Site icon Vistara News

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

Super Computers

ಹೊಸದಿಲ್ಲಿ: ಮೇಕ್ ಇನ್ ಇಂಡಿಯಾದ ಭಾಗವಾಗಿ ಎಯುಎಂ ಎಂದು ಕರೆಯಲ್ಪಡುವ ದೇಶೀಯ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (ಎಚ್​​ಪಿಸಿ) ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಲ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸೂಪರ್ ಕಂಪ್ಯೂಟಿಂಗ್​ನಲ್ಲಿ (Super Computers) ಜಾಗತಿಕ ನಾಯಕನಾಗುವ ಗುರಿ ಹೊಂದಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ಹೇಳಿದ್ದಾರೆ. ದೇಶೀಯವಾಗಿ ನಿರ್ಮಿಸಲಾಗುವ ಎಚ್​ಪಿಸಿ ಚಿಪ್​​ನ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಸೆಂಟರ್ ಫಾರ್ ಡೆವಲಪ್​ಮೆಂಟ್​ ಆಫ್ ಅಡ್ವಾನ್ಸ್​ಡ್​ ಕಂಪ್ಯೂಟಿಂಗ್ (ಸಿ-ಡ್ಯಾಕ್) ಮಾಸ್ಚಿಪ್ ಟೆಕ್ನಾಲಜೀಸ್ ಮತ್ತು ಸೋಷಿಯೋನೆಕ್ಸ್ಟ್ ಇಂಕ್​ ಜತೆ ಪಾಲುದಾರಿಕೆಗಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಎಚ್​​ಪಿಸಿ ಪ್ರೊಸೆಸರ್ ಆರ್ಮ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು ಟಿಎಸ್ ಎಂಸಿಯ (ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ) 5 ಎನ್ಎಂ ತಂತ್ರಜ್ಞಾನದಂತೆ ರಚಿಸಲಾಗಿದೆ.

ಇದು ಚಿಪ್ ವಿನ್ಯಾಸದಲ್ಲಿ ಭಾರತದದ ಮಹತ್ವದ ಸಾಧನೆಯಾಗಿದೆ. ಇದು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ದೇಶೀಯ ಮಟ್ಟದ ಅಭಿವೃದ್ಧಿಯಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸುತ್ತದೆ. ಉದ್ಯಮದ ಸಹಭಾಗಿತ್ವದಲ್ಲಿ ಕನ್ಸೋರ್ಟಿಯಾ ಮೋಡ್​​ನಲ್ಲಿ ಈ ಉದ್ಯಮಗಳು ಪ್ರಸ್ತುತ ಅಗತ್ಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ವಿಭಾಗಗಳ (ಎಚ್ಒಡಿ) ಮುಖ್ಯಸ್ಥ ಮುಖ್ಯಸ್ಥ ಡಾ.ಪ್ರವೀಣ್ ಕುಮಾರ್ ಎಸ್ ಅಭಿಪ್ರಾಯಪಟ್ಟಿದ್ದಾರೆ.

ಸಿ-ಡ್ಯಾಕ್ ಎಯುಎಂ ಎಂಬ ಸ್ಥಳೀಯ ಎಚ್​ಪಿಡಿ ಪ್ರೊಸೆಸರ್ ಅನ್ನು ವಿನ್ಯಾಸಗೊಳಿಸುತ್ತಿದೆ. ಭಾರತೀಯ ಸ್ಟಾರ್ಟ್ಅಪ್ ಕೀನ್ಹೆಡ್ಸ್ ಟೆಕ್ನಾಲಜೀಸ್ ಈ ಯೋಜನೆಯ ನಿರ್ವಹಣಾ ಸಲಹೆಗಾರರಾಗಿ (ಪಿಎಂಸಿ) ತೊಡಗಿಸಿಕೊಂಡಿದೆ.

ಇದನ್ನೂ ಓದಿ: Narendra Modi: ದೇಶದ ಜನ ನಮ್ಮನ್ನು ಮೂರನೇ ಬಾರಿ ಗೆಲ್ಲಿಸಿದ್ದಾರೆ, ಕಾಂಗ್ರೆಸ್‌ಗೆ ನೂರು ಸ್ಥಾನ ಗೆಲ್ಲುವ ಯೋಗ್ಯತೆಯೂ ಇಲ್ಲ; ರಾಹುಲ್‌ಗೆ ಮೋದಿ ಗೇಲಿ

.”ಸರ್ವರ್ ನೋಡ್​ಗಳು , ಇಂಟರ್​ಕನೆಕ್ಟ್​ಗಳು ಮತ್ತು ಸಿಸ್ಟಮ್ ಸಾಫ್ಟ್​ವೇರ್​ ಸ್ಟ್ಯಾಕ್​​ನೊಂದಿಗೆ ನಮ್ಮ ಸ್ವದೇಶಿಕರಣ ಪ್ರಯತ್ನಗಳು ಶೇಕಡಾ 50 ಕ್ಕಿಂತ ಸಾಗಿದೆ. ಈಗ ಸಂಪೂರ್ಣ ಸ್ವದೇಶೀಕರಣಕ್ಕಾಗಿ, ನಾವು ದೇಶೀಯ ಎಚ್​​ಪಿಸಿ ಪ್ರೊಸೆಸರ್ ಎಯುಎಂ ಅನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ” ಎಂದು ಕೃಷ್ಣನ್ ಹೇಳಿದ್ದಾರೆ.

Exit mobile version