ಬೆಂಗಳೂರು: ಸ್ಕೂಟರ್ಗಳು ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಅದು ಪ್ರಾಯೋಗಿಕ ಅದು ಹೆಚ್ಚು ಉಪಯೋಗಕಾರಿ. ಯಾಕೆಂದರೆ ಸ್ಕೂಟರ್ಗಳಲ್ಲಿ ಹೆಚ್ಚು ಬೂಟ್ ಸ್ಪೇಸ್ ಹೊಂದಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ಗಳು ಹೆಚ್ಚು ಉಪಯೋಗಕಾರಿ. ಜತೆಗೆ ಹೈಟೆಕ್ ಫೀಚರ್ಗಳೂ ಇವೆ. ಇಂದಿನ ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿನ ಬೂಟ್ ಸ್ಪೇಸ್ ಎಷ್ಟು ದೊಡ್ಡದಾಗಿದೆ ಎಂದರೆ ನಿಮಗೆ ಒಂದು ಕಲ್ಪನೆ ಮಾಡಲೂ ಸಾಧ್ಯವಿಲ್ಲದಷ್ಟು ದೊಡ್ಡದಾಗಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿರುವ ಐದು ಎಲೆಕ್ಟ್ರಿಕ್ ಸ್ಕೂಟರ್ಗಳ ಬೂಟ್ ಸ್ಪೇಸ್ಗಳ ಮಾಹಿತಿ ನೀಡಲಾಗಿದೆ. ನಿಮಗೆ ಯಾವುದು ಇಷ್ಟವಾಯಿತು ಎಂಬುದನ್ನು ತಿಳಿಸಿ. ಹೋಲಿಕೆಗೊಂದು ಮಾಹಿತಿ, ನಾವು ರಸ್ತೆಯಲ್ಲಿ ಹೆಚ್ಚಾಗಿ ನೋಡುವ ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ 18 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
ರಿವರ್ ಇಂಡಿ - 43 ಲೀಟರ್
ರಿವರ್ ಇಂ ಡಿ ಕಂಪನಿಯ ಸ್ಕೂಟರ್ 43 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇದರ ಬೂಟ್ ಸ್ಪೇಸ್ ನೋಡಿದರೆ ಇದಕ್ಕೆ ಯಾವುದೇ ಪರ್ಯಾಯ ಇಲ್ಲ. ಇದು ಯಾವುದೇ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಅತಿದೊಡ್ಡ ಶೇಖರಣಾ ಸ್ಥಳವಾಗಿದೆ. ಪ್ರಾಯೋಗಿವಾಗಿ ಇಂಡಿ ಸ್ಕೂಟರ್ನಲ್ಲಿ ಒಂದು ಜೋಡಿ ಪ್ಯಾನಿಯರ್ ಗಳು ಮತ್ತು ಅಕ್ಸಸರಿ ಹಾಗೂ ಟಾಪ್ ಬಾಕ್ಸ್ ನೀಡಲಾಗುತ್ತದೆ. ಇದು ಅದರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಅಥೆರ್ ರಿಶ್ತಾ- 34 ಲೀಟರ್
ರಿಶ್ತಾ ಮತ್ತು ಜೆನ್ 2 ಓಲಾ ಮಾದರಿಗಳು ಒಂದೇ ರೀತಿಯ ಬೂಟ್ ಸ್ಪೇಸ್ ಹೊಂದಿದೆ. ಆದರೆ, ಓಲಾದಲ್ಲಿ ಅದರ ಬೂಟ್ ಸ್ಪೇಸ್ ಆಳವಿಲ್ಲದ ಕಾರಣ ಅಥೆರ್ ಒಂದು ಹೆಜ್ಜೆ ಮುಂದಕ್ಕೆ ನಿಲ್ಲುತ್ತದೆ. ಅಥೆರ್ ರಿಜ್ಟಾದ ಆಳವಾದ ಶೇಖರಣಾ ಸಾಮರ್ಥ್ಯ ಹೊಂದಿದೆ. ಅಥೆರ್ ಬೂಟ್ ನ ಸ್ವಲ್ಪ ದೂರದಲ್ಲಿ ಒಂದು ಸಣ್ಣ ಕ್ಯೂಬಿಯನ್ನು ನೀಡಿದೆ. ಅಲ್ಲಿ ನೀವು ನಿಮ್ಮ ಸ್ಮಾರ್ಟ್ ಫೋನ್, ವ್ಯಾಲೆಟ್ ಮುಂತಾದ ನಿಕ್-ನಾಕ್ ಗಳನ್ನು ಇಟ್ಟುಕೊಳ್ಳಬಹುದು.
ಇದನ್ನೂ ಓದಿ: Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್ ಬಿಡುಗಡೆ
ಜೆನ್ 2 ಓಲಾ ಎಸ್ 1 ವೇರಿಯೆಂಟ್- 34 ಲೀಟರ್
ಜೆನ್ 2 ಪ್ಲಾಟ್ ಫಾರ್ಮ್ ಗೆ ಸ್ಥಳಾಂತರಗೊಳ್ಳುವುದರೊಂದಿಗೆ, ಓಲಾದ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 34 ಲೀಟರ್ ಬೂಟ್ ಸಾಮರ್ಥ್ಯ ನೀಡಲಾಗಿದೆ. ವಾಸ್ತವವಾಗಿ 36 ಲೀಟರ್ ಬೂಟ್ ಸಾಮರ್ಥ್ಯ ಹೊಂದಿದ್ದ ಜೆನ್ 1 ಓಲಾ ಮಾದರಿಗಳಿಗಿಂತ ಸ್ವಲ್ಪ ಕಡಿಮೆ ಎನಿಸಿದೆ. ಏನೇ ಇರಲಿ ಓಲಾ ಎಲೆಕ್ಟ್ರಿಕ್ ಗಳು ಮಾರುಕಟ್ಟೆಯಲ್ಲಿ ದೊಡ್ಡ ಬೂಟ್ ನೀಡಿದ ಮೊದಲ ಎಲೆಕ್ಟ್ರಿಕ್ ಸ್ಕೂಟರ್.
ಟಿವಿಎಸ್ ಐಕ್ಯೂಬ್ 32 ಲೀಟರ್
ಐಕ್ಯೂಬ್ ಮೊದಲ ಬಾರಿಗೆ ಬಿಡುಗಡೆಯಾದಾಗ ಮಾರಾಟದಲ್ಲಿದ್ದ ಎರಡು ರೂಪಾಂತರಗಳು ಕೇವಲ 17 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸ್ಥಳ ಹೊಂದಿದ್ದವು. ಟಿವಿಎಸ್ ಈಗ ಜನಪ್ರಿಯ ಇ-ಸ್ಕೂಟರ್ ನ ಎಲ್ಲಾ ರೂಪಾಂತರಗಳ (ಬೇಸ್ ಐಕ್ಯೂಬ್ 2.2 ಕಿಲೋವ್ಯಾಟ್ ಹೊರತುಪಡಿಸಿ) ಬೂಟ್ 32 ಲೀಟರ್ ಗಳಿಗೆ ಹೆಚ್ಚಿಸಿದೆ. ಬೇಸ್ ಐಕ್ಯೂಬ್ 2.2 30 ಲೀಟರ್ ನಲ್ಲಿ ವೇರಿಯೆಂಟ್ನಲ್ಲಿ 30 ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ.
ಸಿಂಪಲ್ ಒನ್ 30 ಲೀಟರ್
ಸಿಂಪಲ್ ಒನ್ ಸ್ಕೂಟರ್ 30 ಲೀಟರ್ ಬೂಟ್ ಸ್ಪೇಸ್ ಐದು ಸ್ಕೂಟರ್ಗಳ ಪಟ್ಟಿಯಲ್ಲಿ ಅತ್ಯಂತ ಚಿಕ್ಕದು. ಸಿಂಪಲ್ ಒನ್ ಸ್ಕೂಟರ್ ಹೆಚ್ಚು ಜನಪ್ರಿಯವಾಗಿಲ್ಲ ಎಂಬುದು ಮೊದಲ ಮಾತು. ಅದರೆ, ಅದರ ಬೂಟ್ ಸ್ಪೇಸ್ ಸ್ಪರ್ಧಾತ್ಮಕವಾಗಿದೆ. ಇಂಡಿ ಹೊರತುಪಡಿಸಿ ಟಿವಿಎಸ್, ಅಥೆರ್ ಹಾಗೂ ಓಲಾ ಸ್ಕೂಟರ್ಗಳು ನಾನಾ ರೀತಿಯಲ್ಲಿ ಜನಪ್ರಿಯವಾಗಿದೆ. ಆದಾಗ್ಯೂ ಸಿಂಪನ್ ಒನ್ ಸ್ಪರ್ಧಾತ್ಮಕ ರೀತಿಯಲ್ಲೇ ಬೂಟ್ ಸ್ಪೇಸ್ ನೀಡುತ್ತಿದೆ.