್ದು ಹಾಗೂ ಆಟಗಾರರ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಇಂಥ ತರಬೇತಿಯಲ್ಲಿ ಆಟಗಾರರು ಗಾಯಗೊಳ್ಳುವುದು ನಿಶ್ಚಿತ ಎನ್ನಲಾಗಿದೆ.

ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ರಾಷ್ಟ್ರೀಯ ಕ್ರಿಕೆಟಿಗರು ಗಾಯಗೊಳ್ಳಬಾರದು ಎಂಬ ಉದ್ದೇಶದಿಂದ ಪಿಸಿಬಿ, ಪಾಕಿಸ್ತಾನ ಸೇನೆಯ ಮೂಲಕ ಅವರಿಗೆ ತರಬೇತಿ ನೀಡುತ್ತಿದೆ. ಆದರೆ, ಈ ಟ್ರೈನಿಂಗ್​ನಿಂದ ಗಾಯಗೊಳ್ಳು ಇದು ಅನಗತ್ಯ ಎಂಬುದೇ ಒಂದು ವರ್ಗದವರ ವಾದವಾಗಿದೆ. ಪಾಕಿಸ್ತಾನ ಸೇನೆಯು ಆಯೋಜಿಸುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸಂಬಂಧವಿಲ್ಲದ ಫಿಟ್ನೆಸ್​ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆಟಗಾರರು ಸೈನಿಕರಿಗಿಂತ ಭಿನ್ನ. ಆದರೆ ಪಾಕಿಸ್ತಾನ ಕ್ರಿಕೆಟ್​​ ಆಡಳಿತ ಮಂಡಳಿ ಈ ಮೂಲಭೂತ ಜ್ಞಾನವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಆಟಗಾರರನ್ನು ಅಸಾಧಾರಣ ಸವಾಲುಗಳನ್ನು ಎದುರಿಸುವಂತೆ ಮಾಡಿದ್ದಕ್ಕಾಗಿ ಟ್ರೋಲ್ ಗೆ ಒಳಗಾಗಿದ್ದಾರೆ.

ಪಾಕಿಸ್ತಾನ ಕ್ರಿಕೆಟಿಗರು ಸ್ನೈಪರ್ ಶೂಟಿಂಗ್, ಭಾರವಾದ ಕಲ್ಲುಗಳನ್ನು ಎತ್ತುವುದು ಮತ್ತು ಸೈನಿಕರನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಲಿಯುತ್ತಿದ್ದಾರೆ. ಪಿಸಿಬಿ ಆಟಗಾರರ ಸಮಯವನ್ನು ವ್ಯರ್ಥ ಮಾಡುತ್ತಿದೆ ಮತ್ತು ಅವರ ಶ್ರವನ್ನು ವ್ಯರ್ಥ ಮಾಡುತ್ತಿದೆ. ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಸೈನಿಕರಿಗೆ ಕೊಡುವ ತರಬೇತಿಯನ್ನು ಆಟಗಾರರಿಗೆ ಕೊಟ್ಟರೆ ಅವರು ಗಾಯಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೀಗಾಗಿ ಅವರಿಗೆ ಬೇರೆ ರೀತಿಯ ತರಬೇತಿ ನೀಡಬೇಕು ಎಂಬುದಾಗಿ ಕ್ರಿಕೆಟ್​ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: IPL 2024: ಪಂದ್ಯ ಗೆದ್ದ ಸಂತಸದಲ್ಲಿ ಕುಣಿದು ಕುಪ್ಪಳಿಸಿದ ಹೈದರಾಬಾದ್​ ತಂಡದ ಮಾಲಕಿ; ವಿಡಿಯೊ ವೈರಲ್​

ಪಾಕಿಸ್ತಾನದ ಆಟಗಾರರು ಪಿಎಸ್ಎಲ್ 2024 ರ ಭಾಗವಾಗಿದ್ದರು. ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಐ ಸರಣಿಯಲ್ಲಿ ಪಾಲ್ಗೊಳ್ಳುವ ಮೊದಲು ಶಿಬಿರದಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಶಾಹೀನ್ ಅಫ್ರಿದಿ ಅವರನ್ನು ಟಿ 20ಐ ನಾಯಕ ಸ್ಥಾನದಿಂದ ತೆಗೆದುಹಾಕಿದ ಪಿಸಿಬಿ, ಬಾಬರ್ ಅಜಮ್ ಅವರನ್ನು ವೈಟ್ ಬಾಲ್ ನಾಯಕನಾಗಿ ಮತ್ತೆ ನೇಮಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

IPL 2024: ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 200 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ಹೈದರಾಬಾದ್​​: ಕೊನೇ ಓವರ್​ನ ಕೊನೇ ಎಸೆತದ ತನಕವೂ ಕುತೂಹಲ ಮೂಡಿಸಿದ್ದ ರಾಜಸ್ಥಾನ್​ ರಾಯಲ್ಸ್​ ಹಾಗೂ ಸನ್​ ರೈಸರ್ಸ್​ ಹೈದರಾಬಾದ್​ ನಡುವಿನ ಪಂದ್ಯದಲ್ಲಿ ರೋಚಕ ಒಂದು ರನ್ ಗೆಲುವಿನ ಫಲಿತಾಂಶ ಮೂಡಿ ಬಂತು. ಇದರೊಂದಿಗೆ ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ಸತತ ಎರಡು ಸೋಲುಗಳ ಮೂಲಕ ನಿರಾಸೆ ಎದುರಿಸಿದ್ದ ಹೈದರಾಬಾದ್ ತಂಡ ಗೆಲುವಿನ ಹಾದಿಗೆ ಮರಳಿತು. ಅತ್ತ ರಾಜಸ್ಥಾನ್​ ​ ತಂಡ ಎರಡನೇ ಸೋಲಿಗೆ ಒಳಗಾಯಿತು. ಕೊನೇ ಎಸೆತದಲ್ಲಿ ರಾಯಲ್ಸ್ ತಂಡದ ಗೆಲುವಿಗೆ ಎರಡು ರನ್​ ಬೇಕಾಗಿದ್ದವು. ಆದರೆ, ಭುವನೇಶ್ವರ್ ಕುಮಾರ್​ ರಾಯಲ್ಸ್​ ಬ್ಯಾಟರ್​ ಪೊವೆಲ್​ ರೊವ್ಮನ್​ ಪೊವೆಲ್​ ಅವರನ್ನು ಎಲ್​ಬಿಡಬ್ಲ್ಯು ಮಾಡಿ ತವರು ತಂಡಕ್ಕೆ ಗೆಲುವು ತಂದುಕೊಟ್ಟರು.

ಇಲ್ಲಿನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 200 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್​ನಲ್ಲಿ ರಾಯಲ್ಸ್ ತಂಡಕ್ಕೆ 13 ರನ್​ಗಳು ಬೇಕಾಗಿತ್ತು. ಪೊವೆಲ್​ ನಿಖರವಾಗಿ ರನ್​ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್​ ಲೊ ಪುಲ್​ಟಾಸ್​ ಹಾಕುವ ಮೂಲಕ ಪೊವೆಲ್ ಅವರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡವಿದರು.

ನಿತೀಶ್ ಅರ್ಧ ಶತಕ

ಬ್ಯಾಟಿಂಗ್ ಆರಂಭಿಸಿದ ಎಸ್​ಆರ್​​ಎಚ್​ ತಂಡ ಅಭಿಶೇಕ್​ ಶರ್ಮಾ ಅವರನ್ನು 12 ರನ್​ಗೆ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 25 ಆಗಿತ್ತು. ನಂತರ ಬಂದ ಅನ್ಮೋಲ್ ಪ್ರೀತ್ ಸಿಂಗ್​ 5 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಆ ಬಳಿಕ ಜತೆಯಾದ ನಿತೀಶ್​ ಕುಮಾರ್ ರೆಡ್ಡಿ ಅರಂಭಿಕ ಬ್ಯಾಟರ್​ ಟ್ರಾವಿಸ್​ ಹೆಡ್​ ಜತೆ ಉತ್ತಮವಾಗಿ ಬ್ಯಾಟ್ ಬೀಸಿದರು. ಅವರಿಬ್ಬರೂ ನಾಲ್ಕನೇ ವಿಕೆಟ್​ಗೆ 96 ರನ್ ಜತೆಯಾಟ ನೀಡಿದರು. ಹೆಡ್​ 58 ರನ್ ಬಾರಿಸಿದರೆ ನಿತೀಶ್​ 76 ರನ್ ಬಾರಿಸಿ ಅಜೇಯವಾಗಿ ಉಳಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್​ 19 ಎಸೆತಕ್ಕೆ 42 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸಲು ನೆರವಾದರು.

ಇದನ್ನೂ ಓದಿ: M S Dhoni : ಧೋನಿಯನ್ನು ರನ್​ಔಟ್ ಮಾಡಿದ ಜಿತೇಶ್​ ಶರ್ಮಾ ನಿಂದಿಸಿದ ಅಭಿಮಾನಿಗಳು!

ದೊಡ್ಡ ಗುರಿ ಬೆನ್ನಟ್ಟಲು ಅರಂಭಿಸಿದ ಎಸ್​ಆರ್​​ಎಚ್​ 1 ರನ್​ಗೆ 2 ವಿಕೆಟ್ ಕಳೆದುಕೊಂಡಿತು. ಜೋಸ್ ಬಟ್ಲರ್​ ಹಾಗೂ ನಾಯಕ ಸಂಜು ಸ್ಯಾಮ್ಸನ್​ ಶೂನ್ಯಕ್ಕೆ ಔಟಾಗಿದ್ದರು. ಆದರೆ, ಆರಂಭಿಕ ಬ್ಯಾಟರ್​ ಜೈಸ್ವಾಲ್ 67 ರನ್ ಬಾರಿಸಿ ವಿಕೆಟ್​ ಬೀಳದಂತೆ ನೋಡಿಕೊಂಡರು. ರಿಯಾನ್ ಪರಾಗ್​ 77 ರನ್ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ, ಆ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಭುವನೇಶ್ವರ್ ಕುಮಾರ್​ 3 ವಿಕೆಟ್​ ಪಡೆದು ಮಿಂಚಿದರು.

Continue Reading

ಸಿನಿಮಾ

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Ragini Khanna: ನಟ ಗೋವಿಂದ ಅವರ ಸೋದರ ಸೊಸೆಯಾಗಿರುವ ರಾಗಿಣಿ ಖನ್ನಾ ಅವರು ಗುರುಗಾಂವ್‌, ಡಬಲ್‌ ದಿ ತ್ರಿಬಲ್‌, ಘೂಮಕೇತು, ಪೋಷಂ ಪಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಇತ್ತೀಚೆಗೆ ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ ಎನ್ನಲಾಗಿತ್ತು. ಈಗ ಅವರು ಹಿಂದು ಧರ್ಮಕ್ಕೆ ಮರಳಿದ್ದು, ಕ್ರೈಸ್ತ ಧರ್ಮ ಸ್ವೀಕರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

VISTARANEWS.COM


on

Ragini Khanna
Koo

ಮುಂಬೈ: ಬಾಲಿವುಡ್‌ ನಟ ಗೋವಿಂದ (Actor Govinda) ಅವರ ಸೋದರ ಸೊಸೆ, ನಟಿ ರಾಗಿಣಿ ಖನ್ನಾ (Ragini Khanna) ಅವರು ಕ್ರೈಸ್ತ ಧರ್ಮಕ್ಕೆ (Christianity) ಮತಾಂತರ ಆಗಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. “ನಾನು ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದಕ್ಕೆ ವಿಷಾದವಿದೆ. ಈ ಕುರಿತು ನಾನು ಕ್ಷಮೆಯಾಚಿಸುತ್ತೇನೆ. ನಾನೀಗ ಹಿಂದು ಧರ್ಮಕ್ಕೆ ಮರಳಿದ್ದು, ನಾ ಖಟ್ಟರ್‌ ಹಿಂದು ಸನಾತನವಾದಿಯಾಗಿದ್ದೇನೆ. ನಾನೀಗ ನನ್ನ ಬೇರುಗಳಿಗೆ ಮರಳಿದ್ದೇನೆ ಎಂಬುದಾಗಿ ಅನಿಸುತ್ತಿದೆ” ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಚುಕುದಾರ್‌ಬಹದ್ದೂರ್‌ 2.0 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಗಿಣಿ ಖನ್ನಾ ಅವರು ಕ್ರೈಸ್ತ ಧರ್ಮ ಸ್ವೀಕರಿಸಿದ ಕುರಿತು ಪೋಸ್ಟ್‌ ಮಾಡಲಾಗಿತ್ತು. “ನಾನು ರಾಗಿಣಿ ಖನ್ನಾ. ನಾನೀಗ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಕ್ರೈಸ್ತನು ಈಗ ನನಗೆ ದೇವರಾಗಿದ್ದು, ಆತನ ಬೋಧನೆಗಳೊಂದಿಗೆ ನಾನು ನನ್ನ ಜೀವನದ ಮಾರ್ಗವನ್ನು ಕಂಡುಕೊಳ್ಳುತ್ತೇನೆ” ಎಂಬುದಾಗಿ ಪೋಸ್ಟ್‌ ಮಾಡಲಾಗಿತ್ತು.

“ನಾನು ಮನಸಾರೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಭಕ್ತಿಯ ಹಾದಿಯಲ್ಲಿ ನಾನು ನಂಬಿಕೆಯೊಂದಿಗೆ ಮುನ್ನಡೆಯುತ್ತೇನೆ. ಶಾಂತಿ ಹಾಗೂ ಪ್ರೀತಿಯನ್ನು ಹಂಚುತ್ತ ಮುಂದೆ ಸಾಗುತ್ತೇನೆ. ಪ್ರಾರ್ಥನೆಗಳ ಮೂಲಕ ನನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕಗೆ ಮೂಡುವಂತೆ ಮಾಡುತ್ತೇನೆ” ಎಂದು ಮಾಡಿರುವ ಪೋಸ್ಟ್‌ ವೈರಲ್‌ ಆಗಿತ್ತು. ರಾಗಿಣಿ ಖನ್ನಾ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿ, ಪೋಸ್ಟ್‌ ವೈರಲ್‌ ಆದ ಬಳಿಕ ರಾಗಿಣಿ ಖನ್ನಾ ಅವರು ಕ್ಷಮೆಯಾಚಿಸಿದ್ದಾರೆ. ನಾನೀಗ ಖಟ್ಟರ್‌ ಹಿಂದು ಎಂದು ಅವರು ಹೇಳಿದ್ದಾರೆ. ಈಗ ಜನರು ರಾಗಿಣಿ ಖನ್ನಾ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ನಟ ಗೋವಿಂದ ಅವರ ಸೋದರ ಸೊಸೆಯಾಗಿರುವ ರಾಗಿಣಿ ಖನ್ನಾ ಅವರು ಗುರುಗಾಂವ್‌, ಡಬಲ್‌ ದಿ ತ್ರಿಬಲ್‌, ಘೂಮಕೇತು, ಪೋಷಂ ಪಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Swara Bhasker: ಕಂಗನಾ- ಸ್ವರಾ ಭಾಸ್ಕರ್ ನಡುವಿನ ದೊಡ್ಡ ವ್ಯತ್ಯಾಸವೇನು? ನಟಿಯ ಬಾಯಲ್ಲೇ ಕೇಳಿ!

Continue Reading

ಪ್ರಮುಖ ಸುದ್ದಿ

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

ಬೆಂಗಳೂರಿನಲ್ಲಿ ಹಗಲಡೀ 38 ಡಿಗ್ರಿ ಸೆಲ್ಸಿಯಸ್​ ತಾಪಮಾನವಿತ್ತು. ಸಂಜೆ ವೇಳೆ ಜೋಉ ಗಾಳಿಯೊಂದಿಗೆ ಮಳೆ ಬಂತು. ಮಳೆ ಜೋರಾಗಿರಲಿಲ್ಲ ಗಾಳಿಯ ವೇಗ ಮಿತಿ ಮೀರಿತ್ತು. ಹೀಗಾಗಿ ಕೊಂಬೆಗಳು ಉರುಳಿ ಬಿದ್ದವು. ಕೊಡಿಗೆಹಳ್ಳಿಯ ರೈಲ್ವೆ ಪ್ಯಾರಲ್ ರಸ್ತೆಯಲ್ಲಿ ಸಂಜೆ ವೇಳೆ ಮರ ಬಿದ್ದು ಬೈಕ್ ಸವಾರ ಗಾಯಗೊಂಡಿದ್ದಾನೆ. ಅವರು ಮರ ಬಿದ್ದ ರಭಸಕ್ಕೆ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

Rain News
Koo

ಬೆಂಗಳೂರು: ಮಿತಿಮೀರಿದ ತಾಪಮಾನದಿಂದ ಬೇಸತ್ತಿದ ಬೆಂಗಳೂರಿನ ಮಂದಿಗೆ ಗುರುವಾರ ಸಂಜೆ ಸುರಿದ ಸಣ್ಣ ಮಳೆ ಸಮಾಧಾನ (Rain News) ತಂದಿತು. ಆದರೆ, ಮಳೆಗಿಂತ ಅಧಿಕ ಗಾಳಿಯೇ ಬೀಸಿದ ಕಾರಣ ಕೆಲವೆಡೆ ಸಣ್ಣ ಪುಟ್ಟ ಅನಾಹುತಗಳು ಸಂಭವಿಸಿದವು. ವಾಹನಗಳ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಗೊಂಡವು. ಬೈಕ್​ ಸವಾರರೊಬ್ಬರು ಏಟು ಬಿದ್ದು ಆಸ್ಪತ್ರೆ ಸೇರಿದರು. ಅದೇ ರೀತಿ ಮೊದಲ ಮಳೆಗೆ ಆಯಿಲ್​ ಬಿದ್ದಿದ್ದ ರಸ್ತೆಗಳು ಒದ್ದೆಯಾಗಿ 30ಕ್ಕೂ ಹೆಚ್ಚು ಬೈಕ್​ಗಳು ಸ್ಕಿಡ್ ಆಗಿ ಬಿದ್ದವು.

ಬೆಂಗಳೂರಿನಲ್ಲಿ ಹಗಲಿಡೀ 38 ಡಿಗ್ರಿ ಸೆಲ್ಸಿಯಸ್​ ತಾಪಮಾನವಿತ್ತು. ಸಂಜೆ ವೇಳೆ ಜೋಉ ಗಾಳಿಯೊಂದಿಗೆ ಮಳೆ ಬಂತು. ಮಳೆ ಜೋರಾಗಿರಲಿಲ್ಲ ಗಾಳಿಯ ವೇಗ ಮಿತಿ ಮೀರಿತ್ತು. ಹೀಗಾಗಿ ಕೊಂಬೆಗಳು ಉರುಳಿ ಬಿದ್ದವು. ಕೊಡಿಗೆಹಳ್ಳಿಯ ರೈಲ್ವೆ ಪ್ಯಾರಲ್ ರಸ್ತೆಯಲ್ಲಿ ಸಂಜೆ ವೇಳೆ ಮರ ಬಿದ್ದು ಬೈಕ್ ಸವಾರ ಗಾಯಗೊಂಡಿದ್ದಾನೆ. ಅವರು ಮರ ಬಿದ್ದ ರಭಸಕ್ಕೆ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅದೇ ರೀತಿ ಕಾರಿನ ಮೇಲೆ ಮೇಲೆ ಮರ ಬಿದ್ದ ಪರಿಣಾಮ ಕಾರಿಗೆ ಹಾನಿಯಾಗಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಪೆಟ್ಟಾಗಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

ಕೆಲ ರಸ್ತೆಗಳು ಆಯಿಲ್‌ ಮಯ

ಸಂಜೆ ವೇಳೆ ಮಳೆ ಸುರಿದ ಕಾರಣ ಬೇಸಿಗೆಯಲ್ಲಿ ರಸ್ತೆ ಮೇಲೆ ಬಿದ್ದಿದ್ದ ಆಯಿಲ್ ಮೇಲಕ್ಕೆ ಬಂದು ನಿಂತಿತು. ಇದರಿಂದಾಗಿ ದ್ವಿಚಕ್ರ ವಾಹನಗಳು ಆಯತಪ್ಪಿ ಬಿದ್ದವು ಸಣ್ಣ ಮಳೆ ಬಿದ್ದ ಕಡೆಗಳಲ್ಲಿ ರಸ್ತೆಗಳಲ್ಲಿ ಆಯಿಲ್ ಕಾಣಿಸಿಕೊಂಡಿತು. ವಿಚಾರ ತಿಳಿಯದೆ ವೇಗವಾಗಿ ಹೋದ ಸ್ಕೂಟರ್​ಗಳು ಬಿದ್ದವು. ವಿಧಾನಸೌಧದ ಮುಂಭಾಗದ ರಸ್ತೆ , ಹಾಗು ಪೀಣ್ಯ ಎಲಿವೇಟೆಡ್ ಫ್ಲೈ ಓವರ್ , ಸಿಐಡಿ ಮುಂಭಾಗದ ರಸ್ತೆಯಲ್ಲಿ ಅವಾಂತರ ನಡೆಯಿತು.

ರಸ್ತೆ ಮೇಲೆ ಮಣ್ಣು ಹಾಕಿ ದ್ವಿಚಕ್ರ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟರು.

Continue Reading

ದೇಶ

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Lok Sabha Election: ದೇಶದ ವಿಕಾಸ ಹಾಗೂ ಪ್ರಗತಿಯ ಚುನಾವಣೆ ಇದಾಗಿದೆ. ಜೋಶಿ ಅವರು 5ನೆಯ ಬಾರಿ ಸ್ಪರ್ದೆ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಅವರು ಗೆಲ್ಲಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಈಗಲೂ ಸಹ ನಾನು ಕಾರ್ಯಕರ್ತನಾಗಿಯೇ ಇದ್ದೇನೆ. ನೀವೆಲ್ಲ ಭಾಗ್ಯವಂತರು ಯಾಕೆಂದರೆ ಜೋಶಿ ಆದರ್ಶ ಸಂಸದರು. ಅವರು ಮೋದಿಯವರ ಹತ್ತಿರವೇ ಇರುವ ಸಂಸದರಾಗಿದ್ದಾರೆ ಎಂದು ನುಡಿದರು.

VISTARANEWS.COM


on

Lok Sabha Election
Koo

ಧಾರವಾಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್​ ಜೋಶಿ (pralhad joshi) ಪರ ಗುರುವಾರ ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ (Eknath Shinde) ಮುಖ್ಯಸ್ಥ ಏಕನಾಥ ಶಿಂಧೆ ಅವರು ಪ್ರಚಾರ ಭಾಷಣೆ ಮಾಡಿದರು. ನಗರದ ಮೃತ್ಯುಂಜಯ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಮೋದಿ (Narendra Modi) ನೀಡುವ ಗ್ಯಾರಂಟಿ ಪಡೆಯಲು ಪ್ರಲ್ಹಾದ್ ಜೋಶಿಯನ್ನು ಗೆಲ್ಲಿಸಿ ಎಂದು ಕರೆಕೊಟ್ಟರು.

ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಸಿಎಂ ಶಿಂಧೆ ಅವರು, ಧಾರವಾಡದ ಜನತೆಯನ್ನು ಭೇಟಿ ಮಾಡಿದ್ದು ಖುಷಿ ತಂದಿದೆ ಎಂದು ಹೇಳಿದರು. ಛತ್ರಪತಿ ಶಿವಾಜಿ ಅವರಿಗೂ ಧಾರವಾಡಕ್ಕೂ ಸಂಬಂಧ ಇದೆ. ಪುಣೆ ಹಾಗೂ ಧಾರವಾಡ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರ ಎಂಬುದಾಗಿ ನುಡಿದರು.

ದೇಶದ ವಿಕಾಸ ಹಾಗೂ ಪ್ರಗತಿಯ ಚುನಾವಣೆ ಇದಾಗಿದೆ. ಜೋಶಿ ಅವರು 5ನೆಯ ಬಾರಿ ಸ್ಪರ್ದೆ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಅವರು ಗೆಲ್ಲಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಈಗಲೂ ಸಹ ನಾನು ಕಾರ್ಯಕರ್ತನಾಗಿಯೇ ಇದ್ದೇನೆ. ನೀವೆಲ್ಲ ಭಾಗ್ಯವಂತರು ಯಾಕೆಂದರೆ ಜೋಶಿ ಆದರ್ಶ ಸಂಸದರು. ಅವರು ಮೋದಿಯವರ ಹತ್ತಿರವೇ ಇರುವ ಸಂಸದರಾಗಿದ್ದಾರೆ ಎಂದು ನುಡಿದರು.

ಕಾಂಗ್ರೆಸ್ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅವರು ಗೆಲ್ಲುವ ಮೊದಲು ಏನೇನೋ ಕೊಡ್ತೀನಿ ಅಂಥ ಹೇಳಿದ್ದರು. ಆದರೆ ಈಗ ನಮ್ಮಲ್ಲಿ ದುಡ್ಡಿಲ್ಲ ಅಂತಾರೆ. ಆದ್ರೆ ದೇಶದಲ್ಲಿ ಚಾಲ್ತಿ ಇರೋದು ಮೋದಿ ಗ್ಯಾರಂಟಿ ಎಂದು ಅವರು ಹೇಳಿದರು.

ಇದನ್ನೂ ಓದಿ: K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ನಾವು 5ನೆಯ ಪಡೆಯಲು ಮೋದಿ ಕಾರಣ. ದೇಶದಲ್ಲಿ ಮೋದಿ ಅಭಿವೃದ್ಧಿ ಮಾಡಿದ್ದಾರೆ. ಒಂದೇ ಒಂದು ರಜೆ ಸಹ ಪಡೆಯದೆ ಕೆಲಸ ಮಾಡಿದ್ದಾರೆ. ಸ್ವಲ್ಪ ಚಳಿ ಆದರೆ ವಿದೇಶಕ್ಕೆ ತೆರಳುವವರು ಬೇರೆ ಪಾರ್ಟಿಯ ಯುವರಾಜ (ರಾಹುಲ್ ಗಾಂಧಿ) ಎಂದು ಶಿಂಧೆ ಹೇಳಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ದ್ವಜ ಹಾರಿಸಿದ ಕೀರ್ತಿ ಜೋಶಿ ಅವರಿಗೆ ಇದೆ. ಪಾಕಿಸ್ತಾನದವರು ಮೊದಲು ನಮ್ಮ ದೇಶದಲ್ಲಿ ಬಾಂಬ್ ಹಾಕುತ್ತಿದ್ದರು. ಈಗ ಭಾರತ ಮೋದಿ ನೇತೃತ್ವದಲ್ಲಿ ಪಾಕ್ ನ ಒಳಗೆ ಹೊಕ್ಕು ಸದೆಬಡಿಯುತ್ತಿದೆ ಎಂದು ಹೇಳಿದರು.

ದ್ವಾರಕಾ ನಗರದಲ್ಲಿ ಸಮುದ್ರದ ಒಳಗೆ ಹೋಗಿ ಮೋದಿ ದೇಶದ ಒಳಿತಿಗೆ ಪ್ರಾರ್ಥನೆ ಮಾಡಿದ್ದಾರೆ. ಮೋದಿ ದೇಶದ ಕೆಲಸಕ್ಕಾಗಿ ಅವರು ಇದ್ದಾರೆ. ಕೋಟ್ಯಾನುಕೋಟಿ ರಾಮನ ಭಕ್ತರ ಸಂಕಲ್ಪ ಪೂರ್ಣ ಆಗಿದೆ. ಈಗ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮಾಡಿದ ಚಂದ್ರಯಾನ ಫೇಲ್ ಆಗಿವೆ. ಪದೇ ಪದೇ ತಪ್ಪುಗಳನ್ನು ಮಾಡಿದ್ದಾರೆ. ಆದಾಗ್ಯೂ ಇಂಡಿಯಾ ಬಣ ಮೋದಿಯನ್ನು ಸೋಲಿಸುವುದಕ್ಕೆ ನಿಂತಿದೆ, ಅದು ಅದು ಎಂದಿಗೂ ಆಗುವುದಿಲ್ಲ ಎಂದು ನುಡಿದರು.

Continue Reading
Advertisement
IPL 2024
ಪ್ರಮುಖ ಸುದ್ದಿ7 mins ago

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

Ragini Khanna
ಸಿನಿಮಾ29 mins ago

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Rain News
ಪ್ರಮುಖ ಸುದ್ದಿ30 mins ago

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

Election campaign for Congress candidate Samyukta Patil in Prajadhwani convention at Bagalkot
ರಾಜಕೀಯ41 mins ago

Lok Sabha Election 2024: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಪ್ರಚಾರ

Lok Sabha Election
ದೇಶ59 mins ago

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Amit Shah
ದೇಶ1 hour ago

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

K. Annamalai
ಪ್ರಮುಖ ಸುದ್ದಿ1 hour ago

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

Mumbai
ದೇಶ1 hour ago

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

AC Blast
ಪ್ರಮುಖ ಸುದ್ದಿ2 hours ago

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

Tax Returns
ಪ್ರಮುಖ ಸುದ್ದಿ3 hours ago

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ5 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ19 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌