ಬೆಂಗಳೂರು: ಟಾಟಾ ಮೋಟಾರ್ಸ್ ಈ ಮಾರ್ಚ್ ನಲ್ಲಿ ಪಂಚ್ ಇವಿ (Tata Nexon EV) ಹೊರತುಪಡಿಸಿ ತನ್ನ ಎಲ್ಲಾ ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಆಕರ್ಷಕ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುತ್ತಿದೆ. ಮಾರಾಟವಾಗದ ಸ್ಟಾಕ್ ಅನ್ನು ಮುಗಿಸುವ ಉದ್ದೇಶದಿಂದ 2023ರಲ್ಲಿ ತಯಾರಿಸಿದ ಕಾರುಗಳ ಮೇಲೆ ರಿಯಾಯಿತು ನೀಡಲಾಗುತ್ತಿದೆ. ಆದರೆ ನೆಕ್ಸಾನ್ ಇವಿ ಮತ್ತು ಟಿಯಾಗೊ ಇವಿಯ ಕೆಲವು ಹೊಸ 2024ರ ಮಾಡೆಲ್ಗಳ ಮೇಲೆಯೂ ರಿಯಾಯಿತಿ ಘೋಷಿಸಲಾಗಿದೆ.
ಪ್ರೀ-ಫೇಸ್ ಲಿಫ್ಟ್ ಟಾಟಾ ನೆಕ್ಸಾನ್ ಇವಿ ರಿಯಾಯಿತಿ; 3.15 ಲಕ್ಷ ರೂಪಾಯಿ
ಟಾಟಾ ಡೀಲರ್ ಗಳು ಪ್ರೀ-ಫೇಸ್ ಲಿಫ್ಟ್ ಎಲೆಕ್ಟ್ರಿಕ್ ಎಸ್ ಯುವಿಯ ಮಾರಾಟವಾಗದ 2023 ಕಾರುಗಳ ಮೇಲೆ ಬೃಹತ್ ರಿಯಾಯಿತಿಯನ್ನು ನೀಡುತ್ತಿದ್ದಾರೆ. ನೆಕ್ಸಾನ್ ಇವಿ ಪ್ರೈಮ್ 2.30 ಲಕ್ಷ ರೂ.ಗಳ ನಗದು ರಿಯಾಯಿತಿ ಮತ್ತು 50,000 ರೂ.ಗಳ ಎಕ್ಸ್ಚೇಂಜ್ ಬೋನಸ್ ಅನ್ನು ನೀಡಲಾಗಿದೆ. ಏತನ್ಮಧ್ಯೆ ನೆಕ್ಸಾನ್ ಇವಿ ಮ್ಯಾಕ್ಸ್ ಇನ್ನೂ ಹೆಚ್ಚಿನ ನಗದು ರಿಯಾಯಿತಿ ಮತ್ತು 50,000 ರೂ.ಗಳ ವಿನಿಮಯ ಬೋನಸ್ ಪಡೆಯುತ್ತದೆ. ಆದಾಗ್ಯೂ, ಇದು ಸ್ಟಾಕ್ ಗಳ ಲಭ್ಯತೆಯನ್ನು ಆಧರಿಸಿರುತ್ತದೆ.
ನೆಕ್ಸಾನ್ ಇವಿ ಪ್ರೈಮ್ 129 ಬಿಹೆಚ್ ಪಿ ಎಲೆಕ್ಟ್ರಿಕ್ ಮೋಟರ್ ಮತ್ತು 30.2 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಎಆರ್ಎಐಯಿಂದ ದೃಢೀಕರಣಗೊಂಡ 312 ಕಿ.ಮೀ ರೇಂಜ್ ಹೊಂದಿದೆ. ನೆಕ್ಸಾನ್ ಇವಿ ಮ್ಯಾಕ್ಸ್ 40.5 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ 143 ಬಿಹೆಚ್ ಪಿ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ನೀಡಲಾಗಿದೆ. ಇದು 437 ಕಿ.ಮೀ ರೇಂಜ್ ಹೊಂದಿದೆ.
ಟಾಟಾ ನೆಕ್ಸಾನ್ ಇವಿಗೆ ರಿಯಾಯಿತಿ- 50,000 ರೂ.
2023 ರಲ್ಲಿ ತಯಾರಿಸಿದ ನೆಕ್ಸಾನ್ ಇವಿಯ ಎಲ್ಲಾ ವೇರಿಯೆಂಟ್ಗಳು 50,000 ರೂ.ಗಳ ಹಸಿರು ಬೋನಸ್ ಅನ್ನು ಹೊಂದಿದ್ದರೆ, 2024 ಮಾದರಿಗಳು 20,000 ರೂ.ಗಳ ಹಸಿರು ಬೋನಸ್ ಪಡೆಯುತ್ತದೆ. ಆದಾಗ್ಯೂ, ಫೇಸ್ ಲಿಫ್ಟೆಡ್ ಮಾದರಿಯಲ್ಲಿ ಯಾವುದೇ ನಗದು ರಿಯಾಯಿತಿ ಅಥವಾ ವಿನಿಮಯ ಬೋನಸ್ ಗಳಿಲ್ಲ.
ನೆಕ್ಸಾನ್ ಇವಿ ಎರಡು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಎಂಆರ್ 30.2 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ ಎಂಆರ್ ಎಲ್ಆರ್ 40.5 ಕಿಲೋ ವ್ಯಾಟ್ ಬ್ಯಾಟರಿಯೊಂದಿಗೆ ಲಭ್ಯವಿದೆ. ಎಂಆರ್ 325 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದರೆ, ಎಲ್ಆರ್ 465 ಕಿ.ಮೀ ವ್ಯಾಪ್ತಿ ಹೊಂದಿದೆ. ಎರಡೂ ಆವೃತ್ತಿಗಳು ಈಗ 7.2 ಕಿಲೋವ್ಯಾಟ್ ಎಸಿ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ. ಎಂಆರ್ ಕಾರಿನ ಎಂಜಿನ್ 129 ಬಿ ಹೆಚ್ ಪಿ ಪವರ್ ಮತ್ತು 215 ಎನ್ ಎಂ ಟಾರ್ಕ್ ಉತ್ಪಾದಿಸಿದರೆ, ಎಲ್ ಆರ್ 145 ಬಿ ಹೆಚ್ ಪಿ ಪವರ್ ಮತ್ತು 215 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
ಟಾಟಾ ಟಿಯಾಗೊ ಇವಿ ರಿಯಾಯಿತಿಗಳು; 65,000 ರೂ ಉಳಿತಾಯ
ಟಿಯಾಗೊ ಇವಿಯ 2023 ಯುನಿಟ್ ಗಳಿಗೆ 65,000 ರೂ.ಗಳವರೆಗೆ ರಿಯಾಯಿತಿ ನೀಡಲಾಗಿದೆ. ಇದರಲ್ಲಿ 50,000 ರೂ.ಗಳ ಗ್ರಿನ್ ಬೋನಸ್ ಮತ್ತು 15,000 ರೂ.ಗಳ ವಿನಿಮಯ ಕೊಡುಗೆ ಸೇರಿವೆ. ಏತನ್ಮಧ್ಯೆ, ಹೊಸ 2024 ಮಾದರಿಯು 25,000 ರೂ.ಗಳ ವಿನಿಮಯ ಬೋನಸ್ ಮತ್ತು 10,000 ರೂ.ಗಳ ವಿನಿಮಯ ಕೊಡುಗೆ ಪಡೆಯುತ್ತದೆ.
ಇದನ್ನೂ ಓದಿ : Tata Motors : ಸನಂದ್ ಘಟಕದಲ್ಲಿ 10 ಲಕ್ಷ ಕಾರು ಉತ್ಪಾದಿಸಿದ ಟಾಟಾ ಮೋಟಾರ್ಸ್
ಟಿಯಾಗೊ ಇವಿ ಮಧ್ಯಮ ಶ್ರೇಣಿ ಮತ್ತು ಲಾಂಗ್ ರೇಂಜ್ ಬ್ಯಾಟರಿ ಆಯ್ಕೆಯೊಂದಿಗೆ ಲಭ್ಯವಿದೆ. 250 ಕಿ.ಮೀ ರೇಂಜ್ ಹೊಂದಿರುವ ಮಿಡ್ ರೇಂಜ್ ವೇರಿಯೆಂಟ್ 19.2 ಕಿಲೋವ್ಯಾಟ್ ಬ್ಯಾಟರಿ ಬಳಸುತ್ತದೆ. 61 ಬಿಹೆಚ್ ಪಿ ಮತ್ತು 110 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಲಾಂಗ್ ರೇಂಜ್ ರೂಪಾಂತರವು ಎಂಐಡಿಸಿ ಚಕ್ರದಲ್ಲಿ 315 ಕಿ.ಮೀ ರೇಂಜ್ನೊಂದಿಗೆ ದೊಡ್ಡ 24 ಕಿಲೋವ್ಯಾಟ್ ಬ್ಯಾಟರಿ ಪಡೆಯುತ್ತದೆ. ಈ ಕಾರು 74 ಬಿಹೆಚ್ ಪಿ ಮತ್ತು 114 ಎನ್ಎಂ ಟಾರ್ಕ್ ಹೊಂದಿದೆ.
ಟಾಟಾ ಟಿಗೋರ್ ಇವಿ; 1.05 ಲಕ್ಷ ರೂ.ವರೆಗೆ ರಿಯಾಯಿತಿ
ಟಿಗೋರ್ ಇವಿ ಒಟ್ಟು 1.05 ಲಕ್ಷ ರೂ.ಗಳವರೆಗೆ ರಿಯಾಯಿತಿಯನ್ನು ಪಡೆಯುತ್ತದೆ. ಇದರಲ್ಲಿ 75,000 ರೂ.ಗಳ ನಗದು ರಿಯಾಯಿತಿ ಮತ್ತು ಎಲ್ಲಾ ರೂಪಾಂತರಗಳಲ್ಲಿ 30,000 ರೂ.ಗಳ ವಿನಿಮಯ ಬೋನಸ್ ಸೇರಿದೆ. ಆದಾಗ್ಯೂ, ಇವು 2023 ರ ತಯಾರಿಸಿದ ಮಾದರಿಗಳಿಗೆ ಮಾತ್ರ ಅನ್ವಯ. ಟಿಗೋರ್ ಇವಿ 26 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನಿಂದ 315 ಕಿ.ಮೀ ವ್ಯಾಪ್ತಿ ಹೊಂದಿದೆ. ಈ ಬ್ಯಾಟರಿಯು 75 ಬಿಹೆಚ್ ಪಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.