Site icon Vistara News

Tata Nexon EV : ಟಾಟಾ ನೆಕ್ಸಾನ್ ಇವಿ, ಟಿಯಾಗೊ ಇವಿ ಬೆಲೆಯಲ್ಲಿ ಲಕ್ಷಗಟ್ಟಲೆ ಇಳಿಕೆ

Tata Nexon EV 1

ಬೆಂಗಳೂರು: ಟಾಟಾ ಮೋಟಾರ್ಸ್ (Tata Motors) ನೆಕ್ಸಾನ್ ಇವಿ (Tata Nexon EV) ಮತ್ತು ಟಿಯಾಗೊ ಇವಿ ಮೇಲಿನ ಬೆಲೆಯನ್ನು ಕಡಿತಗೊಳಿಸಿದ್ದು, ಎರಡೂ ಮಾದರಿಗಳ ಆರಂಭಿಕ ಬೆಲೆಯನ್ನು ಕ್ರಮವಾಗಿ ರೂ.25,000 ಮತ್ತು ರೂ.70,000 ರಷ್ಟು ಕಡಿಮೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಸೆಲ್ ಬೆಲೆಗಳು ಕಡಿಮೆಯಾಗಿದೆ. ಈಗ ಅದನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಮಿಡ್​ ರೇಂಜ್​ ​ (ಎಂಆರ್) ನೆಕ್ಸಾನ್ ಇವಿಯ ಆರಂಭಿಕ ಬೆಲೆ 25,000 ರೂ.ಗಳಷ್ಟು ಕಡಿಮೆಯಾಗಿದೆ ಮತ್ತು ಇದು ಈಗ 14.49 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಏತನ್ಮಧ್ಯೆ, ಲಾಂಗ್ ರೇಂಜ್ (ಎಲ್ಆರ್) ವೇರಿಯೆಂಟ್​ ಬೆಲೆ ಗಮನಾರ್ಹ 1.20 ಲಕ್ಷ ರೂ. ಕಡಿತವನ್ನು ಕಂಡಿದೆ. ಇದರ ಬೆಲೆ 16.99 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಅಂತೆಯೇ, ಟಿಯಾಗೊ.ಇವಿಯ ಆರಂಭಿಕ ಬೆಲೆಯೂ 70,000 ರೂ.ಗಳಷ್ಟು ಕಡಿಮೆಯಾಗಿದೆ. ಈಗ ಅದರ ಬೆಲೆ 7.99 ಲಕ್ಷ ರೂ.ಗಳಿಂದ ಪ್ರಾರಂಭವಾಗಿದೆ.

ಇದನ್ನೂ ಓದಿ : Maruti Fronx : 35 ಕಿಲೋ ಮೀಟರ್​ ಮೈಲೇಜ್​ ನೀಡುವ ಮಾರುತಿ ಸುಜುಕಿಯ ಈ ಕಾರು ಶೀಘ್ರ ಮಾರುಕಟ್ಟೆಗೆ

ಏತನ್ಮಧ್ಯೆ, ಇತ್ತೀಚೆಗೆ ಬಿಡುಗಡೆಯಾದ ಪಂಚ್ ಇವಿಯ ಬೆಲೆಗಳು ಬದಲಾಗದೆ ಉಳಿದಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಏಕೆಂದರೆ ಬಿಡುಗಡೆಯ ಸಮಯದಲ್ಲಿ ಬ್ಯಾಟರಿ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಅಂತೆಯೇ, ಟಿಗೋರ್ ಇವಿ ಬೆಲೆಗಳು ಸಹ ಬದಲಾಗದೆ ಉಳಿದಿವೆ.

ಟಿಯಾಗೊ ಇವಿಯ ಹತ್ತಿರದ ಪ್ರತಿಸ್ಪರ್ಧಿ – ಎರಡು-ಡೋರ್ ಎಂಜಿ ಕಾಮೆಟ್ – ಇತ್ತೀಚೆಗೆ 1.40 ಲಕ್ಷ ರೂ.ಗಳವರೆಗೆ ಗಮನಾರ್ಹ ಬೆಲೆ ಕಡಿತವನ್ನು ಮಾಡುತ್ತು. ಮಾರಾಟವನ್ನು ಹೆಚ್ಚಿಸಲು ಟಾಟಾ ಮೋಟಾರ್ಸ್ ನಿಂದ ಅದೇ ತಂತ್ರವನ್ನು ಉಪಯೋಗಿಸಲಾಗಿದೆ.

ಭಾರತದಲ್ಲಿ ಇವಿ ಮಾರಾಟ ಹೇಗಿದೆ?

ಕಳೆದ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಶೇಕಡಾ 90 ರಷ್ಟು ಹೆಚ್ಚಾಗಿದೆ. ಆದರೆ ಪ್ಯಾಸೆಂಜರ್ ವೆಹಿಕಲ್ (ಪಿವಿ) ವಿಭಾಗವು ಶೇಕಡಾ 8 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಟಾಟಾ ಮೋಟಾರ್ಸ್​ ಮಾರುಕಟ್ಟೆಯ ಮುಂಚೂಣಿ ಸ್ಥಾನ ಪಡೆದಿದೆ. ಜನವರಿಯಲ್ಲಿ ಇವಿ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 100 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ.

ಲ್ಲಿವೆ ನೋಡಿ ಭಾರತದ ಮೊಟ್ಟಮೊದಲ ಸಿಎನ್​ಜಿ ಆಟೋಮ್ಯಾಟಿಕ್​ ಕಾರುಗಳು

ಪ್ರಯಾಣಿಕ ಕಾರುಗಳ ತಯಾರಿಕೆಯಲ್ಲಿ ದಿನದಿಂದ ದಿನಕ್ಕೆ ಹೊಸತನ ತೋರುತ್ತಿರುವ ಟಾಟಾ ಮೋಟಾರ್ಸ್​ ಮತ್ತೊಂದು ಮುಂಚೂಣಿ ಯೋಜನೆಯೊಂದನ್ನು ಪ್ರಕಟಿಸಿದೆ. ಅದೇನೆಂದರೆ ಸಿಎನ್​ಜಿ ಕಾರುಗಳಲ್ಲಿ (CNG Car) ಆಟೋಮ್ಯಾಟಿಕ್​ ಗೇರ್​ಬಾಕ್ಸ್​ ಆಯ್ಕೆ. ನಮ್ಮಲ್ಲೇ ಮೊದಲು ಎಂಬುದು ಟಾಟಾ ಮೋಟಾರ್ಸ್​ನ ಇತ್ತೀಚಿನ ಮಾರಾಟ ಕಾರ್ಯತಂತ್ರ. ಅಂತೆಯೇ ಕಂಪನಿಯು ಇತ್ತೀಚೆಗೆ ನಡೆದ ಭಾರತ್ ಮೊಬಿಲಿಟಿ ಎಕ್ಸ್ ಪೋ 2024 ರಲ್ಲಿ ನೆಕ್ಸಾನ್ ಐ-ಸಿಎನ್ ಜಿಯನ್ನು ಪ್ರದರ್ಶಿಸಿದೆ. ಇದು ಭಾರತದ ಮೊದಲ ಟರ್ಬೊ ಪೆಟ್ರೋಲ್ ಸಿಎನ್ ಜಿ ವಾಹನವಾಗಿದೆ. ಈಗ, ಕಂಪನಿಯು ಟಿಯಾಗೊ ಐ-ಸಿಎನ್ ಜಿ ಮತ್ತು ಟಿಗೋರ್ ಐ-ಸಿಎನ್ ಜಿಯ ಆಟೊಮ್ಯಾಟಿಕ್​ ಗೇರ್​ಬಾಕ್ಸ್​ ವೇರಿಯೆಂಟ್​ ಕೂಡ ಬಿಡುಗಡೆ ಮಾಡಿದೆ. ಇದು ಭಾರತದ ಮೊದಲ ಆಟೋಮ್ಯಾಟಿಕ್ ಗೇರ್​ಬಾಕ್ಸ್ ಹೊಂದಿರು ಸಿಎನ್ ಜಿ ಕಾರುಗಳಾಗಿವೆ.

ಹೆಚ್ಚುತ್ತಿರುವ ಇಂಧನ ಬೆಲೆಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳು ಅನಿವಾರ್ಯವಾಗುತ್ತಿವೆ. ಆದರೆ ಹೆಚ್ಚಿನ ಬೆಲೆ, ಚಾರ್ಜಿಂಗ್ ಮೂಲಸೌಕರ್ಯದ ಕೊರತೆ ಖರೀದಿದಾರರನ್ನು ಸಿಎನ್​​ಜಿ ಕಡೆಗೆ ವಾಲುವಂತೆ ಮಾಡಿದೆ. ಅನೇಕ ತಯಾರಕರು ಸಿಎನ್ ಜಿಯನ್ನು ಕಾರುಗಳನ್ನು ಮಾರುಕಟ್ಟೆಗೆ ಇಳಿಸಿದೆ.

ಕಡಿಮೆ ಚಾಲನೆಯ ವೆಚ್ಚಗಳು, ಹೆಚ್ಚಿನ ದಕ್ಷತೆಯೊಂದಿಗೆ ಸಿಎನ್ ಜಿ ಅನೇಕ ಕಾರು ಖರೀದಿದಾರರಿಗೆ ಕಾರ್ಯಸಾಧ್ಯವಾದ ಆಯ್ಕೆಯಾಗಿ ಹೊರಹೊಮ್ಮಿದೆ. ಟಾಟಾ ಮೋಟಾರ್ಸ್ ಹೊರತುಪಡಿಸಿ, ಹ್ಯುಂಡೈ, ಮಾರುತಿ ಸುಜುಕಿ ಮತ್ತು ಟೊಯೊಟಾ ಸಹಭಾಗಿತ್ವದಲ್ಲಿ ಸಿಎನ್ ಜಿ ವಾಹನಗಳನ್ನು ನೀಡುತ್ತಿವೆ. ಆದಾಗ್ಯೂ, ಸಿಎನ್ ಜಿಯಲ್ಲಿ ಆಟೊಮ್ಯಾಟಿಕ್​ ಗೇರ್​ಬಾಕ್ಸ್​ ತಂದಿರುವುದು ಟಾಟಾ ಎಂಬುದು ಅವರ ಹೆಗ್ಗಳಿಕೆ.

Exit mobile version