ಬೆಂಗಳೂರು: 2023-24ರ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ (SSLC Result 2024) ಪ್ರಕಟವಾಗಿದ್ದು, ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು (Ankita Basappa) ಶೇ.100 ಅಂಕ ಗಳಿಸಿ (625/625) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಏಳು ಮಂದಿ 625ರಲ್ಲಿ 624 ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. 14 ಮಂದಿ ತೃತೀಯ ಸ್ಥಾನಿಗಳಾಗಿದ್ದಾರೆ.
ಅಂಕಿತಾ ಬಸಪ್ಪ ಮುಧೋಳ ಮೆಲ್ಲಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಅತಿ ಹೆಚ್ಚು ಅಂಕ ಪಡೆದು ದ್ವಿತೀಯ ಹಾಗೂ ತೃತೀಯ ರ್‍ಯಾಂಕ್ ವಿದ್ಯಾರ್ಥಿಗಳ (SSLC toppers) ವಿವರ ಹೀಗಿದೆ:
ಪ್ರಥಮ ರ್‍ಯಾಂಕ್ (625/625)
1) ಅಂಕಿತಾ ಬಸಪ್ಪ- ಮುಧೋಳ ಮೆಲ್ಲಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (625/625)
ದ್ವಿತೀಯ ರ್‍ಯಾಂಕ್ (624/625)
ಮೇಧಾ ಪಿ. ಶೆಟ್ಟಿ (ಹೋಲಿ ಚೈಲ್ಡ್ ಹೈಸ್ಕೂಲ್, ಅಶೋಕನಗರ, ಬೆಂಗಳೂರು)
ಹರ್ಷಿತಾ ಡಿಎಂ (ವಾಸವಿ ಇಂಗ್ಲಿಷ್ ಹೈಸ್ಕೂಲ್, ಶಿರಾ)
ಚಿನ್ಮಯ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹೈಸ್ಕೂಲ್, ಬೆಳ್ತಂಗಡಿ)
ಸಿದ್ದಾಂತ್ (ಶ್ರಮಣರತ್ನ ಶ್ರೀ 108 ಆಚಾರ್ಯ ಸುಬಲ ಸಾಗರ ವಿದ್ಯಾಮಂದಿರ, ಶೇಡ್ಬಾಳ, ಅಥಣಿ)
ದರ್ಶನ್ (ಮಾರಿಕಾಂಬ ಪಿಯು ಕಾಲೇಜು, ಶಿರಸಿ)
ಚಿನ್ಮಯ್ (ಸಿದ್ದಿವಿನಾಯಕ ಹೈಸ್ಕೂಲ್, ಶಿರಸಿ)
ಶ್ರೀರಾಮ್ (ಶಾರದಾಂಬ ಹೈಸ್ಕೂಲ್, ಶಿರಸಿ)
ತೃತೀಯ ರ್‍ಯಾಂಕ್ (623/625)
ಸೌರವ್ ಕೌಶಿಕ್ (ವಿವಿಎಸ್ ಸರ್ದಾರ್ ಪಟೇಲ್ ಹೈಸ್ಕೂಲ್, ರಾಜಾಜಿನಗರ ಬೆಂಗಳೂರು)
ಅಂಕಿತಾ ಆನಂದ್ (ವಿವಿಎಸ್ ಸರ್ದಾರ್ ಪಟೇಲ್ ಹೈಸ್ಕೂಲ್, ರಾಜಾಜಿನಗರ ಬೆಂಗಳೂರು)
ಧೀರಜ್ ಪ್ರೀತಂ ರೆಡ್ಡಿ (ಸೇಂಟ್ ಪ್ಲಾರೆಟ್ ಹೈಸ್ಕೂಲ್, ಜಾಲಹಳ್ಳಿ, ಬೆಂಗಳೂರು)
ಮಾನ್ಯತಾ ಎಸ್. ಮಯ್ಯ (ಎನ್‌ಇಟಿ ಪಬ್ಲಿಕ್ ಸ್ಕೂಲ್, ಬೆಂಗಳೂರು)
ಮೋನಿಷ್ ಸಾಯಿ ಎಸ್‌ಎನ್ (ಬಿಜಿಎಸ್ ಪಬ್ಲಿಕ್ ಸ್ಕೂಲ್, ಬಾಗೇಪಲ್ಲಿ)
ದರ್ಶಿತಾ ಎ. (ಶ್ರೀ ಮಹಾವೀರ ಜೈನ್ ಹೈಸ್ಕೂಲ್, ಕೋಲಾರ)
ಜಾಹ್ನವಿ ಎಸ್. (ಬಿಕೆಎಸ್‌ವಿಬಿ ಹೈಸ್ಕೂಲ್, ವಿಜಯನಗರ ಮೈಸೂರು)
ಡಿ.ಎಸ್ ಧನ್ವಿ (ಸದ್ವಿದ್ಯಾ ಹೈಸ್ಕೂಲ್, ವಿಜಯನಗರ, ಮೈಸೂರು)
ನವನೀತ್ ಕೆ.ಸಿ (ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಂಡ್ಯ)
ಸಹನಾ ಎನ್. (ಕಾರ್ಕಳ ಜ್ಞಾನಸುಧಾ ಹೈಸ್ಕೂಲ್, ಕುಕ್ಕಂದೂರು ಉಡುಪಿ)
ಅನನ್ಯಾ ಗೌಡ (ಸರ್ವೋದಯ ಕಾನ್ವೆಂಟ್, ಹಾಸನ)
ನಿಸರ್ಗಾ ಎಚ್.ಜಿ (ಯುನೈಟೆಡ್ ಹೈಸ್ಕೂಲ್, ಹಾಸನ)
ಪವಿತ್ರಾ ಕೊನ್ನೂರು (ಸರ್ಕಾರಿ ಆದರ್ಶ ವಿದ್ಯಾಲಯ, ಮುದ್ದೇಬಿಹಾಳ)
ತೃಪ್ತಿ ರಾಮಚಂದ್ರ ಗೌಡ (ಸಿದ್ದಿವಿನಾಯಕ ಹೈಸ್ಕೂಲ್, ಶಿರಸಿ)
ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತವಾಗಿದೆ. 2022-23ರಲ್ಲಿ 83.89% ಮಂದಿ ಪಾಸ್ ಆಗಿದ್ದು, ಈ ಬಾರಿ 73.40% ಮಂದಿ ಉತ್ತೀರ್ಣರಾಗಿದ್ದಾರೆ. ಶೇಕಡಾ 10.49%ರಷ್ಟು ಫಲಿತಾಂಶ ಕುಸಿತವಾಗಿದೆ.
ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ 3.59 ಲಕ್ಷ ಮಂದಿ ಪಾಸಾಗಿ 72.83% ಪಡೆದಿದ್ದರೆ, ಗ್ರಾಮೀಣ ಪ್ರದೇಶದ 2.71 ಲಕ್ಷ ಮಂದಿ ಉತ್ತೀರ್ಣರಾಗಿ 74.17% ಫಲಿತಾಂಶ ದಾಖಲಿಸಿದ್ದಾರೆ. ಸರ್ಕಾರಿ ಶಾಲೆಗಳ 2.43 ಲಕ್ಷ ಮಂದಿ ಪಾಸಾಗಿ ಶೇಕಡಾ 72.46, ಅನುದಾನಿತ ಶಾಲೆಗಳ 1.50 ಲಕ್ಷ ಮಂದಿ ಪಾಸಾಗಿ ಶೇಕಡಾ 72.22, ಅನುದಾನರಹಿತ ಶಾಲೆಗಳ 2.23 ಮಂದಿ ಉತ್ತೀರ್ಣರಾಗಿ ಶೇಕಡಾ 86.46 ಫಲಿತಾಂಶ ಒದಗಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯಕ್ಕೆ ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದಿದೆ. ಪಾಸಾಗಲಿ, ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಪಾಸಾದರು ಸಹ ಅಂಕ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.
ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್, ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್