Site icon Vistara News

Sumalatha Ambareesh : ಬಿಜೆಪಿಗೆ ಸೇರ್ಪಡೆಗೊಂಡರೂ ಪ್ರಚಾರಕ್ಕೆ ಇಳಿಯದ ಸುಮಲತಾ!

sumalatha Ambareesh

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಸಾಮರ್ಥ್ಯವನ್ನು ಮೆಚ್ಚಿ ಬಿಜೆಪಿ ಸೇರಿದ್ದ ಸುಮಲತಾ ಅಂಬರೀಷ್ (Sumalatha Ambareesh)​ ಅವರು ಮಂಡ್ಯದಲ್ಲಿ ಬಿಜೆಪಿ ಮೈತ್ರಿಪಕ್ಷ ಜೆಡಿಎಸ್​ ಪರ ಚುನಾವಣಾ ಪ್ರಚಾರಕ್ಕೆ ಇಳಿದಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್​ ವರಿಷ್ಠ ಎಚ್​ ಡಿ ಕುಮಾರಸ್ವಾಮಿ ಅವರು ಮೈತ್ರಿ ಪಕ್ಷದ ಅಭ್ಯರ್ಥಿ. ಆದರೆ, ಅವರ ಪರವಾಗಿ ಮತಯಾಚನೆ ಹಾಗೂ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಸುಮಲತಾ ಅವರು ಭಾಗಿಯಾಗುತ್ತಿಲ್ಲ.

ಪ್ರಚಾರ ಸಭೆಗಾಗಲಿ, ಸಾರ್ವಜನಿಕ ಮತಯಾಚನಾ ಅಭಿಯಾನಕ್ಕಾಗಲಿ ಜೆಡಿಎಸ್​​ ಅಭ್ಯರ್ಥಿ ಎಚ್​ ಡಿ ಕುಮಾರ ಸ್ವಾಮಿ ತಮ್ಮನ್ನು ಆಹ್ವಾನಿಸಿಲ್ಲ ಎಂಬುದಾಗಿ ಸುಮಲತಾ ಅವರು ತಮ್ಮ ಆಪ್ತರ ಬಳಿಕ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸುಮಲತಾ ವಿಚಾರದಲ್ಲಿ ಕುಮಾರಸ್ವಾಮಿ ಅವರು ಉದಾಸಿನ ತೋರಿದ ಕಾರಣ ಅವರು ಮೈತ್ರಿ ಪಕ್ಷದ ಪರವಾಗಿ ಚುನಾವಣಾ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಿದ್ದಾರೆ.

ಯಾಕೆ ಸುಮಲತಾ ಮೌನ ವಹಿಸಿದ್ದು?

ಸುಮಲತಾಗೆ ಬಿಜೆಪಿ ವರಿಷ್ಠರಿಂದ ಯಾವುದೇ ಸೂಚನೆ ಬರದ ಹೊರತು ಪ್ರಚಾರಕ್ಕೆ ಹೋಗದಿರಲು ಸುಮಲತಾ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಕಚೇರಿಯಿಂದಲೇ ಅಧಿಕೃತವಾಗಿ ಪ್ರಚಾರಕ್ಕೆ ಕ್ಷೇತ್ರ ತೋರಿಸಿದ್ರೆ ಹೋಗೋಣ ಅನ್ನೋ ಯೋಜನೆಯಲ್ಲಿ ಇದ್ದಾರೆ ಅವರು . ಅದೇ ರೀತಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದ್ರೆ ಹೋಗೋಣ ಎಂಬುದಾಗಿಯೂ ಹೇಳಲಾಗಿದೆ.

ಬಿಜೆಪಿ ದುರ್ಬಲ ಆಗುವ ಭಯ

ಮಂಡ್ಯದಲ್ಲಿ ಜೆಡಿಎಸ್​ ಗೆದ್ದರೆ ಬಿಜೆಪಿ ದುರ್ಬಲಗೊಳ್ಳಬಹುದು ಎಂಬ ಆತಂಕವೂ ಸುಮಲತಾ ಅವರಿಗೆ ಇದೆ ಎಂದು ಹೇಳಲಾಗುತ್ತಿದೆ. ರಾಜಕೀಯವಾಗಿ ಮಂಡ್ಯ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಸುಮಲತಾ ಅವರು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆಗೆ ಮುಂದಾಗಿದ್ದಾರೆ. ಈ ಅವಧಿಯಲ್ಲೇ ಆ ಮತಗಳು ಜೆಡಿಎಸ್​​ಗೆ ಪರಿವರ್ತನೆ ಮಾಡಿಕೊಡಬಾರದು ಎಂಬ ನಿಲುವು ಕೂಡ ಅವರಲ್ಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shivaram Hebbar : ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ಇಂದು ಕಾಂಗ್ರೆಸ್ ಸೇರ್ಪಡೆ

ಟ್ವೀಟ್​ ಮೂಲಕ ಕಾಂಗ್ರೆಸ್​ ಮೇಲೆ ಬಿಜೆಪಿ ಅಟ್ಯಾಕ್​​

ಬೆಂಗಳೂರು: ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ (BJP) ಕಾರ್ಯಕರ್ತ‌ ನವೀನ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ವಿಚಾರದಲ್ಲಿ ಕರ್ನಾಟ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಲೋಕ ಸಭಾ ಚುನಾವಣೆ (Lok Sabha Election) ಸಮಯದಲ್ಲಿ ಗೂಂಡಾಗಳನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ. ಈ ಬಗ್ಗೆ ಟ್ವಿಟರ್ ಹ್ಯಾಂಡಲ್​ ಮೂಲಕ ಕಟು ಪದಗಳಿಂದ ಟೀಕೆ ಮಾಡಿದೆ.

ಚುನಾವಣೆ ಸಮಯದಲ್ಲಿ ಕಾಂಗ್ರೆಸ್​ ಗೂಂಡಾಗಳು ಸಕ್ರಿಯಗೊಂಡಿದ್ದಾರೆ. ಅವರನ್ನು ಮಜಾವಾದಿ ಸಿದ್ದರಾಮಯ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ ಕಾರ್ಯಕರ್ತ‌ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾ ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೆ ಸಣ್ಣ ಕೇಸ್ ಹಾಕಿ ರಾಜಾರೋಷವಾಗಿ ಬೀದಿಗೆ ಬಿಟ್ಟಿದೆ.

ಚುನಾವಣೆ ಗೆಲ್ಲಲು ಗೂಂಡಾಗಿರಿ ಮಾಡುತ್ತಿರುವ ಅಣ್ಣ-ತಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವೇ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ . ಅದೇ ರೀತಿ ಮತದಾರರನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ.

Exit mobile version