Site icon Vistara News

Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

Trust Of The Nation 2024

ನವದೆಹಲಿ: 2024 ರ ಲೋಕಸಭಾ ಚುನಾವಣೆಯ (Lok Sabha Election) ಮೊದಲ ಹಂತ ಏಪ್ರಿಲ್​ 19ರಂದು ನಡೆದಿದೆ. ಇನ್ನೂ ಆರು ಹಂತಗಳ ಮತದಾನ ಪ್ರಕ್ರಿಯೆ ಬಾಕಿ ಉಳಿದಿದೆ. ಮತದಾನ ಜಾತ್ರೆಯ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಗಳ ಕಂಟೆಂಟ್​ ಡಿಸ್ಕವರಿ ಫ್ಲ್ಯಾಟ್​ಫಾರ್ಮ್​ “ಡೈಲಿಹಂಟ್’ (Trust Of The Nation 2024) ನಡೆಸಿದ “ಟ್ರಸ್ಟ್ ಆಫ್ ದಿ ನೇಷನ್” ಸಮೀಕ್ಷೆಯು ಭಾರತದ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ಬಹಿರಂಗ ಮಾಡಿದೆ. 77 ಲಕ್ಷಕ್ಕೂ ಹೆಚ್ಚು ಮತದಾರರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು ಭಾರತದ ಉತ್ತಮ ನಾಯಕತ್ವ, ಸಮರ್ಥ ಆರ್ಥಿಕ ನಿರ್ವಹಣೆ ಮತ್ತು ಪ್ರಸ್ತುತ ಸರ್ಕಾರದ ಒಟ್ಟಾರೆ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳ ಇಲ್ಲ ವ್ಯಕ್ತಗೊಂಡಿವೆ. ಈ ಸಮೀಕ್ಷೆಯ ಸಮಗ್ರ ವಿವರ ಈ ಕೆಳಗೆ ನೀಡಲಾಗಿದೆ.

ಸರ್ಕಾರ ಮತ್ತು ಪ್ರಧಾನಿ ಮೋದಿ ನಾಯಕತ್ವಕ್ಕೆ ಜನರ ಮೆಚ್ಚುಗೆ

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 61% ಜನರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತುಂಬ ಸಂತೋಷವಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಗಳನ್ನು ಭಾರತದಾದ್ಯಂತ ವಿವಿಧ ಜನ ಸಮುದಾಯ ಮತ್ತು ವೃತ್ತಿಪರ ಗುಂಪುಗಳಿಂದ ಸಂಗ್ರಹಿಸಲಾಗಿದೆ. ಹೀಗಾಗಿ ಅಭಿಪ್ರಾಯಗಳು ಬಹುತೇಕ ಜನರ ಇಂಗಿತದ ಪ್ರತಿಫಲನವಾಗಿದೆ. ಕೆಲವು ಪ್ರದೇಶಗಳಲ್ಲಿ ಗೃಹಿಣಿಯರು ಮತ್ತು ಉದ್ಯಮಿಗಳ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತಗೊಂಡಿವೆ.

ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.63ರಷ್ಟು ಮಂದಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿವರವಾದ ಅಂಕಿ ಅಂಶಗಳು ಪಿಎಂ ಮೋದಿಯವರನ್ನು ಭಾರತದ ಬಹುತೇಕ ರಾಜ್ಯಗಳ ಜನರು ತಮ್ಮ ನೆಚ್ಚಿನ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ಮೂಡಿ ಬಂದಿವೆ.

ಪ್ರಧಾನಿ ಮೋದಿಯ ಆರ್ಥಿಕ ಪ್ರಗತಿ ಯೋಜನೆಗೆ ಜನರ ಮೆಚ್ಚುಗೆ

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸರ್ಕಾರವು ಆರ್ಥಿಕತೆಯನ್ನು ನಿರ್ವಹಿಸಿದ ರೀತಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ, 60% ರಷ್ಟು ಜನರು ದೇಶದ ಆರ್ಥಿಕ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯು ನಡೆದ ಬಹುತೇಕ ಸ್ಥಳಗಳಲ್ಲಿ ಈ ಅಭಿಪ್ರಾಯವೇ ದೊರಕಿದೆ. ಆದರೂ ದಕ್ಷಿಣದ ಕೆಲವು ರಾಜ್ಯಗಳು ಅದೇ ಉತ್ಸಾಹವನ್ನು ತೋರಿಸಿಲ್ಲ. ಇದು ಪ್ರಾದೇಶಿಕ ಆರ್ಥಿಕ ಅಸಮಾನತೆಯ ಕೂಗು ವ್ಯಕ್ತಗೊಂಡಿದೆ.

‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’: ಮತ್ತೆ ಬೇಕು ಮೋದಿ

ಶೇ.64ರಷ್ಟು ಮಂದಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಯುವ ಮತದಾರರಿಂದ ಹಿಡಿದು ನಿವೃತ್ತರ ತನಕ ಪ್ರಧಾನಿ ಮೋದಿಯವರ ವಿಶಾಲ ಆಕರ್ಷಣೆಯನ್ನು ಪ್ರದರ್ಶಿಸಿದೆ. ಇದು ರಾಷ್ಟ್ರೀಯ ನಾಯಕರಾಗಿ ಅವರ ಶಕ್ತಿಯನ್ನು ಹೇಳಿದೆ.

ವಿದೇಶಾಂಗ ನೀತಿ ನಿರ್ಧಾರಗಳಿಗೆ ರಾಷ್ಟ್ರದ ಒಮ್ಮತ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಾಲಿಸುತ್ತಿರುವ ವಿದೇಶಾಂಗ ನೀತಿಗೆ ಸಮೀಕ್ಷೆಯಲ್ಲಿ ಗಣನೀಯ ಬೆಂಬಲ ದೊರೆತಿದೆ. ಅಂತಾರಾಷ್ಟ್ರೀಯ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಸರ್ಕಾರದ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು 64% ಜನರು ರೇಟಿಂಗ್ ನೀಡಿದ್ದಾರೆ. ಇದು ಸರ್ಕಾರದ ರಾಜತಾಂತ್ರಿಕ ಕಾರ್ಯತಂತ್ರಗಳು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಗೆ ವ್ಯಾಪಕ ಬೆಂಬಲ ದೊರಕಿದೆ

ರಾಷ್ಟ್ರೀಯ ಬಿಕ್ಕಟ್ಟುಗಳ ಸ್ಪಂದನೆಗೂ ಶಹಬ್ಬಾಸ್​

ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಶ್ಲಾಘಿಸಿದ್ದಾರೆ. 63.6% ಜನರು ತುಂಬಾ ಸಂತೋಷವಾಗಿದ್ದಾರೆ. ಪ್ರಕ್ಷುಬ್ಧ ಸಮಯದಲ್ಲಿ ಪಿಎಂ ಮೋದಿಯವರ ಆಡಳಿತದ ಚಾತುರ್ಯವನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಶಹಬ್ಬಾಸ್ ಎಂದಿದ್ದಾರೆ.

ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಆಭಾರಿ

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು, ಅಂದರೆ 53.9% ಕ್ಕಿಂತ ಹೆಚ್ಚು, ಸರ್ಕಾರ ಕೈಗೊಂಡ ಕಲ್ಯಾಣ ಯೋಜನೆಗಳು ಮತ್ತು ಜನಪರ ಚಟುವಟಿಕೆಗಳಿಂದ ಸಂತೋಷವಾಗಿದ್ದಾರೆ. ನಿವೃತ್ತ ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳು ನೀಡಿರುವ ಬೆಂಬಲ ಗಮನಾರ್ಹವಾಗಿ ಹೆಚ್ಚಾಗಿದೆ, ಎರಡೂ ಗುಂಪುಗಳು ಸುಮಾರು 59% ತೃಪ್ತಿ ಮಟ್ಟವನ್ನು ತೋರಿಸಿವೆ. ಈ ಗುಂಪುಗಳಿಗೆ ನೇರವಾಗಿ ಪ್ರಯೋಜನವಾಗುವ ನಿರ್ದಿಷ್ಟ ಕಾರ್ಯಕ್ರಮಗಳ ಪರಿಣಾಮ ಇದು. ಉದಾಹರಣೆಗೆ; ವಯಸ್ಸಾದವರಿಗೆ ಪಿಂಚಣಿ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಬ್ಸಿಡಿಗಳು.

ಮೋದಿಯ ಭ್ರಷ್ಟಾಚಾರ ವಿರೋಧಿ ಕ್ರಮ

ಮೋದಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಕ್ರಮಕ್ಕೆ ಶೇ.63.5ರಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನಸಂಖ್ಯಾ ದೃಷ್ಟಿಕೋನದಿಂದ, ವಿದ್ಯಾರ್ಥಿಗಳು (59%) ಮತ್ತು ನಿವೃತ್ತ (59%) ವ್ಯಕ್ತಿಗಳು ಉದ್ಯಮಿಗಳು ಹೆಚ್ಚು ಸಂತೋಷ ವ್ಯಕ್ತಪಡಿಸಿದ್ದಾರೆ.

ಕಠಿಣ ಪರಿಶ್ರಮಿ ಮತ್ತು ಪ್ರಾಮಾಣಿಕ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ಗುಣ ಲಕ್ಷಣಗಳ ಬಗ್ಗೆಯೂ ಪ್ರಶ್ನೆ ಕೇಳಲಾಗಿತ್ತು. ಪ್ರಮುಖವಾಗಿ ಅವರ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕೆ ಬೆಂಬಲ ದೊರಕಿದೆ. ಶೇ.41ರಷ್ಟು ಮಂದಿ ಅವರ ಈ ಗುಣವನ್ನು ಮೆಚ್ಚಿದ್ದಾರೆ. ನಿವೃತ್ತರು ಮತ್ತು ವಿದ್ಯಾರ್ಥಿಗಳಲ್ಲಿ ಈ ಮೆಚ್ಚುಗೆ ವಿಶೇಷವಾಗಿ ವ್ಯಕ್ತಗೊಂಡಿದೆ. ಕ್ರಮವಾಗಿ 47% ಮತ್ತು 43% ಜನರು ಪ್ರಧಾನಿ ಮೋದಿಯವರ ಸಮಗ್ರತೆ ಮತ್ತು ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಮತದಾರರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರು ಪ್ರಧಾನಿಯ ಈ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮೆಚ್ಚುಗೆ ತೋರಿದ್ದಾರೆ. ಅವರ ಪಾರದರ್ಶಕ ಮನಸ್ಸು ಮತ್ತು ಶ್ರಮದ ನೀತಿಯನ್ನು ಎತ್ತಿಹಿಡಿದಿದ್ದಾರೆ.

ಸಮೀಕ್ಷೆಯ ಅಂತಿಮ ಹೇಳಿಕೆ ಹೀಗಿದೆ

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ, ವಿಶೇಷವಾಗಿ ಆರ್ಥಿಕ ನಿರ್ವಹಣೆ, ವಿದೇಶಾಂಗ ನೀತಿ ಮತ್ತು ಬಿಕ್ಕಟ್ಟು ನಿರ್ವಹಣೆ ಬಗ್ಗೆ ಅತಿ ಹೆಚ್ಚು ಮೆಚ್ಚುಗೆ ಶುರುವಾಗಿದೆ. ಮೋದಿಯ ಆಡಳಿತದ ಬಗ್ಗೆ ತುಂಬಾ ಆಶಾವಾದಿಯಾಗಿರುವವರ ಪ್ರಮಾಣವೇ ಹೆಚ್ಚಿದೆ. ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ಎಂದು ಪರಿಗಣಿಸಲ್ಪಟ್ಟ ನಾಯಕನಾಗಿ ಪ್ರಧಾನಿ ಮೋದಿಯವರು ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತವು ಸಂಕೀರ್ಣ ದೇಶೀಯ ಮತ್ತು ಅಂತಾರರಾಷ್ಟ್ರೀಯ ಸಮಸ್ಯೆಗಳನ್ನು ನಿರ್ವಹಣೆ ಮಾಡಿರುವುದು ಕೂಡ ಜನ ಮೆಚ್ಚುಗೆ ಗಳಿಸಿದೆ.

Exit mobile version