T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ - Vistara News

ಪ್ರಮುಖ ಸುದ್ದಿ

T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

T20 World Cup Final : ಈ ಪಂದ್ಯವು ಭಾರತದ ಕ್ರಿಕೆಟ್​ ಪಾಲಿಗೆ ಪ್ರಮುಖ ಘಟನೆಯಾಗಿದೆ. ಲಕ್ಷಾಂತರ ಭಾರತೀಯರ ಭರವಸೆಗಳು ಮತ್ತು ಪ್ರಾರ್ಥನೆಗಳು ಪ್ರಸಸ್ತಿಗಾಗಿ ಹಂಬಲಿಸಿವೆ. 17 ವರ್ಷಗಳ ಸುದೀರ್ಘ ನಂತರ ಭಾರತವು ಟಿ 20 ವಿಶ್ವಕಪ್ ಟ್ರೋಫಿ ಎತ್ತುವುದನ್ನು ನೋಡಲು ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ.

VISTARANEWS.COM


on

T20 World Cup Final
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ ಫೈನಲ್​​ನಲ್ಲಿ(T20 World Cup Final) ಭಾರತದ ಗೆಲ್ಲಲ್ಲಿ ಎಂದು ಪ್ರಾರ್ಥಿಸಿ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯದ ಅರ್ಚಕರು ಶನಿವಾರ ವಿಶೇಷ ಪೂಜೆ ನಡೆಸಿದ್ದಾರೆ. ದೊಡ್ಡ ಫೈನಲ್ ಸಮೀಪಿಸುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಉತ್ಸಾಹ ಮತ್ತು ಆತಂಕ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಪ್ರೋತ್ಸಾಹದ ಸಂದೇಶಗಳು ತುಂಬಿಕೊಂಡಿವೆ. ಪ್ರಮುಖ ಬೀದಿಗಳು ಟೀಮ್ ಇಂಡಿಯಾವನ್ನು ಬೆಂಬಲಿಸುವ ಪೋಸ್ಟರ್​ಗಳಿಂದ ತುಂಬಿಕೊಂಡಿವೆ. ಈ ನಡುವೆ ಹಲವೆಡೆ ವಿಶೇಷ ಪೂಜೆಗಳು ನಡೆಯುತ್ತಿವೆ. ಅಂತೆಯ ಸಿದ್ಧಿವಿನಾಯಕ ದೇವಾಲಯದಲ್ಲೂ ಪೂಜೆ ಮಾಡಲಾಗಿದೆ.

ಈ ಪಂದ್ಯವು ಭಾರತದ ಕ್ರಿಕೆಟ್​ ಪಾಲಿಗೆ ಪ್ರಮುಖ ಘಟನೆಯಾಗಿದೆ. ಲಕ್ಷಾಂತರ ಭಾರತೀಯರ ಭರವಸೆಗಳು ಮತ್ತು ಪ್ರಾರ್ಥನೆಗಳು ಪ್ರಸಸ್ತಿಗಾಗಿ ಹಂಬಲಿಸಿವೆ. 17 ವರ್ಷಗಳ ಸುದೀರ್ಘ ನಂತರ ಭಾರತವು ಟಿ 20 ವಿಶ್ವಕಪ್ ಟ್ರೋಫಿ ಎತ್ತುವುದನ್ನು ನೋಡಲು ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ.

ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸಿದ್ಧಿವಿನಾಯಕ ದೇವಾಲಯವು ವಿಶ್ವ ಕಪ್​ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಆರತಿಗಳನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಭಕ್ತರು ಮೆನ್ ಇನ್ ಬ್ಲೂಗೆ ಆಶೀರ್ವಾದ ಮಾಡುವಂತೆ ಭಗವಂತನ ಬಳಿ ಕೋರಿಕೊಂಡರು. ಸಿದ್ಧಿವಿನಾಯಕನ ಪುರೋಹಿತರು. ತಂಡ ಮತ್ತು ಅವರ ಅಭಿಮಾನಿಗಳ ಪರವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತಣೆ ಮಾಡಿದರು.

ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಭಾರತ ಅದಕ್ಕಾಗಿ ಸಜ್ಜಾಗಿದ್ದು, ಮೊದಲ ಟಿ20 ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ದಕ್ಷಿಣ ಆಫ್ರಿಕಾ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎರಡೂ ತಂಡಗಳು ಐಸಿಸಿ ಟ್ರೋಫಿಗಾಗಿ ದೀರ್ಘ ಕಾಯುವಿಕೆ ಎದುರಿಸಿವೆ. ಭಾರತಕ್ಕೆ 13 ವರ್ಷಗಳಿಂದ ಪ್ರಶಸ್ತಿಗಾಗಿ ಕಾದರೆ, ದಕ್ಷಿಣ ಆಫ್ರಿಕಾ ಇದುವರೆಗೆ ಒಂದೇ ಒಂದು ಟ್ರೋಫಿ ಸಿಕ್ಕಿಲ್ಲ. ಈ ಅಂತಿಮ ಪಂದ್ಯವು ಈ ಕ್ರಿಕೆಟ್ ಶಕ್ತಿ ಕೇಂದ್ರಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಲಿದೆ.

ಸಿದ್ಧಿವಿನಾಯಕ ದೇವಸ್ಥಾನದಲ್ಲಿನ ಪ್ರಾರ್ಥನೆಗಳು ಫಲಿಸುತ್ತವೆ ಎಂಬುದು ನಂಬಿಕೆ. ಅಂತೆಯ ವಿಶ್ವ ಕಪ್​ಗಾಗಿ ಭಾರತದ ಆಟಗಾರರಿಗೂ ಒಳಿತಾಗಲಿ ಎಂಬ ನಂಬಿಕೆ ಅಭಿಮಾನಿಗಳದ್ದು. 2023ರ ಏಕ ದಿನ ವಿಶ್ವ ಕಪ್​ನಲ್ಲಿ ಸೋತು ಬೇಸರ ಎದುರಿಸಿರುವ ಭಾರತ ತಂಡ ಈ ವಿಶ್ವ ಕಪ್​ನಲ್ಲಿ ಗೆಲ್ಲುವ ಉದ್ದೇಶವನ್ನು ಹೊಂದಿದೆ. ಈ ಟೂರ್ನಿಯು ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಟಿ20 ಅಂತಾರಾಷ್ಟ್ರೀಯ ಕೊನೇ ಪಂದ್ಯಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಬಾರ್ಬಡೋಸ್ನ ಬ್ರಿಜ್​ಟೌನ್​ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ. ಇದು ದೊಡ್ಡ ಸ್ಕೋರ್​ ಹಾಗೂ ವೇಗದ ಬೌಲಿಂಗ್​ಗೆ ಪೂರಕವಾಗಿರುವ ಪಿಚ್ ಆಗಿದೆ. ಇದು ಸ್ಪಿನ್ನರ್​ಗಳಿಗೂ ಅನುಕೂಲಕರ. ಎರಡೂ ತಂಡಗಳ ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ ಮತ್ತು ಪಂದ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. ಹಿಂದಿನ ಪಂದ್ಯದಲ್ಲಿ ಯಾವುದೇ ಆಟಗಾರನಿಗೆ ಗಾಯಗಳಾದ ಪ್ರಕರಣಗಳಿಲ್ಲ. ಹೀಗಾಗಿ ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿತ.

ಇದನ್ನೂ ಓದಿ: IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ 

ಭಾರತ-ಭಾರತ ತಂಡವು ಬಲಿಷ್ಠ ಬ್ಯಾಟರ್​ಗಳು ಮತ್ತು ಬೌಲರ್​ಗಳನ್ನು ಹೊಂದಿದ್ದು, ಟೂರ್ನಿಯಲ್ಲಿ ಇದುವರೆಗೂ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ- ದಕ್ಷಿಣ ಆಫ್ರಿಕಾ ಬ್ಯಾಟಿಂಗ್, ಸ್ಪಿನ್ ಮತ್ತು ವೇಗದ ಘಟಕಗಳಲ್ಲಿ ಪರಿಣಿತ ಬೌಲರ್​ಗಳನ್ನು ಒಳಗೊಂಡಿದೆ.

ಭಾರತ ರೋಹಿತ್ ಶರ್ಮಾ, ರಿಷಭ್ ಪಂತ್, ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಅತ್ಯುತ್ತಮ ಬ್ಯಾಟರ್​ಗಳಾದರೆ. ಅರ್ಶ್​ದೀಪ್​ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಮಿಂಚಲಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ ಮತ್ತು ತಬ್ರೀಜ್ ಶಮ್ಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಪ್ರೇಯಸಿಯ ಕಣ್ಮುಂದೆಯೇ ಆಕೆಯ ತಂದೆಯನ್ನು ಬರ್ಬರವಾಗಿ ಕೊಂದ ಪ್ರಿಯಕರ!

Viral Video: ಪ್ರೀತಿ ಮನಸ್ಸು ಮನಸ್ಸುಗಳನ್ನು ಬೆಸೆಯಬೇಕು ಎನ್ನುತ್ತಾರೆ. ಆದರೆ ಇಲ್ಲಿ ರಕ್ತದೋಕುಳಿಯನ್ನು ಹರಿಸಿದೆ. ಮಗಳ ಪ್ರೀತಿಯನ್ನು ನಿರಾಕರಿಸಿದ ತಂದೆಯನ್ನು ಆಕೆಯ ಪ್ರಿಯತಮ ಚಾಕುವಿನಿಂದ ಚುಚ್ಚಿ ಸಾಯಿಸಿದ ಘಟನೆ ನಡೆದಿದೆ. ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ದೈಹಿಕ ಶಿಕ್ಷಕನನ್ನು ಹುಡುಗಿಯೊಬ್ಬಳು ಪ್ರೀತಿಸಿದ್ದಳು. ಈ ವಿಚಾರ ತಿಳಿದ ಹುಡುಗಿ ತಂದೆ ಇವರ ಪ್ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತು ಆರೋಪಿಯ ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ.ಇದರಿಂದ ಕೋಪಗೊಂಡ ಹುಡುಗ ಮಗಳು ಹಾಗೂ ತಂದೆ ಸ್ಕೂಟರ್‌ನಲ್ಲಿ ಬರುವ ವೇಳೆ ದಾರಿ ಮಧ್ಯೆ ತಡೆದು ಈ ಕೃತ್ಯ ಎಸಗಿದ್ದಾನೆ.

VISTARANEWS.COM


on

Viral Video
Koo

ವಿಜಯವಾಡ: ಪ್ರೀತಿ ಎಂದರೆ ಒಂದು ಮಾಯೆ ಎಂತ ಹೇಳಬಹುದು. ಯಾಕೆಂದರೆ ಪ್ರೀತಿಯಲ್ಲಿ ಬಿದ್ದ ಜನರು ಏನು ಬೇಕಾದರೂ ಮಾಡುತ್ತಾರೆ. ಆ ಬಗ್ಗೆ ಅವರಲ್ಲಿ ಭಯ ಇರುವುದಿಲ್ಲ. ಅದರಲ್ಲೂ ಯುವಕರು ಹೆಚ್ಚು ಇದರ ಪ್ರಭಾವಕ್ಕೆ ಒಳಗಾಗುವುದನ್ನು ನಾವು ಕೇಳಿರುತ್ತೇವೆ. ಅಂತಹದೊಂದು ಘಟನೆ ಇದೀಗ ಆಂಧ್ರಪ್ರದೇಶದ ವಿಜಯವಾಡದ ಬೃಂದಾವನ ಕಾಲೋನಿ ಬಳಿ ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಹುಡುಗಿಗಾಗಿ ಆಕೆಯ ತಂದೆಯನ್ನೇ ಆಕೆಯ ಕಣ್ಣಮುಂದೆಯೇ ಬರ್ಬರವಾಗಿ ಕೊಂದಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ. ಇದನ್ನು ಜನರು ಬೆಚ್ಚಿಬಿದ್ದಿದ್ದಾರೆ.

ಆರೋಪಿ ಶಿವ ಮಣಿಕಂಠ (26 ವರ್ಷ) ಈತ ಖಾಸಗಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಹಾಗೇ ಕೊಲೆಯಾದ ವ್ಯಕ್ತಿ ಕಿರಾಣಿ ಅಂಗಡಿ ಮಾಲೀಕ ಕೆ.ರಾಮಚಂದ್ರ ಪ್ರಸಾದ್ (56) ಎಂಬುದಾಗಿ ತಿಳಿದುಬಂದಿದೆ. ಹುಡುಗಿ ಇಂಜಿನಿಯರಿಂಗ್ ಓದುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಈಕೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಆರೋಪಿಯನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದ ಹುಡುಗಿ ತಂದೆ ಇವರ ಪ್ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತು ಆರೋಪಿಯ ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ.

ಇದರಿಂದ ಆರೋಪಿಯ ಮನೆಯಲ್ಲಿ ಗಲಾಟೆ ಶುರುವಾಗಿದೆ. ಇದರಿಂದ ಕೋಪಗೊಂಡ ಆರೋಪಿ ಜೂನ್ 27ರ ರಾತ್ರಿ ಮಗಳು ಹಾಗೂ ತಂದೆ ಸ್ಕೂಟರ್‌ನಲ್ಲಿ ಬರುವ ವೇಳೆ ದಾರಿ ಮಧ್ಯ ತಡೆದು ಹುಡುಗಿಯ ಮುಂದೆಯೇ ಆಕೆಯ ತಂದೆಯ ಕುತ್ತಿಗೆ ಮತ್ತು ಮುಖಕ್ಕೆ ಚಾಕುವಿನಿಂದ ಆರು ಬಾರಿ ಇರಿದು ಪರಾರಿಯಾಗಿದ್ದಾನೆ. ಹುಡುಗಿ ಈ ದೃಶ್ಯ ಕಂಡು ಕಿರುಚಿದಾಗ ಸ್ಥಳೀಯರು ಬಂದು ಪ್ರಸಾದ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ಸಾವನಪ್ಪಿದ್ದಾರೆ.

ಇದನ್ನೂ ಓದಿ: ಮನೆಯ ಹೊರಗೆ ತಾಯಿಯ ಜೊತೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!

ಈ ಬಗ್ಗೆ ಕೃಷ್ಣಲಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹಾಗೂ ಆರೋಪಿಯನ್ನು ಬಂಧಿಸಿದ ಪೊಲೀಸರು ಆತ ಕೊಲೆಗೆ ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ವಿಡಿಯೊದಲ್ಲಿ ಆರೋಪಿ ಪ್ರಸಾದ್ ಅವರಿಗೆ ಚಾಕುವಿನಿಂದ ಇರಿಯುತ್ತಿದ್ದು, ಹುಡುಗಿ ಕಿರುಚಾಡುತ್ತಿರುವ ದೃಶ್ಯ ಕಂಡುಬಂದಿದೆ. ನಂತರ ಅಲ್ಲಿಗೆ ಸ್ಥಳೀಯರು ಬಂದು ಸುತ್ತುವರಿದಿದ್ದಾರೆ. ಈ ವಿಡಿಯೊಗೆ ಸಾಕಷ್ಟು ವೀವ್ಸ್ ಬಂದಿದ್ದು, ಜನರು ಇದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

Continue Reading

Latest

Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು?

Dating Application: ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ತಮಗೆ ಬೇಕಾದ ಸಂಗಾತಿಯನ್ನು ಹುಡುಕಿಕೊಂಡು ಮದುವೆಯಾಗುತ್ತಾರೆ. ಆದರೆ ಈ ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಿಚಯವಾಗುವವರು ಎಲ್ಲರೂ ಒಳ್ಳೆಯವರೇ ಆಗಿರುವುದಿಲ್ಲ. ಕೆಲವರಿಗೆ ಇದರ ಕಹಿ ಅನುಭವವೂ ಆಗಿದೆ. ಈಗ ಈ ಡೇಟಿಂಗ್ ನೆಪದಲ್ಲಿ ಸುಲಿಗೆ ಮಾಡುವ ಪ್ರಕರಣವೂ ನಡೆಯುತ್ತಿದೆ.ಡೇಟಿಂಗ್ ನೆಪದಲ್ಲಿ ಕೆಫೆ ಅಥವಾ ಪಬ್‌ಗೆ ಕರೆದು ಮೆನುವಿನಲ್ಲಿ ಇಲ್ಲದ ಫುಡ್ ಆರ್ಡರ್ ಮಾಡಿ ಸಿಕ್ಕಾಪಟ್ಟೆ ದುಡ್ಡನ್ನು ಪೀಕುವ ಜಾಲವೊಂದು ಈಗ ಪೊಲೀಸ್ ಬಲೆಗೆ ಬಿದ್ದಿದೆ.

VISTARANEWS.COM


on

Dating Application
Koo

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಸಂಬಂಧ ಕುದುರುವುದು ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ. ಇಲ್ಲಿ ಯುವಕ-ಯುವತಿಯರು ಒಬ್ಬರನ್ನೊಬ್ಬರು ಭೇಟಿಯಾಗಿ ಮದುವೆ ನಿಶ್ಚಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೆಲವು ಜನರು ತಮ್ಮ ಜೀವನ ಕಟ್ಟಿಕೊಂಡಿದ್ದರೆ, ಇನ್ನೂ ಕೆಲವರು ಈ ಅಪ್ಲಿಕೇಶನ್‌ನಲ್ಲಿ ಡೇಟಿಂಗ್ ಮಾಡಿ ಮೋಸ ಹೋಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್‌ (Dating Application) ಮೋಸದ ಹಗರಣವೊಂದು ಬೆಳಕಿಗೆ ಬಂದಿದೆ.

ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಮಹಿಳೆಯೊಂದಿಗೆ ಡೇಟಿಂಗ್ ಮಾಡಿದ ದೆಹಲಿಯ ನಾಗರಿಕ ಸೇವಾ ಆಕಾಂಕ್ಷಿಯೊಬ್ಬರು ಕೆಫೆಯಲ್ಲಿ 1.20 ಲಕ್ಷ ರೂ.ಗಳ ಬಿಲ್ ಕೊಟ್ಟು ಹಣವನ್ನು ಕಳೆದುಕೊಂಡಿದ್ದಾರೆ. ಇದು ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಹರಡಿರುವ ‘ಟಿಂಡರ್ ಹಗರಣ’ದ ಅನೇಕ ಪ್ರಕರಣಗಳಲ್ಲಿ ಒಂದಾಗಿದೆ.

ರೆಡ್ಡಿಟ್ ಎಂಬ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಅನೇಕ ಪೋಸ್ಟ್‌ಗಳಿದ್ದು ಅವುಗಳಲ್ಲಿ ಕೆಲವು ಒಂದು ವರ್ಷ ಹಳೆಯದಾಗಿವೆ. ಅದರಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಹಿಳೆಯರೊಂದಿಗೆ ಡೇಟಿಂಗ್ ಮಾಡಿ ದುಬಾರಿ ಬಿಲ್ ತೆತ್ತು ಮೋಸಹೋದ ಜನರ ಖಾತೆಗಳ ಬಗ್ಗೆ ತಿಳಿಸುತ್ತದೆ. ಟಿಂಡರ್, ಬಂಬಲ್, ಹಿಂಜ್ ಮತ್ತು ಒಕ್ಯುಪಿಡ್‌ನಂತಹ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಯಾರಾದರೂ ಪ್ರೊಫೈಲ್‌ ಮಹಿಳೆಯ ಪ್ರೊಫೈಲ್‌ಗೆ ಮ್ಯಾಚ್ ಆದಾಗ ಅವಳು ತನ್ನ ವಾಟ್ಸಾಪ್ ಸಂಖ್ಯೆಯನ್ನು ಶೇರ್‌ ಮಾಡಿಕೊಂಡು ಅವರ ಜೊತೆ ಮಾತನಾಡಲು ಶುರು ಮಾಡುತ್ತಾಳೆ. ನಂತರ ಮಹಿಳೆ ಕೆಫೆ ಮತ್ತು ಪಬ್‌ಗಳಲ್ಲಿ ಮೀಟ್‌ ಆಗುವ ಎಂದು ಒತ್ತಾಯ ಮಾಡುವುದಕ್ಕೆ ಶುರುಮಾಡುತ್ತಾಳೆ. ಮಹಿಳೆಯ ಮಾತಿಗೆ ಒಪ್ಪಿ ಭೇಟಿಯಾಗುವುದಕ್ಕೆ ರೆಡಿಯಾದರೆ ಅವನಿಗೆ ನಿರ್ದಿಷ್ಟ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಲು ಹೇಳಿ ಅಲ್ಲಿಂದ ಕೆಫೆ ಅಥವಾ ಪಬ್‌ಗೆ ಹೋಗುತ್ತಾರೆ

ಇನ್ನು ಕೆಫೆಯಲ್ಲಿ, ಮಹಿಳೆಯೇ ಆರ್ಡರ್ ಮಾಡುತ್ತಾಳೆ. ಆದರೆ ಈ ಮೋಸದಾಟದ ಬಗ್ಗೆ ಅರಿವಿಲ್ಲದ ಪುರುಷರು ಸುಮ್ಮನಿರುತ್ತಾರೆ. ನಂತರ, ಮಹಿಳೆ ಮೆನುವಿನಲ್ಲಿ ಇಲ್ಲದಿರುವ ಏನನ್ನಾದರೂ ಆರ್ಡರ್ ಮಾಡಿ ತನಗೆ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ಅವಸರದಿಂದ ಅಲ್ಲಿಂದ ಹೋಗುತ್ತಾಳೆ. ಆದರೆ ಬಿಲ್ ಬಂದಾಗ, ಅದರ ಬೆಲೆ ನೋಡಿ ಬಲಿಪಶು ಶಾಕ್ ಆಗುವುದಂತೂ ಖಂಡಿತ. ಈ ಬಗ್ಗೆ ಪ್ರತಿಭಟಿಸಿದರೆ, ಕೆಫೆ ಸಿಬ್ಬಂದಿಗಳು ಅವನಿಗೆ ಬೆದರಿಕೆ ಹಾಕುತ್ತಾರೆ.

ಬೇರೆ ಆಯ್ಕೆಯಿಲ್ಲದೆ, ಅವನು ಬಿಲ್ ಪಾವತಿಸುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜನರು ಪೊಲೀಸರನ್ನು ಸಂಪರ್ಕಿಸುವುದಿಲ್ಲ. ಏಕೆಂದರೆ ತನಿಖೆಯ ವೇಳೆ ಅವನು ಡೇಟಿಂಗ್ ಅಪ್ಲಿಕೇಶನ್ ಮೂಲಕ ಜನರನ್ನು ಭೇಟಿಯಾಗುತ್ತಿದ್ದಾನೆ ಎಂದು ಅವನ ಕುಟುಂಬಕ್ಕೆ ತಿಳಿಯಬಹುದೆಂದು ಹೆದರುತ್ತಾರೆ.

Dating Application

ಕೆಫೆ ಮಾಲೀಕರು, ವ್ಯವಸ್ಥಾಪಕರು ಮತ್ತು ಡೇಟಿಂಗ್ ಮಹಿಳೆಯರು ಸೇರಿದಂತೆ ಹಲವಾರು ಹೆಣೆದ ಬಲೆಯಾಗಿದೆ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಐಎಎಸ್ ಆಕಾಂಕ್ಷಿಯನ್ನು ಗುರಿಯಾಗಿಸಿಕೊಂಡು ನಡೆದ ಇತ್ತೀಚಿನ ದೆಹಲಿ ಘಟನೆಯಲ್ಲಿ, ಕೆಫೆಯ ಮಾಲೀಕ ಅಕ್ಷಯ್ ಪಹ್ವಾ ಮತ್ತು ಸಂತ್ರಸ್ತೆಯ ‘ಡೇಟ್’ ಅಫ್ಸಾನ್ ಪರ್ವೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಗಂಡನ ಕುಡಿತ ನಿಲ್ಲಿಸಬೇಕೆ? ಹಾಗಾದ್ರೆ ಬಿಜೆಪಿ ಸಚಿವರೊಬ್ಬರ ಈ ಟಿಪ್ಸ್‌ ಟ್ರೈ ಮಾಡಿ ನೋಡಿ!

ಅಲ್ಲದೇ ಈ ಮೋಸದ ಆಟದಿಂದ ಬಂದ ಬಿಲ್ ಹಣದಲ್ಲಿ 15 ಪ್ರತಿಶತವನ್ನು ಮಹಿಳೆಗೆ, 45 ಪ್ರತಿಶತವನ್ನು ವ್ಯವಸ್ಥಾಪಕರಿಗೆ ಮತ್ತು ಉಳಿದ 40 ಪ್ರತಿಶತವನ್ನು ಮಾಲೀಕರಿಗೆ ಹಂಚಲಾಗುತ್ತದೆ ಎಂದು ಆರೋಪಿಗಳಲ್ಲಿ ಒಬ್ಬ ಪೊಲೀಸರಿಗೆ ತಿಳಿಸಿದ್ದಾರೆ.

Dating Application

ಈ ಪ್ರಕರಣ ದೆಹಲಿ ಮಾತ್ರವಲ್ಲ ದೆಹಲಿ-ಎನ್ಸಿಆರ್, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಹಗರಣ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪುರುಷರು ಮಾತ್ರ ಗುರಿಯಾಗುತ್ತಿಲ್ಲ. ಈ ತಿಂಗಳ ಆರಂಭದಲ್ಲಿ, ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿದ ಮತ್ತು ಅವರ ಮನೆಗಳಲ್ಲಿ ದರೋಡೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರು ಪುರುಷರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

(ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರ)

Continue Reading

ಕರ್ನಾಟಕ

Monsoon session: ರಾಜ್ಯ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್‌; ದಿನಾಂಕ ಫೈನಲ್ ಮಾಡಿದ ಸಿಎಂ

Monsoon session: ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಅಧಿವೇಶನದ ದಿನಾಂಕವನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.

VISTARANEWS.COM


on

Monsoon session
Koo

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ (ಮುಂಗಾರು ಅಧಿವೇಶನ) ಮುಹೂರ್ತ ಫಿಕ್ಸ್‌ ಆಗಿದೆ. ಜುಲೈ 15ರಿಂದ 26ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದಾರೆ.

ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಅಧಿವೇಶನದ ದಿನಾಂಕವನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.

ಇದನ್ನೂ ಓದಿ | Parliament Sessions: ಹಿಂದೂ ಹಿಂಸಾವಾದಿ ಹೇಳಿಕೆ; ಸಂಸತ್‌ನಲ್ಲಿ ರಾಹುಲ್‌-ಮೋದಿ ಜಟಾಪಟಿ

ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ: ಸಿಎಂ

ರಾಜ್ಯದಲ್ಲಿ ಕಳೆದ ವರ್ಷ 2022-23ನೇ ಸಾಲಿನಲ್ಲಿ 1,22,821 ಕೋಟಿ, 2021- 22ರಲ್ಲಿ 1,45,266 ಕೋಟಿ ಜಿಎಸ್‌ಟಿ ಸಂಗ್ರಹಣೆ ಆಗಿತ್ತು. ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. 65 ಸಿಬ್ಬಂದಿಗೆ ಉತ್ತಮವಾಗಿ ತೆರಿಗೆ ಸಂಗ್ರಹ ಮಾಡಿದ್ದಕ್ಕೆ ಪ್ರಶಸ್ತಿ ಕೊಟ್ಟಿದ್ದೀವಿ. ನಮ್ಮಲ್ಲಿ 6 ಸಾವಿರ ವಾಣಿಜ್ಯ ಇಲಾಖೆ ಸಿಬ್ಬಂದಿ ಇದ್ದಾರೆ, ಅವರೆಲ್ಲರೂ ಪ್ರಶಸ್ತಿ ತಗೋಳೋಕೆ ಪ್ರಯತ್ನ ಮಾಡಬೇಕು. ನಮ್ಮ ರಾಜ್ಯದ ಅಧಿಕಾರಿಗಳು ಬೇರೆಯವರಿಗೆ ಪ್ರೇರಣೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಎಸ್‌ಟಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಜಿಎಸ್‌ಟಿ ದಿನದ ವೇಳೆಗೆ ಹೆಚ್ಚು ತೆರಿಗೆ ವಸೂಲಿ ಮಾಡಿ, ಇನ್ನು ಹೆಚ್ಚು ನೌಕರರು ಪ್ರಶಸ್ತಿ ತೆಗೆದುಕೊಳ್ಳಬೇಕು ಎಂದರು.

ನಂತರ ಕರವೇ ನಾರಾಯಣಗೌಡ ನಿಯೋಗ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡಿಗರಿಗೆ ವಿಶೇಷ ಉದ್ಯೋಗ ಮೀಸಲಾತಿ ನೀಡಲು ಹೊಸ ಕಾನೂನು ಜಾರಿಗೆ ತರಬೇಕು ಅಂತ ಹೇಳಿದ್ದಾರೆ. ನಾನು ಅದನ್ನು ಸಂವಿಧಾನ ಹಿನ್ನೆಲೆಯಲ್ಲಿ ಎಜಿ ಜತೆಗೆ ಚರ್ಚೆ ಮಾಡುತ್ತೇನೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡುವುದು ಹಾಗೂ ಕಾನೂನು ಮಾಡುವುದು ಅವರ ಬೇಡಿಕೆಯಾಗಿದೆ. ಅದಕ್ಕೆ ಕಾನೂನು, ಸಂವಿಧಾನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

UPSC 2024 : ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಾರೆ. ಯುಪಿಎಸ್ಸಿ ಸಿಎಸ್ಇ ಮೇನ್ಸ್ ಪರೀಕ್ಷೆ ಇದಾಗಿದೆ. ಇಲ್ಲಿ ಇದು ಎರಡು ಭಾಗಗಳಿವೆ . ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ. ಲೋಕ ಸೇವಾ ಆಯೋಗದ ಪರೀಕ್ಷಾ ಕ್ಯಾಲೆಂಡರ್ ಪ್ರಕಾರ ಮೇನ್ಸ್​ (ಮುಖ್ಯ) ಪರೀಕ್ಷೆ ಸೆಪ್ಟೆಂಬರ್ 20 ರಂದು ಪ್ರಾರಂಭವಾಗಲಿದೆ.

VISTARANEWS.COM


on

UPSC 2024
Koo

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ 2024ನೇ( UPSC 2024) ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್​) ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಯುಪಿಎಸ್​ಸಿ ಸಿಎಸ್ಇ 2024 ರ ಪರೀಕ್ಷೆಗೆ ಹಾಜರಾಗಿವು ಅಭ್ಯರ್ಥಿಗಳು upsc.gov.in ಮತ್ತು upsconline.nic.in ವೆಬ್​ಸೈಟ್​ಗೆ ಪ್ರವೇಶ ಮಾಡಿ ಫಲಿತಾಂಶಗಳನ್ನು ಡೌನ್ಲೋಡ್ ಮಾಡಬಹದು. ಸಾಮಾನ್ಯ ಪರೀಕ್ಷೆಯನ್ನು ಜೂನ್ 16 ರಂದು ಸಾಮಾನ್ಯ ಅಧ್ಯಯನ ಪರೀಕ್ಷೆ 1 ಮತ್ತು ಪರೀಕ್ಷೆ 2 ಎಂದು ಎರಡು ಪಾಳಿಗಳಲ್ಲಿ ನಡೆಸಲಾಯಿತು. ಪರೀಕ್ಷೆಯು ಒಟ್ಟು 400 ಅಂಕಗಳನ್ನು ಹೊಂದಿತ್ತು. ಪ್ರಶ್ನೆ ಪತ್ರಿಕೆಯು ಆಬ್ಜೆಕ್ಟಿವ್​ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿದ್ದು, ತಲಾ 4 ಆಯ್ಕೆಗಳನ್ನು ಹೊಂದಿತ್ತು.

ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಾರೆ. ಯುಪಿಎಸ್ಸಿ ಸಿಎಸ್ಇ ಮೇನ್ಸ್ ಪರೀಕ್ಷೆ ಇದಾಗಿದೆ. ಇಲ್ಲಿ ಇದು ಎರಡು ಭಾಗಗಳಿವೆ . ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ. ಲೋಕ ಸೇವಾ ಆಯೋಗದ ಪರೀಕ್ಷಾ ಕ್ಯಾಲೆಂಡರ್ ಪ್ರಕಾರ ಮೇನ್ಸ್​ (ಮುಖ್ಯ) ಪರೀಕ್ಷೆ ಸೆಪ್ಟೆಂಬರ್ 20 ರಂದು ಪ್ರಾರಂಭವಾಗಲಿದೆ.

ಕಳೆದ ವರ್ಷದ ಟ್ರೆಂಡ್ ಪ್ರಕಾರ, ಪರೀಕ್ಷೆಯನ್ನು ಮೇ 26 ರಂದು ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಜೂನ್ 12 ರಂದು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: Reliance Jio: ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಇತರ ಉನ್ನತ ಸೇವೆಗಳಲ್ಲಿ ಪ್ರಮುಖ ಹುದ್ದೆಗಳಿಗೆ ಸ್ಪರ್ಧಿಸುವ ಲಕ್ಷಾಂತರ ನಾಗರಿಕ ಸೇವಾ ಆಕಾಂಕ್ಷಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಯುಪಿಎಸ್ಸಿ ಸಿಎಸ್ಇ ಕಟ್-ಆಫ್ ನಿರ್ಣಾಯಕವಾಗಿದೆ. 2023 ರಲ್ಲಿ ಸಾಮಾನ್ಯ ವರ್ಗಕ್ಕೆ ಯುಪಿಎಸ್ಸಿ ಪ್ರಿಲಿಮ್ಸ್ ಕಟ್-ಆಫ್ 75.41 ರಷ್ಟಿತ್ತು.

ಈ ಬಾರಿಯ ಫಲಿತಾಂಶಗಳನ್ನು ಈ ರೀತಿ ಡೌನ್​ಲೋಡ್ ಮಾಡಿಕೊಳ್ಳಿ


  • ಮೊದಲಿಗೆ, ಯುಪಿಎಸ್ಸಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಯುಪಿಎಸ್ಸಿ ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದಾಗ ಹೊಸ ಪುಟ ತೆರೆಯುತ್ತದೆ.
  • “ಸಲ್ಲಿಸು” ಆಯ್ಕೆಯನ್ನು ಆರಿಸಿದರೆ ಫಲಿತಾಂಶಗಳು ಕಾಣುತ್ತದೆ
  • ಡೌನ್ ಲೋಡ್ ಮಾಡಿ ಮತ್ತು ನಿಮ್ಮ ಭವಿಷ್ಯದ ಅಗತ್ಯಗಳಿಗಾಗಿ ಕಾಪಿಯನ್ನು ಸೇವ್ ಮಾಡಿಟ್ಟುಕೊಳ್ಳಿ.

2024 ರ ಸಿಎಸ್ (ಪಿ) ಪರೀಕ್ಷೆಯ ಅಂಕಗಳು, ಕಟ್-ಆಫ್ ಅಂಕಗಳು ಮತ್ತು ಉತ್ತರ ಕೀಗಳನ್ನು ನಾಗರಿಕ ಸೇವೆಗಳ ಪರೀಕ್ಷೆ ಪೂರ್ಣಗೊಂಡ ನಂತರ ಮತ್ತು ಅಂತಿಮ ಫಲಿತಾಂಶಗಳ ಪ್ರಕಟಣೆಯ ನಂತರ ವೆಬ್​ಸೈಟ್​ನಲ್ಲಿ ಪೋಸ್ಟ್​​ ಮಾಡಲಾಗುತ್ತದೆ.

Continue Reading
Advertisement
Viral Video
Latest4 mins ago

Viral Video: ಪ್ರೇಯಸಿಯ ಕಣ್ಮುಂದೆಯೇ ಆಕೆಯ ತಂದೆಯನ್ನು ಬರ್ಬರವಾಗಿ ಕೊಂದ ಪ್ರಿಯಕರ!

Dating Application
Latest12 mins ago

Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು?

Special awareness programme on drug abuse illegal trafficking
ಬೆಂಗಳೂರು17 mins ago

Bengaluru News: ಮಾದಕ ದ್ರವ್ಯ ಅಕ್ರಮ ಸಾಗಾಟ; ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

Monsoon session
ಕರ್ನಾಟಕ18 mins ago

Monsoon session: ರಾಜ್ಯ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್‌; ದಿನಾಂಕ ಫೈನಲ್ ಮಾಡಿದ ಸಿಎಂ

UPSC 2024
ಪ್ರಮುಖ ಸುದ್ದಿ22 mins ago

UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

Kabzaa movie Appreciation Letter from Union Finance Ministry to Sri siddeshwar Enterprises
ಕರ್ನಾಟಕ51 mins ago

Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

Parliament Sessions
ಪ್ರಮುಖ ಸುದ್ದಿ1 hour ago

Parliament Sessions : ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಅವಮಾನ: ಬಿಜೆಪಿ ಆರೋಪ

Reliance Jio
ಕರ್ನಾಟಕ1 hour ago

Reliance Jio: ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

Parliament Sessions
ದೇಶ1 hour ago

Parliament Sessions: ಮೋದಿ ಆತ್ಮದ ಜೊತೆ ಪರಮಾತ್ಮನ ಸಂವಹನ; ರಾಹುಲ್‌ ಗಾಂಧಿ ವ್ಯಂಗ್ಯ

MUDA site scandal
ಕರ್ನಾಟಕ1 hour ago

MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌