Site icon Vistara News

Lok Sabha Election : ಅಹಂಕಾರ ತೋರಿಸಿದ್ದಕ್ಕೆ ರಾಮನೇ 241 ಸ್ಥಾನಕ್ಕೆ ನಿಲ್ಲಿಸಿದ; ಪರೋಕ್ಷ ಟಾಂಗ್​ ಕೊಟ್ಟ ಆರ್​ಎಸ್​ಎಸ್​​ ಸಿದ್ಧಾಂತವಾದಿ

Lok Sabha Election

ಜೈಪುರ: ಅಹಂಕಾರದ ಹೆಚ್ಚು ತೋರಿದ ಆಡಳಿತ ಪಕ್ಷ ಬಹುಮತದ ಕೊರತೆ ಅನುಭವಿಸಿದೆ. ರಾಮ ಅವರನ್ನು 241 ಸ್ಥಾನಕ್ಕೆ ನಿಲ್ಲಿಸಿದ. ರಾಮನ ವಿರೋಧಿಯಾಗಿದ್ದವರು 2 ನೇ ಸ್ಥಾನಕ್ಕೆ ಉಳಿದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಸಿದ್ಧಾಂತಿ ಇಂದ್ರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಜೈಪುರ ಬಳಿಯ ಕನೋಟಾದಲ್ಲಿ ಗುರುವಾರ ನಡೆದ ‘ರಾಮರಥ ಅಯೋಧ್ಯೆ ಯಾತ್ರಾ ದರ್ಶನ ಪೂಜಾ ಸಮರೋಹ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನ ಭಕ್ತಿಯನ್ನು ಮಾಡಿಕೊಂಡಿದ್ದರೂ ಅಹಂಕಾರಿಯಾದ ಪಕ್ಷವನ್ನು 241 ಕ್ಕೆ ನಿಲ್ಲಿಸಲಾಯಿತು. ಅದುವೇ ಅತಿದೊಡ್ಡ ಪಕ್ಷವಾಯಿತು ಎಂದು ಅವರು ಬಿಜೆಪಿಗೆ ಪರೋಕ್ಷವಾಗಿ ಟೀಕಿಸಿದರು.

ಪ್ರಜಾಪ್ರಭುತ್ವದಲ್ಲಿಯೂ ರಾಮರಾಜ್ಯದ ವಿಧಾನವನ್ನು ಅನುಸರಿಸಬೇಕು. ಅಹಂಕಾರ ತೋರಬಾರದು. ರಾಮನ ಭಕ್ತಿಯನ್ನು ಮಾಡಿಯೂ ಕೆಲವರು ಕ್ರಮೇಣ ಅಹಂಕಾರಿಗಳಾಗಿ ಮಾರ್ಪಟ್ಟರು. ಅವರು ಅತಿದೊಡ್ಡ ಪಕ್ಷವಾಗಿದ್ದರು. ಆದಾಗ್ಯೂ, ಅವರಿಗೆ ನೀಡಬೇಕಾದ ಬಹುಮತವನ್ನು ಅಹಂಕಾರದ ಕಾರಣಕ್ಕೆ ದೇವರು ತಡೆದಿದ್ದಾನೆ ಆದರೆ, ರಾಮನನ್ನು ವಿರೋಧಿಸಿದವರಿಗೆ ಎರಡನೇ ಸ್ಥಾನ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ರಾಮನನ್ನು ವಿರೋಧಿಸಿದವರಲ್ಲಿ ಯಾರಿಗೂ ಅಧಿಕಾರ ನೀಡಲಿಲ್ಲ. ಅವರೆಲ್ಲರನ್ನೂ ಒಟ್ಟುಗೂಡಿಸಿ ಎರಡನೇ ಕ್ರಮಾಂಕದಲ್ಲಿ ಇಟ್ಟಿದ್ದಾರೆ ಎಂದಿದ್ದಾರೆ. ಇದು ಕೆಲವು ದಿನಗಳ ಹಿಂದೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಪೂರಕವಾಗಿದೆ. ನಿಜವಾದ ‘ಸೇವಕ’ ಅಹಂಕಾರವಿಲ್ಲದೆ ಜನರ ಸೇವೆ ಮಾಡಬೇಕು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಭಾಗವತ್ ಹೇಳಿದ್ದರು.

ಇದನ್ನೂ ಓದಿ: BS Yediyurappa : ಲೈಂಗಿಕ ಕಿರುಕುಳ ಕೇಸ್; ಹೈಕೋರ್ಟ್​ನಲ್ಲಿ ಇಂದು ಯಡಿಯೂರಪ್ಪಗೆ ಜಾಮೀನು ಸಿಗದಿದ್ದರೆ ಬಂಧನ

ರಾಮನನ್ನು ಪ್ರಾರ್ಥಿಸುವವರು ವಿನಮ್ರರಾಗಿರಬೇಕು… ಭಗವಾನ್ ರಾಮನು ತಾರತಮ್ಯ ಮಾಡುವುದಿಲ್ಲ ಮತ್ತು ಶಿಕ್ಷಿಸುವುದಿಲ್ಲ. ರಾಮ ಎಲ್ಲರಿಗೂ ನ್ಯಾಯ ಒದಗಿಸುತ್ತಾನೆ. ಅವನು ಎಲ್ಲರಿಗೂ ಕೊಡುತ್ತಾನೆ ಮತ್ತು ಕೊಡುತ್ತಲೇ ಇರುತ್ತಾನೆ. ಭಗವಾನ್ ರಾಮ ಯಾವಾಗಲೂ ನ್ಯಾಯಯುತನಾಗಿದ್ದ ಮತ್ತು ಹಾಗೆಯೇ ಇರುತ್ತಾನೆ” ಎಂದು ಇಂದ್ರೇಶ್ ಅವರು ಹೇಳಿದ್ದಾರೆ.

ಪ್ರತಿಪಕ್ಷ ಇಂಡಿಯಾ ಬಣವನ್ನು ಗುರಿಯಾಗಿಸಿಕೊಂಡು ಅವರನ್ನು “ರಾಮ ವಿರೋಧಿ” ಎಂದು ಕರೆದರು. ಅಹಿಂಸೆ ಮತ್ತು ಸತ್ಯದ ತತ್ವಗಳನ್ನು ಉಲ್ಲೇಖಿಸಿ ಭಾಗವತ್ ಎಲ್ಲರ ಬಗ್ಗೆ ವಿನಮ್ರತೆ ಮತ್ತು ಸದ್ಭಾವನೆಯ ಅಗತ್ಯವನ್ನು ಒತ್ತಿ ಹೇಳಿದರು.

Exit mobile version