Site icon Vistara News

Maruti Swift : ಹೊಸ ಮಾರುತಿ ಸ್ವಿಫ್ಟ್​ ಕಾರಿನಲ್ಲಿದೆ 50ಕ್ಕೂ ಹೆಚ್ಚು ಫೀಚರ್​ಗಳು

Maruti Swift

ಬೆಂಗಳೂರು: ಐಷಾರಾಮಿ, ಆರಾಮದಾಯಕ ಮತ್ತು ಇಂಧನ ದಕ್ಷತೆಯ ಕಾರುಗಳ ವಿಭಾಗದಲ್ಲಿ (ಪ್ರೀಮಿಯಂ ಹ್ಯಾಚ್‌ಬ್ಯಾಕ್​ ) ಮಾರುತಿ ಸುಜುಕಿ ಕಂಪನಿಯು ದೇಶಿ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲಿರುವ ʼಎಪಿಕ್‌ ನ್ಯೂ ಸ್ವಿಫ್ಟ್‌ʼ ಕಾರ್‌ (Maruti Swift) 50ಕ್ಕೂ ಹೆಚ್ಚು ವೈಶಿಷ್ಟತೆಗಳನ್ನು ಒಳಗೊಂಡಿದೆ. ಇದು ನಾಲ್ಕನೇ ಪೀಳಿಗೆಯ ಸ್ವಿಫ್ಟ್ ಕಾರಾಗಿದ್ದು ಇದು 26 ಕಿಲೋಮೀಟರ್​ ಮೈಲೇಜ್ ಕೊಡುವುದಾಗಿ ಕಂಪನಿ ಹೇಳಿಕೊಂಡಿದೆ.

ಕಾರಿನಲ್ಲಿ ವೈ-ಫೈ ಮೊಬೈಲ್‌ ಚಾರ್ಜರ್‌, ಹಿಂಭಾಗದಲ್ಲಿ ಏಸಿ ವೆಂಟ್‌, ಟೆಲಿಮ್ಯಾಟಿಕ್ಸ್‌ ಮತ್ತಿತರ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಈ ನಾಲ್ಕನೆ ತಲೆಮಾರಿನ ಸ್ವಿಫ್ಟ್‌, ʼಬಿʼ ವಿಭಾಗದ ವಾಹನಗಳಲ್ಲಿ ಸಾಮಾನ್ಯವಾಗಿರುವ ಎಲ್‌ಇಡಿ ಪ್ರೊಜೆಕ್ಟರ್​, ಹೆಡ್‌ಲೈಟ್ಸ್‌ ಮತ್ತು ಟೇಲ್‌ಲೈಟ್ಸ್‌ಗಳನ್ನು ಸಹ ಒಳಗೊಂಡಿದೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼಎಪಿಕ್ ನ್ಯೂ ಸ್ವಿಫ್ಟ್ʼ ನ ಇತರ ವೈಶಿಷ್ಟತೆಗಳು

ʼಎಪಿಕ್ ನ್ಯೂ ಸ್ವಿಫ್ಟ್ʼ ಉತ್ತಮ ಇಂಧನ ದಕ್ಷತೆ ಹೊಂದಿದೆ. ಸ್ವಯಂಚಾಲಿತ ಮಾದರಿಯಲ್ಲಿ ಇಂಧನ ದಕ್ಷತೆಯು ಶೇ 14ರಷ್ಟು ಸುಧಾರಿಸಿದೆ. ಮ್ಯಾನ್ಯುವಲ್‌ನಲ್ಲಿ ಇಂಧನ ದಕ್ಷತೆಯು ಶೇ 10 ರಷ್ಟು ಸುಧಾರಿಸಿದೆ. ಮೈಲೇಜ್‌ಗೆ ಸಂಬಂಧಿಸಿದಂತೆ, ಸ್ವಯಂಚಾಲಿತ ಮಾದರಿಯಲ್ಲಿ ಮೈಲೇಜ್ 25.7 ಕಿಮೀ/ಲೀಟರ್‌ ಮತ್ತು ಮ್ಯಾನ್ಯುವಲ್‌ನಲ್ಲಿ ಇದು 24.85 ಕಿಮೀ/ಲೀಟರ್‌ ನೀಡುತ್ತದೆ.. ಇವೆರಡೂ ಈ ವಿಭಾಗದಲ್ಲಿ ಗರಿಷ್ಠ ಮೈಲೇಜ್ ಅಗಿದೆ.

ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

ಸ್ವಿಫ್ಟ್‌ನಲ್ಲಿ ಬಳಸಲಾದ ಹೊಸ ಎಂಜಿನ್ ಕಾರ್ಬನ್‌ ಡೈಆಕ್ಸೈಡ್‌ (ಸಿಒ2) ಹೊರಸೂಸುವಿಕೆಯನ್ನು ಶೇ 12ವರೆಗೆ ಕಡಿಮೆ ಮಾಡುತ್ತದೆ. ಕಾರಿನ ಎಲ್ಲ ಮಾದರಿಗಳಲ್ಲಿ ಆರು ಏರ್‌ಬ್ಯಾಗ್‌ಗಳು ಇರಲಿವೆ. ಇದು ಸ್ಟ್ಯಾಂಡರ್ಡ್ ಫೀಚರ್ ಆಗಿದೆ.

ಪ್ರೀಮಿಯಂ ಹ್ಯಾಚ್ ವಿಭಾಗವು ಮುಂಬರುವ ದಿನಗಳಲ್ಲಿ ಗಮನಾರ್ಹವಾಗಿ ಬೆಳೆಯುವುದನ್ನು ನಾವು ಎದುರು ನೋಡುತ್ತಿದ್ದೇವೆ. ಸದ್ಯಕ್ಕೆ ವಾರ್ಷಿಕ 7 ಲಕ್ಷದಂತೆ ಮಾರಾಟವಾಗುತ್ತಿರುವ ಈ ವಿಭಾಗದ ಕಾರುಗಳ ಮಾರಾಟವು 2030ರ ವೇಳೆಗೆ, 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದು ಗಮನಾರ್ಹವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ. ಪ್ರೀಮಿಯಂ ಹ್ಯಾಚ್ ವಿಭಾಗಕ್ಕೆ ಸ್ವಿಫ್ಟ್ ಪುನಶ್ಚೇತನ ನೀಡಲಿದೆ ಎಂಬುದು ನಮ್ಮ ದೃಢ ನಂಬಿಕೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಣ್ಣಗಳ ಆಯ್ಕೆ

ಎರಡು ಆ್ಯಕ್ಸೆಸರಿ ಪ್ಯಾಕೇಜ್‌ಗಳಾದ ರೇಸಿಂಗ್ ರೋಡ್‌ಸ್ಟಾರ್ ಮತ್ತು ಥ್ರಿಲ್ ಚೇಸರ್ ನೀಡುತ್ತದೆ. ಎಪಿಕ್ ನ್ಯೂ ಸ್ವಿಫ್ಟ್ – ಎರಡು ಹೊಸ ಬಣ್ಣಗಳಾದ ಲಸ್ಟರ್ ಬ್ಲೂ ಮತ್ತು ನೋವೆಲ್ ಆರೆಂಜ್‌ನಲ್ಲಿ ಲಭ್ಯ ಇರಲಿದೆ. ಜೊತೆಗೆ ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವ್ಹೈಟ್, ಮ್ಯಾಗ್ಮಾ ಗ್ರೇ ಒಳಗೊಂಡಿರುವ ವ್ಯಾಪಕ ಶ್ರೇಣಿಯ ಬಣ್ಣಗಳಲ್ಲಿಯೂ ದೊರೆಯಲಿದೆ. ಮೂರು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಾದ – ಲಸ್ಟರ್ ಬ್ಲೂ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಸಿಜ್ಲಿಂಗ್ ರೆಡ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಪರ್ಲ್ ಆರ್ಕ್ಟಿಕ್ ವೈಟ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ ನಲ್ಲಿಯೂ ಸಹ ಲಭ್ಯ ಇವೆ

ಸ್ವಿಫ್ಟ್​ ಭಾರತದಲ್ಲಿ ಸುಮಾರು 3 ದಶಲಕ್ಷ ಗ್ರಾಹಕರನ್ನು ಹೊಂದಿದೆ

ಸ್ವಿಫ್ಟ್ ಕಾರನ್ನು ಭಾರತದಿಂದ 39 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹಣಕಾಸು ವರ್ಷ 2023-24 ರಲ್ಲಿ, 33,000 ಕ್ಕೂ ಹೆಚ್ಚು ಸ್ವಿಫ್ಟ್‌ಗಳನ್ನು ರಫ್ತು ಮಾಡಲಾಗಿದೆ. ಮಾರುತಿ ಸುಜುಕಿಯ ಮುಂಚೂಣಿ 3 ರಫ್ತು ಮಾದರಿಗಳಲ್ಲಿ ಸ್ವಿಫ್ಟ್ ಕೂಡ ಸೇರಿದೆ.

ಕರ್ನಾಟಕದ ಮಾರುಕಟ್ಟೆ ಹೇಗಿದೆ?

ಕರ್ನಾಟಕ ಮಾರುಕಟ್ಟೆಯಲ್ಲಿ, ಮಾರುತಿ ಸುಜುಕಿ 1,15,000 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಶೇ 19ರಷ್ಟು ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ 70,000 ಕಾರ್‌ಗಳನ್ನು ಮಾರಾಟ ಮಾಡಲಾಗಿದ್ದು, ರಾಜ್ಯದಲ್ಲಿನ ಒಟ್ಟಾರೆ ಮಾರಾಟದ ಶೇ 60ರಷ್ಟು ಪಾಲು ಹೊಂದಿದೆ. ಬೆಂಗಳೂರಿನಲ್ಲಿನ ಮಾರಾಟವು ಶೇ 15ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಮಾರುತಿ ಸುಜುಕಿಯು 186 ಮಾರಾಟ ಕೇಂದ್ರಗಳು ಮತ್ತು 244 ಸರ್ವೀಸ್‌ ಕೇಂದ್ರಗಳನ್ನು ಹೊಂದಿದೆ.

Exit mobile version