Site icon Vistara News

Maldives Minister: ಭಾರತದ ತಿರಂಗಾಕ್ಕೆ ಅವಮಾನ; ಕ್ಷಮೆ ಕೇಳಿದ ಮಾಲ್ಡೀವ್ಸ್‌ ಸಚಿವೆ!

Mariyam Shiuna

Suspended Maldives Minister apologises after post on Indian flag sparks outrage

ಮಾಲೆ: ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಬಳಿಕ ಉದ್ಧಟತನದ ಹೇಳಿಕೆ ನೀಡಿ, ತಮ್ಮ ದೇಶದಲ್ಲೇ ಭಾರಿ ಟೀಕೆಗೆ ಗುರಿಯಾದ ಮೊಹಮ್ಮದ್‌ ಮುಯಿಜು (Mohamed Muizzu) ಸರ್ಕಾರದ ಸಚಿವೆಯೊಬ್ಬರು (Maldives Minister) ಈಗ ಮತ್ತೊಂದು ಉಪಟಳ ಮಾಡಿದ್ದಾರೆ. ಭಾರತದ ತಿರಂಗಾವನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಉಚ್ಚಾಟಿತ ಸಚಿವೆ ಮರಿಯಮ್‌ ಶಿವುನಾ (Mariyam Shiuna) ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಲೇ ಅವರು ಭಾರತದ ಕ್ಷಮೆಯಾಚಿಸಿದ್ದಾರೆ.

“ಕೆಲ ದಿನಗಳ ಹಿಂದಷ್ಟೇ ನಾನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ವಿಷಯದ ಕುರಿತು ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ನಾನು ಉದ್ದೇಶಪೂರ್ವಕವಾಗಿ ಇಂತಹ ಪೋಸ್ಟ್‌ ಮಾಡದಿದ್ದರೂ ಕ್ಷಮೆಯಾಚಿಸುತ್ತೇನೆ. ಭಾರತದ ತ್ರಿವರ್ಣಕ್ಕೆ ಅವಮಾನ ಎಸಗಲಾಗಿದೆ ಎಂದು ಮಾಲ್ಡೀವ್ಸ್‌ ಪ್ರತಿಪಕ್ಷವಾದ ಎಂಡಿಪಿಯು ಟೀಕೆ ಮಾಡುತ್ತಿದೆ. ಇದಾವುದೂ ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂಬುದಾಗಿ ಸ್ಪಷ್ಟಪಡಿಸುತ್ತೇನೆ. ಭಾರತದ ಜತೆ ಮಾಲ್ಡೀವ್ಸ್‌ ಉತ್ತಮ ಸಂಬಂಧ ಹೊಂದಲು, ಪರಸ್ಪರ ಗೌರವದಿಂದ ವರ್ತಿಸಲು ನಾವು ಆದ್ಯತೆ ನೀಡುತ್ತೇವೆ” ಎಂದು ಪೋಸ್ಟ್‌ ಮೂಲಕ ಮಾಲ್ಡೀವ್ಸ್‌ ಉಚ್ಚಾಟಿತ ಸಚಿವೆಯು ಕ್ಷಮೆಯಾಚಿಸಿದ್ದಾರೆ.

ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್‌ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಬಾಯ್ಕಾಟ್‌ ಅಭಿಯಾನದ ಬಳಿಕ ಮಾಲ್ಡೀವ್ಸ್‌ಗೆ ತೆರಳುವ ಭಾರತೀಯರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಮೊಹಮ್ಮದ್‌ ಮುಯಿಜು ವಿರುದ್ಧ ಅವರ ದೇಶದಲ್ಲಿಯೇ ಟೀಕೆಗಳು ವ್ಯಕ್ತವಾಗುತ್ತಿವೆ.

ಮೊಹಮ್ಮದ್‌ ಮುಯಿಜು ಚೀನಾ ಪರ ನಿಲುವು

ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್‌ ಮುಯಿಜು, 50 ದಶಲಕ್ಷ ಡಾಲರ್‌ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್‌ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Maldives : ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್​​ಗೆ ಟೂರಿಸಂನಲ್ಲಿ ಸಿಕ್ಕಾಪಟ್ಟೆ ಲಾಸ್​

Exit mobile version