ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಎಂದರೆ ಸಚಿನ್ ತೆಂಡೂಲ್ಕರ್ (Sachin Tendulkar); ತೆಂಡೂಲ್ಕರ್ ಎಂದರೆ ಕ್ರಿಕೆಟ್ ಎಂಬ ಮಾತಿದೆ. ಸಚಿನ್ ತೆಂಡೂಲ್ಕರ್ಗೆ ಅಷ್ಟೊಂದು ದೊಡ್ಡ ಅಭಿಮಾನಿ ವರ್ಗವಿದೆ. ಭಾರತದ ಕ್ರಿಕೆಟ್ ಕ್ಷೇತ್ರವನ್ನು ಎರಡು ದಶಕಕ್ಕೂ ಹೆಚ್ಚು ಕಾಲ ಆಳಿದವರು ಅವರು. ಅದೇ ರೀತಿ ಅತ್ಯುತ್ತಮ ವರ್ತನೆಯನ್ನೂ ತೋರಿದವರು. ಹೀಗಾಗಿ ಸಚಿನ್ ಎಲ್ಲಿಗೆ ಹೋದರೂ ಅಭಿಮಾನಿಗಳು ಸ್ವಯಂಪ್ರೇರಿತವಾಗಿ ವಾತಾವರಣವನ್ನು ‘ಸಚಿನ್ ಮಯ’ ಮಾಡುತ್ತಾರೆ. “ಸಚಿನ್, ಸಚಿನ್” ಎಂದು ಅವರ ಹೆಸರನ್ನು ಕೂಗುವ ಮೂಲಕ ಕ್ರಿಕೆಟ್ ದೇವರ ಆಗಮನವನ್ನು ಸಂಭ್ರಮಿಸುತ್ತಾರೆ.
ಅಂತಹ ಒಂದು ಘಟನೆ ಇತ್ತೀಚೆಗೆ ನಡೆಯಿತು. ಅವರು ಪ್ರಯಾಣ ಮಾಡುತ್ತಿದ್ದ ವಿಮಾನದಲ್ಲಿ ಈ ಪ್ರಸಂಗ ನಡೆಯಿತು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ,ಸಚಿನ್ ತೆಂಡೂಲ್ಕರ್ ಮೈದಾನಕ್ಕೆ ಬರುವಾಗ ಸಚಿನ್, ಸಚಿನ್ ಎಂದು ಅಭಿಮಾನಿಗಳು ಕೂಗುವ ರೀತಿಯಲ್ಲೇ ವಿಮಾನದ ಪ್ರಯಾಣಿಕರು ಘೋಷಣೆ ಕೂಗಿದ ಪ್ರಸಂಗ ನಡಯಿತು. ಅದಕ್ಕೆ ಸಚಿನ್ ತೆಂಡೂಲ್ಕರ್ ಕೂಡ ಉತ್ತಮವಾಗಿ ಸ್ಪಂದಿಸಿದರು.
When fans converted a flight into a stadium through their chants of "Sachin Sachin" 🔥#CricketTwitter #SachinTendulkar pic.twitter.com/lczfATutqp
— OneCricket (@OneCricketApp) February 21, 2024
ಸಚಿನ್ ತೆಂಡೂಲ್ಕರ್ 24 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದಲ್ಲಿ ಪ್ರಭಾವಶಾಲಿ ಆಟಗಾರ ಎನಿಸಿಕೊಂಡಿದ್ದರು. ಲೆಜೆಂಡರಿ ಬ್ಯಾಟರ್ ಏಕದಿನ ಮತ್ತು ಟೆಸ್ಟ್ ಎರಡರಲ್ಲೂ 34,000 ಕ್ಕೂ ಹೆಚ್ಚು ರನ್ ಪೇರಿಸಿದ್ದರು. ಎರಡೂ ಸ್ವರೂಪಗಳಲ್ಲಿ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಅವರು ತಮ್ಮ ವೃತ್ತಿಜೀವನ ಕೊನೆಗೊಳಿಸಿದರು. ಸಚಿನ್ ತೆಂಡೂಲ್ಕರ್ 100 ಶತಕಗಳೊಂದಿಗೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಭಾರತದ ಮಾಜಿ ಆಟಗಾರ ಮುಂಬರುವ ಐಪಿಎಲ್ 2024 ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಶಿಬಿರಕ್ಕೆ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ.
ಕಾಶ್ಮೀರದ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ದಿಗ್ಗಜ ಸಚಿನ್ ತೆಂಡೂಲ್ಕರ್; ವಿಡಿಯೊ ವೈರಲ್
ಶ್ರೀನಗರ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ(jammu and kashmir) ಕುಟುಂಬ ಸಮೇತರಾಗಿ ಮೊದಲ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಅವರು ಇಲ್ಲಿನ ಹಳ್ಳಿಯೊಂದ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೊ ಇದೀಗ ವೈರಲ್(viral video) ಆಗಿದೆ.
Sachin Tendulkar playing Street cricket with locals in Gulmarg during his Kashmir Trip.
— CrickeTendulkar 🇮🇳 (@CrickeTendulkar) February 21, 2024
Dont miss his Reaction at O0:24.🤩 #SachinTendulkarpic.twitter.com/IJe77dXyVx
ಕಳೆದ ವಾರ ಸಚಿನ್ ತಮ್ಮ ಪತ್ನಿ ಅಂಜಲಿ, ಪುತ್ರಿ ಸಾರಾ ಜತೆ ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಇಲ್ಲಿನ ಸ್ಥಳೀಯ ಮನೆಗಳಿಗೂ ಭೇಟಿ ನೀಡಿ ಚಹಾ ಸೇವಿಸಿದ್ದರು. ಸ್ಥಳೀಯ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಸಚಿನ್, ಈ ವೇಳೆ ತಮ್ಮ ಸಹೋದರಿ ಉಡುಗೊರೆಯಾಗಿ ನೀಡಿದ ತಮ್ಮ ಮೊದಲ ಕಾಶ್ಮೀರ ವಿಲ್ಲೋ ಬ್ಯಾಟ್ ಅನ್ನು ನೆನಪಿಸಿಕೊಂಡರು. ಈ ಫೋಟೊ ಮತ್ತು ವಿಡಿಯೊಗಳು ವೈರಲ್ ಆಗಿತ್ತು. ಇದೀಗ ಕ್ರಿಕೆಟ್ ಆಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದನ್ನೂ ಓದಿ : IPL 2024: ಐಪಿಎಲ್ನಿಂದ ಹೊರಬಿದ್ದ ಮೊಹಮ್ಮದ್ ಶಮಿ; ಗುಜರಾತ್ ತಂಡಕ್ಕೆ ಹಿನ್ನಡೆ
ಸಚಿನ್ ಅವರು ಗುಲ್ಮಾರ್ಗ್ ಪ್ರದೇಶದ ರಸ್ತೆಯೊಂದರಲ್ಲಿ ಇಲ್ಲಿನ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ್ದಾರೆ. ಬ್ಯಾಟಿಂಗ್ ನಡೆಸಿದ ಸಚಿನ್ ತಮ್ಮ ನೆಚ್ಚಿನ ಕ್ರಿಕೆಟ್ ಶಾಟ್ಗಳ ಮೂಲಕ ಗಮನಸೆಳೆದರು. ಸ್ಥಳೀಯರು ಕೂಡ ದಿಗ್ಗಜ ಆಟಗಾರನೊಂದಿಗೆ ಆಡಿದ ಸಂತಸವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್ ದೇವರ ಜತೆ ಆಡಿದ್ದು ನಮ್ಮ ಪುಣ್ಯ ಎಂದು ಇಲ್ಲಿನ ಓರ್ವ ನೆಟ್ಟಿಗ ಬರೆದುಕೊಂಡಿದ್ದಾನೆ.