Site icon Vistara News

T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

T20 World Cup Final

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ ಫೈನಲ್​​ನಲ್ಲಿ(T20 World Cup Final) ಭಾರತದ ಗೆಲ್ಲಲ್ಲಿ ಎಂದು ಪ್ರಾರ್ಥಿಸಿ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯದ ಅರ್ಚಕರು ಶನಿವಾರ ವಿಶೇಷ ಪೂಜೆ ನಡೆಸಿದ್ದಾರೆ. ದೊಡ್ಡ ಫೈನಲ್ ಸಮೀಪಿಸುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಉತ್ಸಾಹ ಮತ್ತು ಆತಂಕ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಪ್ರೋತ್ಸಾಹದ ಸಂದೇಶಗಳು ತುಂಬಿಕೊಂಡಿವೆ. ಪ್ರಮುಖ ಬೀದಿಗಳು ಟೀಮ್ ಇಂಡಿಯಾವನ್ನು ಬೆಂಬಲಿಸುವ ಪೋಸ್ಟರ್​ಗಳಿಂದ ತುಂಬಿಕೊಂಡಿವೆ. ಈ ನಡುವೆ ಹಲವೆಡೆ ವಿಶೇಷ ಪೂಜೆಗಳು ನಡೆಯುತ್ತಿವೆ. ಅಂತೆಯ ಸಿದ್ಧಿವಿನಾಯಕ ದೇವಾಲಯದಲ್ಲೂ ಪೂಜೆ ಮಾಡಲಾಗಿದೆ.

ಈ ಪಂದ್ಯವು ಭಾರತದ ಕ್ರಿಕೆಟ್​ ಪಾಲಿಗೆ ಪ್ರಮುಖ ಘಟನೆಯಾಗಿದೆ. ಲಕ್ಷಾಂತರ ಭಾರತೀಯರ ಭರವಸೆಗಳು ಮತ್ತು ಪ್ರಾರ್ಥನೆಗಳು ಪ್ರಸಸ್ತಿಗಾಗಿ ಹಂಬಲಿಸಿವೆ. 17 ವರ್ಷಗಳ ಸುದೀರ್ಘ ನಂತರ ಭಾರತವು ಟಿ 20 ವಿಶ್ವಕಪ್ ಟ್ರೋಫಿ ಎತ್ತುವುದನ್ನು ನೋಡಲು ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ.

ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸಿದ್ಧಿವಿನಾಯಕ ದೇವಾಲಯವು ವಿಶ್ವ ಕಪ್​ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಆರತಿಗಳನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಭಕ್ತರು ಮೆನ್ ಇನ್ ಬ್ಲೂಗೆ ಆಶೀರ್ವಾದ ಮಾಡುವಂತೆ ಭಗವಂತನ ಬಳಿ ಕೋರಿಕೊಂಡರು. ಸಿದ್ಧಿವಿನಾಯಕನ ಪುರೋಹಿತರು. ತಂಡ ಮತ್ತು ಅವರ ಅಭಿಮಾನಿಗಳ ಪರವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತಣೆ ಮಾಡಿದರು.

ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಭಾರತ ಅದಕ್ಕಾಗಿ ಸಜ್ಜಾಗಿದ್ದು, ಮೊದಲ ಟಿ20 ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ದಕ್ಷಿಣ ಆಫ್ರಿಕಾ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎರಡೂ ತಂಡಗಳು ಐಸಿಸಿ ಟ್ರೋಫಿಗಾಗಿ ದೀರ್ಘ ಕಾಯುವಿಕೆ ಎದುರಿಸಿವೆ. ಭಾರತಕ್ಕೆ 13 ವರ್ಷಗಳಿಂದ ಪ್ರಶಸ್ತಿಗಾಗಿ ಕಾದರೆ, ದಕ್ಷಿಣ ಆಫ್ರಿಕಾ ಇದುವರೆಗೆ ಒಂದೇ ಒಂದು ಟ್ರೋಫಿ ಸಿಕ್ಕಿಲ್ಲ. ಈ ಅಂತಿಮ ಪಂದ್ಯವು ಈ ಕ್ರಿಕೆಟ್ ಶಕ್ತಿ ಕೇಂದ್ರಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಲಿದೆ.

ಸಿದ್ಧಿವಿನಾಯಕ ದೇವಸ್ಥಾನದಲ್ಲಿನ ಪ್ರಾರ್ಥನೆಗಳು ಫಲಿಸುತ್ತವೆ ಎಂಬುದು ನಂಬಿಕೆ. ಅಂತೆಯ ವಿಶ್ವ ಕಪ್​ಗಾಗಿ ಭಾರತದ ಆಟಗಾರರಿಗೂ ಒಳಿತಾಗಲಿ ಎಂಬ ನಂಬಿಕೆ ಅಭಿಮಾನಿಗಳದ್ದು. 2023ರ ಏಕ ದಿನ ವಿಶ್ವ ಕಪ್​ನಲ್ಲಿ ಸೋತು ಬೇಸರ ಎದುರಿಸಿರುವ ಭಾರತ ತಂಡ ಈ ವಿಶ್ವ ಕಪ್​ನಲ್ಲಿ ಗೆಲ್ಲುವ ಉದ್ದೇಶವನ್ನು ಹೊಂದಿದೆ. ಈ ಟೂರ್ನಿಯು ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಟಿ20 ಅಂತಾರಾಷ್ಟ್ರೀಯ ಕೊನೇ ಪಂದ್ಯಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಬಾರ್ಬಡೋಸ್ನ ಬ್ರಿಜ್​ಟೌನ್​ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ. ಇದು ದೊಡ್ಡ ಸ್ಕೋರ್​ ಹಾಗೂ ವೇಗದ ಬೌಲಿಂಗ್​ಗೆ ಪೂರಕವಾಗಿರುವ ಪಿಚ್ ಆಗಿದೆ. ಇದು ಸ್ಪಿನ್ನರ್​ಗಳಿಗೂ ಅನುಕೂಲಕರ. ಎರಡೂ ತಂಡಗಳ ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ ಮತ್ತು ಪಂದ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. ಹಿಂದಿನ ಪಂದ್ಯದಲ್ಲಿ ಯಾವುದೇ ಆಟಗಾರನಿಗೆ ಗಾಯಗಳಾದ ಪ್ರಕರಣಗಳಿಲ್ಲ. ಹೀಗಾಗಿ ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿತ.

ಇದನ್ನೂ ಓದಿ: IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ 

ಭಾರತ-ಭಾರತ ತಂಡವು ಬಲಿಷ್ಠ ಬ್ಯಾಟರ್​ಗಳು ಮತ್ತು ಬೌಲರ್​ಗಳನ್ನು ಹೊಂದಿದ್ದು, ಟೂರ್ನಿಯಲ್ಲಿ ಇದುವರೆಗೂ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ- ದಕ್ಷಿಣ ಆಫ್ರಿಕಾ ಬ್ಯಾಟಿಂಗ್, ಸ್ಪಿನ್ ಮತ್ತು ವೇಗದ ಘಟಕಗಳಲ್ಲಿ ಪರಿಣಿತ ಬೌಲರ್​ಗಳನ್ನು ಒಳಗೊಂಡಿದೆ.

ಭಾರತ ರೋಹಿತ್ ಶರ್ಮಾ, ರಿಷಭ್ ಪಂತ್, ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಅತ್ಯುತ್ತಮ ಬ್ಯಾಟರ್​ಗಳಾದರೆ. ಅರ್ಶ್​ದೀಪ್​ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಮಿಂಚಲಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ ಮತ್ತು ತಬ್ರೀಜ್ ಶಮ್ಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

Exit mobile version